UPI ಪಾವತಿಗೆ 0.4% MDR ಶುಲ್ಕ: 10ರಲ್ಲಿ 8 ಬಳಕೆದಾರರಿಂದ ತೀವ್ರ ವಿರೋಧ; ಪ್ರತಿಕ್ರಿಯಿಸಿದವರು ಹೇಳಿದ್ದೇನು?

Date:

2,000 ರೂ.ಗಿಂತ ಹೆಚ್ಚಿನ ಯುಪಿಐ ವ್ಯಾಪಾರಿ ವಹಿವಾಟುಗಳ ಮೇಲೆ ಸರ್ಕಾರ ಪ್ರಸ್ತಾಪಿಸಿರುವ 0.4%ರಷ್ಟು ‘ಮರ್ಚೆಂಟ್ ಡಿಸ್ಕೌಂಟ್ ರೇಟ್’ (MDR) ಶುಲ್ಕಕ್ಕೆ ದೇಶದ ಯುಪಿಐ ಬಳಕೆದಾರರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ‘ಲೋಕಲ್‌ಸರ್ಕಲ್ಸ್’ ಸಂಸ್ಥೆ ನಡೆಸಿರುವ ಸಮೀಕ್ಷೆಯ ಪ್ರಕಾರ, 76%ರಷ್ಟು ಬಳಕೆದಾರರು 0.4% ಶುಲ್ಕವನ್ನು ತಿರಸ್ಕರಿಸಿದ್ದಾರೆ. ಆದರೆ, ವಿಶೇಷವೆಂದರೆ ಬಹುತೇಕ ಬಳಕೆದಾರರು ವ್ಯಾಪಾರಿಗಳ ಮೇಲೆ ಶುಲ್ಕ ವಿಧಿಸುವುದನ್ನೇ ಸಂಪೂರ್ಣವಾಗಿ ವಿರೋಧಿಸದೆ, ಪರ್ಯಾಯ – ನ್ಯಾಯಸಮ್ಮತ ಶುಲ್ಕ ವ್ಯವಸ್ಥೆ ಇರಬೇಕೆಂದು ಅಭಿಪ್ರಾಯಪಟ್ಟಿದ್ದಾರೆ.

- Advertisement -

ದೇಶದ 321 ಜಿಲ್ಲೆಗಳ 19,447 ಯುಪಿಐ ಬಳಕೆದಾರರಿಂದ ಅಭಿಪ್ರಾಯ ಸಂಗ್ರಹಿಸಿ ಈ ಸಮೀಕ್ಷೆ ನಡೆಸಲಾಗಿದೆ. ಇದರಲ್ಲಿ ಕೇವಲ 12% ಮಂದಿ ಮಾತ್ರ ಅರ್ಹ ವ್ಯಾಪಾರಿಗಳಿಗೆ 0.4% ಶುಲ್ಕ ವಿಧಿಸುವುದನ್ನು ಬೆಂಬಲಿಸಿದ್ದಾರೆ. ಇನ್ನೂ 12% ಮಂದಿ ಯಾವುದೇ ಅಭಿಪ್ರಾಯವಿಲ್ಲ ಎಂದಿದ್ದಾರೆ. ಸಮೀಕ್ಷೆಯಲ್ಲಿ ಭಾಗವಹಿಸಿದವರಲ್ಲಿ ಅತಿ ಹೆಚ್ಚಿನ ಅಂದರೆ 44% ಜನರು ಎಲ್ಲ ವ್ಯಾಪಾರಿಗಳಿಗೂ ಕಡಿಮೆ ದರದ ಎಂಡಿಆರ್ ಅನ್ವಯಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಉಳಿದಂತೆ, 32%ರಷ್ಟು ಮಂದಿ ದೊಡ್ಡ ಕಾರ್ಪೊರೇಟ್ ವ್ಯಾಪಾರಿಗಳಿಗೆ 0.4%ರಷ್ಟು ಶುಲ್ಕ ವಿಧಿಸಿ, ಸಣ್ಣ ವ್ಯಾಪಾರಿಗಳಿಗೆ ವಾರ್ಷಿಕ ಚಂದಾದಾರಿಕೆ ಶುಲ್ಕ ನಿಗದಿಪಡಿಸುವುದು ಸೂಕ್ತ ಎಂದಿದ್ದಾರೆ. ಒಟ್ಟಾರೆಯಾಗಿ 88%ರಷ್ಟು ಬಳಕೆದಾರರು ಒಂದಲ್ಲ ಒಂದು ರೀತಿಯ ಶುಲ್ಕ ಪದ್ಧತಿಗೆ ಸಹಮತ ವ್ಯಕ್ತಪಡಿಸಿದ್ದರೂ, ಪ್ರಸ್ತುತ ಇರುವ ಶುಲ್ಕವನ್ನು ವಿರೋಧಿಸಿದ್ದಾರೆ. ಪರಿಷ್ಕರಿಸಬೇಕು ಎಂದು ಹೇಳುತ್ತಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಸಂಸ್ಕೃತಿ, ಉಳಿತಾಯದ ಪಾಠ ಹೇಳಿದ ಮೋದಿ: ಬೆಲೆ ಏರಿಕೆ,...

