ಉತ್ತರ ಕನ್ನಡ | ಆತಂಕದೊಡನೆ ಆಳ ಸಮುದ್ರ ಮೀನುಗಾರಿಕೆಗೆ ಅಸ್ತು: ಹಸನಾದೀತೆ ಬದುಕು?

Date:

ಲಕ್ಷಾಂತರ ರೂಪಾಯಿ ಸಾಲ ಮಾಡಿ ದೋಣಿ, ಬಲೆ ಹಾಗೂ ಯಂತ್ರೋಪಕರಣಗಳನ್ನು ಸಜ್ಜುಗೊಳಿಸಿರುವ ಸಾವಿರಾರು ಮೀನುಗಾರ ಕುಟುಂಬಗಳು ನಂಬಿಕೆಯ ಹೊಸ್ತಿಲಲ್ಲಿ ನಿಂತಿವೆ. ಹವಾಮಾನ ವೈಪರೀತ್ಯದ ಭೀತಿಯ ನಡುವೆ ಆಳ ಸಮುದ್ರ ಮೀನುಗಾರಿಕೆ ಆರಂಭವಾಗುತ್ತಿದ್ದು, ಈ ಬಾರಿಯ ಮೀನುಗಾರಿಕಾ ಹಂಗಾಮು ಕರಾವಳಿ ಮೀನುಗಾರರ ಬದುಕನು ಹಸನಾಗಿಸುವುದೇ? ಕಾದು ನೋಡಬೇಕಿದೆ.

ಎರಡು ತಿಂಗಳ ಕಾಲ ಜಾರಿಯಲ್ಲಿದ್ದ ವಾರ್ಷಿಕ ಮೀನುಗಾರಿಕಾ ನಿಷೇಧಾವಧಿ ಅಂತ್ಯಗೊಂಡ ಹಿನ್ನೆಲೆಯಲ್ಲಿ, ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಮೀನುಗಾರಿಕಾ ಚಟುವಟಿಕೆಗಳು ಪುನರಾರಂಭವಾಗಿವೆ. ಬಂದರುಗಳಲ್ಲಿ ಮೀನುಗಾರರು ತಮ್ಮ ಬೋಟುಗಳಿಗೆ ವಿಶೇಷ ಪೂಜೆ ಸಲ್ಲಿಸಿ ಹೊಸ ಹಂಗಾಮಿಗೆ ಸಿದ್ಧತೆ ನಡೆಸಿದ್ದು, ಆಗಸ್ಟ್ 2ರಿಂದ ಅಧಿಕೃತವಾಗಿ ಎಲ್ಲಾ ಯಾಂತ್ರಿಕ ಮೀನುಗಾರಿಕಾ ದೋಣಿಗಳು ಸಮುದ್ರಕ್ಕಿಳಿಯಲಿವೆ.

- Advertisement -

ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ ಹಾಗೂ ಭಟ್ಕಳ ಬಂದರುಗಳಲ್ಲಿ ಬಲೆ, ಎಂಜಿನ್ ಮತ್ತು ಇತರೆ ಉಪಕರಣಗಳ ಅಂತಿಮ ಪರಿಶೀಲನೆ ನಡೆಯುತ್ತಿದ್ದು, ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ದೋಣಿಗಳನ್ನು ಸಜ್ಜುಗೊಳಿಸಲಾಗಿದೆ. ಸಾವಿರಾರು ಮೀನುಗಾರ ಕುಟುಂಬಗಳು ಹೊಸ ಹಂಗಾಮಿನ ನಿರೀಕ್ಷೆಯ ಹೊಸ್ತಿಲಲ್ಲಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ರೈತ ಹೋರಾಟದಿಂದ ವಿಧಾನಸಭಾಧ್ಯಕ್ಷ ಸ್ಥಾನದವರೆಗೆ ಕಾಗೋಡು ತಿಮ್ಮಪ್ಪ ಹಾದಿ…

