ಹಾಸನ | ಭತ್ತದ ಆಸೆಗೆ ಮನೆಯ ಕಿಟಕಿ, ಹೆಂಚು ಪುಡಿ ಮಾಡಿದ ಕಾಡಾನೆ

Date:

  • ಪ್ರಾಣ ಭಯದಲ್ಲೇ ರಾತ್ರಿ ಕಳೆದ ಮನೆಯೊಳಗಿದ್ದ ಕುಟುಂಬ
  • ಮೂರು ಕಾಡಾನೆಗಳಿಗೆ ರೇಡಿಯೋ ಕಾಲರ್‌ ಅಳವಡಿಕೆ

ಕಿಟಕಿ ಪಕ್ಕದಲ್ಲಿ ಮೂಟೆಗಳಲ್ಲಿ ಸಂಗ್ರಹಿಸಿಟ್ಟಿದ್ದ ಭತ್ತ ತಿನ್ನುವ ಆಸೆಗೆ ಕಾಡಾನೆಯು ಮನೆ ಮೇಲೆ ದಾಳಿ ಮಾಡಿದ್ದು, ಕಿಟಕಿ ಮತ್ತು ಹೆಂಚುಗಳನ್ನು ಹೊಡೆದುಹಾಕಿರುವ ಘಟನೆ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನಲ್ಲಿ ನಡೆದಿದೆ.

- Advertisement -

ತಾಲೂಕಿನ ಕ್ಯಾಮನಹಳ್ಳಿ ಗ್ರಾಮದ ಮುರಳಿ ಎಂಬುವವರ ಮನೆಯ ಮೇಲೆ ರಾತ್ರಿ 11.30ರ ಸುಮಯದಲ್ಲಿ ಕಾಡಾನೆ ದಾಳಿ ಮಾಡಿದೆ. ಕಾಡಾನೆ ಗುದ್ದಿರುವ ರಭಸಕ್ಕೆ ಮನೆಯ ಹೆಂಚುಗಳು ಪುಡಿ ಪುಡಿಯಾಗಿವೆ ಮತ್ತು ಮನೆ ಕಿಟಕಿ ಮುರಿದು ಹೋಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಡಾ. ಟಿ.ಎಸ್.‌ ಚನ್ನೇಶ್‌ ಸರಣಿ | ವೈದ್ಯಕೀಯ ನೊಬೆಲ್‌...

ನಮ್ಮ ಮೆದುಳು, ಭಾವನೆಗಳನ್ನು, ವರ್ತನೆಗಳನ್ನು ಮತ್ತು ದೈಹಿಕ ಕಾರ್ಯಗಳನ್ನು ಹೇಗೆ ನಿಯಂತ್ರಿಸುತ್ತದೆ ಎಂಬುದನ್ನು ಸಂಶೋಧನೆಯಿಂದ ಬಿಡಿಸಿಟ್ಟು 2026ರ ವೈದ್ಯಕೀಯ ನೊಬೆಲ್‌ ಪ್ರಶಸ್ತಿಗೆ ಪಾತ್ರರಾದ ಮೂವರು ಸಂಶೋಧಕರು ಮತ್ತು ಸಂಶೋಧನೆಯ ಸುತ್ತಲಿನ ವಿಶ್ಲೇಷಣಾತ್ಮಕ ಬರಹ ಈ...

ಪೊಲೀಸ್ ಸುಧಾರಣೆ | ಹೈಟೆಕ್ ಪೊಲೀಸಿಂಗ್ Vs ವಾಸ್ತವ:...

ಪೊಲೀಸ್‌ ಇಲಾಖೆಯನ್ನು ಆಧುನೀಕರಿಸಲು AI, ಸೈಬರ್‌ ತಂತ್ರಜ್ಞಾನ, ಡಿಜಿಟಲ್‌ ತನಿಖೆ, ಸಿಸಿಟಿವಿ, ಬಾಡಿ ಕ್ಯಾಮೆರಾ ಸೇರಿದಂತೆ ಹಲವು ತಂತ್ರಜ್ಞಾನಗಳು ಪ್ರವೇಶಿಸುತ್ತಿವೆ. ಆದರೆ ಹೈಟೆಕ್‌ ಆಗುತ್ತಿರುವ ಪೊಲೀಸ್‌ ವ್ಯವಸ್ಥೆ ಜನರ ಬದುಕಿಗೆ ಎಷ್ಟು ಹತ್ತಿರವಾಗುತ್ತಿದೆ?...

