ಈಶಾನ್ಯ ಭಾರತದ ಬಿದಿರು ಉದ್ಯಮ ಅಭಿವೃದ್ಧಿ; 396.68 ಕೋಟಿ ರೂ. ಸಾಲಕ್ಕೆ ADB ಅನುಮೋದನೆ

Date:

ಭಾರತದ ಈಶಾನ್ಯ ರಾಜ್ಯಗಳನ್ನು ಬಿದಿರಿನ ಸಮೃದ್ಧ ನೆಲೆ, ‘ಹಸಿರು ಚಿನ್ನದ ಗಣಿ’ ಎಂದು ಕರೆಯಲಾಗುತ್ತದೆ. ಆದರೆ, ದಶಕಗಳಿಂದ ಈ ನೈಸರ್ಗಿಕ ಸಂಪನ್ಮೂಲವನ್ನು ರಕ್ಷಿಸುವಲ್ಲಿ ಮತ್ತು ಅಭಿವೃದ್ಧಿ ಪಡಿಸುವಲ್ಲಿ ಸರ್ಕಾರಗಳಿಂದ ಸೂಕ್ತ ಮೂಲಸೌಕರ್ಯ, ಆಧುನಿಕ ತಂತ್ರಜ್ಞಾನ ಹಾಗೂ ಬಂಡವಾಳದ ಕೊರತೆ ಎದ್ದುಕಾಣುತ್ತಿತ್ತು. ಇದೀಗ, ಈಶಾನ್ಯ ರಾಜ್ಯಗಳಲ್ಲಿ ಬಿದಿರು ಉದ್ಯಮವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು, ಕೃಷಿ ಉತ್ಪಾದಕತೆಯನ್ನು ಹೆಚ್ಚಿಸಲು ಮತ್ತು ಗ್ರಾಮೀಣ ಜನರ ಜೀವನೋಪಾಯವನ್ನು ಬಲಪಡಿಸಲು ಏಷ್ಯನ್ ಅಭಿವೃದ್ಧಿ ಬ್ಯಾಂಕ್ (ADB) 42.2 ಮಿಲಿಯನ್ ಡಾಲರ್ (396.68 ಕೋಟಿ ರೂ.) ಸಾಲ ಸೌಲಭ್ಯ ಒದಗಿಸಲು ಅನುಮೋದನೆ ನೀಡಿದೆ.

- Advertisement -

ಕೇಂದ್ರ ಸರ್ಕಾರದ ‘ರಾಷ್ಟ್ರೀಯ ಬಿದಿರು ಮಿಷನ್’ ಯೋಜನೆಗಾಗಿ ಈ ಸಾಲ ಸೌಲಭ್ಯ ದೊರೆಯಲಿದೆ. ಕೇಂದ್ರ ಸರ್ಕಾರ ಹೇಳುವಂತೆ; ಈ ಯೋಜನೆಯು ಈಶಾನ್ಯ ರಾಜ್ಯಗಳಲ್ಲಿ ಕೇವಲ ಸ್ಥಳೀಯ ಆರ್ಥಿಕತೆಗೆ ಚೈತನ್ಯ ನೀಡುವುದಲ್ಲದೆ, ವಿದೇಶಗಳಿಂದ ಬಿದಿರು ಮತ್ತು ಅದರ ಉತ್ಪನ್ನಗಳ ಆಮದಿನ ಮೇಲಿನ ಭಾರತದ ಅವಲಂಬನೆಯನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ. ಗ್ರಾಮೀಣ ಮಟ್ಟದಲ್ಲಿ ಸುಸ್ಥಿರ ಉದ್ಯೋಗ ಸೃಷ್ಟಿ ಮತ್ತು ಖಾಸಗಿ ಹೂಡಿಕೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಇದೊಂದು ಮಹತ್ವದ ಮೈಲಿಗಲ್ಲಾಗಿದೆ ಎಂದು ಹೇಳಿಕೊಂಡಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ...

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು ಇದೇ ಮೊದಲೇನಲ್ಲ. ಕರಾವಳಿಯ ಜನತೆ ಇಂತಹ ಪ್ರಚೋದನಾತ್ಮಕ ನಡೆಗಳನ್ನು ತಿರಸ್ಕರಿಸಿ, ಸತ್ಯ ಮತ್ತು ನ್ಯಾಯದ ಪರವಾಗಿ ನಿಲ್ಲಬೇಕಾಗಿದೆ. ಕರಾವಳಿ ಕರ್ನಾಟಕವಾಗಲಿ...

