ʼಗೂಂಡಾ ಕಾಯ್ದೆಯ ದುರ್ಬಳಕೆ ಸಲ್ಲದುʼ; ಯುಪಿ ಸರ್ಕಾರದ ವಿರುದ್ದ ಅಲಹಾಬಾದ್‌ ಹೈಕೋರ್ಟ್‌ ಅಸಮಾಧಾನ

Date:

ಉತ್ತರ ಪ್ರದೇಶ ಸರ್ಕಾರವು 1970ರ ಉತ್ತರ ಪ್ರದೇಶ ಗೂಂಡಾಗಳ ನಿಯಂತ್ರಣ ಕಾಯ್ದೆಯನ್ನು (UP Control of Goondas Act) ದುರ್ಬಳಕೆ ಮಾಡದಂತೆ ನ್ಯಾಯಾಲಯಗಳು ಪದೇಪದೇ ಎಚ್ಚರಿಸುತ್ತಿದ್ದರೂ, ಅದನ್ನು ದಮನದ ಅಸ್ತ್ರವಾಗಿ ನಿರಂತರವಾಗಿ ಬಳಸುತ್ತಿದೆ ಎಂದು ಅಲಹಾಬಾದ್‌ ಹೈಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿದೆ.

- Advertisement -

ಜಾಹಿದ್‌ ಅಲಿ vs ಉತ್ತರ ಪ್ರದೇಶ ಸರ್ಕಾರ ಮತ್ತು ಇತರರು ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುಭಾಷ್‌ ವಿದ್ಯಾರ್ಥಿ, ಗೊಂಡಾ ಜಿಲ್ಲಾಧಿಕಾರಿ ಜಾಹಿದ್‌ ಅಲಿಯನ್ನು ‘ಗೂಂಡಾ’ ಎಂದು ಘೋಷಿಸಿ, 6 ತಿಂಗಳ ಕಾಲ ಜಿಲ್ಲೆಯಿಂದ ಹೊರಹಾಕಲು (externment) ನೀಡಿದ್ದ ಆದೇಶವನ್ನು ರದ್ದುಗೊಳಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬ್ರೆಜಿಲ್‌ನಲ್ಲಿ ಒಂದೇ ಹುದ್ದೆಗೆ ಎರಡು ಬಾರಿ ಚುನಾವಣೆ: ಏನಿದು...

ಭಾರತಕ್ಕೂ ಎರಡನೇ ಸುತ್ತಿನ ಪದ್ಧತಿ ಅಗತ್ಯವಿದೆಯೇ ಎಂಬ ಚರ್ಚೆ ಆಗಿಂದಾಗ್ಗೆ ಮುನ್ನೆಲೆಗೆ ಬರುತ್ತಲೇ ಇರುತ್ತದೆ. ಹಲವು ಅಭ್ಯರ್ಥಿಗಳು ಕಣದಲ್ಲಿರುವಾಗ ಮತಗಳು ಹಂಚಿಹೋಗಿ, ಕೇವಲ ಶೇ 30 ಅಥವಾ 40ರಷ್ಟು ಮತ ಪಡೆದವರೂ ನಮ್ಮಲ್ಲಿ...

ಬೆಂಗಳೂರು ಪೌರಕಾರ್ಮಿಕರ ಶ್ವಾಸಕೋಶ ಹಿಂಡುತ್ತಿದೆ ಮಾಲಿನ್ಯ; BMTC ಸಿಬ್ಬಂದಿ,...

ಬೆಂಗಳೂರಿನಲ್ಲಿ ಮಾಲಿನ್ಯವು ಹೊಸ ತಂಬಾಕಾಗಿ ಪರಿಣಮಿಸಿದೆ. ಜನರ ಶ್ವಾಸಕೋಶವನ್ನು ಹಿಂಡುತ್ತಿದೆ. ಮಾಸ್ಕ್, ಕೈಗವಸು, ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಸೌಲಭ್ಯಗಳ ಕೊರತೆಗಳಿಂದಾಗಿ ಪೌರಕಾರ್ಮಿಕರು, ಬಿಎಂಟಿಸಿ ನೌಕರರು, ಸಂಚಾರ ಪೊಲೀಸರು ಹಾಗೂ ಕಟ್ಟಡ ಕಾರ್ಮಿಕರು...

ಗ್ರಾಮೀಣ ಮೀಸಲಾತಿಯಲ್ಲಿ ಸಾಮಾಜಿಕ ಅನ್ಯಾಯ; ಬರಿದಾಗುತ್ತಿರುವ ಬಡ ಮಕ್ಕಳ...

