ವಿಜಯಪುರ | ಆರ್‌ಎಸ್‌ಎಸ್‌ ʼವಚನ ದರ್ಶನʼ ಪುಸ್ತಕ ಬಿಡುಗಡೆಗೆ ತೀವ್ರ ವಿರೋಧ

Date:

ವಿಶ್ವಗುರು ಬಸವಣ್ಣನವರ ಭಾವಚಿತ್ರವನ್ನು ವಿರೂಪಗೊಳಿಸಿ, ಶರಣ ಸಂಸ್ಕತಿಯನ್ನು ನಾಶಮಾಡುವ ದುರುದ್ದೇಶದಿಂದ ಪ್ರಕಟಗೊಂಡಿರುವ ಆರ್‌ಎಸ್‌ಎಸ್‌ ವಚನ ದರ್ಶನ ಪುಸ್ತಕ ಬಿಡುಗಡೆಗೆ ಶರಣ ಸಂಸ್ಕೃತಿ ರಕ್ಷಣಾ ಸಮಿತಿ ತೀವ್ರ ವಿರೋಧ ವ್ಯಕ್ತಪಡಿಸಿದೆ.

ವಿಜಯಪುರದ ಪ್ರಗತಿಪರ ಒಕ್ಕೂಟ ಹಾಗೂ ಶರಣ ಸಂಸ್ಕೃತಿ ರಕ್ಷಣಾ ಸಮಿತಿಯ ಸದಸ್ಯರು ಒಗ್ಗೂಡಿ ಜಿಲ್ಲಾ ಉಸ್ತವಾರಿ ಸಚಿವ ಎಂ ಬಿ ಪಾಟೀಲರು ಹಾಗೂ ಅಪರ ಜಿಲ್ಲಾಧಿಕಾರಿಗೆ ಮನವಿ ನೀಡಿದ್ದು, “ಆರ್‌ಎಸ್‌ಎಸ್‌ ಪ್ರಣೀತ ‘ವಚನ ದರ್ಶನ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಅನುಮತಿ ಕೊಡಬಾರದು. ಈ ಪುಸ್ತಕವು ಬಸವಣ್ಣನವರ ಸಿದ್ಧಾಂತಕ್ಕೆ ವಿರುದ್ಧವಾಗಿದ್ದು, ಇದು ಸಮಾಜದ ಸ್ವಾಸ್ಥ್ಯವನ್ನು ಹಾಳುಮಾಡುವಂತಹ ಕೃತಿಯಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮನವಿ ಸ್ವೀಕರಿಸಿದ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಧಿಕಾರಿಯವರು ಸೂಕ್ತ ಕ್ರಮದ ಭರವಸೆ ನೀಡಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಸುದ್ದಿ ಓದಿದ್ದೀರಾ? ಮಳವಳ್ಳಿ | ನಾಳೆ ಉಚಿತ ಮಧುಮೇಹ, ರಕ್ತದೊತ್ತಡ ತಪಾಸಣಾ ಶಿಬಿರ

ಶರಣ ಸಂಸ್ಕೃತಿ ರಕ್ಷಣಾ ಸಮಿತಿಯ ಸದಸ್ಯರಾದ ಕಲ್ಲಪ್ಪ ಕಡೆಚೂರ, ಹನಮಂತ ಚಿಂಚಿಲಿ, ಜಂಬುನಾಥ ಕಂಚಾಣಿ, ಬಸವರಾಜ ಕೊಂಡಗೊಳಿ, ಮಿಲಿಂದ ಚೆಂಚಲಕರ, ಚಂದ್ರಶೇಖರ ಘಂಟೆಪ್ಪಗೋಳ, ಡಾ. ರವಿ ಬಿರಾದಾರ, ಶಾಂತವೀರ ಥಾಲಬಾವಡಿ, ಮೋಹನ ಕಟ್ಟಿಮನಿ, ರಾಜೇಶ್ವರಿ ಯರನಾಳ, ರಾಜಶೇಖರ ಯರನಾಳ, ಅಕ್ಷಯಕುಮಾರ ಅಜಮನಿ, ಅನಿಲ ಹೊಸಮನಿ, ಪ್ರಭುಗೌಡ ಪಾಟೀಲ, ಚೆನ್ನು ಕಟ್ಟಿಮನಿ, ನಂದಕುಮಾರ ಗೊಬ್ಬೂರ, ದಾನೇಶ್ ಆವಟಿ, ಡಾ ಮಹಾಂತೇಶ್ ಮಡಿಕೇಶ್ವರ್, ಅಕ್ಷಯ, ಈರಣ್ಣ ತೊಂಡೀಕಟ್ಟಿ, ಬಸವರಾಜ ಕಾರಕುರ ಇದ್ದರು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೊಪ್ಪಳ | ಗಣಪತಿ ಮೂರ್ತಿ ಇರುವ ಟ್ರಾಕ್ಟರ್‌ಗೆ ಲಾರಿ ಡಿಕ್ಕಿ; ನಾಲ್ವರಿಗೆ ಗಂಭೀರ ಗಾಯ

ಗಣೇಶ ಚತುರ್ಥಿಯ ಅಂಗವಾಗಿ ಗಣಪತಿ ಮೂರ್ತಿಯನ್ನು ಸಾಗಿಸುತ್ತಿದ್ದ ಟ್ರ್ಯಾಕ್ಟರ್‌ಗೆ ಹಿಂಬದಿಯಿಂದ ಲಾರಿ...

ಮಂಗಳೂರು | ಶೀಘ್ರದಲ್ಲೇ ‘ಬ್ಯಾರಿ ಭವನ’ಕ್ಕೆ ಶಂಕುಸ್ಥಾಪನೆ: ಸ್ಪೀಕರ್ ಯು ಟಿ ಖಾದರ್

ಆರು ಕೋಟಿ ಅನುದಾನದಲ್ಲಿ ಬ್ಯಾರಿ ಭವನ ನಿರ್ಮಾಣವಾಗಲಿದ್ದು, ಶೀಘ್ರದಲ್ಲೇ ಶಂಕುಸ್ಥಾಪನೆ ನೆರವೇರಿಸಲಾಗುವುದು...

ಬೀದರ್‌ | ಬಸವಣ್ಣ, ವಚನಗಳು ಉಳಿದರೆ ಕನ್ನಡ ಉಳಿಯುವುದು : ಕುಂ.ವೀರಭದ್ರಪ್ಪ

ಬಸವಣ್ಣ ಹಾಗೂ ಅಕ್ಕ ಮಹಾದೇವಿ ಎಂಬ ಎರಡು ನಾಮವಾಚಕ ಕನ್ನಡದ ಬಹುದೊಡ್ಡ...