ವಿಜಯಪುರ | ಎಸ್‌ಐಆರ್ ಗೆ ಬಲಿ ಪಶುಗಳಾಗುವವರು; ಎಲ್ಲಾ ಜಾತಿ, ಧರ್ಮಿಯರು: ಚಿಂತಕ ಶಿವಸುಂದರ್

Date:

‘ಎಸ್‌ಐಆರ್‌ ಗೆ ಬಲಿಗೆ ಪಶುಗಳಾಗುವವರಲ್ಲಿ ಮೊದಲಿಗರು ಎಲ್ಲ ಜಾತಿ, ಧರ್ಮಕ್ಕೆ ಸೇರಿದ ಮಹಿಳೆಯರು, ಬಳಿಕ ಮುಸ್ಲಿಮರು, ದಲಿತರು, ವಲಸೆ ಕಾರ್ಮಿಕರು, ಅನಾಥರು. ಈ ದೇಶದ ಅಂಚಿನಲ್ಲಿರುವ ಜನರು ಎಸ್‌ಐಆರ್ ನಿಂದ ಹೊರಗುಳಿಯಲಿದ್ದಾರೆ’ ಎಂದು ಪ್ರಗತಿಪರ ಚಿಂತಕ ಶಿವಸುಂದರ್ ಹೇಳಿದರು.

- Advertisement -

ವಿಜಯಪುರದ ಡಾ. ಬಿಆರ್ ಅಂಬೇಡ್ಕರ್ ಸಭಾಭವನದಲ್ಲಿ ಮೇ ಸಾಹಿತ್ಯ ಮೇಳ ಬಳಗ, ಲಡಾಯಿ ಪ್ರಕಾಶನ, ದಲಿತ ವಿದ್ಯಾರ್ಥಿ ಪರಿಷತ್ತು, ಎಂ.ಎಂ.ಡಿ.ಸಿ. ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟ, ಸಿ.ಎನ್.ಎಫ್.ಇ ಸಂಘಟನೆಗಳ ಆಶ್ರಯದಲ್ಲಿ ‘ಎಸ್.ಐ.ಆರ್: ಪೌರತ್ನದ ಪ್ರಶ್ನೆ-ಪ್ರಭುತ್ವದ ಹುನ್ನಾರಗಳು’ ಕುರಿತು ಏರ್ಪಡಿಸಿದ್ದ ಸಂವಾದಗೋಷ್ಠಿಯಲ್ಲಿ ಅವರು ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

SIR ವಿರೋಧಿ ಹೋರಾಟ: ಡಿಕೆಶಿ–ಮಮತಾ ತೋರಿದ ದಾರಿ ವಿಪಕ್ಷಗಳಿಗೆ...

ಭಾರತದ ಪ್ರಜಾಪ್ರಭುತ್ವದ ಅಡಿಪಾಯವೇ ನ್ಯಾಯಯುತ, ಸ್ವತಂತ್ರ ಹಾಗೂ ಪಾರದರ್ಶಕ ಚುನಾವಣೆ. ಆದರೆ, ಅಧಿಕಾರದ ಗದ್ದುಗೆ ಏರಿರುವ ಮೋದಿ-ಶಾ ಜೋಡಿ, ಈ ಅಡಿಪಾಯವನ್ನೇ (ಚುನಾವಣಾ ಆಯೋಗವನ್ನೇ) ತಮ್ಮ ಸೂತ್ರದ ಬೊಂಬೆ ಮಾಡಿಕೊಂಡಿದೆ. ಎಸ್‌ಐಆರ್‌ ಹೆಸರಿನಲ್ಲಿ...

ಪೊಲೀಸ್ ಇಲಾಖೆ ಸುಧಾರಣೆಗೆ 3 ಸಮಿತಿ; ಬದಲಾವಣೆ ಅಗತ್ಯವೇ?...

