ವಿಜಯನಗರ | ಉನ್ನಾಂವ್‌ ಪ್ರಕರಣ: ಅತ್ಯಾಚಾರಿಯ ಜೀವಾವಧಿ ಶಿಕ್ಷೆ ಅಮಾನತಿಗೆ ಎಐಡಿಎಸ್ಒ ಖಂಡನೆ

Date:

ಉನ್ನಾಂವ್‌ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಅತ್ಯಾಚಾರಿ ಕುಲದೀಪ್ ಸಿಂಗ್ ಸೆಂಗಾರ್‌ನ ಜೀವಾವಧಿ ಶಿಕ್ಷೆಯನ್ನು ಅಮಾನತಿನಲಿಟ್ಟ ದೆಹಲಿ ಹೈಕೋರ್ಟ್‌ನ ನಿರ್ಧಾರಕ್ಕೆ ಎಐಡಿಎಸ್ಒ ವಿಜಯನಗರ ಜಿಲ್ಲಾ ಸಮಿತಿಯು ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

- Advertisement -

ಈ ಕುರಿತು ವಿಜಯನಗರ ಜಿಲ್ಲಾ ಕಾರ್ಯದರ್ಶಿ ಉಮಾದೇವಿ‌ ಯು ಪತ್ರಿಕೆ ಹೇಳಿಕೆ ನೀಡಿದ್ದು, “ಈ ತೀರ್ಪು ಕೇವಲ ಕಾನೂನಿನ ಹಿನ್ನಡೆಯಲ್ಲ, ಇದು ನ್ಯಾಯದ ಸಂಪೂರ್ಣ ಅಪಹಾಸ್ಯವಾಗಿದೆ. ಕಾನೂನಿನ ಆಳ್ವಿಕೆ ಮತ್ತು ಮಹಿಳೆಯರ ಸುರಕ್ಷತೆಯನ್ನು ನಂಬುವ ಪ್ರತಿಯೊಬ್ಬ ನಾಗರಿಕನ ಆತ್ಮಸಾಕ್ಷಿಯನ್ನು ಇದು ಬೆಚ್ಚಿಬೀಳಿಸಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಚುನಾವಣಾ ಆಯೋಗದ ಸಭೆ: ಪರಿಹಾರವಲ್ಲ, ತೇಪೆ ಹಚ್ಚುವ ಕಾರ್ಯಕ್ರಮ

ಅವೈಜ್ಞಾನಿಕ 'SIR' ಪ್ರಕ್ರಿಯೆ ಮತ್ತು ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಸಾರ್ವಜನಿಕವಾಗಿ ಬಯಲಾದ ಬೆನ್ನಲ್ಲೇ ಬಿಡುಗಡೆಯಾದ ಚುನಾವಣಾ ಆಯೋಗದ ಪತ್ರಿಕಾ ಪ್ರಕಟಣೆ, ತಪ್ಪುಗಳನ್ನು ತಿದ್ದುವ ಬದಲು ವ್ಯವಸ್ಥೆಯ ಲೋಪಗಳಿಗೆ ತೇಪೆ ಹಚ್ಚುವ ಯತ್ನದಂತೆ ಕಾಣುತ್ತಿದೆ. ದೇಶದ ಇತಿಹಾಸದಲ್ಲೇ...

ಹೊರಟ್ಟಿ ಅವರ ಹೋರಾಟದ ಬದುಕು ಮತ್ತು ಅವರ ಭಕ್ತ...

