ಅಸಂಘಟಿತ ಕಾರ್ಮಿಕರ ದೈನಂದಿನ ಗಳಿಕೆ ‘ಕನಿಷ್ಠ ವೇತನದ ಮಾನದಂಡ’ಕ್ಕಿಂತ ಕಡಿಮೆ: ವರದಿ

Date:

ಭಾರತದ ಆರ್ಥಿಕತೆಯಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುವ ಕೃಷಿಯೇತರ ಅಸಂಘಟಿತ ವಲಯದ (Unincorporated Non-Agricultural Sector) ಕಾರ್ಮಿಕರ ಆರ್ಥಿಕ ಸ್ಥಿತಿಗತಿಗಳ ಕುರಿತು ಅತ್ಯಂತ ಆತಂಕಕಾರಿ ದತ್ತಾಂಶವೊಂದು ಬಹಿರಂಗಗೊಂಡಿದೆ. ದೇಶದ ಸಣ್ಣ ಪಟ್ಟಣಗಳು ಮತ್ತು ನಗರಗಳನ್ನು ಹೊರತುಪಡಿಸಿ ಉಳಿದೆಲ್ಲ ಪ್ರದೇಶಗಳಲ್ಲಿ ಕೌಶಲರಹಿತ ಕೃಷಿಯೇತರ ಕೆಲಸಗಳಲ್ಲಿ ದುಡಿಯುವ ಕಾರ್ಮಿಕರ ಗಳಿಕೆಯು ನಿಗದಿಪಡಿಸಲಾಗಿರುವ ಕನಿಷ್ಠ ವೇತನದ ಮಾನದಂಡಕ್ಕಿಂತಲೂ ಕಡಿಮೆ ಇದೆ.

- Advertisement -

‘ಅಸಂಘಟಿತ ವಲಯದ ಉದ್ಯಮಗಳ ವಾರ್ಷಿಕ ಸಮೀಕ್ಷೆ’ಯ (ASUSE) ದತ್ತಾಂಶಗಳನ್ನು ವಿಶ್ಲೇಷಿಸಿ ಎಂದು ‘ಬಿಸಿನೆಸ್ ಸ್ಟ್ಯಾಂಡರ್ಡ್’ ವರದಿ ಪ್ರಕಟಿಸಿದೆ. ವರದಿಯ ಪ್ರಕಾರ, ಅರೆ-ಕುಶಲ ಮತ್ತು ಕುಶಲ ಕಾರ್ಮಿಕರ ವೇತನದ ವರ್ಗಗಳ ಗಳಿಕೆಗೆ ಈ ಅಸಂಘಟಿತ ಕಾರ್ಮಿಕರ ಗಳಿಕೆಯನ್ನು ಹೋಲಿಸಿದಾಗ ಅಂತರವು ಭಾರೀ ದೊಡ್ಡದಾಗಿ ಕಾಣಿಸುತ್ತಿದೆ. ಇದು, ದೇಶದ ಶ್ರಮಿಕ ವರ್ಗ ಎದುರಿಸುತ್ತಿರುವ ಆರ್ಥಿಕ ಬಿಕ್ಕಟ್ಟನ್ನು ಎತ್ತಿ ತೋರಿಸುತ್ತದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಪಾಕಿಸ್ತಾನದಲ್ಲಿ ಅಹಿಂಸಾ ಮೂರ್ತಿಯ ‘ರಹಸ್ಯರಕ್ಷಣೆ’: ಕರಾಚಿಯಿಂದ ಇಸ್ಲಾಮಾಬಾದ್‌ಗೆ ಗಾಂಧಿ...

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಪ್ರವೇಶ ದ್ವಾರದಲ್ಲಿ ಮಹಾತ್ಮ ಗಾಂಧೀಜಿಯವರ ಭವ್ಯ ಕಂಚಿನ ಪ್ರತಿಮೆ ಇಂದಿಗೂ ಗಾಂಭೀರ್ಯದಿಂದ ನಿಂತಿದೆ. ಕೈಯಲ್ಲಿ ಊರುಗೋಲು ಹಿಡಿದು ದೂರದ ದಿಗಂತವನ್ನು ದಿಟ್ಟಿಸುವಂತಿರುವ ಈ ಬಾಪೂ ಪ್ರತಿಮೆಯು...

ಗಾಂಧಿಯ ಆರ್ಥಿಕ ಸಾಮಾಜಿಕ ಸಂಕೇತಗಳು: ಉಪ್ಪು, ಖಾದಿ, ಚರಕ...

ಗ್ರಾಮೀಣ ಭಾರತದ ಆರ್ಥಿಕತೆ ಮನಗಂಡಿದ್ದ ಗಾಂಧಿ ಹಾಲಿನ ಬಗೆಗಿನ ಕಠೋರ ನಿಲುವನ್ನು ನಿರಾಕರಿಸಿ ತನ್ನನ್ನು ತಾನು ಮೇಕೆಯ ಮಮಕಾರದ ಹಾಲಿಗೆ ಕೊಟ್ಟುಕೊಂಡಿದ್ದರು. ಈಗಿನ ಪಶುಪಾಲಕ ಸಮುದಾಯಗಳ ಸಾವಯವ ಬದುಕಿನ ರೀತಿ ನೀತಿ ಗಮನಿಸಿ......

ದಕ್ಷಿಣ ಆಫ್ರಿಕಾದಲ್ಲಿ ಗಾಂಧಿ ಮೊಳಗಿಸಿದ್ದ ಮತ ಹಕ್ಕಿನ ಕೂಗಿಗೆ...

ಮತದಾನ ಕೇವಲ ಹಕ್ಕಲ್ಲ, ಅದು ಪ್ರಜೆಯೊಬ್ಬನ ಘನತೆ ಹಾಗೂ ಅಸ್ತಿತ್ವದ ಸಂಕೇತ. 131 ವರ್ಷಗಳ ಹಿಂದೆ ದಕ್ಷಿಣ ಆಫ್ರಿಕಾದಲ್ಲಿ ಇದೇ ಮತಾಧಿಕಾರಕ್ಕಾಗಿ ಗಾಂಧೀಜಿ ಬ್ರಿಟಿಷರ ವಿರುದ್ಧ ಸಿಡಿದೆದ್ದಿದ್ದರು. ಆದರೆ, ಇಂದು ಸ್ವತಂತ್ರ ಭಾರತದಲ್ಲಿ...

“ಪ್ರಸ್ತುತ ಸಣ್ಣ ಪಟ್ಟಣಗಳಲ್ಲಿ ಕೌಶಲರಹಿತ ಕೃಷಿಯೇತರ ಕೆಲಸಗಳಿಗೆ ದಿನವೊಂದಕ್ಕೆ ಕನಿಷ್ಠ 477 ರೂ.ಗಳನ್ನು ಕನಿಷ್ಠ ವೇತನದ ಮಾನದಂಡವಾಗಿ ನಿಗದಿಪಡಿಸಲಾಗಿದೆ. ಆದರೆ, ವಾಸ್ತವದಲ್ಲಿ ಅಸಂಘಟಿತ ಉತ್ಪಾದನಾ ವಲಯದ ಕಾರ್ಮಿಕರ ಸರಾಸರಿ ದೈನಂದಿನ ಗಳಿಕೆ ಕೇವಲ 391 ರೂ.ಗಳಾಗಿದೆ. ಅದೇ ರೀತಿ, ವ್ಯಾಪಾರ ವಲಯದಲ್ಲಿ ದುಡಿಯುವವರ ದೈನಂದಿನ ಗಳಿಕೆ 401 ರೂ. ಆಗಿದ್ದರೆ, ಇತರ ಸೇವಾ ವಲಯಗಳಲ್ಲಿ ದುಡಿಯುತ್ತಿರುವವರ ದಿನದ ಗಳಿಕೆ 420 ರೂ.ಗಳಷ್ಟೇ ಇದೆ. ಈ ಎಲ್ಲ ವಲಯಗಳ ದೈನಂದಿನ ಗಳಿಕೆಯ ಅಂಕಿ-ಅಂಶಗಳು ಸರ್ಕಾರದ ಕನಿಷ್ಠ ವೇತನದ ಮಾನದಂಡಕ್ಕಿಂತ (477 ರೂ.) ತೀರಾ ಕೆಳಗಿರುವುದು ದೇಶದ ಆರ್ಥಿಕತೆಯ ವಿಷಾದನೀಯ ಸಂಗತಿಯಾಗಿದೆ” ಎಂದು ವರದಿ ವಿಷಾಧಿಸಿದೆ.

ಮತ್ತೊಂದೆಡೆ, ದೇಶದಲ್ಲಿ ಸಣ್ಣ ಅಸಂಘಟಿತ ಸಂಸ್ಥೆಗಳು ಅಥವಾ ಉದ್ಯಮಗಳ ಸಂಖ್ಯೆ 2022ರಲ್ಲಿ 5.97 ಕೋಟಿ ಇತ್ತು. 2025ರ ವೇಳೆಗೆ 7.92 ಕೋಟಿಗೆ ಗಮನಾರ್ಹವಾಗಿ ಹೆಚ್ಚಳ ಕಂಡಿದೆ. ಆದರೆ, ಈ ಒಟ್ಟು ಸಂಸ್ಥೆಗಳ ಪೈಕಿ ಬರೋಬ್ಬರಿ 86%ರಷ್ಟು ಉದ್ಯಮಗಳು ‘ಸ್ವಂತ ಖಾತೆಯ ಉದ್ಯಮಗಳು’ ಆಗಿವೆ. ಅಂದರೆ, ಇವುಗಳು ಯಾವುದೇ ನಿಯಮಿತ ಸಂಬಳದ ಕಾರ್ಮಿಕರನ್ನು ನೇಮಿಸಿಕೊಳ್ಳದೆ, ಕೇವಲ ಸ್ವಯಂ ಉದ್ಯೋಗಿ ವ್ಯಕ್ತಿಗಳಿಂದ ಅಥವಾ ಅವರ ಕುಟುಂಬದ ಸದಸ್ಯರಿಂದಲೇ ನಡೆಸಲ್ಪಡುವ ಅತ್ಯಂತ ಸಣ್ಣ ಮಟ್ಟದ ವ್ಯವಹಾರಗಳಾಗಿವೆ. ಈ ಉದ್ಯಮಗಳ ಆದಾಯದ ಮಟ್ಟ ತೀರಾ ಮಿತಿಯಾಗಿರುವುದರಿಂದ, ಅಲ್ಲಿ ದುಡಿಯುವ ಕುಟುಂಬದ ಸದಸ್ಯರ ಅಥವಾ ಆಶ್ರಿತರ ದೈನಂದಿನ ಆರ್ಥಿಕ ಗಳಿಕೆಯೂ ಕನಿಷ್ಠ ವೇತನದ ಮಾನದಂಡವನ್ನು ದಾಟುತ್ತಿಲ್ಲ ಎಂದು ವರದಿ ಗಮನಿಸಿದೆ.

ಈ ಲೇಖನ ಓದಿದ್ದೀರಾ?: ಕನ್ನಡಿಗರೇ ಎಚ್ಚರ: ಎಸ್‌ಐಆರ್‌ – ಮತಪಟ್ಟಿ ಪರಿಶೀಲನೆಯಲ್ಲ, ಪೌರತ್ವ ಪರೀಕ್ಷೆ!