ಕರ್ನಾಟಕದ ಸಾಮಾಜಿಕ ಮತ್ತು ರಾಜಕೀಯ ಇತಿಹಾಸದಲ್ಲಿ ಕೆಲವು ವ್ಯಕ್ತಿಗಳು ತಮ್ಮ ಹೋರಾಟ, ಸಾರ್ವಜನಿಕ ಬದುಕು ಹಾಗೂ ಜನಪರ ಚಟುವಟಿಕೆಗಳ ಮೂಲಕ ವಿಶೇಷ ಛಾಪು ಮೂಡಿಸಿದ್ದಾರೆ. ಅಂತಹವರ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರದ ಕಾಂಗ್ರೆಸ್...

ಈ ದಿನ ಕವಿತೆ | ಎರಡು ದೀಪಗಳು- ಅಲಿ...

ವಾರಕ್ಕೊಂದು ಅನುವಾದಿತ ಕವಿತೆ ಮಾಲಿಕೆಯಲ್ಲಿ ಉರ್ದು ಕವಿ ಅಲಿ ಸರ್ದಾರ್ ಜಾಫ್ರಿಯವರ ಕವನವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ ಹಿರಿಯ ಅನುವಾದಕಿ ಸಿ ಎಚ್‌ ಭಾಗ್ಯ . ಕತ್ತಲ ಗವಿಯೊಳಗಿಂದರೆಕ್ಕೆಗಳು ಫಡಫಡಿಸುವ ಸದ್ದು ಕೇಳುವುದು.ನಿರ್ದಯಿ ಗಾಳಿಯುಮಂಜಿನ ಮೇಲೆ...

ಕರಸ್ಥಲದ ಲಿಂಗ ಮತ್ತು ಬೆರಳಿನ ಮಸಿ: ಸ್ಥಾವರ ಪ್ರಭುತ್ವದ...

ಭಾರತೀಯ ಸಮಾಜದ ಹಳ್ಳಿಯ ಭೌತಿಕ ವಿನ್ಯಾಸವನ್ನು ಗಮನಿಸಿದರೆ ಅದೊಂದು ಅಪ್ಪಟ ಘನೀಕೃತ ‘ಸ್ಥಾವರ’ ಮಾದರಿ. ಹಳ್ಳಿಯ ಹೃದಯಭಾಗದಲ್ಲಿ ಕೇವಲ ಪೂಜೆಯ ತಾಣವಲ್ಲ, ಇಡೀ ನೆಲದ ಮೇಲೆ ಅಧಿಪತ್ಯ ಸಾಧಿಸುವ ಕ್ಷೇತ್ರಾಧಿಪತಿಯ ‘ದೇವಸ್ಥಾನ’ ವಿರಾಜಮಾನವಾಗಿರುತ್ತದೆ....

ಪ್ರತಿ ವರ್ಷ ಮುಂಗಾರು ಅವಧಿಯಲ್ಲಿ ಸಮುದ್ರ ಜೀವಿಗಳ ಸಂತಾನೋತ್ಪತ್ತಿಗೆ ಅನುಕೂಲವಾಗುವಂತೆ ಸರ್ಕಾರ ಮೀನುಗಾರಿಕೆಗೆ ತಾತ್ಕಾಲಿಕ ನಿಷೇಧ ವಿಧಿಸುತ್ತದೆ. ನಿಷೇಧ ತೆರವಾದ ಬಳಿಕ ಆರಂಭದ ದಿನಗಳಲ್ಲಿ ಕರಾವಳಿ ಭಾಗದಲ್ಲೇ ಮೀನುಗಾರಿಕೆ ನಡೆಸಲಾಗುತ್ತದೆ. ಸುಮಾರು ಏಳು ದಿನಗಳ ನಂತರ ಹವಾಮಾನ ಅನುಕೂಲಕರವಾಗಿದ್ದರೆ ಮೀನುಗಾರರು ಆಳ ಸಮುದ್ರ ಮೀನುಗಾರಿಕೆಗೆ ತೆರಳುವ ಯೋಜನೆ ಹೊಂದಿದ್ದಾರೆ.

