ಯಾದಗಿರಿ | ಅಂಬೇಡ್ಕರ್ ಜಯಂತಿ ಪ್ರಯುಕ್ತ ಉಚಿತ ಸಾಮೂಹಿಕ ವಿವಾಹ

Date:

ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತ್ಯೋತ್ಸವ ಅಂಗವಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ.) ಅಂಬೇಡ್ಕರ್ ಮಾರ್ಗ, ಯಾದಗಿರಿ ಘಟಕದ ವತಿಯಿಂದ 11 ಜೋಡಿಗಳ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಶಾಹಪುರ ಪಟ್ಟಣದ ಸಿಪಿಎಸ್ ಶಾಲಾ ಮೈದಾನದಲ್ಲಿ ಗುರುವಾರ ವಿಜೃಂಭಣೆಯಿಂದ ನೆರವೇರಿಸಲಾಯಿತು.

- Advertisement -

ಕಾರ್ಯಕ್ರಮದಲ್ಲಿ ನವ ದಂಪತಿಗಳು ಬೌದ್ಧ ಧಮ್ಮದ ಸಮ್ಮುಖದಲ್ಲಿ ಸರಳ ಹಾಗೂ ಸಂವಿಧಾನಬದ್ಧ ರೀತಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಾವಿರಾರು ಜನರು ನವ ಜೋಡಿಗಳಿಗೆ ಶುಭ ಹಾರೈಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಸ್ವತಂತ್ರ ಸಾಂವಿಧಾನಿಕ ಸಂಸ್ಥೆಗಳ ಮೇಲಿನ ನಂಬಿಕೆಯನ್ನು ಕಸಿದುಕೊಳ್ಳುತ್ತಿರುವ ಚುನಾವಣಾ...

ನ್ಯಾಯಾಲಯ ಮತ್ತು ಚುನಾವಣಾ ಆಯೋಗಗಳ 'ಸ್ವತಂತ್ರತೆ' ಎಂಬ ಮುಖವಾಡವೇ ಈಗ ಸರ್ಕಾರಕ್ಕೆ ರಕ್ಷಣಾ ಕವಚವಾಗಿ ಕೆಲಸ ಮಾಡುತ್ತಿದೆ. ಹೀಗಾಗಿ ಇವತ್ತು ವಿರೋಧ ಪಕ್ಷಗಳ ಆಕ್ರೋಶವೆಲ್ಲವೂ ಸಾಂವಿಧಾನಿಕ ಸಂಸ್ಥೆಗಳ ಕಡೆಗೆ ತಿರುಗಿದೆ. ಸರ್ಕಾರ ತೀರಾ...
1777029

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಮದ್ದರಕಿ ಪ್ರಬುದ್ಧ ಬುದ್ಧ ವಿಹಾರದ ಭಂತೆ ನಾಗರತ್ನ ವಹಿಸಿದ್ದರು. ತಥಾಗತ ಭಗವಾನ್ ಗೌತಮ ಬುದ್ಧ ಹಾಗೂ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಸಲ್ಲಿಸಿ, ನವ ದಂಪತಿಗಳಿಗೆ ಪಂಚಶೀಲ ಬೋಧಿಸುವ ಮೂಲಕ ಮಂಗಳಕಾರ್ಯ ನೆರವೇರಿಸಲಾಯಿತು.