ಈ ಹಿಂದೆ, 2021 ಮತ್ತು 2022ರಲ್ಲಿಯೂ ಇಂತಹದ್ದೇ ಸಮೀಕ್ಷೆಗಳು ನಡೆದಿದ್ದವು. ಆಗ, ಭಾರತದ 6.5 ಕೋಟಿ ಅಸಂಘಟಿತ ವಲಯದ ಉದ್ಯಮಗಳು ಒಟ್ಟು 11 ಕೋಟಿಗೂ ಅಧಿಕ ಕಾರ್ಮಿಕರಿಗೆ ಉದ್ಯೋಗ ನೀಡಿದ್ದವು. ಈ ಎಲ್ಲ ಉದ್ಯಮಗಳು ಒಟ್ಟಾಗಿ ದೇಶದ ಒಟ್ಟು ಮೌಲ್ಯವರ್ಧನೆಗೆ (GVA) ಸುಮಾರು 15.4 ಲಕ್ಷ ಕೋಟಿ ರೂಪಾಯಿಗಳ ಕೊಡುಗೆ ನೀಡಿದ್ದವು. ಕೃಷಿಯೇತರ ಅಸಂಘಟಿತ ವಲಯದ ಜಿವಿಎ ಮತ್ತು ಉದ್ಯೋಗದ ಒಟ್ಟು ಪಾಲು ಕ್ರಮವಾಗಿ 6% ಮತ್ತು 19%ರಷ್ಟಿತ್ತು. ಮತ್ತೊಂದೆಡೆ, ದೇಶದ ಒಟ್ಟು ಆದಾಯದಲ್ಲಿ ಕೃಷಿ ವಲಯವು 45%ರಷ್ಟು ಉದ್ಯೋಗ ಮತ್ತು 18%ರಷ್ಟು ಆದಾಯದ ಪಾಲನ್ನು ಹೊಂದಿದೆ. ಇವೆರಡನ್ನೂ ಒಟ್ಟಿಗೆ ಸೇರಿಸಿ ವಿಶ್ಲೇಷಿಸಿದಾಗ, ಭಾರತದ ಒಟ್ಟು ಕಾರ್ಮಿಕ ವರ್ಗದ ಮೂರನೇ ಎರಡರಷ್ಟು ದೊಡ್ಡ ಶ್ರಮಿಕ ಸಮೂಹವು ದೇಶದ ಒಟ್ಟು ಜಿವಿಎ ಮೌಲ್ಯದ ಕೇವಲ ನಾಲ್ಕನೇ ಒಂದು ಭಾಗದಷ್ಟು ಆದಾಯವನ್ನು ಮಾತ್ರ ಹಂಚಿಕೊಳ್ಳುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ.

ಈ ಆಘಾತಕಾರಿ ಅಂಕಿ-ಅಂಶಗಳು ಪ್ರಸ್ತುತ ಭಾರತೀಯ ಆರ್ಥಿಕತೆಯಲ್ಲಿ ಆಳವಾಗಿ ಬೇರೂರಿರುವ ಆರ್ಥಿಕ ಅಸಮಾನತೆ ಹಾಗೂ ಸಂಪತ್ತಿನ ಅಸಮರ್ಪಕ ಹಂಚಿಕೆಯನ್ನು ಸ್ಪಷ್ಟವಾಗಿ ಸಾಬೀತುಪಡಿಸುತ್ತವೆ ಎಂದು ವರದಿ ಸುದೀರ್ಘವಾಗಿ ವಿವರಿಸಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪಾಕಿಸ್ತಾನದಲ್ಲಿ ಅಹಿಂಸಾ ಮೂರ್ತಿಯ ‘ರಹಸ್ಯರಕ್ಷಣೆ’: ಕರಾಚಿಯಿಂದ ಇಸ್ಲಾಮಾಬಾದ್‌ಗೆ ಗಾಂಧಿ ಪ್ರತಿಮೆ ತಲುಪಿದ ರೋಚಕ ಇತಿಹಾಸ!

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಪ್ರವೇಶ ದ್ವಾರದಲ್ಲಿ ಮಹಾತ್ಮ ಗಾಂಧೀಜಿಯವರ...

ಅ.4ರಿಂದ ವಿಜಯಪುರ – ತಿರುಪತಿ ದಸರಾ ಎಕ್ಸ್‌ಪ್ರೆಸ್ ರೈಲು ಸೇವೆ ಆರಂಭ

ದಸರಾ ಹಬ್ಬದ ಹಿನ್ನೆಲೆಯಲ್ಲಿ ತಿರುಪತಿ–ವಿಜಯಪುರ ನಡುವೆ ಪ್ರಯಾಣಿಕರ ಅನುಕೂಲಕ್ಕಾಗಿ ಸಾಪ್ತಾಹಿಕ ವಿಶೇಷ...

ತಮಿಳುನಾಡು | ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ವಿಸ್ತರಣೆ: ಬಸ್ ಕಂಡಕ್ಟರ್ ಆಗಿ ಟಿಕೆಟ್ ನೀಡಿದ ಸಿಎಂ ವಿಜಯ್

ತಮಿಳುನಾಡು ಸರ್ಕಾರವು ಮಹಿಳೆಯರಿಗಾಗಿ ಜಾರಿಗೆ ತಂದಿರುವ ಉಚಿತ ಬಸ್ ಪ್ರಯಾಣ ಯೋಜನೆಯನ್ನು...