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ...

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು ಪಡೆದುಕೊಂಡಿದೆ. ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್ ಅವರ ನಿರ್ಧಾರಗಳ ಕುರಿತು ಚುನಾವಣಾ ಆಯುಕ್ತರಾದ ಸುಖಬೀರ್‌ ಸಿಂಗ್‌ ಸಂಧು ಮತ್ತು...

ನೂರು ಡಿ ಕೆ ಶಿವಕುಮಾರ್‌ ಹೆಗ್ಗಡೆಯವರೊಂದಿಗಿದ್ದಾರೆ- ಹಳೆಯ ಹೇಳಿಕೆಗೆ...

ಅಕ್ರಮ ಶವ ಹೂತ ಪ್ರಕರಣದ ಎಸ್‌ಐಟಿ ತನಿಖೆ ನಡೆಯುತ್ತಿದ್ದಾಗ "ಇದು ಧರ್ಮಸ್ಥಳದ ವಿರುದ್ಧದ ಷಡ್ಯಂತ್ರ" ಎಂದು ಸದನದಲ್ಲಿ ವಿಪಕ್ಷಗಳು ಗದ್ದಲ ಮಾಡುತ್ತಿದ್ದಾಗ, ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಅವರು "ಧರ್ಮಸ್ಥಳದ ವಿರುದ್ಧ ಯಾರೆಲ್ಲ...

“ಎಡಿಬಿ ನೀಡುತ್ತಿರುವ ಈ ಸಾಲದ ನೆರವು ಈಶಾನ್ಯದ ಪ್ರಮುಖ ಆರು ರಾಜ್ಯಗಳಾದ ಅಸ್ಸಾಂ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್ ಹಾಗೂ ತ್ರಿಪುರಾಗಳಲ್ಲಿ ವಿವಿಧ ಸಮುದಾಯ ಆಧಾರಿತ ಉಪ-ಯೋಜನೆಗಳ ಮೂಲಕ ಅನುಷ್ಠಾನಗೊಳ್ಳಲಿದೆ” ಎಂದು ಕೇಂದ್ರ ಸರ್ಕಾರ ಹೇಳಿದೆ.

“ಪ್ರಸ್ತುತ ಜಗತ್ತಿನ ಒಟ್ಟು ಅರಣ್ಯ ಬಿದಿರಿನ ಪೈಕಿ 39%ರಷ್ಟು ದೊಡ್ಡ ಪಾಲು ಭಾರತದಲ್ಲೇ ಇದ್ದರೂ, ದೇಶದ ಬಿದಿರಿನ ಮೌಲ್ಯವರ್ಧಿತ ಸರಪಳಿಯು ಇನ್ನೂ ಪ್ರಾಥಮಿಕ ಹಂತದಲ್ಲೇ ಉಳಿದುಕೊಂಡಿದೆ. ಬಿದಿರಿನಿಂದ ಕಾಗದ, ಗೃಹೋಪಯೋಗಿ ವಸ್ತುಗಳು, ಜೈವಿಕ ಇಂಧನ, ಬಟ್ಟೆ ಮತ್ತು ಪರಿಸರ ಸ್ನೇಹಿ ಪರ್ಯಾಯ ಕೈಗಾರಿಕಾ ಉತ್ಪನ್ನಗಳನ್ನು ಬೃಹತ್ ಪ್ರಮಾಣದಲ್ಲಿ ತಯಾರಿಸಲು ಬೇಕಾದ ವ್ಯವಸ್ಥಿತ ಮಾರುಕಟ್ಟೆ ಕೊರತೆ ನಮ್ಮಲ್ಲಿದೆ. ಪರಿಣಾಮವಾಗಿ ನಾವೇ ಅತಿ ಹೆಚ್ಚು ಬಿದಿರು ಹೊಂದಿದ್ದರೂ, ವಾಣಿಜ್ಯ ಮತ್ತು ಕೈಗಾರಿಕಾ ಉದ್ದೇಶಗಳ ಉನ್ನತ ಗುಣಮಟ್ಟದ ಉತ್ಪನ್ನಗಳಿಗಾಗಿ ವಿದೇಶಿ ಆಮದಿನ ಮೇಲೆ ಅವಲಂಬಿತರಾಗಬೇಕಾದ ಪರಿಸ್ಥಿತಿ ಇತ್ತು. ಈಗ ಎಡಿಬಿ ಒದಗಿಸುತ್ತಿರುವ ಈ ಹಣಕಾಸಿನ ನೆರವು ಈ ಮೂಲಭೂತ ಕೊರತೆಯನ್ನು ನೀಗಿಸಲು ಖಾಸಗಿ ಹೂಡಿಕೆದಾರರಿಗೆ ಹಾಗೂ ಸ್ಥಳೀಯ ಕೃಷಿಕರಿಗೆ ಗಟ್ಟಿಯಾದ ಬೆಂಬಲ ನೀಡಲಿದೆ” ಎಂದು ಸರ್ಕಾರ ಹೇಳಿಕೊಂಡಿದೆ.

