ವಿಜಯಪುರ | ಭ್ರಷ್ಟ, ದೇಶ ವಿರೋಧಿ ಸರ್ಕಾರದ ಜತೆಗೆ ನಮ್ಮ ಸ್ಪರ್ಧೆ: ರಾಜು ಆಲಗೂರ

Date:

ನಮ್ಮ ಹೋರಾಟ ಸರ್ವಾಧಿಕಾರಿ ಆಡಳಿತ ಹಾಗೂ ಭ್ರಷ್ಟ ಕೇಂದ್ರ ಸರ್ಕಾರದ ವಿರುದ್ಧ ಎಂದು ವಿಜಯಪುರ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಪ್ರೊ ರಾಜು ಆಲಗೂರ ಹೇಳಿದರು.

ದೇವರಹಿಪ್ಪರಗಿ ಮತಕ್ಷೇತ್ರದ ಹುಣಶ್ಯಾಳದಲ್ಲಿ ನಡೆದ ಬೃಹತ್ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು.

“ರೈತರ ಹಿತ ಕಾಪಾಡದ ಪ್ರಧಾನಿ ಮೋದಿಯವರು ಮೊದಲ ಬಾರಿ ಆರಿಸಿ ಬಂದ ಬಳಿಕ ಹೇಳಿದ್ದ ಯಾವುದೇ ಮಾತನ್ನೂ ಉಳಿಸಿಕೊಂಡಿಲ್ಲ. ಅದರ ಬದಲು ಅವರು ಜನರ ಜೀವನ ಕಸಿದುಕೊಂಡಿದ್ದಾರೆ. ಇದು ಯಾರಿಗೂ ಅವರು ಕೊಟ್ಟ ‘ಅಚ್ಛೇ ದಿನ್‌’ ಅಲ್ಲ. ಬದಲಿಗೆ ಹಿಂದಿನ ನಮ್ಮ ಕೆಟ್ಟ ದಿನಗಳೇ ಒಳ್ಳೆಯದಾಗಿದ್ದವು. ಅವುಗಳನ್ನೇ ನಮಗೆ ಕೊಡಿ” ಎಂದು ಹೇಳಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ರಾಜ್ಯ ಸರ್ಕಾರದಂತೆ ಕೇಂದ್ರದಲ್ಲೂ ಗ್ಯಾರಂಟಿಗಳ ಪರ್ವ ಆರಂಭವಾಗಲಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪ್ರತಿ ಮನೆಗೆ ವರ್ಷಕ್ಕೆ ಒಂದೂವರೆ ಲಕ್ಷ ರೂಪಾಯಿ ಮೇಲ್ಪಟ್ಟು ಹಣ ಬರಲಿದೆ. ಈ ಬೆಲೆ ಏರಿಕೆ ದಿನಗಳ ಕಡು ಕಷ್ಟ ಮರೆಯಾಗಬೇಕಾದರೆ ಕಾಂಗ್ರೆಸ್‌ಗೆ ವೋಟು ಹಾಕಿ, ದೇಶವನ್ನು ಉಳಿಸಿ. ಅದಾಗದೇ ಈ ಬಾರಿಯೂ ಮೋದಿ ಗೆದ್ದರೆ ದೇಶದ ಪ್ರಜಾಪ್ರಭುತ್ವವೇ ನಾಶವಾಗಿ, ನ್ಯಾಯಯುತ ಚುನಾವಣೆಗಳೇ ನಡೆಯದಿರುವ ಸ್ಥಿತಿ ಬರಲಿದೆ” ಎಂದು ಹೇಳಿದರು.

ಮಾಜಿ ಶಾಸಕ ಶರಣಪ್ಪ ಸುಣಗಾರ ಮಾತನಾಡಿ, “ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಮೋದಿಯವರ ವೈಫಲ್ಯಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು. ಬಿಜೆಪಿಯವರಿಗೆ ಕೇಳುವ ನೈತಿಕ ಹಕ್ಕಿಲ್ಲ. ಕೊಟ್ಟಿರುವ ಯಾವ ಭರವಸೆಯನ್ನೂ ಅವರು ಈಡೇರಿಸಿಲ್ಲ. ಬರೀ ರಾಮ ಮಂದಿರ ಕಟ್ಟಿದರೆ ಮುಗಿಯಲಿಲ್ಲ. ಜನ ಸಾಮಾನ್ಯರ ಬದಕನ್ನು ಕಟ್ಟಬೇಕಿದೆ. ಬೆಲೆ ಏರಿಕೆಯಿಂದ ದೇಶದ ಜನ ತತ್ತರಿಸಿದ್ದಾರೆ. ಕಾಂಗ್ರೆಸ್ ಕಟ್ಟಿದ ದೇಶದ ಎಲ್ಲ ಸಂಸ್ಥೆಗಳನ್ನು ಮಾರುವುದೇ ಇವರ ಕೆಲಸವಾಗಿದೆ. ಅದಾನಿ, ಅಂಬಾನಿಗಳು ಇವರ ಖರೀದಿದಾರರಾಗಿದ್ದಾರೆ. ಕಾಂಗ್ರೆಸ್‌ಗೆ ಇತಿಹಾಸವಿದೆ. ಹಾಗಾಗಿ ಬದಲಾವಣೆ ಮತ್ತು ನಿಮ್ಮ ನೆಮ್ಮದಿಯ ಜೀವನಕ್ಕಾಗಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡಿ” ಎಂದು ಮನವಿ ಮಾಡಿದರು.