ಸರಕಾರಿ ಶಾಲೆ ಸೇರುವವರು ಕೇವಲ ಬಡತನ-ಕೆಳಮಟ್ಟದ ಕುಟುಂಬದವರು ಎಂಬಂತಾಗಿದೆ. ಈ ಋಣಾತ್ಮಕ ಭಾವನೆ ಹೋಗಲಾಡಿಸಲು ಕನ್ನಡದಲ್ಲಿ ಕಲಿತರೆ ಉನ್ನತ ಶಿಕ್ಷಣ, ಉದ್ಯೋಗ ಸ್ಪರ್ಧೆಯಲ್ಲಿ ಜಯಿಸಬಹುದೆಂಬ ವಿಶ್ವಾಸ ಮೂಡಿಸಬೇಕಾಗಿದೆ. ಈಗಿನ ಎಡಬಿಡಂಗಿ ಗ್ರಾಮೀಣ ಮೀಸಲಾತಿ...

ಗೂಂಡಾ ಕಾಯ್ದೆಯು ‘ಗೂಂಡಾಗಳ’ ನಿಯಂತ್ರಣ ಮತ್ತು ದಮನಕ್ಕೆ ಬಳಸುವ ಪ್ರಬಲ ಅಸ್ತ್ರವಾಗಿದ್ದು, ಸಾರ್ವಜನಿಕ ಅಶಾಂತಿ ಅಥವಾ ಸಾರ್ವಜನಿಕ ಸುವ್ಯವಸ್ಥೆ ಕಾಪಾಡುವ ಅಗತ್ಯವಿರುವ ಸ್ಪಷ್ಟ ಪ್ರಕರಣಗಳಲ್ಲಿ ಮಾತ್ರ ಅತ್ಯಂತ ಮಿತವಾಗಿ ಬಳಸಬೇಕು ಎಂದು ನ್ಯಾಯಾಲಯ ಹೇಳಿತು.

ಮುಗ್ಧ ವ್ಯಕ್ತಿಗಳ ವಿರುದ್ಧ ದಮನಕಾರಿ ಸಾಧನವಾಗಿ ಕಾಯ್ದೆಯನ್ನು ದುರ್ಬಳಕೆ ಮಾಡಬಾರದು ಎಂದು ನ್ಯಾಯಾಲಯಗಳು ನಿರಂತರವಾಗಿ ರಾಜ್ಯ ಸರ್ಕಾರಕ್ಕೆ ನೆನಪಿಸುತ್ತಿವೆ. ಗಂಭೀರ ಅಪರಾಧದಲ್ಲಿ ವ್ಯಕ್ತಿ ದೋಷಿ ಎಂದು ತೀರ್ಪು ಬರುವ ಮುನ್ನವೇ ಆತನಿಗೆ ಶಿಕ್ಷೆ ವಿಧಿಸುವ ಉದ್ದೇಶ ಕಾಯ್ದೆಯದ್ದಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು.

“ಈ ನ್ಯಾಯಾಲಯದ ಮುಂದೆ ಹಲವಾರು ಪ್ರಕರಣಗಳು ಬರುತ್ತಿದ್ದು, ಗೂಂಡಾ ಕಾಯ್ದೆಯನ್ನು ದಮನದ ಅಸ್ತ್ರವಾಗಿ ಬಳಸುವ ತನ್ನ ಧೋರಣೆಯಲ್ಲಿ ರಾಜ್ಯ ಸರ್ಕಾರ ನಿರಂತರವಾಗಿರುವುದು ಕಂಡುಬರುತ್ತಿದೆ. ಪ್ರಸ್ತುತ ಪ್ರಕರಣವು ಈ ಕಾಯ್ದೆಯ ದುರ್ಬಳಕೆಗೆ ಸ್ಪಷ್ಟ ಉದಾಹರಣೆಯಾಗಿದೆ” ಎಂದು ನ್ಯಾಯಾಲಯ ಹೇಳಿದೆ.

ಜಾಹಿದ್‌ ಅಲಿಯನ್ನು ‘ಗೂಂಡಾ’ ಎಂದು ಘೋಷಿಸಲು ಪೊಲೀಸರು ಉಲ್ಲೇಖಿಸಿದ್ದ ಎರಡು ಪ್ರಕರಣಗಳ ಪೈಕಿ, ಒಂದು ಪ್ರಕರಣದಲ್ಲಿ ಅವರು ಈಗಾಗಲೇ ಖುಲಾಸೆಯಾಗಿದ್ದರು ಎಂದು ನ್ಯಾಯಾಲಯ ಗಮನಿಸಿತು.

