ಯಾದಗಿರಿ | ಮುಸ್ಲಿಂ ಯುವಕರಿಂದ ಖಬರ ಸ್ಥಾನ ಸ್ವಚ್ಛತಾ ಕಾರ್ಯಕ್ರಮ

Date:

ಊರಿನ ಮುಸ್ಲಿಂ ಸಮಾಜದ ಯುವಕರು ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು, ಚಂದಾ ಎತ್ತಿದ ಹಣವನ್ನು ಸಮಾಜದ ಕೆಲಸಕ್ಕೆ ಖರ್ಚು ಮಾಡಬೇಕು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದು ನದಾಫ್ ಕಮಿಟಿ ಅಧ್ಯಕ್ಷ ಶಫೀಕ್ ಬೆನ್ನಿ ಹೇಳಿದರು.

ಯಾದಗಿರಿ ಜಿಲ್ಲೆ ಹುಣಸಗಿ ಪಟ್ಟಣದಲ್ಲಿ ಮುಸ್ಲಿಂ ಖಬರ ಸ್ಥಾನ(ದಫನ್‌ ಮಾಡುವ ಸ್ಥಳ)ದಲ್ಲಿ ಅಂಜುಮನ್ ಕಮಿಟಿ, ಟಿಪ್ಪು ಸುಲ್ತಾನ್ ಕಮಿಟಿ, ನದಾಫ್ ಕಮಿಟಿಯ ಕಾರ್ಯಕರ್ತರು ಒಗ್ಗೂಡಿ ಹಮ್ಮಿಕೊಂಡಿದ್ದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಟಿಪ್ಪು ಸುಲ್ತಾನ್ ಸಂಯುಕ್ತ ರಂಗದ ತಾಲೂಕ ಅಧ್ಯಕ್ಷ ರಸುಲ್ ಬೆನ್ನೂರ್ ಮಾತನಾಡಿ, “ಹುಣಸಗಿಯಲ್ಲಿ ಎಲ್ಲ ಮುಸ್ಲಿಂ ಯುವಕರು ಸೇರಿ ತಮ್ಮ ಸ್ವಂತ ಖರ್ಚಿನಲ್ಲಿ ಸ್ವಚ್ಛತೆ ಮಾಡುತ್ತಿದ್ದಾರೆ. ಸಮಾಜದಲ್ಲಿ ಚಂದಾ ವಸೂಲಿ ಮಾಡುವವರು ಇನ್ನು ಮುಂದೆ ಜಿಲ್ಲಾ ವಕ್ಫ್ ಬೋರ್ಡ್‌ನಿಂದ ಮುಸ್ಲಿಂ ಕಮಿಟಿ ರಚನೆ ಮಾಡಿ ಚಂದಾ ವಸೂಲಿ ಮಾಡಲಿ, ಸರ್ಕಾರಿ ವಕ್ಫ್ ಬೋರ್ಡಿನಲ್ಲಿ ಕಮಿಟಿಯಲ್ಲಿ ನೋಂದಾಯಿಸದೆ ಚಂದಾ ವಸೂಲಿ ಮಾಡುವುದು ಅಪರಾಧ” ಎಂದು ಹೇಳಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಸುದ್ದಿ ಓದಿದ್ದೀರಾ? ತುಮಕೂರು | ಪಾವಗಡ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸುವಂತೆ ಒತ್ತಾಯ

ಅಂಜುಮನ್ ಕಮಿಟಿ, ಟಿಪ್ಪು ಸುಲ್ತಾನ್ ಕಮಿಟಿ, ನದಾಫ್ ಕಮಿಟಿಯ ಎಲ್ಲ ಯುವಕರು ಸೇರಿ ಜೆಸಿಬಿ ಸಹಾಯದಿಂದ ಜಾಲಿ ಗಿಡಗಳನ್ನು ತೆಗೆಸುವುದರ ಮೂಲಕ ಹುಣಸಗಿ ಪಟ್ಟಣದ ಖಬರ ಸ್ಥಾನವನ್ನು ಸ್ವಚ್ಛಗೊಳಿಸಿ ಮಂದಹಾಸ ಮೂಡಿಸಿದರು.

ಬಂದೇ ನವಾಜ್ ಯಾತ್ನೂರ್, ಸೂಫಿಸಾಬ್ ಡಿ ಸುರಪುರ್, ಖಾದರ್ ಬೆಕಿನಾಳ, ಸುಭನಬೋಜಿ, ಲಿಯಾಖತ್ ಅಲಿ ಬೆನ್ನೂರು, ಲಾಲ್ ಸಾಬ್ ನದಾಫ್, ನಬಿಲಾಲ್ ಬಡೆ ಕೂರುಸಿ, ಸದ್ದಾಂ ಕೂರುಸಿ, ಇಸಾಮುದ್ದೀನ್ ಮಂಡಿ ಪೀರ್, ಅನ್ವರ್ ಪಾಷಾ ಚೌದ್ರಿ, ದರ್ಶ್ ಮೊಹಮ್ಮದ್ ಕೊಡಗಾನೂರ, ವಾಷಿಂ ಯಾತ್ನೂರ್, ಉಮಾರ್ ಸಾಬ್ ಬೆನ್ನೂರು ಇದ್ದರು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ದಲಿತ ಯುವಕನ ಮೇಲೆ ಮಾರಣಾಂತಿಕ ಹಲ್ಲೆ, ನಾಲ್ವರ ವಿರುದ್ಧ ಪ್ರಕರಣ ದಾಖಲು

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕಕ್ಕೇರಾ ಪಟ್ಟಣದ ದಲಿತ ಯುವಕನನ್ನು ಜಾತಿ...

ಯಾದಗಿರಿ | ಮಹಿಳೆಯರ ಸ್ವಾವಲಂಬನೆಗಾಗಿ ಕಸೂತಿ ಕಾರ್ಯಗಾರ

ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನಲ್ಲಿ ವೈಷ್ಣವಿ ಸಭಾಂಗಣ್ಣ ದಿ.18 ಮಾರ್ಚ್ 2024ರಂದು...

ಯಾದಗಿರಿ | ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ನಕಲು ಮಾಡಲು ಸಹಕರಿಸಿದ ಇಬ್ಬರು ಶಿಕ್ಷಕರು ಅಮಾನತು

ಯಾದಗಿರಿ ಜಿಲ್ಲೆಯ ಸುರಪುರ ಹಾಗೂ ಹುಣಸಗಿ ತಾಲೂಕಿನ ಪರೀಕ್ಷಾ ಕೇಂದ್ರದಲ್ಲಿ ಎಸ್​​ಎಸ್​​ಎಲ್​ಸಿ...

ಸುರಪುರ ವಿಧಾನಸಭಾ ಉಪ ಚುನಾವಣೆ: ʼಕೈʼ ಹಿಡಿಯುವುದೇ ಅನುಕಂಪದ ಅಲೆ

ಯಾದಗಿರಿ ಜಿಲ್ಲೆಯ ಸುರಪುರ ಕ್ಷೇತ್ರದ ಶಾಸಕರಾಗಿದ್ದ ಕಾಂಗ್ರೆಸ್‌ನ ರಾಜಾ ವೆಂಕಟಪ್ಪ ನಾಯಕ...