ಗ್ಯಾರಂಟಿ ಯೋಜನೆಗಳಿಂದ ಕೂಲಿ ಕಾರ್ಮಿಕರು ಸಿಗುತ್ತಿಲ್ಲವೆಂಬ ಬಸವರಾಜ ಹೊರಟ್ಟಿ ಅವರ ಹೇಳಿಕೆ ಮತ್ತು ಅದಕ್ಕೆ ಸಿಕ್ಕ ಸಾರ್ವಜನಿಕ ಚಪ್ಪಾಳೆಗಳು, ಕೇವಲ ಹಸಿವನ್ನೇ ಶ್ರಮದ ಇಂಧನವನ್ನಾಗಿ ನೋಡುವ ಸಮಾಜದ ಕ್ರೂರ ಮನಸ್ಥಿತಿಯನ್ನು ಅನಾವರಣಗೊಳಿಸುತ್ತವೆ. ಬಸವರಾಜ ಹೊರಟ್ಟಿ...

History Repeats | ರೋಮ್‌ ಉರಿಯುತ್ತಿದ್ದಾಗ ಪಿಟೀಲು ನುಡಿಸಿದ...

ದೇಶದ ಪ್ರಜಾಪ್ರಭುತ್ವದ ಆಧಾರಸ್ತಂಭಗಳು ಒಂದೊಂದಾಗಿ ಕುಸಿಯುತ್ತಾ, ಚುನಾವಣಾ ವ್ಯವಸ್ಥೆಯೇ ಅಕ್ರಮ ಎಸಗುತ್ತಿರುವಾಗ, ನಿರುದ್ಯೋಗ-ಬೆಲೆ ಏರಿಕೆಯ ಭಾರದಿಂದ ಜನ ಹೈರಾಣಾಗಿರುವಾಗ ಭಾರತದ ಪ್ರಧಾನಿ ಭಜನೆ ಮಾಡುತ್ತಿದ್ದಾರೆ. ರೋಂ ಹೊತ್ತಿ ಉರಿಯುತ್ತಿದ್ದಾಗ ನೀರೋ ಪಿಟೀಲು...

“ಕುಲದೀಪ್ ಸಿಂಗ್ ಸೆಂಗಾರ್ ಸಾಮಾನ್ಯ ಅಪರಾಧಿಯಲ್ಲ, ಉನ್ನಾಂವ್‌ನಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರ ಮಾಡಿದ ಆರೋಪದ ಮೇಲೆ ವಿಚಾರಣಾ ನ್ಯಾಯಾಲಯದಿಂದ ಆತ ದೋಷಿ ಎಂಬ ಸಾಬೀತಾದ ವ್ಯಕ್ತಿ. ಅಷ್ಟೇ ಅಲ್ಲದೆ, ಈ ಪ್ರಕರಣಕ್ಕೆ ಸಂಬಂಧಿಸಿದ ಭಯಾನಕ ಸರಣಿ ಘಟನೆಗಳಲ್ಲಿ ಸಂತ್ರಸ್ತೆಯ ತಂದೆಯ ಕಸ್ಟಡಿಯಲ್ಲಿ ಸಾವು, ಸಂತ್ರಸ್ತೆ ಹಾಗೂ ಆಕೆಯ ಕುಟುಂಬವನ್ನು ಮಟ್ಟಹಾಕಲು ಸಂಚು ರೂಪಿಸಿದ ಸಂಶಯಾಸ್ಪದ ರಸ್ತೆ ʼಅಪಘಾತʼವೂ ಸೇರಿದೆ. ಇಂತಹ ಕ್ರೂರ ಅಪರಾಧಿಗೆ, ಆತ ʼಸಾರ್ವಜನಿಕ ಸೇವಕʼ ಎಂಬ ತಾಂತ್ರಿಕ ಕಾರಣ ನೀಡಿ ಅಪೀಲು ಬಾಕಿ ಇರುವಾಗಲೇ ಜಾಮೀನು ನೀಡಿರುವುದು ಸಂತ್ರಸ್ತೆಯ ದಶಕದ ಸುದೀರ್ಘ ಹೋರಾಟಕ್ಕೆ ಮಾಡಿದ ಅವಮಾನವಾಗಿದೆ” ಎಂದು ಬೇಸರ‌ ವ್ಯಕ್ತಪಡಿಸಿದರು.