ಆದರೆ, ಹೊಸ ಹಂಗಾಮಿನ ಆರಂಭದಲ್ಲೇ ಹವಾಮಾನ ವೈಪರೀತ್ಯದ ಆತಂಕ ಎದುರಾಗಿದೆ. ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ಇನ್ನೂ ಮೂರು ದಿನಗಳ ಬಳಿಕ ಅರಬ್ಬಿ ಸಮುದ್ರದಲ್ಲಿ ಬಿರುಗಾಳಿ ಹಾಗೂ ಸಮುದ್ರ ಪ್ರಕ್ಷುಬ್ಧವಾಗುವ ಸಾಧ್ಯತೆ ಇರುವುದರಿಂದ ಮೀನುಗಾರರು ಎಚ್ಚರಿಕೆಯಿಂದ ಇರಬೇಕೆಂದು ಸೂಚಿಸಲಾಗಿದೆ. ಸಮುದ್ರದ ಪರಿಸ್ಥಿತಿಯನ್ನು ನಿರಂತರವಾಗಿ ಗಮನಿಸಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವಂತೆ ಅಧಿಕಾರಿಗಳು ಸಲಹೆ ನೀಡಿದ್ದಾರೆ.

“ಸಮುದ್ರದ ನೀರಿನ ತಾಪಮಾನದಲ್ಲಿನ ಬದಲಾವಣೆ ಮತ್ತು ಬಿಸಿಗಾಳಿಯ ಪರಿಣಾಮದಿಂದ ಈ ಬಾರಿ ನಿರೀಕ್ಷಿತ ಮಟ್ಟದಲ್ಲಿ ಮೀನು ಲಭ್ಯತೆ ಇರದಿರಬಹುದು” ಎಂದು ಸಮುದ್ರ ಅಧ್ಯಯನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಉತ್ತಮ ಪ್ರಮಾಣದಲ್ಲಿ ಮೀನು ದೊರೆಯದಿದ್ದರೆ ಮೀನುಗಾರರ ಆದಾಯದ ಮೇಲೂ ಪರಿಣಾಮ ಬೀಳುವ ಸಾಧ್ಯತೆ ಇದೆ.

ಕಳೆದ ವರ್ಷವೂ ಹಂಗಾಮಿನ ಮಧ್ಯೆ ಪ್ರತಿಕೂಲ ಹವಾಮಾನದಿಂದ ಹಲವು ದಿನಗಳ ಕಾಲ ಬೋಟುಗಳನ್ನು ಬಂದರಿನಲ್ಲೇ ನಿಲ್ಲಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಬಾರಿ ಕೂಡ ಅದೇ ಪರಿಸ್ಥಿತಿ ಮರುಕಳಿಸಿದರೆ ಮೀನುಗಾರರ ಬದುಕು ಆರ್ಥಿಕ ನಷ್ಟದ ಸುಳಿಯಲ್ಲಿ ಸಿಲುಕಿ ನಲುಗುತ್ತದೆ. ಆದ್ದರಿಂದ, ಬೋಟುಗಳ ದುರಸ್ತಿ, ಇಂಧನ, ಬಲೆ, ಕಾರ್ಮಿಕರ ವೇತನ ಸೇರಿದಂತೆ ಈಗಾಗಲೇ ಹೆಚ್ಚಿನ ವೆಚ್ಚ ಭರಿಸಿರುವ ಮೀನುಗಾರರು, ಕೃಷಿ ಕ್ಷೇತ್ರದ ಮಾದರಿಯಲ್ಲೇ ಮತ್ಸ್ಯೋದ್ಯಮಕ್ಕೂ ಸಾಲದ ಮೇಲಿನ ಬಡ್ಡಿ ವಿನಾಯಿತಿ ಅಥವಾ ವಿಶೇಷ ಆರ್ಥಿಕ ನೆರವು ನೀಡುವಂತೆ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಒಟ್ಟಾರೆ, ಆಗಸ್ಟ್ 2ರಿಂದ ಅಧಿಕೃತವಾಗಿ ಮೀನುಗಾರಿಕೆ ಹಂಗಾಮು ಆರಂಭವಾಗಲಿದ್ದು, ಒಂದು ವಾರದ ಬಳಿಕ ಆಳ ಸಮುದ್ರ ಮೀನುಗಾರಿಕೆಗೆ ತೆರಳಲು ಸಿದ್ಧತೆ ನಡೆದಿದೆ. ಆದರೆ ಆರಂಭದಲ್ಲೇ ಬಿರುಗಾಳಿ ಮುನ್ಸೂಚನೆ ಎದುರಾಗಿರುವುದರಿಂದ ಹೊಸ ಹಂಗಾಮು ಮೀನುಗಾರರಿಗೆ ಸಮೃದ್ಧಿ ತರುತ್ತದೆಯೇ ಎಂಬುದು ಮುಂದಿನ ಕೆಲ ದಿನಗಳಲ್ಲಿ ಸ್ಪಷ್ಟವಾಗಲಿದೆ.

