ವಿಜಯಪುರ | ಮೇ 27ರಿಂದ ‘ಮೇ ಸಾಹಿತ್ಯ ಮೇಳ’: ಹರ್ಷ ಮಂದರ್, ತೀಸ್ತಾ, ಪ್ರಕಾಶ್ ಅಂಬೇಡ್ಕರ್ ಭಾಗಿ

Date:

  • ‘ಭಾರತೀಯ ಪ್ರಜಾತಂತ್ರ – ಸವಾಲು ಮೀರುವ ದಾರಿಗಳು’ ವಿಷಯದ ಕುರಿತು ಚರ್ಚೆ
  • ಎರಡು ದಿನಗಳ ಕಾಲ ನಡೆಯಲಿರುವ 9ನೇ ವರ್ಷದ ಮೇಳದಲ್ಲಿ ಆರು ಗೋಷ್ಠಿ

    ಬಂಡಾಯ ಸಾಹಿತ್ಯದ ನೆಲೆಯಲ್ಲಿ ಕಳೆದ ಒಂಭತ್ತು ವರ್ಷಗಳಿಂದ ನಿರಂತರವಾಗಿ ನಡೆದು ಬರುತ್ತಿರುವ ‘ಮೇ ಸಾಹಿತ್ಯ ಮೇಳ’ವು ಈ ವರ್ಷ ಮೇ 27, 28ರಂದು ವಿಜಯಪುರದ ಕಂದಗಲ ಹನಮಂತರಾಯ ರಂಗಮಂದಿರದಲ್ಲಿ ನಡೆಯಲಿದೆ.

ಈ ಮೇಳದಲ್ಲಿ ‘ಭಾರತೀಯ ಪ್ರಜಾತಂತ್ರ – ಸವಾಲು ಮೀರುವ ದಾರಿಗಳು’ ವಿಷಯದ ಕುರಿತು ಚರ್ಚೆಗಳು ನಡೆಯಲಿವೆ.

- Advertisement -

ಡಾ. ಬಿ. ಆರ್ ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್, ಸಾಮಾಜಿಕ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್, ಹರ್ಷ ಮಂದರ್, ಮುಝಫ್ಫರ್ ಅಸ್ಸಾದಿ, ಹೋರಾಟಗಾರ ಪ್ರಕಾಶ ಹಿಟ್ನಳ್ಳಿ, ನಜ್ಮಾ ಬಾಂಗಿ, ಭೀಮಶಿ ಕಲಾದಗಿ, ಉಮಾ ಕಲಬುರ್ಗಿ, ತುಕಾರಾಂ ಚಂಚಲಕರ, ವಿಹಾನ್ ಈ ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸಂಘಟಕರಾದ ಬಸವರಾಜ ಸೂಳಿಭಾವಿ ಮಾಹಿತಿ ನೀಡಿದ್ದಾರೆ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಸ್ವತಂತ್ರ ಸಾಂವಿಧಾನಿಕ ಸಂಸ್ಥೆಗಳ ಮೇಲಿನ ನಂಬಿಕೆಯನ್ನು ಕಸಿದುಕೊಳ್ಳುತ್ತಿರುವ ಚುನಾವಣಾ...

ನ್ಯಾಯಾಲಯ ಮತ್ತು ಚುನಾವಣಾ ಆಯೋಗಗಳ 'ಸ್ವತಂತ್ರತೆ' ಎಂಬ ಮುಖವಾಡವೇ ಈಗ ಸರ್ಕಾರಕ್ಕೆ ರಕ್ಷಣಾ ಕವಚವಾಗಿ ಕೆಲಸ ಮಾಡುತ್ತಿದೆ. ಹೀಗಾಗಿ ಇವತ್ತು ವಿರೋಧ ಪಕ್ಷಗಳ ಆಕ್ರೋಶವೆಲ್ಲವೂ ಸಾಂವಿಧಾನಿಕ ಸಂಸ್ಥೆಗಳ ಕಡೆಗೆ ತಿರುಗಿದೆ. ಸರ್ಕಾರ ತೀರಾ...

“ಪ್ರಜಾಪ್ರಭುತ್ವದ ಮೌಲ್ಯಗಳನ್ನು ಅಪಮೌಲ್ಯಗೊಳಿಸುವ, ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವ ವ್ಯವಸ್ಥಿತ ಸಂಚುಗಳ ವಿರುದ್ಧ ಚಿಂತನೆ ಮಾಡಬೇಕಿದೆ. ಆ ಉದ್ದೇಶದಿಂದ ಈ ಸಾಹಿತ್ಯ ಮೇಳ ಆಯೋಜನೆ ಮಾಡಲಾಗಿದೆ” ಎಂದು ತಿಳಿಸಿದ್ದಾರೆ.