“ಸೆಂಗಾರ್‌ನಂತಹ ಅತ್ಯಾಚಾರಿಯನ್ನು ಮುಕ್ತವಾಗಿ ತಿರುಗಾಡಲು ಬಿಡುವ ಮೂಲಕ ನ್ಯಾಯಾಂಗವು ಒಂದು ಭಯಾನಕ ಸಂದೇಶವನ್ನು ರವಾನಿಸಿದೆ. ಅದೇನೆಂದರೆ, ರಾಜಕೀಯ ಬಲ ಮತ್ತು ಹಣದ ಶಕ್ತಿ ಅತ್ಯಂತ ಘೋರ ಅಪರಾಧಗಳನ್ನೂ ಮೀರಿಸಬಲ್ಲದು ಎಂಬುದು ಸಾಬೀತಾಗಿದೆ. ಪ್ರಭಾವಿ ನರಭಕ್ಷಕನಿಗೆ ನ್ಯಾಯಾಂಗದ ಸಹಾನುಭೂತಿ ಸಿಗುತ್ತಿರುವಂತಹ ದುರಂತ ಕಾಲಘಟ್ಟಗಳಲ್ಲಿ ನಾವಿದ್ದೇವೆ. ಸಂತ್ರಸ್ತೆ ತನ್ನದೇ ಆದ ಆಘಾತ ಮತ್ತು ಭಯದ ಸೆರೆಯಲ್ಲೇ ಇರುವಾಗ, ದೇಶಾದ್ಯಂತ ಇರುವ ಅತ್ಯಾಚಾರ ಸಂತ್ರಸ್ತರಿಗೆ ಈ ವ್ಯವಸ್ಥೆಯ ಮೇಲೆ ಏನಾದರೂ ಭರವಸೆ ಉಳಿಯಲು ಸಾಧ್ಯವೇ?” ಎಂದು ಆತಂಕ ವ್ಯಕ್ತಪಡಿಸಿತು.

ಈ ಸುದ್ದಿ ಓದಿದ್ದೀರಾ? ಉನ್ನಾಂವ್ ಅತ್ಯಾಚಾರ ಕಾಂಡ: ಕುಲದೀಪ್ ಸೆಂಗರ್ ಶಿಕ್ಷೆ ಅಮಾನತಿಗೆ ತಡೆ ಕೋರಿ ಸುಪ್ರೀಂಗೆ ಅರ್ಜಿ

“ದೆಹಲಿ ಪೊಲೀಸರು ಉನ್ನಾಂವ್ ಸಂತ್ರಸ್ತೆ ಮತ್ತು ಆಕೆಯ ತಾಯಿಯನ್ನು ನಡೆಸಿಕೊಂಡ ನಾಚಿಕೆಗೇಡಿನ ಹಾಗೂ ನಿರಂಕುಶ ವರ್ತನೆ, ಡಿಸೆಂಬರ್ 23ರಂದು ಜಾಮೀನು ಆದೇಶದ ವಿರುದ್ಧ ಇಂಡಿಯಾ ಗೇಟ್‌ನಲ್ಲಿ ತಾಯಿ ಮತ್ತು ಮಗಳು ಶಾಂತಿಯುತವಾಗಿ ಪ್ರತಿಭಟಿಸಲು ಪ್ರಯತ್ನಿಸಿದಾಗ, ಪೊಲೀಸರು ಅವರನ್ನು ಎಳೆದಾಡಿ, ಬಲವಂತವಾಗಿ ವಶಕ್ಕೆ ಪಡೆದಿದ್ದಾರೆ. ಸಾಮೂಹಿಕ ಅತ್ಯಾಚಾರ ಮತ್ತು ಸರ್ಕಾರಿ ಪ್ರಾಯೋಜಿತ ಬೆದರಿಕೆಗೆ ಒಳಗಾದ ಸಂತ್ರಸ್ತೆಯೊಬ್ಬರು ನ್ಯಾಯ ಕೇಳಿದಾಗ ಅವರಿಗೆ ಪೊಲೀಸರ ಬೂಟು ಮತ್ತು ಲಾಠಿಗಳೇ ಉತ್ತರವಾಗಿವೆ. ಈ ವರ್ತನೆಯು ಪ್ರಜಾಪ್ರಭುತ್ವ ವಿರೋಧಿ, ಅಮಾನವೀಯ ಮತ್ತು ರಾಜ್ಯ ಯಂತ್ರವು ದುರ್ಬಲರಿಗಿಂತ ಪ್ರಭಾವಿಗಳನ್ನು ರಕ್ಷಿಸುವುದರಲ್ಲೇ ಹೆಚ್ಚಿನ ಆಸಕ್ತಿ ಹೊಂದಿದೆ ಎಂಬುದನ್ನು ಸಾಬೀತುಪಡಿಸುತ್ತದೆ” ಎಂದು ಆಕ್ರೋಶ ವ್ಯಕ್ತಪಡಿಸಿತು.