ಯುವ ಮೀನುಗಾರರ ಮುಖಂಡ ಚೇತನ್ ಹರಿಕಂತ್ರ ಈದಿನ.ಕಾಮ್‌ ಜೊತೆಗೆ ಮಾತನಾಡಿ, “ಎರಡು ತಿಂಗಳ ನಿಷೇಧದ ಬಳಿಕ ಮೀನುಗಾರರು ಹೊಸ ಹಂಗಾಮಿನ ನಿರೀಕ್ಷೆಯಲ್ಲಿದ್ದಾರೆ. ಆಗಸ್ಟ್ 2ರಿಂದ ಅಧಿಕೃತವಾಗಿ ಎಲ್ಲಾ ಯಾಂತ್ರಿಕ ದೋಣಿಗಳು ಸಮುದ್ರಕ್ಕಿಳಿಯಲಿದ್ದು, ಹವಾಮಾನ ಅನುಕೂಲಕರವಾಗಿದ್ದರೆ ಸುಮಾರು ಏಳು ದಿನಗಳ ಬಳಿಕ ಆಳ ಸಮುದ್ರ ಮೀನುಗಾರಿಕೆ ಆರಂಭವಾಗಲಿದೆ. ಆದರೆ ಹವಾಮಾನ ಇಲಾಖೆಯು ಮೂರು ದಿನಗಳ ಬಳಿಕ ಬಿರುಗಾಳಿಯ ಸಾಧ್ಯತೆ ಬಗ್ಗೆ ಮುನ್ಸೂಚನೆ ನೀಡಿರುವುದು ಮೀನುಗಾರರಲ್ಲಿ ಆತಂಕ ಮೂಡಿಸಿದೆ. ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆಗಳು ನಿರಂತರವಾಗಿ ಹವಾಮಾನ ಮಾಹಿತಿ ನೀಡುವ ಮೂಲಕ ಮೀನುಗಾರರ ಸುರಕ್ಷತೆಗೆ ಆದ್ಯತೆ ನೀಡಬೇಕು,” ಎಂದು ಹೇಳಿದರು.