ಸ್ಥಳೀಯ ಚಿಂತಕರ ಜೊತೆಗೆ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಚಿಂತಕರು ಈ ಮೇಳದಲ್ಲಿ ಭಾಗಿಯಾಗುತ್ತಿದ್ದು, ಎರಡು ದಿನಗಳ ಮೇಳದಲ್ಲಿ ಒಟ್ಟು ಆರು ಗೋಷ್ಠಿಗಳನ್ನು ಸಂಘಟಿಸಲಾಗುತ್ತಿದೆ.

ಗೋಷ್ಠಿ ಮೂಲಕ ಉದ್ಘಾಟನೆ

ಮೇ 27ರಂದು ಬೆಳಗ್ಗೆ 10ಕ್ಕೆ ಹೋರಾಟದ ಹಾಡುಗಳ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಪ್ರೊ. ರಾಜೇಂದ್ರ ಚೆನ್ನಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.

ಮಧ್ಯಾಹ್ನ 1.30ಕ್ಕೆ ‘ಭಾರತೀಯ ಪ್ರಜಾತಂತ್ರ-ಚಾರಿತ್ರಿಕ ನೋಟ’ ವಿಷಯದ ಕುರಿತು ಗೋಷ್ಠಿ ನಡೆಯಲಿದ್ದು, ಹಿರಿಯ ಸಾಹಿತಿ ಪುರಷೋತ್ತಮ ಬಿಳಿಮಲೆ ಆಶಯ ನುಡಿಗಳನ್ನಾಡಲಿದ್ದಾರೆ. ಎಚ್.ಜಿ. ಜಯಲಕ್ಷ್ಮಿ, ಎ. ನಾರಾಯಣ ವಿಚಾರ ಮಂಡಿಸಲಿದ್ದಾರೆ.

ಅದೇ ದಿನ ಮಧ್ಯಾಹ್ನ 3.30 ಕ್ಕೆ ‘ಪ್ರಜಾತಂತ್ರ ಸಾಗಿದ ದಾರಿ-ಅಸ್ಮಿತೆ ರಾಜಕಾರಣ’ ವಿಷಯವಾಗಿ ಗೋಷ್ಠಿ ನಡೆಯಲಿದ್ದು, ಬಾಲ ಗುರುಮೂರ್ತಿ, ಕೃಷ್ಣಮೂರ್ತಿ ಚಮರಂ, ರಂಗನಾಥ ಕಂಟನಕುಂಟೆ, ಬಿ.ಎಂ. ಹನೀಫ್, ಶೈಲಜಾ ಹಿರೇಮಠ ವಿಚಾರ ವ್ಯಕ್ತಪಡಿಸಲಿದ್ದಾರೆ.

ಸಂಜೆ 6ಕ್ಕೆ ‘ಬೌದ್ಧ, ಸೂಫಿ, ಶರಣ ಪರಂಪರೆಯಲ್ಲಿ ಪ್ರಜಾತಂತ್ರದ ಆಶಯಗಳು’ ಕುರಿತಾದ ಗೋಷ್ಠಿ ನಡೆಯಲಿದೆ. ಮೂಡ್ನಾಕೂಡು ಚಿನ್ನಸ್ವಾಮಿ, ನಟರಾಜ ಬೂದಾಳು ವಿಚಾರ ಮಂಡಿಸಲಿದ್ದಾರೆ.

ಮೇ 28 ರಂದು ‘ಪ್ರಜಾಪ್ರಭುತ್ವ-ಯುವಸ್ಪಂದನ’ ಗೋಷ್ಠಿ ನಡೆಯಲಿದ್ದು, ಯುವ ಚಿಂತಕರಾದ ಸುಭಾಷ ರಾಜಮಾನೆ, ನಿಕೇತ್ ರಾಜ್ ಮೌರ್ಯ, ಕಲ್ಯಾಣಿ ಎಂ. ಎಸ್, ನದೀಂ ಸನದಿ, ಶಿವು ನಾಗರಹೊಳೆ, ಟಿ. ಎಸ್. ಗೊರವರ ಭಾಗಿಯಾಗಲಿದ್ದಾರೆ.

ಕವಿಗೋಷ್ಠಿಯಲ್ಲಿ ತಮಿಳುನಾಡಿನ ಕವಯಿತ್ರಿ ಸುಕೀರ್ತರಾಣಿ ಆಶಯ ಭಾಷಣ ಮಾಡಲಿದ್ದಾರೆ. ಸಬಿತಾ ಬನ್ನಾಡಿ ಅಧ್ಯಕ್ಷತೆ ವಹಿಸಲಿರುವ ಕವಿಗೋಷ್ಠಿಯಲ್ಲಿ 18 ಕವಿಗಳು ಕವನ ವಾಚನ ಮಾಡಲಿದ್ದಾರೆ.