“ಬಿದಿರು ಬೆಳೆಗಾರರ ಆದಾಯವನ್ನು ಹೆಚ್ಚಿಸುವುದು ಮತ್ತು ಖಾಸಗಿ ಹೂಡಿಕೇದಾರರು ಹಾಗೂ ಸಣ್ಣ ಉದ್ಯಮಿಗಳಿಗೆ ಸುಲಭವಾಗಿ ಹಣಕಾಸು ಲಭ್ಯವಾಗುವಂತೆ ಮಾಡುವುದು ಇದರ ಮುಖ್ಯ ಕಾರ್ಯತಂತ್ರವಾಗಿದೆ. ಕೇವಲ ಧನಸಹಾಯ ನೀಡುವುದಷ್ಟೇ ಅಲ್ಲದೆ, ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಬಿದಿರು ಮಿಷನ್‌ಗಳ ಹಾಗೂ ತಾಂತ್ರಿಕ ಸಂಸ್ಥೆಗಳ ಸಾಂಸ್ಥಿಕ ಸಾಮರ್ಥ್ಯವನ್ನು ಇದು ವೃದ್ಧಿಸಲಿದೆ. ಆಧುನಿಕ ತಂತ್ರಜ್ಞಾನದ ನೆರವಿನಿಂದ ಬಿದಿರು ಸಂಪನ್ಮೂಲಗಳ ಡಿಜಿಟಲ್ ಮ್ಯಾಪಿಂಗ್ ಮತ್ತು ನಿರ್ವಹಣೆ, ಸುಧಾರಿತ ಸಂಶೋಧನೆ ಮತ್ತು ತರಬೇತಿ, ಹಾಗೂ ಇಡೀ ಮಾರುಕಟ್ಟೆ ಸರಣಿಯಲ್ಲಿ ಡಿಜಿಟಲ್ ಪರಿಹಾರಗಳನ್ನು ಅಳವಡಿಸಲು ಈ ಹಣವನ್ನು ಬಳಸಲಾಗುತ್ತದೆ. ಇದು ಸಾಂಪ್ರದಾಯಿಕ ಕೃಷಿ ಪದ್ಧತಿಯನ್ನು ಆಧುನಿಕ ಕೈಗಾರಿಕಾ ಆವಶ್ಯಕತೆಗಳಿಗೆ ತಕ್ಕಂತೆ ಸಜ್ಜುಗೊಳಿಸಲಿದೆ” ಎಂದು ಸರ್ಕಾರ ಹೇಳಿದೆ.