ಈ ಸುದ್ದಿ ಓದಿದ್ದೀರಾ? ಬೆಳಗಾವಿ | ಎಸ್‌ಯುಸಿಐ(ಕಮ್ಯುನಿಸ್ಟ್) ಪಕ್ಷದಿಂದ ಲಕ್ಷ್ಮಣ ಜಡಗನ್ನವರ ಸ್ಪರ್ಧೆ

ಮುಖಂಡರುಗಳಾದ ಬಿ ಎಸ್ ಪಾಟೀಲ ಯಾಳಗಿ, ಸುಭಾಷ್ ಛಾಯಾಗೋಳ, ಆನಂದಗೌಡ ದೊಡ್ಡಮನಿ, ಪ್ರಭುಗೌಡ ಪಾಟೀಲ, ಬ್ಲಾಕ್ ಅಧ್ಯಕ್ಷ ಬಶೀರ ಬೇಪಾರಿ, ಸಂಗನಗೌಡ ಹರನಾಳ, ಬಾಪುಗೌಡ ಪಾಟೀಲ, ಸಾಯಿಕುಮಾರ ಬಿಸನಾಳ, ತಾಪಂ ಮಾಜಿ ಅಧ್ಯಕ್ಷೆ ಲಲಿತಾ ದೊಡ್ಡಮನಿ, ರಾಜಶೇಖರ ಕುಚಬಾಳ, ದೇವರಹಿಪ್ಪರಗಿ ಬ್ಲಾಕ್ ಅಧ್ಯಕ್ಷೆ ಸರಿತಾ ನಾಯಕ, ಹೂವಿನ ಹಿಪ್ಪರಗಿ ಬ್ಲಾಕ್ ಅಧ್ಯಕ್ಷೆ ರಮೀಜಾ ನದಾಫ್, ಸಯ್ಯದ, ಲಿಂಗದಳ್ಳಿ, ಮಡಿವಾಳಪ್ಪ, ಜಗದೀಶ್ ಪಾಟೀಲ, ಹಯ್ಯಾಳಪ್ಪ ವಾಲೀಕಾರ, ರಮೇಶ ಕುಂಬಾರ, ಸಾಹೇಬಗೌಡ ಬಿರಾದಾರ ‌ಇದ್ದರು.

ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ಗಣೇಶ ವಿಸರ್ಜನೆ ವೇಳೆ ಗಲಾಟೆ: ಓರ್ವ ಸಾವು

ಹಳೆ ದ್ವೇಷದ ಹಿನ್ನೆಲೆ ಇಟ್ಟುಕೊಂಡು ಗಣೇಶ ವಿಸರ್ಜನೆ ವೇಳೆ ಗಲಾಟೆ ನಡೆದಿದ್ದು,...

ಗದಗ | ಮೌಢ್ಯತೆ ಆಚರಿಸುವ ದೇಶಗಳ ಅಭಿವೃದ್ಧಿ ಸಾಧ್ಯವಿಲ್ಲ: ಡಾ. ಜಯದೇವಿ ಗಾಯಕವಾಡ

ಯಾವ ದೇಶದಲ್ಲಿ ಮೌಢ್ಯ ಸಂಪ್ರದಾಯಗಳ ಆಚರಣೆ ಇರುತ್ತವೆಯೋ, ಅಂತಹ ದೇಶಗಳ ಅಭಿವೃದ್ಧಿ...

ಗದಗ | ₹5 ಕೋಟಿ ವೆಚ್ಚದಲ್ಲಿ 13 ಸ್ಮಾರಕಗಳ ರಕ್ಷಣೆ; ಕಾಮಗಾರಿಗೆ ಶಿಲಾನ್ಯಾಸ

13 ಅಸುರಕ್ಷಿತ ಸ್ಮಾರಕಗಳ ಸಂರಕ್ಷಣೆ ಮಾಡಲು ₹5 ಕೋಟಿ ವೆಚ್ಚದಲ್ಲಿ ಕಾಮಗಾರಿಗಳ...

ಕೊಪ್ಪಳ | ಗಣೇಶ ಚತುರ್ಥಿಯ ಮರುದಿನ ಮುಸ್ಲಿಮರ ಈ ಮನೆಯಲ್ಲಿ ಇಲಿ ಪೂಜೆ!

ಡೊಳ್ಳು ಹೊಟ್ಟೆ ಗಣಪನಿಗೆ ಮೂಷಿಕ(ಇಲಿ)ವು ವಾಹನ ಎಂಬುದು ಹಿಂದೂಗಳ ನಂಬಿಕೆ. ಗಣೇಶ...