“ಪ್ರಜಾಪ್ರಭುತ್ವದ ಬಿಕ್ಕಟ್ಟುಗಳು-ಎದುರಿಸುವ ಬಗೆ” ಎಂಬ ಗೋಷ್ಠಿಯಲ್ಲಿ ಮಾವಳ್ಳಿ ಶಂಕರ್‌, ಸಿದ್ಧನಗೌಡ ಪಾಟೀಲ, ನೂರ್ ಶ್ರೀಧರ್, ಕೆ. ನೀಲಾ, ಬಡಗಲಪುರ ನಾಗೇಂದ್ರ, ಸಸಿಕಾಂತ್ ಸೆಂಥಿಲ್, ನಂದಕುಮಾರ ಅವರು ಮಾತನಾಡಲಿದ್ದಾರೆ.

ಪ್ರಶಸ್ತಿ ಪ್ರದಾನ

ಸಮಾರೋಪ ಸಮಾರಂಭದಲ್ಲಿ ಭಾಗ್ಯಜ್ಯೋತಿ ಹಿರೇಮಠ ಅವರಿಗೆ `ವಿಭಾ ಸಾಹಿತ್ಯ’ ಪ್ರಶಸ್ತಿ, ಎನ್ ವೆಂಕಟೇಶ ಅವರಿಗೆ ‘ಬಂಡ್ರಿ ನರಸಪ್ಪ ಸಮಾಜವಾದಿ ಶ್ರಮಜೀವಿ’ ಪ್ರಶಸ್ತಿ, ಮಾಲತಿ ಪಟ್ಟಣಶೆಟ್ಟಿ ಅವರಿಗೆ ‘ನವಲಕಲ್ ಶಾಂತವೀರಮ್ಮ ಮಹಾತಾಯಿ’ ಪ್ರಶಸ್ತಿ, ಜೆ. ಎಂ. ವೀರಸಂಗಯ್ಯ ಅವರಿಗೆ ‘ಸಂಶಿ ನಿಂಗಪ್ಪ ರೈತ ಚೇತನ’ ಪ್ರಶಸ್ತಿ, ಸಿ. ಬಸಲಿಂಗಯ್ಯ ಅವರಿಗೆ ‘ಪಂಚಪ್ಪ ಸಮುದಾಯ ಮಾರ್ಗಿ’ ಪ್ರಶಸ್ತಿಯನ್ನು ಪ್ರದಾನ ನಡೆಯಲಿದೆ.

ಸಮಾರೋಪ ಭಾಷಣವನ್ನು ಪುಣೆಯ ನೀರಜ್ ಜೈನ್ ಮಾಡಲಿದ್ದಾರೆ. ಅಧ್ಯಕ್ಷತೆ ಕಾಳೇಗೌಡ ನಾಗವಾರ ವಹಿಸಲಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿರಸಿ | ರಾಜೇಂದ್ರ ಸಿರ್ಸಿಕರ್‌ಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಗೌರವ

ಶಿರಸಿ: ಪ್ರಾಣಿ-ಪಕ್ಷಿಗಳ ರಕ್ಷಣೆ ಮತ್ತು ಪುನರ್ವಸತಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿರಸಿಯ ರಾಜೇಂದ್ರ...

ಧಾರವಾಡ | ಪೊಲೀಸ್ ಹೆಸರೇಳಿ ರೂ. 15,700 ವಂಚನೆ: ನಾಲ್ಕು ಬೈಕ್‍ಗಳು ನಗದು ವಶ

ಪೊಲೀಸ್ ಹೆಸರೇಳಿ ವ್ಯಕ್ತಿಯೊಬ್ಬರಿಂದ ₹15,700 ಹಣ ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ...

ಗೋಕರ್ಣ | ಕುಡ್ಲೆ ಕಡಲತೀರದಲ್ಲಿ ಸಮುದ್ರ ಸುಳಿಗೆ ಸಿಲುಕಿದ್ದ ಬೆಂಗಳೂರಿನ ಇಬ್ಬರು ಪ್ರವಾಸಿಗರ ರಕ್ಷಣೆ

ಗೋಕರ್ಣ: ಸಮುದ್ರದಲ್ಲಿ ಈಜುತ್ತಿದ್ದ ವೇಳೆ ಅಪಾಯಕಾರಿ ಸುಳಿಗೆ ಸಿಲುಕಿದ ಬೆಂಗಳೂರಿನ ಇಬ್ಬರು...