ಚಿಕ್ಕನಾಯಕನಹಳ್ಳಿ | ಜಲಜೀವನ್ ಮಿಷನ್ ಅನುಷ್ಠಾನಕ್ಕೆ ನೀರುಗಂಟಿಗಳೇ ಸೂತ್ರಧಾರಿಗಳು: ಕಾಂತರಾಜು

Date:

ಗ್ರಾಮೀಣ ಪ್ರದೇಶಗಳಲ್ಲಿ ನೀರನ್ನು ಸರಿಯಾದ ಪ್ರಮಾಣದಲ್ಲಿ ಸಮರ್ಪಕವಾಗಿ ಒದಗಿಸಿಕೊಡುವ ನಿಟ್ಟಿನಲ್ಲಿ ಅನುಷ್ಠಾನಗೊಳಿಸಲಾಗುತ್ತಿರುವ ಜಲಜೀವನ್ ಮಿಷನ್ ಯೋಜನೆಯ ನಿಜವಾದ ಸೂತ್ರಧಾರಿಗಳು ನೀರುಗಂಟಿಗಳು ಎಂದು ಚಿಕ್ಕನಾಯಕನಹಳ್ಳಿ ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಕಾಂತರಾಜು ತಿಳಿಸಿದರು.

ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ತೀ.ನಂ.ಶ್ರೀ ಭವನದಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಜಿಲ್ಲಾ ಪಂಚಾಯಿತಿ ತುಮಕೂರು ಹಾಗೂ ಸ್ನೇಹ ಜೀವನ ಫೌಂಡೇಶನ್ ಇವರ ಸಹಯೋಗದಲ್ಲಿ ಆಯೋಜಿಸಲಾಗಿದ್ದ ತಾಲೂಕು ಮಟ್ಟದ ಕಾರ್ಯಕರ್ತರಿಗೆ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಲಜೀವನ್ ಮಿಷನ್ ಯೋಜನಾ ಅನುಷ್ಠಾನದಲ್ಲಿ ನೀರುಗಂಟಿಗಳ ಪಾತ್ರ ದೊಡ್ಡದಿದೆ ಎಂದರು.

ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿರುವ ಕುಟುಂಬಗಳಿಗೆ ಪ್ರತಿ ದಿನ ನೀರನ್ನು ಪೂರೈಕೆ ಮಾಡುವ ಕರ್ತವ್ಯ ನೀರುಗಂಟಿಗಳದ್ದೇ ಆಗಿರುತ್ತದೆ. ಆದ ಕಾರಣ ನಿಮ್ಮ ನಿಮ್ಮ ಗ್ರಾಮಗಳಲ್ಲಿ ಜಲಜೀವನ್ ಮಿಷನ್ ಯೋಜನೆಯ ಕಾಮಗಾರಿ ಸಮಯದಲ್ಲಿ ಎಚ್ಚ ರವಹಿಸಿ ಕೆಲಸದಲ್ಲಿ ಪಾಲ್ಗೊಳ್ಳಬೇಕು ಎಂದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಇದೇ ತರಬೇತಿಯಲ್ಲಿ ನೀರುಗಂಟಿಗಳಿಗೆ ತರಬೇತಿ ನೀಡಿದ ಜೆ.ಇ ತೀರ್ಥರಾಮ್ ಮತ್ತು ಗುರುಪ್ರಸಾದ್ ಅವರು ಜಲಜೀವನ್ ಮಿಷನ್ ಯೋಜನೆಯಲ್ಲಿ ಅಳವಡಿಸಲಾಗುತ್ತಿರುವ ಹೆಚ್ ಡಿ ಪಿ ಇ ಪೈಪ್ ನ ಗುಣ ಮಟ್ಟ, ನೀರಿನ ವೇಗವನ್ನು ಸರಿದೂಗಿಸುವ ಫ್ಲೋ ಕಂಟ್ರೋಲ್ ವಾಲ್ವ್, ವಿದ್ಯುತ್ ಅಳವಡಿಸಿ ಮಾಡುವ ಪೈಪ್ ಲೈನ್ ವಿಧಾನ, ಮೀಟರ್ ಅಳವಡಿಕೆಯ ಮಹತ್ವ,ಕಾರ್ಯಾತ್ಮಕ ಗೃಹ ನಳ ಸಂಪರ್ಕದಿಂದ ನೀರಿನ ಮಿತ ಬಳಕೆ ಮತ್ತು ವ್ಯಯವಾಗುತ್ತಿರುವ ನೀರಿನ ಉಳಿತಾಯಕ್ಕೆ ಜಲಜೀವನ್ ಮಿಷನ್ ಪೂರಕವಾಗುತ್ತಿದೆ ಎಂಬದುದನ್ನು ಪ್ರಾಯೋಗಿಕವಾಗಿ ವೇದಿಕೆಯಲ್ಲಿ ಪ್ರಸ್ತುತ ಪಡಿಸಿದರು.

