10 ತಿಂಗಳ ಮಗುವಿನ ಅಂಗಾಂಗ ದಾನ : ಸರ್ಕಾರಿ ಗೌರವ ಪಡೆದ ʼಅಲಿನ್‌ ಶೆರಿನ್‌ʼ ಕೇರಳದ ಅತಿ ಕಿರಿಯ ದಾನಿ

Date:

ಸಾಮಾನ್ಯವಾಗಿ ನಾವು ಸತ್ತ ಮೇಲೆ ನಮ್ಮ ಅಂಗಾಂಗಗಳನ್ನು ದಾನ ಮಾಡಬೇಕು ಎಂದು ʼವಿಲ್‌ʼ ಬರೆದಿಟ್ಟಿರುತ್ತೇವೆ. ಅದರಂತೆ ಅವರು ಇಹಲೋಕ ತ್ಯಜಿಸಿದ ಮೇಲೆ ಅಂಗಾಗ ದಾನ ಮಾಡಿರುವುದನ್ನು, ವೈದ್ಯಕೀಯ ವಿದ್ಯಾರ್ಥಿಗಳ ಕಲಿಕೆಗಾಗಿ ದೇಹ ದಾನ ನೀಡಿರುವ ಅನೇಕ ಉದಾಹರಣೆಗಳು ನಮ್ಮ ಮುಂದಿವೆ.

- Advertisement -

ಇತ್ತೀಚೆಗೆ ಕೇರಳದಲ್ಲಿ ಹತ್ತು ತಿಂಗಳ ಮಗುವಿನ ಅಂಗಾಂಗ ದಾನ ದೊಡ್ಡ ಸುದ್ದಿಯಾಗಿದೆ. ಫೆಬ್ರವರಿ 5ರಂದು ಮ‍ಧ್ಯಾಹ್ನ 2:30ರ ಸುಮಾರಿಗೆ ಕೇರಳದ ಪತ್ತನಂತಿಟ್ಟ ಜಿಲ್ಲೆಯ ಎಂಸಿ ರಸ್ತೆಯ ಪಲ್ಲಂ-ಬೋರ್ಮಾ ಜಂಕ್ಷನ್‌ ಬಳಿ ವಾಹನವೊಂದು ಅಪಘಾತಕ್ಕೆ ಈಡಾಗುತ್ತದೆ. ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ವಾಹನಕ್ಕೆ ಕಾರು ಡಿಕ್ಕಿ ಹೊಡೆಯುತ್ತದೆ. ಅಪಘಾತವಾದ ಕಾರಿನಲ್ಲಿ ತಾಯಿ, ಅಜ್ಜ-ಅಜ್ಜಿ ಜೊತೆ ಹತ್ತು ತಿಂಗಳ ಕಂದಮ್ಮ ಅಲಿನ್‌ ಶೆರಿನ್‌ ಅಬ್ರಹಾಂ ಪ್ರಯಾಣಿಸುತ್ತಿದ್ದಳು. ಅಪಘಾತದಲ್ಲಿ ಎಲ್ಲರಿಗೂ ತೀವ್ರವಾದ ಗಾಯವಾದರೆ, ಮಗು ಗಂಭೀರ ಸ್ಥಿತಿಗೆ ತಲುಪಿತ್ತು. ತಕ್ಷಣವೇ ಕೊಚ್ಚಿಯಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಂಭೀರ ಸ್ಥಿತಿಯಲ್ಲಿದ್ದ ಮಗುವಿನ ಮಿದುಳು ಸಂಪೂರ್ಣ ನಿಷ್ಕ್ರಿಯಗೊಂಡಿದೆ. ಫೆ.13ರಂದು ವೈದ್ಯರ ಸಲಹೆಯ ಮೇರೆಗೆ ಮಗುವಿನ ಹೆತ್ತವರು ಅಂಗಾಂಗ ದಾನದ ನಿರ್ಧಾರ ಮಾಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಸ್ವತಂತ್ರ ಸಾಂವಿಧಾನಿಕ ಸಂಸ್ಥೆಗಳ ಮೇಲಿನ ನಂಬಿಕೆಯನ್ನು ಕಸಿದುಕೊಳ್ಳುತ್ತಿರುವ ಚುನಾವಣಾ...

