ವಿಜಯಪುರ | ಬಿಡುಗಡೆಯಾಗದ ಅನುದಾನ; ತಾತ್ಕಾಲಿಕ ಶೆಡ್‌ನಲ್ಲಿ ಕುಟುಂಬ

Date:

ಫಲಾನುಭವಿಗಳ ಪಟ್ಟಿಯಲ್ಲಿ ಆಯ್ಕೆಯಾಗದ ಕಾರಣ ವಿಜಯಪುರ ಜಿಲ್ಲೆಯ ಹೊಲೇರಹಳ್ಳಿ ಗ್ರಾಮದ ಕುಟುಂಬವೊಂದು, ಒಂದು ವರ್ಷದಿಂದ ತಾತ್ಕಾಲಿಕ ಶೆಡ್‌ನಲ್ಲಿ ವಾಸ ಮಾಡುತ್ತಿದ್ದು, ಸೂರಿಗಾಗಿ ಪಂಚಾಯಿತಿಗೆ ಆಗ್ರಹಿಸುತ್ತಿದೆ.

ಪರಿಶಿಷ್ಟ ಪಂಗಡಕ್ಕೆ ಸೇರಿದ ಹೊಲೇರಹಳ್ಳಿ ಗ್ರಾಮದ ಪದ್ಮಮ್ಮ ಅವರು, ಪಿಎಂಎಜಿವೈ ಯೋಜನೆ ಫಲಾನುಭವಿಯಾಗಿ ಆಯ್ಕೆಯಾಗಿದ್ದರು. ಆಯ್ಕೆ ಪಟ್ಟಿಯನ್ನು ಪಂಚಾಯಿತಿಯಲ್ಲಿ ಅನುಮೋದನೆ ಮಾಡಿ, ತಾಲೂಕು ಪಂಚಾಯಿತಿಗೂ ಕಳುಹಿಸಿ ವರ್ಷ ಕಳೆದಿದೆ. ಆದರೆ, ಇದುವರೆಗೂ ಅನುದಾನ ಬಿಡುಗಡೆಯಾಗಿಲ್ಲ.

ಒಂದು ವರ್ಷದಿಂದ ತಾತ್ಕಾಲಿಕ ಶೆಡ್‌ನಲ್ಲಿ ನಾಲ್ಕು ಮಂದಿ ವಾಸಿಸುತ್ತಿದ್ದೇವೆ. ಮಳೆ, ಗಾಳಿ ಬಂದರೆ ಇಲ್ಲಿ ಇರುವುದು ಕಷ್ಟವಾಗಿದೆ. ಮಳೆ ನೀರು ಶೆಡ್‌ಗೆ ನುಗ್ಗುತ್ತದೆ. ಈಗ ಚಳಿಗಾಲ, ಶೀಟ್‌ಗಳಲ್ಲೇ ಗೋಡೆ ನಿರ್ಮಾಣ ಮಾಡಿಕೊಂಡು ಮೇಲೆಯೂ ಶೀಟ್‌ ಹೊದಿಕೆ ಹಾಕಲಾಗಿದೆ. ಸಾಲ ಮಾಡಿ ಪಾಯ ಹಾಕಿದ್ದೇವೆ. ಪಂಚಾಯಿತಿ ಕಡೆಯಿಂದ ಯಾವುದೇ ಭರವಸೆ ಸಿಗುತ್ತಿಲ್ಲ ಎನ್ನುತ್ತಾರೆ ಗೃಹಿಣಿ ಪದ್ಮಮ್ಮ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಪಿಎಂಎಜಿವೈ ಯೋಜನೆಯಡಿ ತಾಲೂಕಿನಲ್ಲಿ 280 ಮನೆಗಳು ಆಯ್ಕೆಯಾಗಿವೆ. ಎಲ್ಲ ಫಲಾನುಭವಿಗಳಿಗೆ ಮನೆ ನಿರ್ಮಾಣಕ್ಕೆ ಅನುಮೋದನೆ ಸಿಕ್ಕಿದೆ. 47 ಮನೆಗಳು ಪಾಯ ಹಂತದಲ್ಲಿವೆ. 25 ಮನೆಗಳು ಗೋಡೆ ಹಂತದಲ್ಲಿವೆ. 33 ಮನೆಗಳು ಮೋಲ್ಡ್ ಆಗಿವೆ. ಪದ್ಮಮ್ಮ ಎಂಬ ಫಲಾನುಭವಿ ಯೋಜನೆಗೆ ಆಯ್ಕೆಯಾಗಿಲ್ಲ. ನೆಲದ ಮಟ್ಟದಲ್ಲಿ ಜಿಪಿಎಸ್ ಮಾಡಬೇಕಾಗಿತ್ತು. ಪಂಚಾಯಿತಿಯವರು ಮಾಡಿಲ್ಲದ ಕಾರಣ ಆಯ್ಕೆಯಾಗಿಲ್ಲ. ಈ ವರ್ಷದಲ್ಲಿ ನೀಡುವ ಗುರಿಯಲ್ಲಿ ಸೇರಿಸಿ, ಜಿಪಿಎಸ್ ಮಾಡಿದರೆ ಆಯ್ಕೆಯಾಗುತ್ತಾರೆ ಎನ್ನುತ್ತಾರೆ ತಾಲೂಕು ಹೌಸಿಂಗ್ ನೋಡಲ್ ಅಧಿಕಾರಿ ಚಂದ್ರಪ್ಪ.