ಆಗಸ್ಟ್ 2ರಿಂದ ಕರಾವಳಿಯಲ್ಲಿ ಹೊಸ ಮೀನುಗಾರಿಕಾ ಹಂಗಾಮು ಆಶಾದಾಯಕವಾಗಿ ಆರಂಭವಾಗುತ್ತಿದೆಯಾದರೂ, ಆರಂಭದಲ್ಲೇ ಎದುರಾಗಿರುವ ಪ್ರತಿಕೂಲ ಹವಾಮಾನ ಹಾಗೂ ಬಿರುಗಾಳಿಯ ಮುನ್ಸೂಚನೆ ಮೀನುಗಾರರಲ್ಲಿ ಆತಂಕ ಮೂಡಿಸಿದೆ. ಲಕ್ಷಾಂತರ ರೂಪಾಯಿ ಸಾಲ-ವೆಚ್ಚ ಮಾಡಿ ಸಿದ್ಧತೆ ನಡೆಸಿರುವ ಮೀನುಗಾರರು ನಷ್ಟದಿಂದ ಪಾರಾಗಲು, ಸಂಬಂಧಪಟ್ಟ ಅಧಿಕಾರಿಗಳು ಕ್ಷಣಕ್ಷಣದ ಹವಾಮಾನ ಮಾಹಿತಿಯನ್ನು ನಿಖರವಾಗಿ ತಲುಪಿಸುವುದು ಅತ್ಯಗತ್ಯ. ಜೊತೆಗೆ, ಕೃಷಿ ಕ್ಷೇತ್ರದಂತೆಯೇ ಮೀನುಗಾರಿಕೆಗೂ ಸರ್ಕಾರ ವಿಶೇಷ ಆರ್ಥಿಕ ನೆರವು ಹಾಗೂ ಬಡ್ಡಿ ವಿನಾಯಿತಿ ನೀಡಿ ಕರಾವಳಿಯ ಜೀವಾಳವಾದ ಮೀನುಗಾರಿಕೆಗೆ ಬೆಂಬಲ ನೀಡಬೇಕಿದೆ.

+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಕವಿತೆ | ಎರಡು ದೀಪಗಳು- ಅಲಿ ಸರ್ದಾರ್ ಜಾಫ್ರಿ

ವಾರಕ್ಕೊಂದು ಅನುವಾದಿತ ಕವಿತೆ ಮಾಲಿಕೆಯಲ್ಲಿ ಉರ್ದು ಕವಿ ಅಲಿ ಸರ್ದಾರ್ ಜಾಫ್ರಿಯವರ...

ನಾಲ್ಕು ಹೊಸ ಫೀಚರ್’ಗಳನ್ನು ಪರಿಚಯಿಸಿದ WHATSAPP

ಮೆಟಾ ಒಡೆತನದ ಜನಪ್ರಿಯ ಇನ್‌ಸ್ಟಂಟ್ ಮೆಸೇಜಿಂಗ್ ಅಪ್ಲಿಕೇಶನ್ WhatsApp ತನ್ನ ಬಳಕೆದಾರರ...

ಮತದಾರರ ಮರುಸೇರ್ಪಡೆಗೆ ಚುನಾವಣಾ ಆಯೋಗದಿಂದಲೇ ತಡೆ; 16.10 ಲಕ್ಷ ಜನರ ಸೇರ್ಪಡೆ ವಿರೋಧಿಸಿ ಮೇಲ್ಮನವಿ!

ಪಶ್ಚಿಮ ಬಂಗಾಳದ SIR ಪ್ರಕ್ರಿಯೆ ಮುಗಿದರೂ, ಅಲ್ಲಿನ ಮತದಾರರ ಪಟ್ಟಿಯ ಸುತ್ತ...

‘ಸಂಗೀತಾ’ ಮತ್ತು ‘ಸಂಗೇತಾ’ ನಡುವಿನ ವ್ಯತ್ಯಾಸ ಹಸಿದ ಗ್ರಾಹಕರಿಗೆ ತಿಳಿಯದು: ಮದ್ರಾಸ್ ಹೈಕೋರ್ಟ್

ತಂಜಾವೂರಿನ ಐತಿಹಾಸಿಕ ಬೃಹದೀಶ್ವರ ದೇವಾಲಯದ ಎದುರು ಇರುವ ಉಪಾಹಾರ ಗೃಹವೊಂದು ‘ಹೋಟೆಲ್...