ಅಕಟಕಟಾ! ಶೇ.97 ಮತ್ತು ಶೇ.92ರಷ್ಟು ಮೀಸಲಾತಿ!; ಮೀಸಲಾತಿ ವಿರೋಧಿಗಳಿಗೆ ಇಲ್ಲೊಂದು ಅಪೂರ್ವ ಅವಕಾಶ!

Date:

ದೇಶದ ಮಹಾನಗರಗಳು, ನಗರಗಳು ದೊಡ್ಡ ಪಟ್ಟಣಗಳ ಚರಂಡಿಗಳು ಮತ್ತು ಮಲದ ಗುಂಡಿಗಳನ್ನು ಸ್ವಚ್ಛ ಮಾಡುವ ಶೇ.92ರಷ್ಟು ಸಿಬ್ಬಂದಿ ಪರಿಶಿಷ್ಟ ಜಾತಿ-ಪಂಗಡ ಹಾಗೂ ಹಿಂದುಳಿದ ಜಾತಿಗಳಿಗೆ ಸೇರಿದವರಾಗಿದ್ದಾರೆ ಈ ‘ಮೀಸಲಾತಿ’ಯನ್ನು ಉಗ್ರವಾಗಿ ಪ್ರತಿಭಟಿಸುವ ಅಪೂರ್ವ ಅವಕಾಶವೊಂದು ಮೀಸಲಾತಿ ವಿರೋಧಿಗಳಿಗೆ ಒದಗಿ ಬಂದಿದೆ.

- Advertisement -

ಕೇವಲ ಮಲವನ್ನು ಬಳಿಯುವ ಮತ್ತು ಮಲದ ಗುಂಡಿಗೆ ಇಳಿಯುವ 43,797 ಸಿಬ್ಬಂದಿಯ ಪೈಕಿ ಶೇ.97.2ರಷ್ಟು ಮಂದಿ ಪರಿಶಿಷ್ಟ ಜಾತಿಗಳಿಗೆ ಸೇರಿದವರು. ಉಳಿದಂತೆ ಪರಿಶಿಷ್ಟ ಪಂಗಡಗಳು, ಹಿಂದುಳಿದ ವರ್ಗಗಳು ಹಾಗೂ ಸಾಮಾನ್ಯ ವರ್ಗದವರ ಪ್ರಮಾಣ ಸುಮಾರು ತಲಾ ಶೇ.1ರಷ್ಟು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

‘Quockerwodger’: ಶಶಿ ತರೂರ್ ಸೂಚಿಸಿದ ಹೊಸ ರಾಜಕೀಯ ಪದ!

ಇದು 19ನೇ ಶತಮಾನದ ಇಂಗ್ಲಿಷ್ ಭಾಷೆಯಲ್ಲಿ ಬಳಕೆಯಲ್ಲಿದ್ದ ಅಪರೂಪದ ಪದ. ಮೂಲತಃ ದಾರಗಳ ಮೂಲಕ ನಿಯಂತ್ರಿಸಲ್ಪಡುವ ಮರದ ಗೊಂಬೆಯನ್ನು ಸೂಚಿಸುತ್ತಿತ್ತು. ಗೊಂಬೆಯಾಟದಲ್ಲಿ ಸೂತ್ರಧಾರ ದಾರ ಎಳೆದಂತೆ ಗೊಂಬೆ ಕೈಕಾಲು ಆಡಿಸುತ್ತದೆ. ಗೊಂಬೆ ಚಲಿಸುತ್ತದೆಯೇ...

ರಾಷ್ಟ್ರೀಯವಾದ ಹೊಟ್ಟೆ ತುಂಬಿಸುವುದಿಲ್ಲ; ಟ್ರಂಪ್‌ಗೆ ಅಮೆರಿಕನ್ನರು ಕಲಿಸಿದ ಪಾಠ...

ಬೆಲೆ ಏರಿಕೆ, ದುಬಾರಿ ಜೀವನ, ಕುಸಿಯುತ್ತಿರುವ ಖರೀದಿ ಸಾಮರ್ಥ್ಯ ಹಾಗೂ ಆರ್ಥಿಕ ಅನಿಶ್ಚಿತತೆ—ಇವು ಇತ್ತೀಚೆಗೆ ನಡೆದ ಅಮೆರಿಕದ ಮಧ್ಯಂತರ ಚುನಾವಣಾ ವಿಷಯಗಳಾಗಿದ್ದವು. ಇದು ರಾಷ್ಟ್ರೀಯತೆಯ ಆವೇಶ, ಬಲಿಷ್ಠ ನಾಯಕತ್ವವೆಂಬ ಪ್ರಚಾರ ಹಾಗೂ ರಾಜಕೀಯ...

ಕ್ಯಾಂಪಸ್ ರಾಜಕಾರಣದ ಹರಣ: ಎಎಂಯು, ಜಾಮಿಯಾದಲ್ಲಿ ಸೊಲ್ಲಡಗಿದ್ದರ ಆಂತರ್ಯವೇನು?

ಸ್ವಾತಂತ್ರ್ಯ ಸಂಗ್ರಾಮದ ಗರಡಿಯಾಗಿ, ದೇಶಕ್ಕೆ ಕ್ರಾಂತಿಕಾರಿ ನಾಯಕರನ್ನು ನೀಡಿದ್ದ ಅಲೀಗಢ ಮತ್ತು ಜಾಮಿಯಾ ಅಂಗಳಗಳು ಇಂದು ಮೌನಕ್ಕೆ ಜಾರಿವೆ. 2006ರ ನಿರ್ಬಂಧಗಳಿಂದ ಹಿಡಿದು ಮೋದಿ ಸರ್ಕಾರದ ಅವಧಿಯ ತನಿಖೆಗಳವರೆಗೆ - ಮುಸ್ಲಿಂ ವಿಶ್ವವಿದ್ಯಾಲಯಗಳ...

ದೇಶದ 29 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸುಮಾರು 3000 ನಗರ ಸ್ಥಳೀಯ ಸಂಸ್ಥೆಗಳಿಂದ ಸಂಗ್ರಹಿಸಲಾದ  ಅಂಕಿಅಂಶಗಳನ್ನು ಸಂಗ್ರಹಿಸಲಾಗಿದೆ. ಈ ಸರ್ಕಾರಿ ಅಂಕಿಅಂಶಗಳ ಪ್ರಕಾರ ಮಲದ ಗುಂಡಿಗಳು ಮತ್ತು ಚರಂಡಿಗಳನ್ನು ಸ್ವಚ್ಛಗೊಳಿಸುವ 38,000 ಸಿಬ್ಬಂದಿ (ಶೇ.91.9) ಪರಿಶಿಷ್ಟರು ಮತ್ತು ಹಿಂದುಳಿದವರು. ಈ ಪೈಕಿ ಪರಿಶಿಷ್ಟ ಜಾತಿಗಳಿಗೆ ಸೇರಿದವರ ಪ್ರಮಾಣ ಶೇ.68.9. ಪರಿಶಿಷ್ಟ ಪಂಗಡಗಳಿಗೆ ಸೇರಿದವರು ಶೇ 8.3 ಇತರೆ ಹಿಂದುಳಿದ ವರ್ಗಗಳಿಗೆ ಸೇರಿದವರ ಪ್ರಮಾಣ ಶೇ.14.7. ಇನ್ನು ಸಾಮಾನ್ಯ ವರ್ಗಗಳಿಗೆ (ಜನರಲ್ ಕೆಟಗರಿ) ಸೇರಿದ ಸಿಬ್ಬಂದಿಯ ಪ್ರಮಾಣ ಕೇವಲ ಶೇ.8.

ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಶಕ್ತೀಕರಣ ಮಂತ್ರಾಲಯ ಈ ಅಂಕಿಅಂಶಗಳನ್ನು ಸಂಗ್ರಹಿಸಿದೆ. ಚರಂಡಿಗಳು ಮತ್ತು ಮಲದ ಗುಂಡಿಗಳ ಸ್ವಚ್ಛತೆಯ ಕೆಲಸದ ಯಾಂತ್ರೀಕರಣ ಈ ಅಂಕಿಅಂಶ ಸಂಗ್ರಹದ ಉದ್ದೇಶವೆಂದು ಹೇಳಲಾಗಿದೆ. 2019-2023ರ ನಡುವೆ ಚರಂಡಿಗಳು ಮತ್ತು ಮಲದ ಗುಂಡಿಗಳನ್ನು ಸ್ವಚ್ಛಗೊಳಿಸುವ ಕೆಲಸದಲ್ಲಿ 377 ಮಂದಿ ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ‘ದಿ ಹಿಂದೂ’ ಪತ್ರಿಕೆಯ ವಿಶೇಷ ವರದಿ ಹೇಳಿದೆ.