ಮಕ್ಕಳ ಶಿಕ್ಷಣ, ಮದುವೆ ಮತ್ತು ಮುಪ್ಪಿನ ಕಾಲಕ್ಕಾಗಿ ಹೊಟ್ಟೆಬಟ್ಟೆ ಕಟ್ಟಿ ಉಳಿತಾಯ ಮಾಡುವುದು ಭಾರತೀಯರ ಸಂಸ್ಕೃತಿಯಲ್ಲೇ ಬಂದಿದೆ. ಅವರಿಗೆ ಉಳಿತಾಯದ ಪಾಠ ಕಲಿಸುವ ಅಗತ್ಯವಿಲ್ಲ; ಬದಲಾಗಿ ಬಡತನದಿಂದ ಹೊರಬಂದ ಕುಟುಂಬಗಳು ಮತ್ತೆ ಸಂಕಷ್ಟಕ್ಕೆ...

ಆರ್‌ಟಿಇ ಶಿಕ್ಷಣ ಹಕ್ಕೋ, ಶಾಲೆಗಳಲ್ಲಿನ ಸಾಮಾಜಿಕ ಅಂತರಕ್ಕೆ ಕಾರಣವೋ?

ಶಿಕ್ಷಣದ ಸಮಾನ ಅವಕಾಶದ ಆಶಯಕ್ಕೆ ಸವಾಲಾಗುತ್ತಿರುವ ನಿಯಮಗಳು, ಖಾಸಗೀಕರಣ ಮತ್ತು ಸರ್ಕಾರಿ ಶಾಲೆಗಳ ದುಸ್ಥಿತಿ ಒಂದೇ ಶಾಲೆಯ ಆವರಣ, ಒಂದೇ ತರಗತಿಯ ಕೊಠಡಿ, ಒಂದೇ ಪಠ್ಯಪುಸ್ತಕ, ಒಂದೇ ಶಿಕ್ಷಕರು. ಆದರೆ ಆ ಮಕ್ಕಳ ಹಿನ್ನೆಲೆ...

ಬಿಲ್ಕಿಸ್‌ ಬಾನೋ ‘ಮುಸ್ಲಿಂ’ ಎಂಬ ಕಾರಣಕ್ಕೇ ಪದೇ-ಪದೇ ದೂರವಾಗುತ್ತಿದೆಯೇ...

ಅಪರಾಧಿಗಳ ಹಕ್ಕುಗಳ ಬಗ್ಗೆ ಮಾತನಾಡುವ ನ್ಯಾಯವ್ಯವಸ್ಥೆ, ಸಂತ್ರಸ್ತೆಯ ಬದುಕುವ ಹಕ್ಕು, ಸುರಕ್ಷತೆ ಮತ್ತು ಘನತೆಯನ್ನೂ ಅಷ್ಟೇ ಗಂಭೀರವಾಗಿ ಪರಿಗಣಿಸುತ್ತಿದೆಯೇ? ಬಿಲ್ಕಿಸ್‌ ಬಾನೋ ಪ್ರಕರಣದಲ್ಲಿ ಈ ಪ್ರಶ್ನೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಭಾರತದಲ್ಲಿ ನ್ಯಾಯದ ಮುಂದೆ...

0.4%ರಷ್ಟು ಶುಲ್ಕಕ್ಕೆ ವಿರೋಧ ಏಕೆ?

ಸರ್ಕಾರದ ಅಧಿಸೂಚಿತ ಚೌಕಟ್ಟಿನ ಪ್ರಕಾರ, 2,000 ರೂ.ಗಿಂತ ಹೆಚ್ಚಿನ ಗ್ರಾಹಕನಿಂದ ವ್ಯಾಪಾರಿಗೆ (P2M) ಮಾಡಲಾಗುವ ಪಾವತಿ ವಹಿವಾಟುಗಳ ಮೇಲೆ ಗರಿಷ್ಠ 300 ರೂ. ಮಿತಿಗೆ ಒಳಪಟ್ಟು 0.4% ಎಂಡಿಆರ್ ವಿಧಿಸಲು ಪ್ರಸ್ತಾಪಿಸಲಾಗಿದೆ. ಯುಪಿಐ ಕ್ಯೂಆರ್ (QR) ಕೋಡ್ ಮೂಲಕ ತಿಂಗಳಿಗೆ 1 ಲಕ್ಷ ರೂ.ದವರೆಗೆ ವಹಿವಾಟು ನಡೆಸುವ ಸಣ್ಣ ವ್ಯಾಪಾರಿಗಳಿಗೆ ಇದರಿಂದ ವಿನಾಯಿತಿ ನೀಡಲಾಗಿದೆ.

ಆದರೆ, ವಿವಿಧ ಗಾತ್ರದ ವ್ಯವಹಾರಗಳಿಗೆ ಒಂದೇ ರೀತಿಯ ಶೇಕಡಾವಾರು ಶುಲ್ಕ ವಿಧಿಸುವುದರ ಬಗ್ಗೆ ಬಳಕೆದಾರರು ಆತಂಕ ವ್ಯಕ್ತಪಡಿಸಿದ್ದಾರೆ. ಈ ನಿಯಮದಡಿ ತಿಂಗಳ ಮಿತಿಯನ್ನು ದಾಟುವ ಸಾಮಾನ್ಯ ಬೀದಿ ಬದಿ ಅಥವಾ ಸಣ್ಣ ಚಿಲ್ಲರೆ ವ್ಯಾಪಾರಿಗೂ ಮತ್ತು ಬೃಹತ್ ರೀಟೇಲ್ ಮಳಿಗೆಗಳಿಗೂ ಒಂದೇ ದರ ಅನ್ವಯವಾಗುತ್ತದೆ ಎಂಬುದು ಪ್ರಮುಖ ಆಕ್ಷೇಪವಾಗಿದೆ.

ಅಲ್ಲದೆ, ಆಗಸ್ಟ್ 2026ರ ಎನ್‌ಪಿಸಿಐ ದತ್ತಾಂಶದ ಪ್ರಕಾರ, 2,000 ರೂ.ಗಿಂತ ಹೆಚ್ಚಿನ ಪಾವತಿಗಳು ಒಟ್ಟು ವಹಿವಾಟುಗಳ ಸಂಖ್ಯೆಯಲ್ಲಿ ಕೇವಲ 4%ರಷ್ಟಿದ್ದರೂ, ಒಟ್ಟು ವಹಿವಾಟಿನ ಮೌಲ್ಯದಲ್ಲಿ ಸುಮಾರು 67%ರಷ್ಟು ಪಾಲನ್ನು ಹೊಂದಿವೆ. ಅಂದರೆ, ಸಣ್ಣ ಪ್ರಮಾಣದ ವಹಿವಾಟುಗಳ ಮೇಲೆಯೇ ಹೆಚ್ಚಿನ ಶುಲ್ಕದ ಹೊರೆ ಬೀಳಲಿದೆ ಎಂದು ಸಮೀಕ್ಷೆ ಬೊಟ್ಟು ಮಾಡಿದೆ.