ಪೊಲೀಸ್‌ ಇಲಾಖೆಯ ಕಾರ್ಯವೈಖರಿಯಲ್ಲಿ ಸುಧಾರಣೆ, ಡಿಜಿಟಲ್‌ ಟಚ್‌ ಹಾಗೂ ನೇಮಕಾತಿ ವ್ಯವಸ್ಥೆಯ ಪುನರ್‌ರಚನೆಗೆ ರಾಜ್ಯ ಸರ್ಕಾರ ಉನ್ನತ ಮಟ್ಟದ 3 ತಜ್ಞರ ಸಮಿತಿಗಳನ್ನು ರಚಿಸಿದೆ. ಆದರೆ, ಪೊಲೀಸ್‌ ಠಾಣೆಗಳಲ್ಲಿ ಸಾರ್ವಜನಿಕರು ಎದುರಿಸುವ ಸಮಸ್ಯೆಗಳಿಂದ...

ಪಾಕಿಸ್ತಾನದಲ್ಲಿ ಅಹಿಂಸಾ ಮೂರ್ತಿಯ ‘ರಹಸ್ಯರಕ್ಷಣೆ’: ಕರಾಚಿಯಿಂದ ಇಸ್ಲಾಮಾಬಾದ್‌ಗೆ ಗಾಂಧಿ...

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಪ್ರವೇಶ ದ್ವಾರದಲ್ಲಿ ಮಹಾತ್ಮ ಗಾಂಧೀಜಿಯವರ ಭವ್ಯ ಕಂಚಿನ ಪ್ರತಿಮೆ ಇಂದಿಗೂ ಗಾಂಭೀರ್ಯದಿಂದ ನಿಂತಿದೆ. ಕೈಯಲ್ಲಿ ಊರುಗೋಲು ಹಿಡಿದು ದೂರದ ದಿಗಂತವನ್ನು ದಿಟ್ಟಿಸುವಂತಿರುವ ಈ ಬಾಪೂ ಪ್ರತಿಮೆಯು...

ಎಸ್‌ಐಆ‌ರ್ ಮೂಲ ಉದ್ದೇಶವೇನೆಂದರೆ ಈ ದೇಶದಲ್ಲಿ ಮತದಾನ ಹಕ್ಕು ಯಾರಿಗೆ ಇರಬೇಕು. ಈ ದೇಶ ಯಾರಿಗೆ ಸೇರಬೇಕು ಎಂದು ನಿರ್ಣಯಿಸುವ ದೊಡ್ಡ ಷಡ್ಯಂತ್ರ ಒಳಗೊಂಡಿದೆ.’ಭಾರತ ಚುನಾವಣಾ ಆಯೋಗವು ಆರಂಭಿಸಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಜಾಪ್ರಭುತ್ವ, ಸಂವಿಧಾನ ವಿರೋಧಿಯಾಗಿದೆ. ಇದರ ವಿರುದ್ಧ ವ್ಯಾಪಕ ಜನಾಂದೋಲನದ ಅಗತ್ಯವಿದೆ. ಎಸ್‌ಐಆ‌ರ್ ಬಗ್ಗೆ ಕಾಂಗ್ರೆಸ್ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ. ಸಿಎಂ ಆದಿಯಾಗಿ ಎಲ್ಲರಿಂದ ಪ್ರತಿರೋಧ ವ್ಯಕ್ತವಾಗಬೇಕು. ಕಾಂಗ್ರೆಸ್ ಉಳಿಯಬೇಕು ಎಂದಾದರೆ ಎಸ್‌ಐಆ‌ರ್ ವಿರುದ್ಧ ಹೋರಾಟ ರೂಪಿಸಬೇಕು ಎಂದರು.