ಕಾರ್ಯಕ್ರಮದ ಪ್ರಸ್ತಾವಿಕವಾಗಿ ಮಾತನಾಡಿದ ಶರಣು ದೋರನಹಳ್ಳಿ, “ಇಂದಿನ ಸಮಾಜದಲ್ಲಿ ಮದುವೆಗಳಿಗೆ ಅತಿಯಾದ ದುಂದುವೆಚ್ಚ ಮಾಡಲಾಗುತ್ತಿದೆ. ಬಡ ಕುಟುಂಬಗಳು ಸಾಲ ಮಾಡಿಕೊಂಡು ಮದುವೆ ಮಾಡುತ್ತಿದ್ದು, ಬಳಿಕ ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿವೆ. ಅನೇಕ ಕುಟುಂಬಗಳು ಬದುಕಿಗಾಗಿ ಬೆಂಗಳೂರು, ಮುಂಬೈ ಮೊದಲಾದ ನಗರಗಳಿಗೆ ವಲಸೆ ಹೋಗುವ ಪರಿಸ್ಥಿತಿ ಎದುರಿಸುತ್ತಿವೆ. ಇಂತಹ ಸಮಸ್ಯೆಗಳಿಗೆ ಸಾಮೂಹಿಕ ಹಾಗೂ ಸರಳ ವಿವಾಹಗಳು ಉತ್ತಮ ಪರಿಹಾರವಾಗಿವೆ” ಎಂದು ಹೇಳಿದರು.

1776996

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪೂರ, “ದಲಿತ ಸಂಘಟನೆಗಳು ಸಮಾಜದಲ್ಲಿ ಜಾಗೃತಿ ಮೂಡಿಸುವ ಕೆಲಸದ ಜೊತೆಗೆ ಸಾಮೂಹಿಕ ವಿವಾಹಗಳಂತಹ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ. ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅವಧಿಯಲ್ಲಿ ಸಾಮೂಹಿಕ ವಿವಾಹಗಳಿಗೆ ಪ್ರೋತ್ಸಾಹಧನ ನೀಡುವ ಮೂಲಕ ದುಂದುವೆಚ್ಚಕ್ಕೆ ಕಡಿವಾಣ ಹಾಕುವ ಕೆಲಸ ಮಾಡಲಾಗಿತ್ತು. ಸಮಾಜದಲ್ಲಿ ಇಂತಹ ಸರಳ ವಿವಾಹಗಳಿಗೆ ಇನ್ನಷ್ಟು ಉತ್ತೇಜನ ಸಿಗಬೇಕು” ಎಂದು ಹೇಳಿದರು.

“ಮದುವೆ ಎನ್ನುವುದು ಎರಡು ಕುಟುಂಬಗಳ, ಎರಡು ಮನಸ್ಸುಗಳ ಸಂಗಮ. ಸರಳ ವಿವಾಹಗಳು ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತವೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಸಾಲದ ಹೊರೆ ಹೊರುವ ಬದಲು, ಆ ಹಣವನ್ನು ಭವಿಷ್ಯಕ್ಕಾಗಿ ಉಳಿಸಿ ನೆಮ್ಮದಿಯ ಜೀವನ ಕಟ್ಟಿಕೊಳ್ಳಬೇಕು” ಎಂದು ಸಲಹೆ ನೀಡಿದರು.

1776998

ಕರಾದಸಂಸ ಅಂಬೇಡ್ಕರ್ ಮಾರ್ಗ ರಾಜ್ಯ ಸಮಿತಿ ಸದಸ್ಯ ಜಿ. ಶಿವಕುಮಾರ್ ಮಾತನಾಡಿ, “ಸಂವಿಧಾನಬದ್ಧ ಹಾಗೂ ಸಾಮೂಹಿಕ ವಿವಾಹಗಳು ಡಾ. ಅಂಬೇಡ್ಕರ್ ಕಂಡ ಸಮಾನತೆಯ ಸಮಾಜ ನಿರ್ಮಾಣದ ದಾರಿಯಾಗಿದೆ. ಬಾಬಾಸಾಹೇಬ್ ಬರೆದ ಸಂವಿಧಾನವನ್ನು ಓದಿ ಅದರ ಆಶಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಭಗವಾನ್ ಬುದ್ಧನ ಶಾಂತಿ, ಸಮಾನತೆ ಮತ್ತು ಮಾನವೀಯತೆಯ ಸಂದೇಶವನ್ನು ಸಮಾಜದಲ್ಲಿ ಹರಡಬೇಕು” ಎಂದು ಕರೆ ನೀಡಿದರು.