ಪಿಎಂಎಜಿವೈ ಯೋಜನೆಯಡಿ ಪದ್ಮಮ್ಮ ಅವರನ್ನು ಆಯ್ಕೆ ಮಾಡಿ, ಫಲಾನುಭವಿಗಳ ಪಟ್ಟಿ ಅನುಮೋದನೆಗೆ ಆಗಸ್ಟ್ ತಿಂಗಳಿನಲ್ಲಿ ತಾಲ್ಲೂಕು ಪಂಚಾಯಿತಿಗೆ ಕಳುಹಿಸಲಾಗಿದೆ. ಇದುವರೆಗೂ ಅನುಮೋದನೆ ಆಗಿಲ್ಲ. ಅನುಮೋದನೆಯಾಗಿ ಬಂದ ನಂತರ ಜಿ.ಪಿ.ಎಸ್ ಮಾಡಲಾಗುವುದು ಎಂದು ಬಿಜ್ಜವರ ಗ್ರಾಮ ಪಂಚಾಯಿತಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸತೀಶ್ ಕುಮಾರ್ ಹೇಳಿದ್ದಾರೆ.

ಒಟ್ಟಿನಲ್ಲಿ ಸೂರಿನ ನಿರೀಕ್ಷೆಯಲ್ಲಿದ್ದ ಕುಟುಂಬವೊಂದು ಈ ಚಳಿಗಾಲವನ್ನು ಈ ಶೆಡ್‌ನಲ್ಲೆ ಕಳೆಯುವ ಸ್ಥಿತಿ ನಿರ್ಮಾಣವಾಗಿದ್ದು, ಆದಷ್ಟುಬೇಗ ಸಂಬಂಧಪಟ್ಟವರು ಸಮಸ್ಯೆ ಪರಿಹರಿಸಿ ನಮಗೊಂದು ಸೂರು ನೀಡಲಿ ಎಂದು ಆಗ್ರಹಿಸುತ್ತಿದೆ ಪದ್ಮಮ್ಮ ಕುಟುಂಬ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪಿಎಸ್‌ಐ ಹಗರಣದ ಕಿಂಗ್‌ಪಿನ್ ಆರ್‌.ಡಿ ಪಾಟೀಲ್ ಮನೆಗೆ ಬಿಜೆಪಿ ಅಭ್ಯರ್ಥಿ, ಸಂಸದ ಉಮೇಶ್ ಜಾಧವ್ ಭೇಟಿ

ಪೊಲೀಸ್‌ ಅಧಿಕಾರಿ ಆಗಬೇಕೆಂಬ ರಾಜ್ಯದ ಯುವಜನರ ಭವಿಷ್ಯವನ್ನೇ ಹಾಳು ಮಾಡಿದ್ದ ಪಿಎಸ್‌ಐ...

ಗೈರು ಹಾಜರಾದ ಮತಗಟ್ಟೆ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಲು ಸೂಚನೆ: ಬಿಬಿಎಂಪಿ ಮುಖ್ಯ ಆಯುಕ್ತ

ಲೋಕಸಭಾ ಚುನಾವಣೆ ಹಿನ್ನೆಲೆ, ಮತಗಟ್ಟೆ ಅಧಿಕಾರಿಗಳಿಗೆ ಹಮ್ಮಿಕ್ಕೊಂಡಿರುವ ತರಬೇತಿಗೆ ಗೈರು ಹಾಜರಾದವರ...

ರಾಯಚೂರು | ಎಸ್‌ಯುಸಿಐ ಅಭ್ಯರ್ಥಿ ರಾಮಲಿಂಗಪ್ಪ ನಾಮಪತ್ರ ಸಲ್ಲಿಕೆ

ರಾಯಚೂರು-ಯಾದಗಿರಿ ಒಳಗೊಂಡ ರಾಯಚೂರು ಲೋಕಸಭಾ (ಪ.ಪಂ) ಕ್ಷೇತ್ರದ ಎಸ್.ಯು.ಸಿ.ಐ (ಕಮ್ಯುನಿಸ್ಟ್) ಪಕ್ಷದ...

ಗದಗ | ತಾಲೂಕು ಆಡಳಿತದಿಂದ ‘ಮೇವು ಬ್ಯಾಂಕ್’ ಆರಂಭ; ಕೆ.ಜಿಗೆ 2 ರೂ. ದರ ನಿಗದಿ

ಕೊಣ್ಣೂರು : ಜಾನುವಾರುಗಳಿಗೆ ಮೇವು ಕೊರತೆ ನೀಗಿಸಲು ತಾಲೂಕು ಆಡಳಿತದಿಂದ ಮೇವು...