ಮುಖಂಡ ಎಸ್ ಎಂ ಪಾಟೀಲ (ಗಣಿಹಾರ) ಮಾತನಾಡಿ, ಎಸ್‌ಐಆ‌ರ್ ರದ್ದಾಗಲೇ ಬೇಕು. ಇಲ್ಲವಾದರೆ ಪ್ರಜಾಪ್ರಭುತ್ವವೇ ರದ್ದಾಗಲಿದೆ. ಈ ಹಿಂದೆ ಎನ್‌ಆರ್‌ಸಿ, ರೈತ ವಿರೋಧಿ ನಾಲ್ಕು ಕಾನೂನುಗಳ ವಿರುದ್ಧ ನಡೆದ ಹೋರಾಟದ ಮಾದರಿಯಲ್ಲಿ ನಾವೆಲ್ಲರೂ ಒಂದಾಗಿ ವಿರೋಧಿಸಬೇಕಾಗಿದೆ. ಇದರ ತಡೆಗೆ ಜನಾಂದೋಲನವೊಂದೇ ದಾರಿ ಎಂದು ಹೇಳಿದರು.

ಇದನ್ನೂ ಓದಿ ವಿಜಯಪುರ | ನರ್ಸಿಂಗ್ ವೃತ್ತಿ ಸಮಾಜದ ಹೆಮ್ಮೆಯಾಗಿದೆ: ಡಾ. ಅಶೋಕ ಪಾಟೀಲ

ಹಿರಿಯ ಪತ್ರಕರ್ತ ಅನಿಲ್ ಹೊಸಮನಿ, ಲಾಡಾಯಿ ಪ್ರಕಾಶನದ ಬಸವರಾಜ ಸೂಳಿಬಾವಿ, ಫಾದರ್ ಕೆವಿನ್, ಬಿ. ಭಗವಾನ್ ರೆಡ್ಡಿ, ಎಂ.ಸಿ.ಮುಲ್ಲಾ, ರಾಜಶೇಖರ ಯಡಹಳ್ಳಿ, ಕೆ.ಎಫ್. ಅಂಕಲಗಿ, ಪ್ರೇಮಾ ಕೋಳಿ, ಸುರೇಖಾ ರಜಪೂತ, ಶ್ರೀನಾಥ ಪೂಜಾರಿ, ಯೂಸುಫ್ ನೇವಾರ ಇದ್ದರು.

WhatsApp Image 2024 09 06 at 11.32.31 a95e9ba6
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ತುಳುನಾಡ ರಕ್ಷಣಾ ವೇದಿಕೆ ಮಹಿಳಾ ಘಟಕದಿಂದ ಅರ್ಥಪೂರ್ಣ ಗಾಂಧಿ ಜಯಂತಿ

ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜಯಂತಿಯ ಅಂಗವಾಗಿ ತುಳುನಾಡ ರಕ್ಷಣಾ ವೇದಿಕೆ (ರಿ.)...

ಉಡುಪಿ | ಸಮುದಾಯದ ಅಭಿವೃದ್ಧಿಗೆ ಉದ್ಯಮಿಗಳ ಒಗ್ಗಟ್ಟು ಅಗತ್ಯ: ಮುಮ್ತಾಜ್ ಮನ್ಸೂರಿ

ನಮ್ಮ ಸಮುದಾಯದ ದುರ್ಬಲ ವರ್ಗಗಳನ್ನು ಮೇಲಕ್ಕೆತ್ತಲು ಎಲ್ಲರೂ ಬೆಂಬಲ ಮತ್ತು ಸಹಕಾರದೊಂದಿಗೆ...

ರಾಯಚೂರು | ಎಸ್‌ಐಆರ್ ವಿರೋಧಿಸಿ ಪ್ರತಿಭಟನೆ: ಜ್ಞಾನೇಶ ಕುಮಾರ ರಾಜೀನಾಮೆಗೆ ನಾಗರಿಕ ವೇದಿಕೆ ಆಗ್ರಹ

ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ ಕುಮಾರ ಅವರ ರಾಜೀನಾಮೆಗೆ ಆಗ್ರಹಿಸಿ...