ವ್ಯಕ್ತಿಯ ವಿರುದ್ಧ ದಾಖಲಾದ ಪ್ರಕರಣದಲ್ಲಿ ಆತ ಖುಲಾಸೆಯಾದ ಬಳಿಕ, ಆ ಪ್ರಕರಣದಲ್ಲಿ ಆತನ ಭಾಗಿಯಾಗಿದ್ದುದನ್ನು ‘ಗೂಂಡಾ’ ಎಂದು ಘೋಷಿಸಲು ಆಧಾರವನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಹೇಳಿತು.

ಅಲ್ಲದೆ, ಅಲಿ ಕಾನೂನು ಸುವ್ಯವಸ್ಥೆಗೆ ಬೆದರಿಕೆಯಾಗಿದ್ದಾರೆ ಎಂಬ ಆರೋಪವೂ ಇರಲಿಲ್ಲ. ಜಿಲ್ಲಾಧಿಕಾರಿಯ ಮುಂದೆ ಅಲಿ ಆಕ್ಷೇಪಣೆ ಸಲ್ಲಿಸಿ, ತಾನು ಒಂದು ಪ್ರಕರಣದಲ್ಲಿ ಖುಲಾಸೆಯಾಗಿರುವುದನ್ನು ತಿಳಿಸಿರಲಿಲ್ಲ. ಹೀಗಾಗಿ, ಆ ವಿಷಯವನ್ನು ಪರಿಗಣಿಸದಿದ್ದಕ್ಕಾಗಿ ಜಿಲ್ಲಾಧಿಕಾರಿ ತಪ್ಪಿತಸ್ಥರೆಂದು ಹೇಳಲಾಗದು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.

ಆದರೆ, ಖುಲಾಸೆಯಾದ ವಿಚಾರ ಪೊಲೀಸರಿಗೆ ತಿಳಿದಿರಬೇಕಿತ್ತು. ಹೀಗಾಗಿ, ಜಿಲ್ಲಾಧಿಕಾರಿಯ ಮುಂದೆ ಅಲಿಯ ಕುರಿತು ತಪ್ಪು ಚಿತ್ರಣ ಮೂಡಿಸುವ ಉದ್ದೇಶದಿಂದಲೇ ಆ ಪ್ರಕರಣದಲ್ಲಿ ಅವರ ಭಾಗಿಯಾಗಿದ್ದುದನ್ನು ಉಲ್ಲೇಖಿಸಿರುವ ಸಾಧ್ಯತೆಯಿದೆ ಎಂದು ನ್ಯಾಯಾಲಯ ಹೇಳಿತು.

ಇದನ್ನೂ ಓದಿ: ನೋಯ್ಡಾ ಪ್ರತಿಭಟನೆ | ಆಕೃತಿ NSA ಬಂಧನ ರದ್ದು; ಯೋಗಿ ಸರ್ಕಾರಕ್ಕೆ ಅಲಹಾಬಾದ್ ಹೈಕೋರ್ಟ್‌ ಕಪಾಳಮೋಕ್ಷ!

ಅಲಿ ಬಳಿಕ ದೇವಿ ಪಾಟನ್‌ ಮಂಡಲದ ಆಯುಕ್ತರ ಮುಂದೆ ಮೇಲ್ಮನವಿ ಸಲ್ಲಿಸುವಾಗ ಖುಲಾಸೆಯಾದ ವಿಚಾರವನ್ನು ತಿಳಿಸಿದ್ದರು. ಆದರೆ, ಆಯುಕ್ತರು ಅವರು ಮುಂದಿಟ್ಟಿದ್ದ ಆಧಾರಗಳನ್ನು ಸೂಕ್ತವಾಗಿ ಪರಿಶೀಲಿಸದೆ ಜಿಲ್ಲಾಧಿಕಾರಿಯ ಆದೇಶವನ್ನು ಎತ್ತಿಹಿಡಿದಿದ್ದಾರೆ ಎಂದು ನ್ಯಾಯಾಲಯ ತಿಳಿಸಿತು.

