ವಿಜಯನಗರ | ಮದ್ಯಮುಕ್ತ ಗ್ರಾಮವನ್ನಾಗಿಸಲು ಒತ್ತಾಯಿಸಿ ಗ್ರಾಕೂಸ್‌ ಪ್ರತಿಭಟನೆ

Date:

ವಿಜಯನಗರ ಜಿಲ್ಲೆ ಹಗರಿ ಬೊಮ್ಮನಹಳ್ಳಿ ತಾಲೂಕಿನ ಹಂಪಾಪಟ್ಟಣವನ್ನು ಮದ್ಯಮುಕ್ತ ಗ್ರಾಮವನ್ನಾಗಿಸಬೇಕು ಮತ್ತು ಎಂಎಸ್‌ಐಎಲ್ ಮದ್ಯದ೦ಗಡಿಯನ್ನು ಸ್ಥಳಾಂತರಿಸಬೇಕು ಎಂದು ಆಗ್ರಹಿಸಿ ಗ್ರಾಕೂಸ್ ಸಂಘಟನೆ ಪ್ರತಿಭಟನೆ ನಡೆಸಿತು.

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಗ್ರಾಕೂಸ್ ತಾಲೂಕು ಸಂಚಾಲಕಿ ಅಕ್ಕಮಹಾದೇವಿ ಮರಬ್ಬಿ ಹಾಳು, ಹಂಪಾಪಟ್ಟಣ ಗ್ರಾಮದ ಪಕ್ಕದಲ್ಲಿ ಇರುವ ಎಂಎಸ್‌ಐಎಲ್‌ ಮದ್ಯದ ಮಳಿಗೆಯನ್ನು ಕೂಡಲೇ ಸ್ಥಳಾಂತರಿಸಬೇಕು. ಗ್ರಾಮದ ಪಕ್ಕದಲ್ಲೇ ಇರುವುದರಿಂದ ಚಿಕ್ಕಮಕ್ಕಳು ಮದ್ಯವ್ಯಸನಿಗಳಾಗಿದ್ದಾರೆ. ಮದ್ಯದಂಗಡಿ ಮುಂಭಾಗದಲ್ಲಿಯೇ ಸಾರ್ವಜನಿಕರು ಮಹಿಳೆಯರು, ಓಡಾಡುವುದರಿಂದ ಮದ್ಯವ್ಯಸನಿಗಳಿಂದ ತೊಂದರೆಯುಂಟಾಗುತ್ತಿದೆ ಎಂದರು.

ಮಹಿಳೆಯರಿಗೆ ನಿರಂತರವಾಗಿ ಸಮಸ್ಯೆಯಾಗುತ್ತಿರುವುದರಿಂದ, ಕೂಡಲೇ ಸ್ಥಳಾಂತರಿಸಬೇಕು. ಹಂಪಾಪಟ್ಟಣ ಗ್ರಾಮವನ್ನು ಸಂಪೂರ್ಣವಾಗಿ ಮದ್ಯ ಮುಕ್ತವನ್ನಾಗಿಸಬೇಕು. ತಾಲೂಕಿನಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟವನ್ನು ತಡೆಯಬೇಕು ಎಂದು ಪ್ರತಿಭಟನಾಕಾರರು  ಒತ್ತಾಯಿಸಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ವೇಳೆ ಭೂಮಿಕಾ ಸಂಜೀವಿನಿ ವಾರ್ಡ್ ಒಕ್ಕೂಟ ಮುಖಂಡೆ ಅನಿತಾ, ಕಾರ್ಮಿಕ ಸಂಘದ ತಾಲೂಕ  ಅಧ್ಯಕ್ಷ ಖಾಜಾ ಹುಸೇನ, ಗ್ರಾಕೂಸ್ ಮರಿಯಮ್ಮ, ಶಿವಕ್ಕ, ಗಾಳೆಮ್ಮ, ಹನುಮಂತ ಇನ್ನಿತರರು ಹಾಜರಿದ್ದರು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಲಬುರಗಿ | ‘ಅಂಬೇಡ್ಕರ್ ಮತ್ತು ಗಾಂಧೀಜಿ – ಒಂದು ನದಿಯ ಎರಡು ದಡಗಳು’

ಬಾಬಾ ಸಾಹೇಬ್ ಅವರ 133ನೇ ಜಯಂತಿಯ ದಿನದಂದ ನಾವು ಹೆಚ್ಚೆಚ್ಚು ಎಷ್ಟೇ...

ಗದಗ | ದೊಡ್ಡೂರು ಗ್ರಾಮದಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ

ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ದೊಡ್ಡೂರ ಗ್ರಾಮದಲ್ಲಿ ಡಾ. ಬಾಬಾಸಾಹೇಬ್ ಅಂಬೇಡ್ಕರ್...

ರಾಯಚೂರು | ಅಂಬೇಡ್ಕರ್ ಜಯಂತಿಯಂದು ಮಾಂಸ ಮಾರಾಟ ನಿಷೇಧ; ಖಂಡನೆ

ಡಾ. ಬಿ.ಆರ್ ಅಂಬೇಡ್ಕರ್ ಜಯಂತಿ ಹಿನ್ನೆಲೆ ಏಪ್ರಿಲ್ 14ರಂದು ರಾಯಚೂರು ಜಿಲ್ಲೆಯ...

ಮೋದಿ ಹೇಳಿದರೂ ಸ್ಪರ್ಧೆಯಿಂದ ಹಿಂದೆ ಸರಿಯಲ್ಲ ಎಂದ ಕೆ.ಎಸ್.ಈಶ್ವರಪ್ಪ

ರಾಜ್ಯ ಬಿಜೆಪಿಯ ವಿರುದ್ಧ ಬಂಡಾಯವೆದ್ದು ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ...