ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯ ಸಂಘಟನಾಕಾರರು ಯಾದಗಿರಿ ನಗರದ ಸುಭಾಷ್ ವೃತ್ತದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ ಹಾಗೂ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಪ್ರತಿಕೃತಿ ದಹಿಸಿ ಪ್ರತಿಭಟನಾ ಪ್ರದರ್ಶನ ನಡೆಸಿದರು.
“ಕ್ವಿಟ್ ಇಂಡಿಯಾ ಹೋರಾಟದ ನೆನಪಿನ ಅಂಗವಾಗಿ ಸಂಯುಕ್ತ ಹೋರಾಟ ಕರ್ನಾಟಕ(ಎಸ್‌ಕೆಎಂ) ಮತ್ತು ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು)ಯಿಂದ ಹಮ್ಮಿಕೊಂಡಿದ್ದ ಅಖಿಲ ಭಾರತ ಸಾರ್ವತ್ರಿಕ ಹೋರಾಟದಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
“ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ(ಎಂಎಸ್‌ಪಿ) ಜಾರಿಗೊಳಿಸಲು, ರೈತ ವಿರೋಧಿ ವಿದ್ಯುತ್ ಖಾಸಗೀಕರಣಗೊಳಿಸುವ ವಿದ್ಯುತ್ ಮಸೂದೆ ಕಾಯ್ದೆ ಹಿಂಪಡೆಯಲು, ಕಾರ್ಮಿಕ ವಿರೋಧಿ- ಕಾರ್ಪೋರೇಟ್‌ಪರ ಕಾರ್ಮಿಕ ಸಂಹಿತೆ ಹಿಂಪಡೆಲು, ಸಮಾನ ಕೆಲಸಕ್ಕೆ ಸಮಾನ ವೇತನ ಜಾರಿಗೊಳಿಸಲು, ಗುತ್ತಿಗೆ-ಹೊರಗುತ್ತಿಗೆ ಹಾಗೂ ಸ್ಕೀಮ್ ಕಾರ್ಯಕರ್ತೆಯರನ್ನು ಕಾಯಂಗೊಳಿಸಲು ಮತ್ತು ಬೆಲೆ ಏರಿಕೆ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಬೇಕು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ರಾಮನಗರ | ರೈತ ಮುಖಂಡರು, ಹುತಾತ್ಮ ಯೋಧರ ನೆನಪು ಶ್ಲಾಘನೀಯ: ಪಿಎಸ್‌ಐ ಹರೀಶ್
ಈ ಸಂದರ್ಭದಲ್ಲಿ ರಾಮಲಿಂಗಪ್ಪ ಬಿ ಎನ್ ಚನ್ನಪ್ಪ ಆನೆಗುಂದಿ, ಶರಣಗೌಡ ಗೂಗಲ್, ಶರಣು ಮಂದ್ರವಾಡ, ದಾವಲಸಾಬ್ ನದಾಫ್, ಡಿ ಉಮಾದೇವಿ, ಜೈಲಾಲ್ ತೋಟದಮನಿ ಸೇರಿದಂತೆ ಇತರರು ಇದ್ದರು.