“ಸಮಾಜದ ಈ ಅಧಃಪತನಕ್ಕೆ ನಾವು ಮೂಕಪ್ರೇಕ್ಷಕರಾಗಿ ಉಳಿಯಲು ಸಾಧ್ಯವಿಲ್ಲ. ಮಾನವೀಯತೆಯನ್ನು ಉಳಿಸಲು ವಿದ್ಯಾರ್ಥಿಗಳು, ಯುವಜನರು ಮತ್ತು ಸಾರ್ವಜನಿಕರು ಒಗ್ಗೂಡಿ ರಾಷ್ಟ್ರವ್ಯಾಪಿ ಚಳವಳಿ ರೂಪಿಸಬೇಕು” ಎಂದು ಕರೆ ನೀಡಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯನಗರ | VNC ಕಾಲೇಜು ಬಳಿ ಇಂದಿರಾ ಕ್ಯಾಂಟೀನ್ ಉದ್ಘಾಟನೆ: ಸದುಪಯೋಗಕ್ಕೆ ತುಕಾರಾಂ ಕರೆ

ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಕಳೆದ ನಾಲ್ಕೈದು ತಿಂಗಳಿಂದ ಪಾಳು ಬಿದ್ದಿದ್ದ ಇಂದಿರಾ...

ವಿಜಯನಗರ | ಲಾಕಪ್ ಡೆತ್ ಪ್ರಕರಣ: ಸಂತ್ರಸ್ತ ಕುಟುಂಬಕ್ಕೆ 50 ಲಕ್ಷ ಪರಿಹಾರ ಆಗ್ರಹಿಸಿದ SDPI

ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಆಗಸ್ಟ್ 1ರಂದು ನಡೆದ ಲಾಕಪ್‌...

ಕೂಡ್ಲಿಗಿ | ಬರಪೀಡಿತ ತಾಲೂಕು ಘೋಷಣೆಗೆ ಆಗ್ರಹ; ವಿವಿಧ ಸಂಘಟನೆಗಳಿಂದ ಪ್ರತಿಭಟನೆ

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಿಸಿ, ಬರಪೀಡಿತ...

ವಿಜಯನಗರ | ಗಂಡನಷ್ಟೇ ಹೆಂಡತಿಗೂ ಗೌರವ, ಘನತೆ ಇದೆ: ಬಲವಂತದ ಮನೆಗೆಲಸ ಸಲ್ಲದು: ರೈತ ಮಹಿಳೆ

ಮನೆಗೆಲಸವು ಮಹಿಳೆಯೊಬ್ಬಳ ಹೊಣೆಗಾರಿಕೆ ಮಾತ್ರವಲ್ಲ; ಕುಟುಂಬದ ಎಲ್ಲ ಜವಾಬ್ದಾರಿಗಳಂತೆಯೇ ಅದನ್ನೂ ಗಂಡ–ಹೆಂಡತಿ...