ಅವರು ಮುಂದುವರಿದು, “ನವ ದಂಪತಿಗಳು ಪರಸ್ಪರ ಪ್ರೀತಿ, ವಿಶ್ವಾಸ ಮತ್ತು ಅರ್ಥೈಸಿಕೊಳ್ಳುವ ಗುಣ ಬೆಳೆಸಿಕೊಂಡಾಗ ಮಾತ್ರ ದಾಂಪತ್ಯ ಜೀವನ ಸುಖಕರವಾಗಿರುತ್ತದೆ. ಇತರರನ್ನು ನೋಡಿ ಅಸೂಯೆ ಪಡುವುದಕ್ಕಿಂತ ಸಮಾಜಕ್ಕೆ ಮಾದರಿಯಾಗುವ ಜೀವನ ನಡೆಸಬೇಕು” ಎಂದರು.

1776997

ಈ ವೇಳೆ ಯಾದಗಿರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿ ಶಂಕರ್ ಮಾತನಾಡಿ, “ಸಾಮೂಹಿಕ ವಿವಾಹಗಳು ಸಮಾಜದಲ್ಲಿ ಸರಳತೆಯ ಸಂದೇಶ ಸಾರುತ್ತವೆ. ಮದುವೆ ಎನ್ನುವುದು ಕೇವಲ ಆಚರಣೆ ಅಲ್ಲ, ಎರಡು ಮನಸ್ಸುಗಳ ಒಕ್ಕೂಟ. ದಂಪತಿಗಳು ಪರಸ್ಪರ ವಿಶ್ವಾಸ ಮತ್ತು ಪ್ರೀತಿಯಿಂದ ಬದುಕು ಸಾಗಿಸಬೇಕು” ಎಂದು ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಶ್ವನಾಥ್ ನಾಟೇಕರ್ ವಹಿಸಿಕೊಂಡರು ಮಾತನಾಡಿದರು. ಇದೇ ವೇಳೆ ಹಿರಿಯ ಮುಖಂಡರಾದ ನೀಲಕಂಠ ಬಡಿಗೇರ, ಮಲ್ಲಿಕಾರ್ಜುನ ಪೂಜಾರಿ, ಶ್ರೀಶೈಲ ಹೊಸಮನಿ ಸೇರಿದಂತೆ ಹಲವರು ಮಾತನಾಡಿ ಸಾಮೂಹಿಕ ವಿವಾಹಗಳ ಮಹತ್ವವನ್ನು ವಿವರಿಸಿದರು.

1776999

ಶೇಖರ್ ಬಡಿಗೇರ ಸ್ವಾಗತಿಸಿದರು. ಸಂತೋಷ ಗೋಗಿ ವಂದಿಸಿದರು. ಶಿವಕುಮಾರ್ ಪೋತೆ ಕಾರ್ಯಕ್ರಮ ನಿರೂಪಿಸಿದರು.

ಇದನ್ನು ಓದಿದ್ದೀರಾ? ನಾಲ್ಕು ಕಾರ್ಮಿಕ ಸಂಹಿತೆಗಳ ಜಾರಿ: ಕೇಂದ್ರದ ಜನವಿರೋಧಿ ನೀತಿ ವಿರುದ್ಧ ರಾಜ್ಯಾದ್ಯಂತ ಸಿಐಟಿಯು ಪ್ರತಿಭಟನೆ

ಈ ಸಂದರ್ಭದಲ್ಲಿ ರಾಜು ಅಣಬಿ, ಭೀಮರಾಯ ತಳವಾರ, ರವೀಂದ್ರನಾಥ ಹೊಸಮನಿ, ನಾಗಣ್ಣ ಬಡಿಗೇರ, ಬಾಬುರಾವ್ ಭೂತಾಳಿ, ಅಶೋಕ ತಳವಾರ, ಶಿವಮಂತಪ್ಪ ಚಂದಾಪುರ, ಶಿವಕುಮಾರ್ ತಳವಾರ, ಸುಭಾಷ್ ತಳವಾರ, ಮಲ್ಲಣ್ಣ ಹುಳಂಗೇರಿ, ನಿಜಗುಣ ದೋರನಹಳ್ಳಿ, ನಿಂಗಪ್ಪ ನಾಟೇಕರ್, ಚಿದಾನಂದ ಬಡಿಗೇರ, ಚಂದ್ರಶೇಖರ್ ಇಂಗಳಗಿ, ರಾಮಣ್ಣ ಸದ್ಯಾಪುರ, ಮರೆಪ್ಪ ಚಟ್ಟೇಕರ್, ಮರೆಪ್ಪ ಜಾಲಿಮಂಚ್, ಬಸವರಾಜ ಚಿಪ್ಪರ್, ನಿಂಗಪ್ಪ ದೋರನಹಳ್ಳಿ, ರವಿ ಅಯ್ಯಾಳ, ಅಯ್ಯಪ್ಪ ಗೊಂದೆನೂರ, ಮರಲಿಂಗ ಸಾವೂರ್, ಜೈಭೀಮ ಸುರಪುರ, ಮಂಜು ಹಾಲಭಾವಿ, ಸಂತೋಷ, ವಿಶ್ವ ಹಾಲಭಾವಿ, ಸುನೀಲ್ ಹೊಸಮನಿ, ಶರಣಪ್ಪ ಅನ್ವರ್, ಬಸು ಅನ್ವರ್, ಸಿದ್ದಪ್ಪ ಬೇವಿನಹಳ್ಳಿ, ಸಂತೋಷ ಗುಡಿಮನಿ, ಬಸವರಾಜ ಗುಡಿಮನಿ, ಬಸು ಕ್ಯಾತನಾಳ, ಗುಂಡೂರಾವ್ ದೋರನಹಳ್ಳಿ, ಶರಣು ಹುರಸಗುಂಡಗಿ, ಮಲ್ಲಿಕಾರ್ಜುನ ಕಸನ್, ಸಾಬಣ್ಣ ಅಯ್ಯಾಳ ಸೇರಿದಂತೆ ಹಲವರು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಅಕ್ರಮವಾಗಿ ದಾಸ್ತಾನು ಮಾಡಿದ್ದ 29 ಕ್ವಿಂಟಾಲ್ ಪಡಿತರ ಅಕ್ಕಿ ವಶ

ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಬಡ ಫಲಾನುಭವಿಗಳಿಗೆ ವಿತರಿಸಬೇಕಿದ್ದ ಪಡಿತರ ಅಕ್ಕಿಯನ್ನು ಅಕ್ರಮವಾಗಿ...

ಯಾದಗಿರಿ | ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಒತ್ತಾಯಿಸಿ ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯನ್ನು ವಿರೋಧಿಸಿ ಹಾಗೂ...

ಯಾದಗಿರಿ–ಶಹಾಪುರ ಬೈಪಾಸ್‌ ರೈಲ್ವೆ ಮೇಲ್ಸೇತುವೆ, ಭೀಮಾ ನದಿ ಬ್ರಿಡ್ಜ್ ದುರಸ್ತಿಗೆ ಉಮೇಶ ಕೆ. ಮುದ್ನಾಳ ಆಗ್ರಹ

ಯಾದಗಿರಿ ನಗರದ ಗುರುಶಿಣಗಿ ಮೂಲಕ ಶಹಾಪುರಕ್ಕೆ ಸಂಪರ್ಕ ಕಲ್ಪಿಸುವ ಯಾದಗಿರಿ–ಶಹಾಪುರ ಬೈಪಾಸ್...

ಯಾದಗಿರಿ | ತತ್ವಪದಕಾರ ಅವಧೂತ ಶ್ರೀ ರಂಗಲಿಂಗೇಶ್ವರ ಕುರಿತು ವಿಶೇಷ ಉಪನ್ಯಾಸ

ತತ್ವಪದಕಾರ ಹಾಗೂ ಅವಧೂತ ಶ್ರೀ ರಂಗಲಿಂಗೇಶ್ವರರ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ತಾಲೂಕು...