ವಿಜಯಪುರ ಶ್ರೀ ಕೃಷ್ಣ ದೇವರಾಯ ವಿಶ್ವವಿದ್ಯಾಲಯ, ಬಳ್ಳಾರಿಯ ಪ್ರಾಧ್ಯಾಪಕ ಡಾ.ಸಂತೋಷ ಜಿ.ಕೆ.ಮಾರ್ಗದರ್ಶನದಲ್ಲಿ ಖಾದ್ರಿ ಅವರು “ಇಕೋ ಎಸ್ಥಟಿಕ್ಸ್ ಅಂಡ್ ಕಾನ್ಶಿಯಸ್ನೆಸ್ ಆಫ್ ನೇಚರ್ ಇನ್ ದಿ ಸೆಲೆಕ್ಟ್ ವರ್ಕ್ಸ್ ಆಫ್ ಪೂರ್ಣಚಂದ್ರ ತೇಜಸ್ವಿ ಅಂಡ್ ಶ್ರೀಕೃಷ್ಣ ಆಲನಹಳ್ಳಿ” ಎಂಬ ವಿಷಯದ ಕುರಿತು ಸಂಶೋಧನಾ ಮಹಾಪ್ರಬಂಧ ಮಂಡಿಸಿದ್ದರು. ಈ ಸಂಶೋಧನಾ ಮಹಾಪ್ರಬಂಧವನ್ನು ಪರಿಗಣಿಸಿದ ವಿಶ್ವವಿದ್ಯಾಲಯವು ಅವರಿಗೆ ಪಿಎಚ್‌ಡಿ ಪದವಿ ಪ್ರದಾನ ಮಾಡಿದೆ.
ಕನ್ನಡದ ಪ್ರಮುಖ ಸಾಹಿತಿಗಳಾದ ಪೂರ್ಣಚಂದ್ರ ತೇಜಸ್ವಿ ಹಾಗೂ ಶ್ರೀಕೃಷ್ಣ ಆಲನಹಳ್ಳಿ ಅವರ ಆಯ್ದ ಕೃತಿಗಳಲ್ಲಿನ ಪರಿಸರ ಸೌಂದರ್ಯ ಹಾಗೂ ಪ್ರಕೃತಿ ಪ್ರಜ್ಞೆಯನ್ನು ಆಂಗ್ಲ ಭಾಷೆಯಲ್ಲಿ ಅಧ್ಯಯನ ಮಾಡಿರುವುದು ಈ ಸಂಶೋಧನೆಯ ವಿಶೇಷತೆಯಾಗಿದೆ. ಈ ಇಬ್ಬರು ಸಾಹಿತಿಗಳ ಕುರಿತು ಆಂಗ್ಲ ಭಾಷೆಯಲ್ಲಿ ಮಂಡಿಸಲಾದ ಪ್ರಥಮ ಸಂಶೋಧನಾ ಮಹಾಪ್ರಬಂಧ ಇದಾಗಿದೆ ಎಂದು ತಿಳಿಸಲಾಗಿದೆ.
ಎಸ್.ಎಸ್. ಖಾದ್ರಿ ಅವರ ಈ ಶೈಕ್ಷಣಿಕ ಸಾಧನೆಗೆ ಕಾಲೇಜಿನ ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ಅತಿಥಿ ಉಪನ್ಯಾಸಕರು, ಸ್ನೇಹಿತರು ಹಾಗೂ ವಿದ್ಯಾರ್ಥಿಗಳು ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.





