ವಿಜಯಪುರ | ಸರ್ಕಾರಿ ಜಮೀನು ಕಬಳಿಕೆ; ಸೂಕ್ತ ಕ್ರಮಕ್ಕೆ ಕೆಆರ್‌ಎಸ್‌ ಆಗ್ರಹ

Date:

‌ಅಕ್ರಮವಾಗಿ ಕಬಳಿಸಿರುವ ಸರ್ಕಾರಿ ಜಮೀನುಗಳನ್ನು‌ ಕೂಡಲೇ ಸರ್ಕಾರದ ವಶಕ್ಕೆ ಪಡೆದುಕೊಂಡು, ಸಾರ್ವಜನಿಕ ಕೆಲಸಕ್ಕೆ ಉಪಯೋಗ ಮಾಡಿಕೊಡಬೇಕೆಂದು ಆಗ್ರಹಿಸಿ ಕೆಆರ್‌ಎಸ್ ಪಕ್ಷದ ಕಾರ್ಯಕರ್ತರು ಅಪರ ಜಿಲ್ಲಾಧಿಕಾರಿ ಹಾಗೂ ಅಪರ ಜಿಲ್ಲಾ ದಂಡಾಧಿಕಾರಿಗಳಿಗೆ ಮನವಿ‌ ಸಲ್ಲಿಸಿದರು.

“ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಹಂಜಗಿ ಗ್ರಾಮದ ಜಮೀನು ಸರ್ಕಾರಿ ಮುಫತ್ ಗಾಯರಾಣ ದನಗಳ ಚಿರಾಯಿ 214 ಎಕರೆ ಜಮೀನು ಅರಣ್ಯ ಭೂಮಿಯಾಗಿದ್ದು, ಈ ಭೂಮಿಯನ್ನು ಹಲವು ಪ್ರಭಾವಿಗಳು ಅಕ್ರಮಿಸಿಕೊಂಡು, ನಕಲಿ ದಾಖಲೆಗಳನ್ನು ಸೃಷ್ಟಿಸಿ ಮೂರನೇ ವ್ಯಕ್ತಿಗಳಿಗೆ ಮಾರಾಟ ಮಾಡಿದ್ದಾರೆ” ಎಂದು ಆರೋಪಿಸಿದರು.

“ಸರ್ಕಾರಿ ಭೂಮಿ ಕಾಪಾಡಬೇಕಾದ ಆಡಳಿತವು ನಿರ್ಲಕ್ಷ್ಯ ಮಾಡುತ್ತಿದೆ. 214 ಎಕರೆ ಜಮೀನುಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿದಾಗ ಒಂದೊಂದು ದಾಖಲೆಗಳಲ್ಲಿ ಒಂದೊಂದು ಹೆಸರುಗಳಿದ್ದು, ಇದು ನಕಲಿ ದಾಖಲೆಗಳನ್ನು ಸೃಷ್ಟಿಸಿರುವುದು ಸ್ಪಷ್ಟವಾಗಿ ಕಂಡುಬರುತ್ತಿದೆ. ಈ ವಿಚಾರವಾಗಿ ಕೂಡಲೇ ಸಿಒಡಿ ತನಿಖಾಧಿಕಾರಿಗಳ ಮುಖಾಂತರ ತನಿಖೆ ನಡೆಬೇಕು. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಸುದ್ದಿ ಓದಿದ್ದೀರಾ? ತುಮಕೂರು | ಕನ್ನಡಪರ ಸಂಘಟನೆ ಮುಖಂಡರ ಬಂಧನಕ್ಕೆ ಕರವೇ ಖಂಡನೆ

ಈ ಸಂದರ್ಭದಲ್ಲಿ ಕೆಆರ್‌ಎಸ್‌ ಪಕ್ಷದ ಪದಾಧಿಕಾರಿಗಳು, ಸೈನಿಕರು, ಜಿಲ್ಲಾಧ್ಯಕ್ಷ ಅಶೋಕ ಜಾಧವ, ವಿಜಯಪುರ ನಗರ ಘಟಕದ ಅಧ್ಯಕ್ಷ ವಿಕ್ರಮ ವಾಘೋಮೋಡೆ, ಇಂಡಿ ತಾಲೂಕು ಅಧ್ಯಕ್ಷ ಗಣಪತಿ ರಾಥೋಡ್, ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ್ ಚಡಚಣ ಸೇರಿದಂತೆ ಇಂಡಿ ತಾಲೂಕಿನ ಸದಸ್ಯರು ಇದ್ದರು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನೀಟ್ ಬೆನ್ನಲ್ಲೇ ನೆಟ್‌ ಅಕ್ರಮ ಆರೋಪ; ನ್ಯಾಯಾಂಗ ತನಿಖೆಗೆ ಎಐಡಿಎಸ್‌ಒ ಆಗ್ರಹ

ನೀಟ್‌ ಅವ್ಯವಹಾರ ನಡೆದ ಬೆನ್ನಲ್ಲೇ, ನೆಟ್‌ ಅವ್ಯವಹಾರವೂ ನಡೆದಿದೆ ಎಂಬ ಆರೋಪಗಳಿವೆ....

ಕಲಬುರಗಿ | ಆಂದೋಲಾ ಗ್ರಾಮಕ್ಕೆ ಪಿಯುಸಿ ಕಾಲೇಜು ಮಂಜೂರಾತಿಗೆ ಒತ್ತಾಯ: ಶಿವಕುಮಾರ್ ಗೋಲಾ

ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಆಂದೋಲಾ ಗ್ರಾಮಕ್ಕೆ ಪಿಯುಸಿ ಕಾಲೇಜು ಮಂಜೂರು...

ಧಾರವಾಡ | ತೈಲ ಬೆಲೆ ವಿಚಾರದಲ್ಲಿ ಹೋರಾಟ ನಡೆಸುತ್ತಿರುವ ಬಿಜೆಪಿಗೆ ನಾಚಿಕೆಯಾಗಬೇಕು: ಸಲೀಂ ಅಹ್ಮದ್

ಪೆಟ್ರೊಲ್ ಬೆಲೆ ಹೆಚ್ಚಳದ ವಿಚಾರದಲ್ಲಿ ಬಿಜೆಪಿ ಪ್ರತಿಭಟನೆ ಮಾಡುತ್ತಿದೆ. ನಿರಂತವಾಗಿ ಬೆಲೆ...

ಬೀದರ್‌ | ನೀಟ್ ಪರೀಕ್ಷೆ ಅಕ್ರಮ : ಉನ್ನತ ಮಟ್ಟದ ತನಿಖೆಗೆ ಎನ್‌ಎಸ್‌ಯುಐ ಆಗ್ರಹ

ನೀಟ್ ಪರೀಕ್ಷೆಯ ಫಲಿತಾಂಶ ವಿವಾದಗಳಿಂದ ಕೂಡಿದ್ದು ಭಾರೀ ಅಕ್ರಮ ನಡೆದಿರುವ ಸಾಧ್ಯತೆಯಿದೆ....