2020ರಲ್ಲಿ ದಾಖಲಾಗಿದ್ದ ಒಂದೇ ಒಂದು ಕ್ರಿಮಿನಲ್‌ ಪ್ರಕರಣದಲ್ಲಿ ಭಾಗಿಯಾಗಿರುವುದರಿಂದ, ಅಲಿ ಪದೇಪದೇ ಅಪರಾಧ ಎಸಗುತ್ತಾರೆ, ಎಸಗಲು ಯತ್ನಿಸುತ್ತಾರೆ ಅಥವಾ ಅಪರಾಧಕ್ಕೆ ಕುಮ್ಮಕ್ಕು ನೀಡುತ್ತಾರೆ ಎಂಬುದನ್ನು ಸಾಬೀತುಪಡಿಸಲಾಗದು. ಹೀಗಾಗಿ, ಅವರನ್ನು ‘ಗೂಂಡಾ’ ಎಂದು ಘೋಷಿಸಲು ಅದು ಸಮರ್ಥನೀಯ ಆಧಾರವಲ್ಲ ಎಂದು ನ್ಯಾಯಾಲಯ ಹೇಳಿತು.

“ಅರ್ಜಿದಾರರು 2020ರಲ್ಲಿ ಎಸಗಿದ್ದಾರೆ ಎನ್ನಲಾದ ಕೃತ್ಯಗಳಿಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುವುದು ಮತ್ತು 2026ರಲ್ಲಿ ಅವರನ್ನು ಗೂಂಡಾ ಎಂದು ಘೋಷಿಸಿ ಜಿಲ್ಲೆಯಿಂದ ಹೊರಹಾಕಿರುವುದರ ನಡುವೆ ದೀರ್ಘ ಕಾಲದ ಅಂತರವಿದೆ. 2020ರಲ್ಲಿ ಪ್ರಕರಣ ದಾಖಲಾದದ್ದು ಮತ್ತು 2026ರಲ್ಲಿ ಅವರನ್ನು ಗೂಂಡಾ ಎಂದು ಘೋಷಿಸಿರುವುದರ ನಡುವೆ ಸಮಂಜಸವಾದ ಸಂಬಂಧವೂ ಇಲ್ಲ” ಎಂದು ನ್ಯಾಯಾಲಯ ತಿಳಿಸಿತು.

ಹೀಗಾಗಿ, ಗೊಂಡಾ ಜಿಲ್ಲಾಧಿಕಾರಿ ಮತ್ತು ದೇವಿ ಪಾಟನ್‌ ಮಂಡಲದ ಆಯುಕ್ತರು ಜಾಹಿದ್‌ ಅಲಿ ವಿರುದ್ಧ ಹೊರಡಿಸಿದ್ದ ಆದೇಶಗಳನ್ನು ಅಲಹಾಬಾದ್‌ ಹೈಕೋರ್ಟ್‌ ರದ್ದುಗೊಳಿಸಿತು.

eedina
ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಲಬುರಗಿ | ಎಸ್ಐಆರ್ ಅಂತಿಮ ಪಟ್ಟಿ ಪ್ರಕಟ: ಜಿಲ್ಲೆಯಲ್ಲಿ 18,94,144 ಮತದಾರರು:

ರಾಜ್ಯದಲ್ಲಿ ಮತದಾರರ ಪಟ್ಟಿಯ ಸಮಗ್ರ ತೀವ್ರ ಪರಿಷ್ಕರಣೆ (ಎಸ್ಐಆರ್) ಚುನಾವಣಾ ಆಯೋಗದ...

SIR | ಬೀದರ್ ಜಿಲ್ಲೆಯ 2.15 ಲಕ್ಷ ಮತದಾರರು ಕರಡು ಪಟ್ಟಿಯಿಂದ ಹೊರಕ್ಕೆ!

ಬೀದರ್ ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆ...

ಬೆಳಗಾವಿಯಲ್ಲಿ ಡಿ. 7ರಿಂದ ಚಳಿಗಾಲದ ಅಧಿವೇಶನ

ರಾಜ್ಯ ಕರ್ನಾಟಕ ವಿಧಾನಮಂಡಲದ ಉಭಯ ಸದನಗಳ ಚಳಿಗಾಲದ ಅಧಿವೇಶನವನ್ನು ಬೆಳಗಾವಿಯ ಸುವರ್ಣ...

ಪ್ರಶಾಂತ್ ಕಿಶೋರ್ ಆಪ್ತ, ‘ಜನ್ ಸುರಾಜ್’ ಡಿಜಿಟಲ್ ಮ್ಯಾನೇಜರ್ ರೈಲಿನಿಂದ ನಾಪತ್ತೆ, ನಿಗೂಢ ಸಾವು

ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ನೇತೃತ್ವದ 'ಜನ್ ಸುರಾಜ್ ಪಾರ್ಟಿ'ಯ (ಜೆಎಸ್‌ಪಿ)...