ನಿಷೇಧಾವಧಿ ಅಂತ್ಯ: ಸವಾಲುಗಳ ನಡುವೆಯೇ ಸಮುದ್ರಕ್ಕಿಳಿಯಲು ಸಜ್ಜಾದ ಮೀನುಗಾರರು

Date:

ರಾಜ್ಯದ ಕರಾವಳಿ ಬಂದರುಗಳಲ್ಲಿ ಲಂಗರು ಹಾಕಿ ನಿಂತಿದ್ದ ಬೋಟ್‌ಗಳು ಆಗಸ್ಟ್‌ 1ರಿಂದ ಸಮುದ್ರಕ್ಕೆ ಇಳಿಯುವ ತಯಾರಿಯಲ್ಲಿವೆ. ಎರಡು ತಿಂಗಳ ಸುದೀರ್ಘ ಬಿಡುವಿನ ನಂತರ ಮೀನುಗಾರರು ಶಿಕಾರಿಗೆ ಇಳಿಯಲಿದ್ದು, ಮೀನು ಲಭ್ಯತೆಯ ಪ್ರಮಾಣ ಕಡಿಮೆಯಾಗುವ ಸಾಧ್ಯತೆಗಳನ್ನು ಊಹಿಸಲಾಗುತ್ತಿದ್ದರೂ, ಉತ್ತರ ಕನ್ನಡ ಜಿಲ್ಲೆಯಲ್ಲಿ ಹೊಸದಾಗಿ ನೋಂದಾಯಿತವಾದ 40 ಪರ್ಸೈನ್‌ ಬೋಟ್‌ಗಳು ಕಡಲಿಗೆ ಇಳಿಯಲು ಸಜ್ಜಾಗಿವೆ.

- Advertisement -

ಮುಂಗಾರು ಆರಂಭದ ಹಿನ್ನೆಲೆಯಲ್ಲಿ ಕಳೆದ ಎರಡು ತಿಂಗಳಿನಿಂದ ಯಾಂತ್ರೀಕೃತ ಮೀನುಗಾರಿಕೆಗೆ ನಿಷೇಧ ವಿಧಿಸಲಾಗಿತ್ತು. 61 ದಿನಗಳ ಟ್ರಾಲಿಂಗ್‌ ನಿಷೇಧ ಅವಧಿ ಮುಕ್ತಾಯಗೊಳ್ಳುತ್ತಿದ್ದಂತೆ ಮೀನುಗಾರರು ಬಲೆ ನೇಯಲು ಶುರುಮಾಡಿದ್ದು, ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಕುಂದಾಪುರದ ಬಂದರುಗಳಲ್ಲಿ ಬೋಟ್‌ ದುರಸ್ತಿ, ಎಂಜಿನ್‌ ರಿಪೇರಿ ಕೆಲಸಗಳು ಭರದಿಂದ ಸಾಗುತ್ತಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅಂಬಾರಿಯ ಮುಂದೆ ಪೊಲೀಸರು ಸೆಲ್ಫಿ ತೆಗೆದುಕೊಂಡರೆ ಭದ್ರತೆಗೆ ಹೇಗೆ...

ಚಿನ್ನದ ಅಂಬಾರಿಯನ್ನು ಜಂಬೂಸವಾರಿಯ ದಿನ ಬಳಸಿಕೊಳ್ಳಲು ಸರ್ಕಾರ ಅರಸು ಮನೆತನದವರಿಂದ ಪಡೆಯುತ್ತದೆ. ಉಚಿತವಾಗಿ ಅಲ್ಲ; ನಿಗದಿಪಡಿಸಿರುವ ಹಣವನ್ನು ಸಂದಾಯ ಮಾಡಿ. ಅಂಬಾರಿಯ ಭದ್ರತೆಯ ಹೊಣೆ ಸರ್ಕಾರದ ಮೇಲೂ ಇರುತ್ತದೆ. ಪೊಲೀಸರು ಸೆಲ್ಫಿ ತೆಗೆದುಕೊಂಡರೆ...