ನ್ಯಾಯಾಲಯ ಮತ್ತು ಚುನಾವಣಾ ಆಯೋಗಗಳ 'ಸ್ವತಂತ್ರತೆ' ಎಂಬ ಮುಖವಾಡವೇ ಈಗ ಸರ್ಕಾರಕ್ಕೆ ರಕ್ಷಣಾ ಕವಚವಾಗಿ ಕೆಲಸ ಮಾಡುತ್ತಿದೆ. ಹೀಗಾಗಿ ಇವತ್ತು ವಿರೋಧ ಪಕ್ಷಗಳ ಆಕ್ರೋಶವೆಲ್ಲವೂ ಸಾಂವಿಧಾನಿಕ ಸಂಸ್ಥೆಗಳ ಕಡೆಗೆ ತಿರುಗಿದೆ. ಸರ್ಕಾರ ತೀರಾ...

ಹೌದು, ಕೇರಳದಲ್ಲಿ ಬ್ರೈನ್‌ ಡೆಡ್‌ ಆಗಿ ಮೃತಪಟ್ಟ ಮಗು ಅಲಿನ್‌ ಶೆರಿನ್‌ನ ದೇಹದ ಅಂಗಾಂಗ ದಾನ ಮಾಡಲಾಗಿದೆ. ಅಲಿನ್‌ನ ಪೋಷಕರು ಕೈಗೊಂಡ ನಿರ್ಧಾರದಿಂದ ಕಿಡ್ನಿ, ಕಣ್ಣು, ಯಕೃತ್ತು ಮತ್ತು ಹೃದಯ ಕವಾಟಗಳನ್ನು ದಾನ ಮಾಡಲಾಗಿದೆ. ಆ ಕೂಡಲೇ ಅಗತ್ಯವಿರುವ ಐದು ಜನರಿಗೆ ಕಸಿ ಮಾಡಲು ನಿರ್ಧರಿಸಲಾಗಿದೆ. ಈ ಮೂಲಕ ಆಲಿನ್‌ ಶೆರಿನ್‌ ಅಬ್ರಹಾಂ ಎಂಬ ಪುಟ್ಟ ಮಗು ಕೇರಳದ ಅತ್ಯಂತ ಕಿರಿಯ ಅಂಗಾಂಗ ದಾನಿಯಾಗಿದ್ದಾಳೆ.

ಅಂಗಾಂಗ ದಾನವಾದ ನಂತರ ಮಗುವಿನ ಅಂತ್ಯಕ್ರಿಯೆಯನ್ನು ಫೆ.15ರಂದು ನೆರವೇರಿಸಲಾಗಿದೆ. ಪತ್ತನಂತಿಟ್ಟ ಜಿಲ್ಲೆಯ ಮಲ್ಲಪಳ್ಳಿಯಲ್ಲಿ ಮಗು ಆಲಿನ್‌ ಶೆರಿನ್‌ ಅಬ್ರಹಾಂ ಅಂತ್ಯಸಂಸ್ಕಾರವನ್ನು ರಾಜ್ಯ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಗಿದೆ. ಈ ವೇಳೆ ರಾಜ್ಯದ ವಿವಿಧೆಡೆಯಿಂದ ಅನೇಕ ಗಣ್ಯರು, ಮಂತ್ರಿಗಳು, ಕೇಂದ್ರ ಸರ್ಕಾರದ ಪ್ರತಿನಿಧಿಯಾಗಿ ಸಚಿವ ಸುರೇಶ್‌ ಗೋಪಿ, ರಾಜ್ಯ ಸರ್ಕಾರ ಪರವಾಗಿ ಸಚಿವೆ ವೀಣಾ ಜಾರ್ಜ್‌, ಇವರೊಂದಿಗೆ ಸಚಿವರಾದ ವಿ.ಎನ್‌.ವಾಸವನ್‌, ಸಾಜಿ ಚೆರಿಯನ್‌, ರೋಶಿ ಆಗಸ್ಟೀನ್‌, ಕಾಂಗ್ರೆಸ್‌ ನಾಯಕರಾದ ಪಿ.ಎಸ್‌.ವಿಷ್ಣುದಾದ ಸೇರಿದಂತೆ ಅನೇಕ ಶಾಸಕರು ಭಾಗಿಯಾಗಿದ್ದರು.

ಜೊತೆಗೆ, ಆಲಿನ್‌ ಶೆರಿನ್‌ ಅಂಗಾಂಗ ದಾನ ಪಡೆದಿದ್ದ ಮಕ್ಕಳ ಪೈಕಿ ಒಂದು ಮಗುವಿನ ಕುಟುಂಬಸ್ಥರು ಸಹ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು.

ಪೋಷಕರ ಒಪ್ಪಿಗೆಯ ಮೇರೆಗೆ, ಅಂಗಾಂಗ ದಾನ ಪ್ರಕ್ರಿಯೆಯನ್ನು ಕೇರಳ ರಾಜ್ಯದ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆ (ಕೆ-ಸೊಟ್ಟೊ) ಮೂಲಕ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಗು ದಾನ ಮಾಡಿದ ಹೃದಯ ಕವಾಟಗಳನ್ನು ತಿರುವನಂತಪುರದ ಶ್ರೀ ಚಿತ್ರ ತಿರುನಾಳ್‌ ವೈದ್ಯಕೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಗೆ, ಯಕೃತ್ತನ್ನು ತಿರುವನಂತಪುರದ ಕಿಮ್ಸ್‌ ಆಸ್ಪತ್ರೆಗೆ ಮತ್ತು ಮೂತ್ರಪಿಂಡಗಳನ್ನು ತಿರುವನಂತಪುರಂ ಸರ್ಕಾರಿ ವೈದ್ಯಕೀಯ ಕಾಲೇಜಿಗೆ, ಕಣ್ಣುಗಳನ್ನು ಐ ಬ್ಯಾಂಕ್‌ಗೆ ದಾನ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಸರಿಯಾಗಿ ಅಂಬೆಗಾಲು ಇಡದ ಹತ್ತು ತಿಂಗಳ ಕಂದಮ್ಮನ ಸಾವಿಗೆ ಎಲ್ಲರೂ ಸಂತಾಪ ವ್ಯಕ್ತಪಡಿಸಿದ್ದಾರೆ. ಕೇರಳ ಮುಖ್ಯಮಂತ್ರಿ ಪಿಣಾರಾಯಿ ವಿಜಯನ್‌ ಅವರು ʼಎಕ್ಸ್‌ʼನಲ್ಲಿ ಪೋಸ್ಟ್‌ ಮಾಡಿ “ಕೊಟ್ಟಾಯಂನಲ್ಲಿ ನಡೆದ ರಸ್ತೆ ಅಪಘಾತದಲ್ಲಿ 10 ತಿಂಗಳ ಮಗು ಆಲಿನ್ ಶೆರಿನ್ ಅಬ್ರಹಾಂ ನಿಧನ ನಮ್ಮೆಲ್ಲರನ್ನೂ ತೀವ್ರ ದುಃಖಿತರನ್ನಾಗಿ ಮಾಡಿದೆ. ಊಹಿಸಲಾಗದ ನೋವಿನ ನಡುವೆಯೂ, ಆಕೆಯ ಪೋಷಕರಾದ ಅರುಣ್ ಅಬ್ರಹಾಂ ಮತ್ತು ಶೆರಿನ್ ಆನ್ ಜಾನ್ ಆಕೆಯ ಅಂಗಾಂಗಗಳನ್ನು ದಾನ ಮಾಡಲು ನಿರ್ಧರಿಸಿದರು. ಕೇರಳದ ಅತ್ಯಂತ ಕಿರಿಯ ಅಂಗಾಂಗ ದಾನಿಯಾಗುವ ಮೂಲಕ, ಪುಟ್ಟ ಕಂದ ಆಲಿನ್ ಇತರ ಐದು ಜನರಿಗೆ ಹೊಸ ಜೀವ ನೀಡಿದ್ದಾರೆ, ಇದು ಕೇರಳದ ನಿಜವಾದ ಚೈತನ್ಯವನ್ನು ಪ್ರತಿಬಿಂಬಿಸುವ ಕರುಣೆಯ ಒಂದು ಸ್ಮಾರಕ ಕಾರ್ಯವಾಗಿದೆ” ಎಂದು ಹೇಳಿದ್ದಾರೆ.

