ಮಲೆನಾಡಿನಲ್ಲಿ ಕಾಡುಪ್ರಾಣಿಗಳ ದಾಳಿಯನ್ನು ತಡೆಗಟ್ಟಲು ಶಾಶ್ವತ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿ ನರಸಿಂಹರಾಜಪುರ ತಾಲೂಕಿನ 8ನೇ ಮೈಲಿಕಲ್ಲು, ಹೆನ್ನಂಗಿ ರಸ್ತೆ ಬಳಿ ನರಸಿಂಹರಾಜಪುರ–ಚಿಕ್ಕಮಗಳೂರು ಹೆದ್ದಾರಿಯನ್ನು ತಡೆದು ಶೃಂಗೇರಿ ಕ್ಷೇತ್ರ ರೈತ ಒಕ್ಕೂಟ ಪ್ರತಿಭಟನೆ ನಡೆಸಲಾಯಿತು.
ಮಲೆನಾಡಿಲ್ಲಿ ನಿರಂತರ ಕಾಡಾನೆ ದಾಳಿಗೆ, ಮಹಿಳೆ, ಕಾರ್ಮಿಕ, ರೈತ, ವಯಸ್ಸಾದ ವೃದ್ಧರು ಸಾವನಪ್ಪಿದ್ದಾರೆ. ಬರಿ ಪರಿಹಾರ ಬಿಟ್ಟರೇ ಶಾಶ್ವತ ಪರಿಹಾರ ಮಾತ್ರ ಕೊಡಲಿಲ್ಲ ಎಂದು ಪ್ರತಿಭಟನಕಾರಾರು ಪ್ರತಿಭಟಿಸಿದ್ದಾರೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಕಾಡಾನೆ ದಾಳಿ ರೈತ ಸಾವು: ಸಾರ್ವಜನಿಕರು ಸರ್ಕಾರ ವಿರುದ್ಧ ಆಕ್ರೋಶ
ನಮ್ಮ ಬೇಡಿಕೆ ಈಡೇರುವ ವರೆಗೂ ಪ್ರತಿಭಟನೆ ಮುಂದುವರೆಯಲಿದೆ ಎಂದು ಪ್ರತಿಭಟನಕಾರರು ಆಕ್ರೋಶ ಹೊರ ಹಾಕಿದ್ದಾರೆ.