“ದಿನದಿಂದ ದಿನಕ್ಕೆ ಕುಡಿಯುವ ನೀರು ಕ್ಷೀಣಿಸುತ್ತಿರುವುದರಿಂದ ಇರುವ ನೀರನ್ನು ಸದ್ಬಳಕೆ ಮಾಡಿಕೊಂಡು ಮುಂದಿನ ಪೀಳಿಗೆಗೆ ನೀರನ್ನು ಉಳಿಸುವ ಜವಾಬ್ದಾರಿ ಎಲ್ಲ ಕುಟುಂಬದ ಪ್ರತಿಯೊಬ್ಬ ಸದಸ್ಯರದ್ದಾಗಬೇಕೆಂಬುದೇ ಜಲಜೀವನ್ ಮಿಷನ್ ಯೋಜನೆಯ ಆಶಯ. ಈ ಯೋಜನೆಯಿಂದ ಪ್ರತೀ ಕುಟುಂಬದ ಸದಸ್ಯರಿಗೆ ನೀರು ಸಮರ್ಪಕವಾಗಿ ಪೂರಕವಾಗಬೇಕಾದರೆ ಎಲ್ಲಾ ಗ್ರಾಮ ಪಂಚಾಯಿತಿಯ ನೀರುಗಂಟಿಗಳು ಸೂತ್ರಧಾರಿಗಳಂತೆ ಕೆಲಸ ಮಾಡಬೇಕು ಎಂದು ಕಾಂತರಾಜು ತಿಳಿಸಿದರು.

ಇದನ್ನು ಓದಿದ್ದೀರಾ? ಕೋಲಾರ | ಕೋಚಿಮುಲ್ ಕಾಂಗ್ರೆಸ್ ಸರ್ಕಾರದ ಕೃಪಾಪೋಷಿತ ನಾಟಕ ಮಂಡಳಿ : ಕೆ ವಿ ನಾಗರಾಜು ಆರೋಪ

ತರಬೇತಿಯಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ದೊಡ್ಡಸಿದ್ದಯ್ಯ ಡಿ, ಸಹಾಯಕ ನಿರ್ದೇಶಕ ಕಾಂತರಾಜು ಎಂ.ಸಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಉಮಾ ಮಹೇಶ್ ಡಿ, ಸಹಾಯಕ ಎಂಜಿನಿಯರ್ ಅಮರ್, ವಿಭಾಗಾಧಿಕಾರಿಗಳಾದ ಗುರುಪ್ರಸಾದ್ ಎನ್, ತೀರ್ಥರಾಮ್ ಎನ್ ಶಶಿಕುಮಾರ್ ಎನ್ .ಎಸ್, ಮಾಧುರಿ, ಅನುಷ್ಠಾನ ಬೆಂಬಲ ಸಂಸ್ಥೆಯ ಸಿಬ್ಬಂದಿ, ಮಾಹಿತಿ ಶಿಕ್ಷಣ ಹಾಗೂ ಸಂವಹನಾಧಿಕಾರಿ ಮಾರುತೇಶ್ ಪಿ.ಎಲ್ ಉಪಸ್ಥಿತರಿದ್ದರು.

ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೊಪ್ಪಳ | ಗಣಪತಿ ಮೂರ್ತಿ ಇರುವ ಟ್ರಾಕ್ಟರ್‌ಗೆ ಲಾರಿ ಡಿಕ್ಕಿ; ನಾಲ್ವರಿಗೆ ಗಂಭೀರ ಗಾಯ

ಗಣೇಶ ಚತುರ್ಥಿಯ ಅಂಗವಾಗಿ ಗಣಪತಿ ಮೂರ್ತಿಯನ್ನು ಸಾಗಿಸುತ್ತಿದ್ದ ಟ್ರ್ಯಾಕ್ಟರ್‌ಗೆ ಹಿಂಬದಿಯಿಂದ ಲಾರಿ...

ಮಂಗಳೂರು | ಶೀಘ್ರದಲ್ಲೇ ‘ಬ್ಯಾರಿ ಭವನ’ಕ್ಕೆ ಶಂಕುಸ್ಥಾಪನೆ: ಸ್ಪೀಕರ್ ಯು ಟಿ ಖಾದರ್

ಆರು ಕೋಟಿ ಅನುದಾನದಲ್ಲಿ ಬ್ಯಾರಿ ಭವನ ನಿರ್ಮಾಣವಾಗಲಿದ್ದು, ಶೀಘ್ರದಲ್ಲೇ ಶಂಕುಸ್ಥಾಪನೆ ನೆರವೇರಿಸಲಾಗುವುದು...

ಬೀದರ್‌ | ಬಸವಣ್ಣ, ವಚನಗಳು ಉಳಿದರೆ ಕನ್ನಡ ಉಳಿಯುವುದು : ಕುಂ.ವೀರಭದ್ರಪ್ಪ

ಬಸವಣ್ಣ ಹಾಗೂ ಅಕ್ಕ ಮಹಾದೇವಿ ಎಂಬ ಎರಡು ನಾಮವಾಚಕ ಕನ್ನಡದ ಬಹುದೊಡ್ಡ...