ಐದು ಭಾಷೆ, ಆರು ದಶಕ, ಅನಂತ ಪ್ರಯೋಗ: ಭಾರತೀಯ...

ಬದುಕಿನ ಕೊನೆಯ ಉಸಿರಿನವರೆಗೂ ಕೇವಲ ಸಿನಿಮಾವನ್ನೇ ಶ್ವಾಸವಾಗಿಸಿಕೊಂಡಿದ್ದ, 95ನೇ ವಯಸ್ಸಿನಲ್ಲೂ ಹೊಸ ಕಥೆಯ ಕನಸು ಕಾಣುತ್ತಿದ್ದ ಭಾರತೀಯ ಚಿತ್ರರಂಗದ ಅಪ್ರತಿಮ ದಾರ್ಶನಿಕ ಸಿಂಗೀತಂ ಶ್ರೀನಿವಾಸರಾವ್ ನಮ್ಮೊಂದಿಗಿಲ್ಲ. ಆರು ದಶಕಗಳ ಕಾಲ ತಮ್ಮ ಅನಂತ...

ಮುರಳಿ ಮತ್ತು ಕುಟುಂಬಸ್ಥರು ಮನೆಯ ಒಳಗೆ ಮಲಗಿದ್ದ ವೇಳೆಯೇ ಕಾಡಾನೆ ದಾಳಿ ಮಾಡಿದೆ. ಕಾಡಾನೆ ನೋಡಿ ಗಾಬರಿಗೊಂಡ ಮನೆಯವರು ಜೋರಾಗಿ ಕೂಗಾಡಿದ್ದರಿಂದ ಕಾಡಾನೆ ಹೆದರಿ ಹಿಂತಿರುಗಿ ಹೋಗಿದೆ. ಇಡೀ ರಾತ್ರಿ ಭಯದಿಂದಲೇ ಕಾಲ ಕಳೆದಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಕಾಡಾನೆಯು ಕ್ಯಾಮನಹಳ್ಳಿಯ ಚಿದಂಬರ ಎಂಬವರ ಮನೆ ಗೇಟು, ಜಯ್ ಮ್ಯಾತ್ಯು ಅವರ ಮನೆಯ ಗೇಟು ಹಾಗೂ ಪೋರ್ಟಿಕೋ, ದಿಲೀಪ್ ಎಂಬುವರ ಶೆಡ್, ಧನಂಜಯ ಅವರ ತೋಟ, ಅಗಲಟ್ಟಿ ಎಸ್ಟೇಟ್ ನ ಸೋಲಾರ್‌ ಬೇಲಿ ಹಾಗೂ ಗೇಟ್ ಗಳಿಗೆ ಹಾನಿ ಮಾಡಿದೆ.

ಕಾಡಾನೆ ಸಕಲೇಶಪುರ

ಮೂರು ಕಾಡಾನೆಗಳಿಗೆ ರೆಡಿಯೊ ಕಾಲರ್‌

ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆಗಳ ಉಪಟಳ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕಾಡಾನೆಗಳ ಚಲನವಲನದ ಮೇಲೆ ನಿಗಾ ಇರಿಸಲು ಅರಣ್ಯ ಇಲಾಖೆ ಮೂರು ಕಾಡಾನೆಗಳನ್ನು ಹಿಡಿದು ರೇಡಿಯೋ ಕಾಲರ್ ಅಳವಡಿಸಿದೆ.

ಅಭಿಮನ್ಯು ನೇತೃತ್ವದಲ್ಲಿ ಪ್ರಶಾಂತ, ಭೀಮ, ಮಹೇಂದ್ರ, ಅಜೇಯ ಸಾಕಾನೆಗಳು, ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ನೇತೃತ್ವದಲ್ಲಿ ಕಾಡಾನೆ ಸೆರೆ ಕಾರ್ಯಚರಣೆ ಮಾಡಲಾಗಿತ್ತು. ಸಕಲೇಶಪುರ ತಾಲೂಕಿನ ಕೆರೋಡಿ ಬಳಿ ಹಿಂದೆ ರೆಡಿಯೋ ಕಾಲರ್‌ ಅಳವಡಿಸಿದ್ದ ಹೆಣ್ಣಾನೆಗೆ ಅರಿವಳಿಕೆ ನೀಡಿ ನಿಷ್ಕ್ರಿಯವಾಗಿದ್ದ ಹಳೆಯ ರೇಡಿಯೋ ಕಾಲರ್ ತೆಗೆದು ಹೊಸ ರೇಡಿಯೋ ಕಾಲರ್ ಅಳವಡಿಸಲಾಗಿದೆ.

