ʼನನ್ನ ಮತʼ ಅಂಕಣದಲ್ಲಿ ಚುನಾವಣೆ ಮುಗಿಯುವವರೆಗೂ ವಿವಿಧ ಕ್ಷೇತ್ರಗಳ ಪ್ರಮುಖ ವ್ಯಕ್ತಿಗಳ ಅಭಿಪ್ರಾಯ ಪ್ರಕಟವಾಗಲಿದೆ. ಇಲ್ಲಿದೆ ಹಿರಿಯ ಸಾಹಿತಿ, ಚಿಂತಕ ಡಾ ಜೆ ಎಸ್ ಪಾಟೀಲ ಅವರ ಮಾತುಗಳು
ಮತ ಚಲಾವಣೆ ಎಷ್ಟು ಮುಖ್ಯ?
ದೇಶದ ಪ್ರತಿಯೊಬ್ಬರು ಮತ ಹಾಕುವುದು ಈಗ ಅತ್ಯಂತ ಅವಶ್ಯಕ. ಏಕೆಂದರೆ ದೇಶದ ಬಹುತ್ವ ಮತ್ತು ಜನತಂತ್ರಗಳಿಗೆ ಧರ್ಮಾಂಧ ಶಕ್ತಿಗಳಿಂದ ಕುತ್ತು ಎದುರಾಗಿದೆ.
ಈ ಬಾರಿಯ ಚುನಾವಣೆ ಏಕೆ ಮುಖ್ಯ?
ಜನತಂತ್ರ ವ್ಯವಸ್ಥೆ ಮತ್ತು ನಮ್ಮ ಸಂವಿಧಾನವನ್ನು ಫ್ಯಾಸಿಸ್ಟ್ ಗಿಡುಗಗಳಿಂದ ರಕ್ಷಿಸಲೋಸುಗ ಈ ಬಾರಿಯ ಚುನಾವಣೆ ಅತಿ ಮುಖ್ಯ.
ಬರಲಿರುವ ಸರ್ಕಾರ ಹೇಗಿರಬೇಕೆಂದು ಬಯಸುವಿರಿ?
ಫ್ಯಾಸಿಸ್ಟರನ್ನು ಸೋಲಿಸುವ ಮೂಲಕ ಮುಂದೆ ಸರ್ವರ ಏಳಿಗೆಗಾಗಿ ದುಡಿಯುವ ಸರಕಾರವನ್ನು ಆರಿಸಬೇಕಿದೆ.