ವಿಜಯನಗರ | ಇಬ್ಬರು ಪಿಯು ಟಾಪರ್‌ಗಳಿಗೆ; ತಲಾ ₹5 ಲಕ್ಷ ನಗದು, ಸ್ಕೂಟಿ ಕೊಡುಗೆ ನೀಡಿದ ಸಚಿವ ಜಮೀರ್

Date:

ದ್ವಿತೀಯ ಪಿಯುಸಿಯಲ್ಲಿ ಉತ್ತಮ ಸಾಧನೆ ಮಾಡಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ವಿಜಯನಗರ ಜಿಲ್ಲೆಯ ಸಂಜನಾಬಾಯಿ ಹಾಗೂ ಕೆ ನಿರ್ಮಲಾ ಅವರಿಗೆ ಜಿಲ್ಲಾ ಉಸ್ತುವಾರಿ ಹಾಗೂ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ತಲಾ ₹5 ಲಕ್ಷ ನಗದು ಮತ್ತು ಒಂದು ಸ್ಕೂಟಿಯನ್ನು ಕೊಡುಗೆಯಾಗಿ ನೀಡಿದ್ದಾರೆ.

- Advertisement -

ವಿದ್ಯಾರ್ಥಿನಿಯರನ್ನು ಸ್ಕೂಟಿಯಲ್ಲಿ ಕೂರಿಸಿಕೊಂಡು ಒಂದು ರೌಂಡ್ ಹೊಡೆದ ಜಮೀರ್, ಲೈಸೆನ್ಸ್ ಸಿಗುವವರೆಗೆ ಸ್ಕೂಟಿಯನ್ನು ಅವರ ತಂದೆ, ತಾಯಿಗಳಿಗೆ ನೀಡಲು ತಿಳಿಸಿದರು. ಅಲ್ಲದೆ, ಪಿಯುಸಿಯಲ್ಲಿ ಉತ್ತಮ ಸಾಧನೆ ಮಾಡಿದ ಕೊಟ್ಟೂರಿನ ನಾಗಲಕ್ಷ್ಮಿ ಹಾಗೂ ಕೂಡ್ಲಿಗಿಯ ಯಲ್ಲಮ್ಮ ಅವರಿಗೆ ತಲಾ ₹50 ಸಾವಿರ ವಿತರಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಳ್ಳಿತೆರೆಯ ಮೇಲಿನ ಬಣ್ಣ: ಚಿತ್ರ ಚೌಕಟ್ಟಿನಲ್ಲಿ ರಂಗಿನಾಟ

ಸಿನೆಮಾ ಪರದೆಯ ಮೇಲಿನ ಬಣ್ಣವು ಸೌಂದರ್ಯಪ್ರಜ್ಞೆಯಷ್ಟೇ ಅಲ್ಲ, ತಾಂತ್ರಿಕ ಮಿತಿ ಮತ್ತು ರಾಜಕೀಯದ ಭಾಗವೂ ಹೌದು. ಆರಂಭದ ಕಪ್ಪು-ಬಿಳುಪಿನ ನೆರಳುಗಳಿಂದ ಇಂದಿನ ಅಲ್ಟ್ರಾ-ಸ್ಯಾಚುರೇಟೆಡ್ ಪರದೆಯವರೆಗೆ, ಸಿನೆಮಾದ ಸೌಂದರ್ಯ, ತಂತ್ರಜ್ಞಾನ ಮತ್ತು ಅಧಿಕಾರ ರಾಜಕಾರಣವನ್ನು...

‘ಪಿತೃಪ್ರಭುತ್ವವನ್ನು ಧ್ವಂಸ ಮಾಡಿ’: ಮನುವಾದ ಮತ್ತು ಫ್ಯಾಸಿಸಂ ವಿರುದ್ಧ...

ಸ್ವತಂತ್ರ ಭಾರತ 80 ವರ್ಷಗಳನ್ನು ಪೂರೈಸುತ್ತಿರುವಾಗ, ನಾವು ಕೇಳಬೇಕಾಗಿದೆ, ಆ ಮನಸ್ಥಿತಿ ಹೋಗಿದೆಯೇ? ಇಲ್ಲ. ಪುಸ್ತಕವನ್ನು ಸುಡಲಾಗಿರಬಹುದು, ಆದರೆ ಮನುಸ್ಮೃತಿಯ ಮನಸ್ಥಿತಿ, ಮನುವಾದ, ಹೆಚ್ಚು ಅತ್ಯಾಧುನಿಕ ಮತ್ತು ಅದೃಶ್ಯ ರೂಪಗಳಲ್ಲಿ ಅಸ್ತಿತ್ವದಲ್ಲಿದೆ.  ಪುಣೆಯಲ್ಲಿ ನಡೆದ...