ಕಾಡಾನೆ ಸಕಲೇಶಪುರ

ಸಕಲೇಶಪುರ ತಾಲೂಕು ಗಡಿಭಾಗದ ಬ್ಯಾದನೆ ಸಮೀಪದ ಕಾಫಿ ತೋಟದಲ್ಲಿ ‘ಭುವನೇಶ್ವರಿ’ ಎಂಬ ಹೆಣ್ಣಾನೆಗೆ ರೇಡಿಯೋ ಕಾಲರ್ ಅಳವಡಿಸಿದ್ದಾರೆ. ಮಂಗಳವಾರ ಹೆಬ್ಬನಹಳ್ಳಿ ಸುತ್ತಮುತ್ತ ಸಂಚರಿಸುತ್ತಿರುವ ‘ಕಾಂತಿ’ ಎಂಬ ಹೆಸರಿನ ಹೆಣ್ಣಾನೆಯನ್ನು ಹಲಸುಲಿಗೆ ಬಳಿ ಸೆರೆಹಿಡಿದು ರೇಡಿಯೋ ಕಾಲರ್ ಅಳವಡಿಸಲಾಯಿತು.

ಈ ಸುದ್ದಿ ಓದಿದ್ದೀರಾ? ಮಾಲೂರು | ಮರುಮತ ಎಣಿಕೆಗಾಗಿ ಹೈಕೋರ್ಟ್‌ ಮೊರೆ ಹೋದ ಬಿಜೆಪಿ ಅಭ್ಯರ್ಥಿ

ರೇಡಿಯೋ ಕಾಲರ್‌ ಅಳವಡಿಕೆ ಕಾರ್ಯಾಚರಣೆಯಲ್ಲಿ ಹಾಸನ ಡಿಸಿಎಫ್‌ ಹರೀಶ್, ಎಸಿಫ್ ಸುರೇಶ್, ವಲಯ ಅರಣ್ಯ ಅಧಿಕಾರಿ ಶಿಲ್ಪಾ, ಅರಿವಳಿಕೆ ತಜ್ಞರು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೊಡಗು | ಫಾರಂ-7 ದುರುಪಯೋಗ: ಬಿಜೆಪಿ ಬೂತ್ ಅಧ್ಯಕ್ಷ ಸೇರಿ ಐವರ ವಿರುದ್ಧ ಎಫ್‌ಐಆರ್!

ಕೊಡಗು ಜಿಲ್ಲೆಯ ಬ್ಯಾಡಗೊಟ್ಟ ಗ್ರಾಮದಲ್ಲಿ ಮತದಾರರ ಹೆಸರುಗಳನ್ನು ಅಳಿಸಲು ಫಾರಂ-7 ಅರ್ಜಿಗಳನ್ನು...

ಬಾಗೇಪಲ್ಲಿ | ಗಿಡ ನೆಟ್ಟು ಪ್ರಕೃತಿಯ ಋಣ ತೀರಿಸಿ:- ಚೇತನ್ ನಾಯ್ಡು ಫೌಂಡೇಷನ್ ಅಧ್ಯಕ್ಷ ಬಿ.ಆರ್.ನರಸಿಂಹ ನಾಯ್ಡು

ಗಿಡ ನೆಟ್ಟು ಪ್ರಕೃತಿಯ ಋಣ ತೀರಿಸಿ ಪ್ರಕೃತಿಯಿಂದ ಹಲವು ರೀತಿಯ ಪ್ರಯೋಜನಗಳನ್ನು...

ಕೊಡಗು | ₹25 ಸಾವಿರ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಜಿಲ್ಲಾ ವಿಮಾ ಅಧಿಕಾರಿ

ಮೃತ ಪೊಲೀಸ್ ಪೇದೆಯ ಕುಟುಂಬಕ್ಕೆ ಬರಬೇಕಿದ್ದ ಕರ್ನಾಟಕ ಸರ್ಕಾರಿ ನೌಕರರ ವಿಮಾ...