ಪ್ರಜಾಪ್ರಭುತ್ವದ ಜನತಂತ್ರಕ್ಕೆ ಕುತ್ತು: ‘ಖಾಸಗಿತನ’ದ ನೆಪದಲ್ಲಿ ಪತ್ರಿಕಾ ಸ್ವಾತಂತ್ರ್ಯ...

ಮೋದಿ ಸರ್ಕಾರವು ಈ ಕಾಯ್ದೆಯನ್ನು ಏಕಾಏಕಿ ಜಾರಿಗೊಳಿಸದೆ, ಹಂತ ಹಂತವಾಗಿ ಜಾರಿಗೊಳಿಸುತ್ತಾ ಪ್ರಜಾಪ್ರಭುತ್ವದ ಕತ್ತು ಹಿಸುಕುತ್ತಿದೆ. ಆರ್‌ಟಿಐ ಕಾಯ್ದೆಯನ್ನು ದುರ್ಬಲಗೊಳಿಸುವ ತಿದ್ದುಪಡಿಯು ಈಗಾಗಲೇ ನವೆಂಬರ್ 2025ರಿಂದಲೇ ಜಾರಿಯಲ್ಲಿದ್ದರೆ, ಡೇಟಾ ಬಳಕೆಯ ಕಠಿಣ ನಿಯಮಗಳು...

ಬೆಂಗಳೂರು ಶಿಕ್ಷಕರ ಕ್ಷೇತ್ರದ ಸೋಲು: ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆಯ...

ಉಳಿದ ಮೂರು ವಿಧಾನ ಪರಿಷತ್‌ ಕ್ಷೇತ್ರಗಳಿಗಿಂತ ಬೆಂಗಳೂರು ಶಿಕ್ಷಕರ ಕ್ಷೇತ್ರದ ಫಲಿತಾಂಶ ರಾಜಕೀಯವಾಗಿ ಪರಿಣಾಮ ಬೀರಬಲ್ಲದು. ಡಿ.ಕೆ. ಶಿವಕುಮಾರ್‌ ಅವರ ನಾಯಕತ್ವವನ್ನು ಓರೆಗೆ ಹಚ್ಚಬಲ್ಲದು. ಒಕ್ಕಲಿಗ ಪ್ರಾಬಲ್ಯದ ಪ್ರದೇಶಗಳ ಒಲವು-ನಿಲುವುಗಳನ್ನು ತಿಳಿಸಬಲ್ಲದು. ಆದರೆ,...

ಆಗಸ್ಟ್‌ 1ರಿಂದ ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ಇಳಿಯಲಿರುವ ಹಡಗುಗಳಿಗೆ ಹವಾಮಾನ ಇಲಾಖೆಯು ಮುಂಜಾಗ್ರತೆ ವಹಿಸುವಂತೆ ಸೂಚಿಸಿದೆ. ಮುಂದಿನ ವಾರ ಕರಾವಳಿ ಪ್ರದೇಶದಲ್ಲಿ ಮಳೆ ಪ್ರಮಾಣ ಹೆಚ್ಚಾಗುವ ಸೂಚನೆಯಿದ್ದು, ಕಡಲಿಗೆ ಇಳಿಯುವ ಮೀನುಗಾರರು ಸುರಕ್ಷತಾ ಕ್ರಮಗಳನ್ನು ಅನುಸರಿಸುವಂತೆ ಇಲಾಖೆ ಸೂಚಿಸಿದೆ.

ಇತ್ತೀಚಿನ ಹವಾಮಾನ ವೈಪರೀತ್ಯ ಸಮುದ್ರದಾಳದಲ್ಲಿ ಹಲವು ಬದಲಾವಣೆಗಳಿಗೆ ಕಾರಣವಾಗಿದ್ದು, ಎಲ್‌ನಿನೊ ಪ್ರಭಾವದಿಂದಾಗಿ ಈ ಬಾರಿ ಮೀನು ಲಭ್ಯತೆಯ ಕೊರತೆ ಉಂಟಾಗಲಿದೆ ಎಂದು ಮೀನುಗಾರಿಕೆ ಇಲಾಖೆ ತಿಳಿಸಿದೆ.

