ವಿಜಯಪುರ | ನಾರಾಯಣಪುರ ಎಡದಂಡೆ ಕಾಲುವೆ ಮೂಲಕ ನೀರು ಹರಿಸಲು ರೈತ ಸಂಘ ಒತ್ತಾಯ

Date:

ವಿಜಯಪುರ ಜಿಲ್ಲೆಯ ನಾಗಠಾಣ ಮತಕ್ಷೇತ್ರದ ಚಡಚಣ ತಾಲೂಕಿನ ಕಡೆಯ ಭಾಗದ ರೈತರಿಗೆ ನಾರಾಯಣಪುರ ಎಡದಂಡೆ ಕಾಲುವೆ ಮುಖಾಂತರ ನೀರು ಹರಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಝಳಕಿ ಸಹಾಯಕ ಕಾರ್ಯಪಾಲಕ ಅಭಿಯಂತರ ಕಛೇರಿ ಎದುರು ಪ್ರತಿಭಟನೆ ನಡೆಸಿದವು.

- Advertisement -

ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಅಧ್ಯಕ್ಷ ಸಂಗಮೇಶ ಸಗರ ಮಾತನಾಡಿ, ಜಿಲ್ಲೆಯ ನಾಗಠಾಣ ಮತಕ್ಷೇತ್ರದ ಚಡಚಣ ತಾಲೂಕಿನ ನಾರಾಯಣಪುರ ಎಡದಂಡೆ ಕಾಲುವೆ ಡಿಸ್ಟ್ರಿಬ್ಯುಟರ್ 35 ರಿಂದ 46 ರವರಿಗೆ ಕಾಲುವೆ ಮೂಲಕ ದಸೂರ ಗ್ರಾಮದ ಕೊನೆಯವರೆಗೂ ನೀರು ಹರಿಸಬೇಕು. ಏ.12 ರ ನಂತರ ನೀರು ಬಿಡದೇ ಹೋದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

History Repeats | ರೋಮ್‌ ಉರಿಯುತ್ತಿದ್ದಾಗ ಪಿಟೀಲು ನುಡಿಸಿದ...

ದೇಶದ ಪ್ರಜಾಪ್ರಭುತ್ವದ ಆಧಾರಸ್ತಂಭಗಳು ಒಂದೊಂದಾಗಿ ಕುಸಿಯುತ್ತಾ, ಚುನಾವಣಾ ವ್ಯವಸ್ಥೆಯೇ ಅಕ್ರಮ ಎಸಗುತ್ತಿರುವಾಗ, ನಿರುದ್ಯೋಗ-ಬೆಲೆ ಏರಿಕೆಯ ಭಾರದಿಂದ ಜನ ಹೈರಾಣಾಗಿರುವಾಗ ಭಾರತದ ಪ್ರಧಾನಿ ಭಜನೆ ಮಾಡುತ್ತಿದ್ದಾರೆ. ರೋಂ ಹೊತ್ತಿ ಉರಿಯುತ್ತಿದ್ದಾಗ ನೀರೋ ಪಿಟೀಲು...

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ...

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು ಇದೇ ಮೊದಲೇನಲ್ಲ. ಕರಾವಳಿಯ ಜನತೆ ಇಂತಹ ಪ್ರಚೋದನಾತ್ಮಕ ನಡೆಗಳನ್ನು ತಿರಸ್ಕರಿಸಿ, ಸತ್ಯ ಮತ್ತು ನ್ಯಾಯದ ಪರವಾಗಿ ನಿಲ್ಲಬೇಕಾಗಿದೆ. ಕರಾವಳಿ ಕರ್ನಾಟಕವಾಗಲಿ...

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ...

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು ಪಡೆದುಕೊಂಡಿದೆ. ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್ ಅವರ ನಿರ್ಧಾರಗಳ ಕುರಿತು ಚುನಾವಣಾ ಆಯುಕ್ತರಾದ ಸುಖಬೀರ್‌ ಸಿಂಗ್‌ ಸಂಧು ಮತ್ತು...

ಇಂಡಿ ತಾಲೂಕಿನ ರೈತರಿಗೆ ಯಾವುದೇ ರೀತಿಯ ನೀರಿನ ಸಮಸ್ಯೆ ಎದುರಾಗಿಲ್ಲ. ಚಡಚಣ ತಾಲೂಕಿನ ನಾಗಠಾಣ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಡಿಸ್ಟ್ರಿಬ್ಯುಟರ್ 35 ರಿಂದ 46ರು ಕೊನೆಯ ಭಾಗದ ರೈತರಿಗೆ ಕಾಲುವೆ ನೀರು ಹರಿಸುವಲ್ಲಿ ಅಧಿಕಾರಿಗಳು ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ. ನಾಗಠಾಣ ಮತಕ್ಷೇತ್ರದ ಶಾಸಕರು ಮತ್ತು ಚಡಚಣ ತಾಲೂಕು ಆಡಳಿತ ರೈತರಿಗೆ ಕಾಲುವೆ ನೀರಿನ ಪರಿಹಾರ ಬಗೆಹರಿಸುವಲ್ಲಿ ಮುಂದಾಗುತ್ತಿಲ್ಲ. ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ರೈತರು ಬೆಳೆದ ಬೆಳೆಗಳು ಒಣಗುತ್ತವೆ. ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಅಭಾವ ಉಂಟಾಗುತ್ತಿದೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಚಡಚಣ ತಾಲೂಕಿನಲ್ಲಿ ಬರುವ ಕಾಲುವೆ ಕೊನೆಯವರೆಗೆ ನೀರು ಹರಿಸಲು ಕ್ರಮ ಕೈಗೊಳ್ಳಲು ಮುಂದಾಗಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಹೋರಾಟ ಮಾಡಬೇಕಾಗುತ್ತದೆ ಎಂದು ಹೇಳಿದರು.