ಬೆಟ್ಟದಷ್ಟಾದ ಅತ್ಯಾಚಾರ ಪ್ರಕರಣಗಳು – ತೆವಳುತ್ತಿರುವ ನ್ಯಾಯದಾನ

ಪೊಲೀಸರೆಂದು ನಟಿಸಿ ಬೆದರಿಸುವುದು, ನಿರ್ಜನ ಪ್ರದೇಶಗಳಲ್ಲಿ ತೋಳಗಳಂತೆ ಕಾದು ಹಲ್ಲೆಗೈದು ಸಾಮೂಹಿಕ ಅತ್ಯಾಚಾರ ನಡೆಸಿ ಕೊಂದೆಸೆಯುವುದು, ಕಿಂಚಿತ್ತೂ ಭಯವಿಲ್ಲದೆ ಕೃತ್ಯದ ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಲ್ಲದೆ, ಸಂತ್ರಸ್ತರ ಗುರುತು ಬಹಿರಂಗಪಡಿಸುವ ಪ್ರವೃತ್ತಿ...
ಸಚಿವ ಜಮೀರ್‌ ಕೊಡುಗೆ 1

ಇದೇ ವೇಳೆ, ಎಸ್‌ಎಸ್‌ಎಲ್‌ಸಿಯಲ್ಲಿ 625ಕ್ಕೆ 624 ಅಂಕ ಗಳಿಸಿರುವ ಯಶವಂತ್ ಮತ್ತು 625ಕ್ಕೆ 622 ಅಂಕ ಗಳಿಸಿರುವ ಹರಪನಹಳ್ಳಿ ಬಾಲಕ ನಿಹಾರ್‌ ಅವರಿಗೆ ತಲಾ ₹1 ಲಕ್ಷ ಮತ್ತು ಸ್ಕೂಟಿ ನೀಡುವುದಾಗಿ ಘೋಷಿಸಿದರು. ಜತೆಗೆ, ವಿದ್ಯಾರ್ಥಿಗಳಾದ ಎನ್ ಆರ್ ಅಭಿಷೇಕ್, ಹೇಮಂತ್ ಮತ್ತು ಲಕ್ಷ್ಮೀ, ಜಿ ಎ ಉಮೇಶ್ ಅವರು ತಲಾ 621 ಅಂಕ ಗಳಿಸಿದ್ದು, ಅವರಿಗೂ ಸ್ಕೂಟಿ ನೀಡುವುದಾಗಿ ಘೋಷಿಸಿದರು.

ಈ ಸುದ್ದಿ ಓದಿದ್ದೀರಾ? ಬಳ್ಳಾರಿ | ಜಾತಿಗಣತಿಯಲ್ಲಿ ಪರಿಶಿಷ್ಟ ಜಾತಿಯೆಂದು ಸ್ಪಷ್ಟವಾಗಿ ದಾಖಲಿಸಬೇಕು: ಶಿವಕುಮಾರ್ ಮನವಿ

ಶಾಸಕರಾದ ಗವಿಯಪ್ಪ ಲತಾ ಮಲ್ಲಿಕಾರ್ಜುನ, ಶ್ರೀನಿವಾಸ್‌, ಉಸ್ತುವಾರಿ ಕಾರ್ಯದರ್ಶಿ ನವೀನ್ ರಾಜ್ ಸಿಂಗ್, ಜಿಲ್ಲಾಧಿಕಾರಿ ದಿವಾಕರ್, ಎಸ್ ಪಿ ಹರಿಬಾಬು ಹಾಗೂ ಇತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಮಲ್ಪೆಯಲ್ಲಿ ಆಂಧ್ರಪ್ರದೇಶ ಮೂಲದ ವ್ಯಕ್ತಿ ಕೊಲೆ

ಆಂಧ್ರಪ್ರದೇಶ ಮೂಲದ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿರುವ ಘಟನೆ ಮಲ್ಪೆಯಲ್ಲಿ ಮಂಗಳವಾರ ಬೆಳಗ್ಗೆ...

ಗ್ರಾಮೀಣ ಬದುಕು, ಕೃಷಿ ಸಂಸ್ಕೃತಿ ಪ್ರವಾಸಿಗರಿಗೆ ಪರಿಚಯಿಸಲು ಹೊಸ ಪ್ರವಾಸೋದ್ಯಮ ಪ್ಯಾಕೇಜ್‌ಗಳ ಚಿಂತನೆ

ಉಡುಪಿ ಜಿಲ್ಲೆಯ ನೈಸರ್ಗಿಕ ಸೌಂದರ್ಯ, ಧಾರ್ಮಿಕ ಕ್ಷೇತ್ರಗಳು ಹಾಗೂ ಕಡಲತೀರಗಳೊಂದಿಗೆ ಗ್ರಾಮೀಣ...

ವಿಜಯಪುರ | ಬರ ಪರಿಹಾರ ಹೆಚ್ಚಳ, ಸಾಲಮನ್ನಾಕ್ಕೆ ರಾಜ್ಯ ರೈತ ಸಂಘ ಆಗ್ರಹ

ವಿಜಯಪುರ ಜಿಲ್ಲೆಯಲ್ಲಿ ಮಳೆ ಕೈಕೊಟ್ಟು ಕೃಷಿ ಚಟುವಟಿಕೆಗಳು ತೀವ್ರ ಸಂಕಷ್ಟಕ್ಕೆ ಸಿಲುಕಿರುವ...