ಈ ಕುರಿತು ಈದಿನ.ಕಾಮ್‌ ಜೊತೆಗೆ ಮಾತನಾಡಿದ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಮೀನುಗಾರ ಚೇತನ್‌ ಹರಿಕಂತ್ರ, “ಈ ಬಾರಿ ಮಳೆ ಕಡಿಮೆ ಇದ್ದರಿಂದ ಸಮುದ್ರಕ್ಕೆ ಇಳಿಯುವುದರಿಂದ ಲಾಭವಾಗುತ್ತದೆಯೇ ಇಲ್ಲವೇ ಎಂಬ ಚಿಂತೆ ಆವರಿಸಿದೆ. ಪೆಟ್ರೋಲ್‌, ಡೀಸೆಲ್‌ ದರ ಏರಿಕೆಯ ಬಿಸಿ ಮೀನುಗಾರಿಕೆಗೂ ತಗುಲಲಿದ್ದು, ಸೀಮೆಎಣ್ಣೆ ಲೀಟರ್‌ಗೆ 60ರಿಂದ 118 ರೂಪಾಯಿಗೆ ಏರಿಕೆ ಕಂಡಿದೆ. ಇದರಿಂದ ನಾಡದೋಣಿ ನೆಚ್ಚಿದ ಮೀನುಗಾರರ ಬದುಕಿಗೆ ಹೊಡೆತ ಬೀಳಲಿದೆ. ಪರ್ಸೈನ್‌ ಬೋಟುಗಳು ಒಂದು ವಾರಕ್ಕೆ ಒಂದು ಲಕ್ಷ ರೂಪಾಯಿ ಮಂಜುಗಡ್ಡೆ, ರೇಷನ್‌, ಇಂಧನಗಳಿಗಾಗಿ ವ್ಯಯಿಸಬೇಕಾಗುತ್ತದೆ. ಮೀನು ಸಿಕ್ಕರೆ ಬದುಕು ಸರಾಗ; ಇಲ್ಲವಾದಲ್ಲಿ ಜೀವನ ನಡೆಸುವುದು ಕಷ್ಟ. ಆಗಸ್ಟ್‌ ತಿಂಗಳ ಮೊದಲೆರಡು ವಾರಗಳ ನಂತರ ಪರಿಸ್ಥಿತಿಯ ನೈಜ ಚಿತ್ರಣ ಸಿಗುತ್ತದೆ” ಎಂದು ಹೇಳಿದರು.

ಮಲ್ಪೆ ಬಂದರಿನ ಮೀನುಗಾರ ಕಾರ್ಮಿಕ ಸಂಘದ ಮುಖಂಡ ಕವಿರಾಜ್‌ ಮಾತನಾಡಿ, “ಆಗಸ್ಟ್‌ ಮೊದಲ ವಾರದಲ್ಲಿ ಮೀನುಗಾರರು ಕಡಲಿಗೆ ಇಳಿಯುವ ಸಾಧ್ಯತೆಗಳಿದ್ದು, ಎಲ್ಲಾ ತಯಾರಿ ಮಾಡಿಕೊಳ್ಳುತ್ತಿದ್ದೇವೆ. ನಾಡದೋಣಿಗಳು ಈಗಾಗಲೇ ಮೀನು ಶಿಕಾರಿ ಆರಂಭಿಸಿವೆ. ಮೀನಿನ ಲಭ್ಯತೆ ಹೆಚ್ಚಾಗಲು ಕಡಲು ಪ್ರಕ್ಷುಬ್ಧಗೊಳ್ಳಬೇಕು. ಗಾಳಿ-ಮಳೆ ಕಡಿಮೆಯಿದ್ದರಿಂದ ಮೀನುಗಳು ಬಲೆಗೆ ಸಿಗುವಷ್ಟು ಮೇಲೆ ಬರುವುದಿಲ್ಲ. ಡೀಪ್‌ ಸೀ ಬೋಟ್‌ಗಳು ಕಡಲಿಗೆ ಇಳಿದ ಮೇಲಷ್ಟೇ ವಾಸ್ತವ ಸ್ಥಿತಿ ಅರಿವಿಗೆ ಬರುತ್ತದೆ” ಎಂದಿದ್ದಾರೆ.