2018ರ ದೇಶದಲ್ಲಿ ಮನುಷ್ಯರ ಮಲವನ್ನು ಸ್ವಚ್ಛ ಮಾಡುವ ಮನುಷ್ಯರ ಸಂಖ್ಯೆ 58,098 ಎಂದು ಗುರುತಿಸಲಾಗಿತ್ತು. 2018ರಿಂದ ಇಂತಹ ಮನುಷ್ಯರನ್ನು ಹೊಸದಾಗಿ ಗುರುತಿಸುವ ಕೆಲಸ ನಡೆದಿಲ್ಲ. ಈ ನಡುವೆ ಮನುಷ್ಯರ ಮಲವನ್ನು ಮನುಷ್ಯರೇ ಸ್ವಚ್ಛಗೊಳಿಸುತ್ತಿರುವ ಕುರಿತ 6,500ಕ್ಕೂ ಹೆಚ್ಚು ದೂರುಗಳನ್ನು ಸರ್ಕಾರ ಪರಿಶೀಲಿಸಿಲ್ಲ.

2018ರ ತನಕ ಗುರುತಿಸಲಾದ ಎಲ್ಲ 58,098 ಮಲ ಬಳಿವ ಮನುಷ್ಯರಿಗೆ ಒಂದೇ ಇಡುಗಂಟಾಗಿ ತಲಾ 40 ಸಾವಿರ ರುಪಾಯಿಗಳನ್ನು ನೀಡಲಾಗಿದೆ. ಈ ಪೈಕಿ 18,880 ಮಂದಿ ಬದಲಿ ಉದ್ಯೋಗಗಳಿಗೆ ಸಂಬಂಧಿಸಿದ ಕೌಶಲ್ಯ ತರಬೇತಿಯನ್ನು ಆಯ್ದುಕೊಂಡಿದ್ದರು. 2,051 ಮಂದಿ ಪರ್ಯಾಯ ವ್ಯಾಪಾರಗಳನ್ನು ನಡೆಸಲು ಯೋಜನೆಯ ಸಬ್ಸಿಡಿಗಳು-ಸಾಲಗಳನ್ನು ಆರಿಸಿಕೊಂಡರು. 

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಸ್ಟಡಿ ಹೆಸರಿನಲ್ಲಿ ಕಾಲಹರಣಕ್ಕಿಲ್ಲ ಅವಕಾಶ: ಸುಪ್ರೀಂ ಮಹತ್ವದ ತೀರ್ಪು

ಪೊಲೀಸ್ ಅಥವಾ ತನಿಖಾ ಸಂಸ್ಥೆಗಳು ಒಬ್ಬ ವ್ಯಕ್ತಿಯನ್ನು ವಶಕ್ಕೆ ಪಡೆದ ಕ್ಷಣದಿಂದಲೇ...

ಹೆಂಡತಿ ಬೇರೆ ಗಂಡಸಿನೊಂದಿಗೆ ಮಾತನಾಡಿದರೆ ವಿವಾಹೇತರ ಸಂಬಂಧದ ಆರೋಪ ಮಾಡುವುದು ಕ್ರೌರ್ಯ: ಜಾರ್ಖಂಡ್ ಹೈಕೋರ್ಟ್

ಹೆಂಡತಿ ತನ್ನ ಗಂಡನ ಮೊಬೈಲ್ ಫೋನ್ ಬಳಸಿ ಬೇರೊಬ್ಬ ವ್ಯಕ್ತಿಯೊಂದಿಗೆ ಮಾತನಾಡಿದ್ದಾಳೆ...

ಕಾವೇರಿ ವಿವಾದ: ಕರ್ನಾಟಕ ವಿರುದ್ಧ ಸುಪ್ರೀಂನಲ್ಲಿ ತಮಿಳುನಾಡು ಮೌಖಿಕ ವಾದ ಮಂಡನೆ!

ಕಳೆದ ಅಕ್ಟೋಬರ್ 23ರಿಂದ ಕರ್ನಾಟಕ ಸರ್ಕಾರ ಕಾವೇರಿ ನೀರನ್ನು ಬಿಡುಗಡೆ ಮಾಡುತ್ತಿಲ್ಲ...

ಮೆಟಾ ಇಂಡಿಯಾ ವಿರುದ್ಧ ದೆಹಲಿ ಪೊಲೀಸರಿಂದ ಎಫ್‌ಐಆರ್ ದಾಖಲು: NHRC ನಿರ್ದೇಶನದಂತೆ ಕ್ರಮ

ಸಾಮಾಜಿಕ ಜಾಲತಾಣ ದೈತ್ಯ ಸಂಸ್ಥೆಯಾದ 'ಮೆಟಾ' ಒಡೆತನದ ಪ್ಲಾಟ್‌ಫಾರ್ಮ್‌ಗಳಲ್ಲಿ ಮಕ್ಕಳ ಮೇಲಿನ...