ಕೆ ಬಿ ಜೆ ಎನ್ ಎಲ್ ಅಧೀಕ್ಷಿತ ಅಭಿಯಂತರ ಮನೋಜಕುಮಾರ ಗಡಬಳ್ಳಿ ಮಾತನಾಡಿ, ಏ.1 ರಂದು ಕಾಲುವೆ ಮೂಲಕ ನೀರು ಹರಿಸುತ್ತೇವೆ. ಏ. 12 ರವರಿಗೆ ನೀರು 35 ರಿಂದ 46 ರವರಿಗೆ ನೀರು ಹರಿಸಲು ಕ್ರಮ ಕೈಗೊಳ್ಳಲಾಗುವುದು. ಹಿಂದಿನ ರೈತರು ತಮ್ಮ ಮೋಟಾರು ಪಂಪ್ ಒಂದೆರಡು ದಿನ ಕೊನೆ ಭಾಗದ ಜನರಿಗೆ ನೀರು ತಲುಪುವವರೆಗೆ ಬಂದ ಮಾಡುವ ಮೂಲಕ ಸಹಕರಿಸಬೇಕು ಮನವಿ ಮಾಡಿದರು.

ಇದನ್ನೂ ಓದಿ: ವಿಜಯಪುರ | ಲಿಂಗ ಸಮಾನತೆಯೇ ಸಾಮಾಜಿಕ ಪ್ರಗತಿಗೆ ದಾರಿ: ಪ್ರೊ. ವಿಜಯ ಕೋರಿಶೆಟ್ಟಿ

ಜಿಲ್ಲಾಧಿಕಾರಿಗಳು ದೂರವಾಣಿ ಮೂಲಕ ರೈತರಿಗೆ ಹೋರಾಟ ಕೈ ಬಿಡುವಂತೆ ಮನವೊಲಿಸಿ ಹೋರಾಟ ಮೊಟಕು ಗೊಳಿಸಿದರು.

ಇಂಡಿ ತಹಶೀಲ್ದಾರ್ ವಿಜಯ ಕಡಕಬಾವಿ, ಚಡಚಣ ತಹಶೀಲ್ದಾರ್ ಸಂಜಯ ಇಂಗಳೆ, ಶ್ರೀಮಂತ ಅಂಗಡಿ
ರೈತ ಮುಖಂಡರಾದ , ವಸಂತ ಭೈರಮಡಿ,ದಯಾನಂದ ಕುಮಸಳೆ, ಅಲೋಕ ಭೈರಮಡಿ, ಎಮ್ ಎಚ್. ಪೂಜಾರಿ, ಖಾಜೀಸಾಹೇಬ ಗುರುನಾಳ, ದಸ್ತಗೀರ ವಾಲಿಕಾರ, ಅಣ್ಣಾರಾಯ ಶಿರನಾಳ, ಸತೀಶ ತಳಕೇರಿ, ದಾನೇಶ ತಳಕೇರಿ, ಸಿದ್ದು ಕೊಟಲಗಿ, ಶಿವಾನಂದ ಬಿರಾದಾರ, ಸತೀಶ ತೊಳನೂರ, ಸಂದೀಪ ಬೆಳ್ಳಿ, ದಯಾನಂದ ಕೊಳಿ ಸೇರಿದಂತೆ ಹಲವು ಗ್ರಾಮಗಳ ರೈತ ಮುಖಂಡರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯಪುರ | ಸೆ. 26, 27ರಂದು ರಾಜ್ಯಮಟ್ಟದ ಸೂರ್ಯ ನಮಸ್ಕಾರ ಕ್ರೀಡಾಕೂಟ

ನಿವೃತ್ತ ಶಿಕ್ಷಕ ದಿ.ದ್ಯಾಮನಗೌಡ ಅ.ಪಾಟೀಲ, ಉತ್ನಾಳ ಸ್ಮರಣಾರ್ಥ 2ನೇ ರಾಜ್ಯಮಟ್ಟದ ಸೂರ್ಯ...

ವಿಜಯಪುರ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ವಿಳಂಬವಾಗದಂತೆ ಹೋರಾಟ ಸಮಿತಿ ಆಗ್ರಹ

ವಿಜಯಪುರ ಜಿಲ್ಲೆಯಲ್ಲಿ ಬಹುದಿನಗಳ ಬೇಡಿಕೆಯಾಗಿರುವ ಸರ್ಕಾರಿ ವೈದ್ಯಕೀಯ ಕಾಲೇಜನ್ನು ಯಾವುದೇ ವಿಳಂಬವಿಲ್ಲದೆ...

ವಿಜಯಪುರ | ಕುಟುಂಬ ರಾಜಕಾರಣದಿಂದ ಕಾರ್ಯಕರ್ತರಿಗೆ ಅವಕಾಶ ಇಲ್ಲದಂತಾಗುತ್ತಿದೆಯೇ?: ಪ್ರದೀಪ್ ಪಾಟೀಲ

ಎಂಎಲ್‌ಎ ಹಾಗೂ ಎಂಪಿಗಳು ತಮ್ಮ ಮಕ್ಕಳನ್ನು ಮುಂದಿನ ಶಾಸಕರು, ಸಂಸದರನ್ನಾಗಿ ಮಾಡುವ...