ಈ ಎಂಡಿಆರ್ ವ್ಯವಸ್ಥೆಯು ಮೂಲತಃ ಅಕ್ಟೋಬರ್ 15ರಿಂದ ಜಾರಿಗೆ ಬರಬೇಕಿತ್ತಾದರೂ, ಅನುಷ್ಠಾನಕ್ಕೆ ಸ್ವಲ್ಪ ಮುಂಚಿತವಾಗಿ ತಡೆಹಿಡಿಯಲಾಗಿತ್ತು. ವ್ಯಾಪಾರಿಗಳ ತೀವ್ರ ವಿರೋಧದಿಂದಾಗಿ ಇದರ ಜಾರಿ ಮತ್ತಷ್ಟು ವಿಳಂಬವಾಗುವ ಸಾಧ್ಯತೆಯಿದೆ. ಕೇಂದ್ರ ಸರ್ಕಾರವು ಪರಿಷ್ಕೃತ ದಿನಾಂಕವನ್ನು ಇನ್ನೂ ಅಧಿಕೃತವಾಗಿ ಪ್ರಕಟಿಸಿಲ್ಲ.

ಲೋಕಲ್‌ಸರ್ಕಲ್ಸ್‌ನ ಹಿಂದಿನ ಸಮೀಕ್ಷೆಯೊಂದರಲ್ಲಿ ಕೇವಲ 17%ರಷ್ಟು ವ್ಯಾಪಾರಿಗಳು ಮಾತ್ರ 0.4%ರಷ್ಟು ಶುಲ್ಕವನ್ನು ಭರಿಸಲು ಸಿದ್ಧರಿರುವುದಾಗಿ ಹೇಳಿದ್ದರು. ಮತ್ತೊಂದೆಡೆ, ವ್ಯಾಪಾರಿಗಳು ಈ ಶುಲ್ಕದ ಹೊರೆಯನ್ನು ಗ್ರಾಹಕರ ಮೇಲೆ ವರ್ಗಾಯಿಸಿದರೆ, ತಾವು ಯುಪಿಐ ಬಳಸುವುದನ್ನು ಮುಂದುವರಿಸುವುದಾಗಿ ಕೇವಲ 14%ರಷ್ಟು ಬಳಕೆದಾರರು ಮಾತ್ರ ತಿಳಿಸಿದ್ದರು.

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

SIR ಅಂತಿಮ ಮತಪಟ್ಟಿ ತಿರಸ್ಕರಿಸಿ, ಸಾಮಾಜಿಕ ಪರಿಶೋಧನೆ ನಡೆಸಿ: ರಾಜ್ಯ ಸರ್ಕಾರಕ್ಕೆ SIR ವಿರೋಧಿ ಒಕ್ಕೂಟ ಆಗ್ರಹ

ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಎಸ್‌ಐಆರ್‌ ಮತಪಟ್ಟಿಯನ್ನು ಬಳಸಬಾರದು. ಸ್ವತಂತ್ರ ಸಾಮಾಜಿಕ ಪರಿಶೋಧನೆ...

ಶಿವಮೊಗ್ಗ | ಬೆಳೆ ವಿಮಾ ಪರಿಹಾರದಲ್ಲಿ ತಾರತಮ್ಯ : ರೈತರ ಪ್ರತಿಭಟನೆ

ಹವಾಮಾನ ಆಧಾರಿತ ಬೆಳೆ ವಿಮೆ ಪರಿಹಾರ ಹಂಚಿಕೆಯಲ್ಲಿ ಲೋಪವಾಗಿದೆ ಎಂದು ಆರೋಪಿಸಿ...

ಕರ್ನಾಟಕ SIR | SSRಅನ್ನು SIR ವಿರೋಧಿ ಒಕ್ಕೂಟ ಒಕ್ಕೊರಲಿನಿಂದ ತಿರಸ್ಕರಿಸುತ್ತದೆ: ನೂರ್‌ ಶ್ರೀಧರ್

ಏಳು ರಾಜ್ಯಗಳಲ್ಲಿ ಮತದಾರರ ಮರುಸೇರ್ಪಡೆಗೆ ಹೊಸ ಅವಕಾಶ ನೀಡಿರುವ ಚುನಾವಣಾ ಆಯೋಗ,...

ಸಗಣಿ ರಾಶಿಯೊಳಗೆ 20 ಲಕ್ಷ ರೂ. ಹಣ ಪತ್ತೆ

ಹಣ ಕಳವು ಮಾಡಿದ್ದ ಪ್ರಕರಣದಲ್ಲಿ ಪೊಲೀಸರು ಆರೋಪಿಯ ಗ್ರಾಮದ ಮೇಲೆ ದಾಳಿ...