ಒಟ್ಟಾರೆ, ಎರಡು ತಿಂಗಳ ದೀರ್ಘ ಬಿಡುವಿನ ನಂತರ ಕರಾವಳಿಯ ಮೀನುಗಾರರು ಕಡಲಿಗೆ ಇಳಿಯಲು ಸಜ್ಜಾಗಿದ್ದರೂ, ಅವರ ಎದುರಿಗೆ ಹಲವು ಸವಾಲುಗಳು ಸರದಿ ಸಾಲಿನಲ್ಲಿ ನಿಂತಿವೆ. ಹವಾಮಾನ ವೈಪರೀತ್ಯ, ಎಲ್‌ನಿನೊ ಪ್ರಭಾವದಿಂದ ಮೀನುಗಳ ಅಭಾವದ ಭೀತಿ ಒಂದೆಡೆಯಾದರೆ, ಡೀಸೆಲ್‌ ಮತ್ತು ಸೀಮೆಎಣ್ಣೆ ದರ ಏರಿಕೆಯಿಂದ ಉಂಟಾಗಿರುವ ಆರ್ಥಿಕ ಹೊರೆ ಇನ್ನೊಂದೆಡೆ ಮೀನುಗಾರರ ನಿದ್ದೆಗೆಡಿಸಿದೆ. ಆಳ ಸಮುದ್ರಕ್ಕೆ ಇಳಿಯುವ ಮೀನುಗಾರರಿಗೆ ಕಡಲಮ್ಮನ ಕೃಪೆ ಮತ್ತು ಉತ್ತಮ ಲಾಭ ಸಿಗಲಿ ಎಂಬುದೇ ಎಲ್ಲರ ನಿರೀಕ್ಷೆ. ಮುಂದಿನ ಕೆಲ ವಾರಗಳ ಸ್ಥಿತಿಗತಿಯಷ್ಟೇ ಈ ಬಾರಿಯ ಮೀನುಗಾರಿಕೆ ಋತುವಿನ ನಿಜವಾದ ಭವಿಷ್ಯವನ್ನು ನಿರ್ಧರಿಸಲಿವೆ.

eedina
ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೋಲಾರ | ಆದಿಮದಲ್ಲಿ ಜಿಲ್ಲಾ ಮಟ್ಟದ ನಾಟಕೋತ್ಸವ ಸಂಭ್ರಮ, ಕಿಕ್ಕಿರಿದ ಪ್ರೇಕ್ಷಕರು.

ಕರ್ನಾಟಕ ನಾಟಕ ಅಕಾಡೆಮಿ ಮತ್ತು ಕೋಲಾರ ಆದಿಮ ಸಾಂಸ್ಕೃತಿಕ ಕೇಂದ್ರದ ಸಹಯೋಗದಲ್ಲಿ...

ಉಡುಪಿ | ಕಾಪು ಯಾರ್ಡ್ ಬೀಚ್‌ನಲ್ಲಿ 5.710 ಕೆ.ಜಿ. ಗಾಂಜಾ ವಶಕ್ಕೆ: ಇಬ್ಬರ ಬಂಧನ

ಕಾಪು ಹಾಗೂ ಮಟ್ಟು ಬೀಚ್‌ಗಳಿಗೆ ಪ್ರವಾಸಕ್ಕೆ ಬರುವ ಪ್ರವಾಸಿಗರಿಗೆ ಗಾಂಜಾ ಮಾರಾಟ...

ರಾಯಚೂರು | 10 ತಿಂಗಳ ಬಾಕಿ ವೇತನ ಪಾವತಿಗೆ ಆಗ್ರಹಿಸಿ ತುಂಗಭದ್ರಾ ನೀರಾವರಿ ಇಲಾಖೆ ಕಾರ್ಮಿಕರ ಧರಣಿ

ತುಂಗಭದ್ರಾ ನೀರಾವರಿ ಇಲಾಖೆಯ ಮಾನ್ವಿ ಉಪವಿಭಾಗದ ಕಾರ್ಮಿಕರಿಗೆ ಕಳೆದ 10 ತಿಂಗಳಿನಿಂದ...