“ಮಗುವಿನ ಕುಟುಂಬಕ್ಕೆ ನನ್ನ ತೀವ್ರ ಸಂತಾಪಗಳು. ಕಸಿ ಶಸ್ತ್ರಚಿಕಿತ್ಸೆಯನ್ನು ಸಾಧ್ಯವಾಗಿಸಿದ ಸಮರ್ಪಿತ ವೈದ್ಯರು, ಪೊಲೀಸರಿಗೆ ನಾನು ವಂದಿಸುತ್ತೇನೆ. ಅಧಿಕೃತ ಗೌರವಗಳೊಂದಿಗೆ ಆಲಿನ್ ಶೆರಿನ್ ಅಬ್ರಹಾಂ ಅವರಿಗೆ ನಾವು ವಿದಾಯ ಹೇಳುತ್ತೇವೆ” ಎಂದು ಭಾವನಾತ್ಮಕವಾಗಿ ಸಂತಾಪ ಸೂಚಿಸಿದ್ದಾರೆ.

ಕೆ-ಸೊಟ್ಟೊ : ಮೃತ ಮತ್ತು ಜೀವಂತ ದಾನಿ ಕಾರ್ಯಕ್ರಮಗಳಿಗೆ ಇರುವ ಏಕೈಕ ಪ್ರಾಧಿಕಾರವೇ ಕೇರಳ ರಾಜ್ಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆ(ಕೆ-ಸೊಟ್ಟೊ). ಇದು ಸರ್ಕಾರಿ ಸಂಸ್ಥೆಯಾಗಿದ್ದು, ಎಲ್ಲಾ ಸಾರ್ವಜನಿಕ ಕಸಿ ಕೇಂದ್ರಗಳನ್ನು ಇದರಡಿ ತಂದು ಸಮನ್ವಯ ಮತ್ತು ಪಾರದರ್ಶಕತೆ ಹೆಚ್ಚಿಸುವ ಗುರಿ ಹೊಂದಿದೆ. ಈಗಾಗಲೇ ಲಕ್ಷಾಂತರ ಅಂಗಾಂಗ ದಾನ ಕ್ರಮಗಳನ್ನು ಈ ಸಂಸ್ಥೆ ಮೂಲಕ ನಡೆಸಲಾಗಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಾಲಾ ಸಮಸ್ಯೆಗಳ ಕುರಿತು ಗ್ರಾಮ ಸಭೆಯಲ್ಲಿ ಧ್ವನಿ ಎತ್ತಿದ ವಿದ್ಯಾರ್ಥಿಗಳು; ಅಧಿಕಾರಿಗಳ ಮೆಚ್ಚುಗೆ-ಭರವಸೆ

ಸರ್ಕಾರಿ ಶಾಲಾ ವಿದ್ಯಾರ್ಥಿಗಳು ‘ವಿಶೇಷ ಗ್ರಾಮ ಸಭೆ’ಗಳಲ್ಲಿ ಪಾಲ್ಗೊಂಡು, ಪಂಚಾಯತ್ ಪ್ರತಿನಿಧಿಗಳು...

ಉತ್ತರಾಖಂಡ SIR ಅಂತಿಮ ಮತದಾರರ ಪಟ್ಟಿ ಪ್ರಕಟ: ಆದರೆ ಮುಗಿದಿಲ್ಲ ನೋಂದಣಿ ಪ್ರಕ್ರಿಯೆ

ಉತ್ತರಾಖಂಡ ರಾಜ್ಯದಲ್ಲಿ ನಡೆದ 'ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ' (ಎಸ್‌ಐಆರ್)...

ವಾಹನ ದಟ್ಟಣೆಯ ಸುಳಿಯಲ್ಲಿ ಮನಾಲಿ; ಪ್ರವಾಸೋದ್ಯಮದ ಒತ್ತಡಕ್ಕೆ ನಲುಗುತ್ತಿವೆಯೇ ಬೆಟ್ಟಗಳು?

ಮುಂಗಾರು ಮಳೆ ಕಡಿಮೆಯಾಗುತ್ತಿದ್ದಂತೆ ಹಿಮಾಚಲ ಪ್ರದೇಶದ ಪ್ರವಾಸಿ ತಾಣಗಳಿಗೆ ಪ್ರವಾಸಿಗರ ಆಗಮನ...