ಯಾದಗಿರಿ | ಪರಸ್ಪರ ಹೊಡೆದಾಡಿಕೊಂಡ ಕಾಂಗ್ರೆಸ್‌-ಜೆಡಿಎಸ್‌ ಕಾರ್ಯಕರ್ತರು

Date:

  • ಕಾಂಗ್ರೆಸ್‌-ಜೆಡಿಎಸ್‌ ಕಾರ್ಯಕರ್ತರ ನಡುವಿನ ಜಗಳ ತಿಳಿಗೊಳಿಸಿದ ಸ್ಥಳೀಯರು
  • ಚಿಂಚನಸೂರ ಬಳಿ ಕೆಲವರು ತಮ್ಮ ಸಮಸ್ಯೆಗಳ ಕುರಿತು ಬೇಸರ ವ್ಯಕ್ತಪಡಿಸಿದರು

ಕಾಂಗ್ರೆಸ್‌-ಜೆಡಿಎಸ್‌ ಕಾರ್ಯಕರ್ತರು ಪರಸ್ಪರ ಹೊಡೆದಾಡಿಕೊಂಡಿರುವ ಘಟನೆ ಯಾದಗಿರಿ ಜಿಲ್ಲೆಯ ಗುರುಮಠಕಲ್‌ ತಾಲೂಕಿನಲ್ಲಿ ನಡೆದಿದೆ.

ತಾಲೂಕಿನ ಯದ್ಲಾಪುರ ಗ್ರಾಮದ ಹೊರವಲಯದ ಮೌಲಾಲಿ ಬೆಟ್ಟದ ಮೇಲಿನ ಮೌಲಾಲಿ ದರ್ಗಾಕ್ಕೆ ಯದ್ಲಾಪುರ ಗ್ರಾಮಸ್ಥರೊಬ್ಬರು ದೇವರ ಕಾರ್ಯ (ಹರಕೆ ತೀರಿಸುವುದು) ಮಾಡಿದ್ದರು. ಕಾರ್ಯಕ್ರಮದಲ್ಲಿ ಮಾಜಿ ಎಂಎಲ್‌ಸಿ ಬಾಬುರಾವ ಚಿಂಚನಸೂರ ಭಾಗವಹಿಸಿ ಹಿಂದಿರುಗಿದ್ದರು.

ಚಿಂಚನಸೂರ ಅವರು ಬಂದಾಗ ಕೆಲವರು ತಮ್ಮ ಸಮಸ್ಯೆಗಳ ಕುರಿತು ಬೇಸರ ವ್ಯಕ್ತಪಡಿಸಿ, ತರಾಟೆಗೆ ತೆಗೆದುಕೊಂಡಿದ್ದರು. ಅವರ ಸಮಸ್ಯೆಗಳನ್ನು ಆಲಿಸಿ, ಚಿಂಚನಸೂರ ಹಿಂದಿರುಗಿದರು. ಬಳಿಕ, ಸ್ಥಳೀಯ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಕಾರ್ಯಕರ್ತರ ನಡುವೆ ವಾಗ್ವಾದ ನಡೆದಿದೆ ಎಂದು ತಿಳಿದುಬಂದಿದೆ.

ಈ ಸುದ್ದಿ ಓದಿದ್ದೀರಾ? ಚಾಮರಾಜನಗರ | ಪೂರ್ವ ಮುಂಗಾರು ಮಳೆಗೆ ಮನೆ ಕುಸಿತ; ತಂದೆ ಮಕ್ಕಳು ಅಪಾಯದಿಂದ ಪಾರು

ಮಾತಿಗೆ ಮಾತು ಬೆಳೆದು ಕೈ-ಕೈ ಮಿಲಾಯಿಸುವ ಮೂಲಕ ಹೊಡೆದಾಡಿದ್ದಾರೆ. ನಂತರ ಸ್ಥಳೀಯರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಂಗಳೂರು | ನ. 29ರಂದು ‘ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ’ ಪ್ರದಾನ; ಕನ್ನಡ-ಉರ್ದು ಕವಿಗೋಷ್ಠಿ

ಕನ್ನಡದಲ್ಲಿ ಪ್ರಕಟಿತ ಮುಸ್ಲಿಮ್ ಬರಹಗಾರರ ಅತ್ಯುತ್ತಮ ಕೃತಿಗೆ ಕರ್ನಾಟಕ ಮುಸ್ಲಿಮ್ ಲೇಖಕರ...

ಗದಗ | ʼಸೊಸೆಗೆ ಸೀರೆ ಉಡಿಸಬೇಕುʼ ವದಂತಿ; ಅಂಗಡಿಗಳಲ್ಲಿ ವ್ಯಾಪಾರ ಜೋರು

ವೈಜ್ಞಾನಿಕವಾಗಿ ಜಗತ್ತು ಎಷ್ಟೇ ಮುಂದುವರೆದ್ರೂ ಮೌಢ್ಯ ಆಚರಣೆಗಳನ್ನ ಮಾತ್ರ ಬಿಟ್ಟಿಲ್ಲ. ಇದಕ್ಕೆ...

ಬೆಳಗಾವಿ | ನಿಗಮ-ಮಂಡಳಿ ಅಧ್ಯಕ್ಷರಿಗೆ ಸಂಪುಟ ಸ್ಥಾನಮಾನ; ಪಿಐಎಲ್‌ ದಾಖಲಿಸುವುದಾಗಿ ಎಚ್ಚರಿಕೆ

"ರಾಜ್ಯ ಸರ್ಕಾರದಲ್ಲಿ ಸಚಿವ ಸ್ಥಾನಗಳಿಂದ ವಂಚಿತರಾಗಿ ಅತೃಪ್ತರಾಗಿರುವ ಶಾಸಕರನ್ನು ಸಮಾಧಾನಪಡಿಸುವ ಸಲುವಾಗಿ,...

ಧಾರವಾಡ | ಚಳಿಯ ಕೊರತೆ; ಸಂಕಷ್ಟದಲ್ಲಿ ಕಡಲೆ ಬೆಳೆದ ರೈತರು

ಮುಂಗಾರು ಮಳೆ ವೈಫಲ್ಯದಿಂದ ಮುಂಗಾರು ಬೆಳೆ ಕಳೆದುಕೊಂಡಿದ್ದ ಧಾರವಾಡ ಜಿಲ್ಲೆಯ ರೈತರಿಗೆ,...