ಈ ಯೋಜನೆಯನ್ನು ಕೆಲವು ತಜ್ಞರು ಸ್ವಾಗತಿಸಿದ್ದಾರೆ. “ಯೋಜನೆಯಡಿ ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡಲಾಗುತ್ತದೆ. ಬಿದಿರು ಕೃಷಿ, ಸಾಗಣೆ, ಸಂಸ್ಕರಣೆ ಹಾಗೂ ಮಾರುಕಟ್ಟೆ ಪ್ರಕ್ರಿಯೆಯ ಪ್ರತಿಯೊಂದು ಹಂತದಲ್ಲೂ ಮಹಿಳೆಯರ ಸಕ್ರಿಯ ಭಾಗವಹಿಸುವಿಕೆ ಮತ್ತು ಉದ್ಯೋಗಾವಕಾಶವನ್ನು ಯೋಜನೆಯು ಖಾತರಿಪಡಿಸುತ್ತದೆ. ಯೋಜನೆಯ ಒಪ್ಪಂದದ ಪ್ರಕಾರ, ಭಾಗವಹಿಸುವ ಆರೂ ರಾಜ್ಯಗಳಲ್ಲಿ ಕನಿಷ್ಠ ಒಂದೊಂದು ಸಂಪೂರ್ಣ ಮಹಿಳಾ ನೇತೃತ್ವದ ಬಿದಿರು ಉತ್ಪಾದನಾ ಘಟಕಗಳನ್ನು ಸ್ಥಾಪಿಸಲಾಗುವುದು. ಇದು ಗ್ರಾಮೀಣ ಭಾಗದ ಮಹಿಳೆಯರಲ್ಲಿ ಉದ್ಯಮಶೀಲತೆಯ ಮನೋಭಾವವನ್ನು ಬೆಳೆಸುವುದಲ್ಲದೆ, ಅವರ ಆರ್ಥಿಕ ಸ್ವಾತಂತ್ರ್ಯಕ್ಕೆ ಗಟ್ಟಿಯಾದ ಬುನಾದಿ ಹಾಕಲಿದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.

ಭಾರತದಲ್ಲಿನ ಎಡಿಬಿ ದೇಶೀಯ ನಿರ್ದೇಶಕರಾದ ಮಿಯೋ ಓಕಾ ಅವರ ಪ್ರಕಾರ, “ದೇಶದ ಹೇರಳವಾದ ಬಿದಿರು ಸಂಪನ್ಮೂಲಗಳನ್ನು ಬಳಸಿಕೊಂಡು ಖಾಸಗಿ ವಲಯದ ನೇತೃತ್ವದಲ್ಲಿ ಕೈಗಾರಿಕಾ ಮೌಲ್ಯದ ಸರಪಳಿಗಳನ್ನು ನಿರ್ಮಿಸಲಾಗುತ್ತದೆ. ಇದರಿಂದ ಪ್ರಾದೇಶಿಕ ವ್ಯಾಪಾರ, ಹೂಡಿಕೆ ಹಾಗೂ ಮೂಲಸೌಕರ್ಯಗಳು ಅಭಿವೃದ್ಧಿಗೊಳ್ಳುತ್ತವೆ. ಈಶಾನ್ಯ ಭಾಗದ ಗ್ರಾಮೀಣ ಕುಟುಂಬಗಳು ಕೇವಲ ಹವಾಮಾನ ವೈಪರೀತ್ಯಕ್ಕೆ ತುತ್ತಾಗುವ ಸಾಂಪ್ರದಾಯಿಕ ಬೆಳೆಗಳ ಮೇಲಷ್ಟೇ ಅವಲಂಬಿತರಾಗದೆ, ಬಿದಿರಿನ ಮೂಲಕ ತಮ್ಮ ಆದಾಯದ ಮೂಲಗಳನ್ನು ವೈವಿಧ್ಯಗೊಳಿಸಿಕೊಳ್ಳಬಹುದು. ಇದು ಅವರ ಒಟ್ಟಾರೆ ಆರ್ಥಿಕ ಚೇತರಿಕೆಯ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ” ಎಂದಿದ್ದಾರೆ.

ಯೋಜನೆಯನ್ನು ಕೆಲವು ತಜ್ಞರು ಪರಾಮರ್ಶಿಸಿದ್ದು, “ಹವಾಮಾನ ಬದಲಾವಣೆಯ ಪ್ರಸ್ತುತ ದಿನಗಳಲ್ಲಿ ಬಿದಿರು ಅತ್ಯುತ್ತಮ ಇಂಗಾಲದ ಹೀರಿಕೊಳ್ಳುವಿಕೆಯ ಗುಣವನ್ನು ಹೊಂದಿದೆ. ಇದಿರಂದ ಈ ಉದ್ಯಮದ ವಿಸ್ತರಣೆಯು ಪರಿಸರ ಸಂರಕ್ಷಣೆ ಮತ್ತು ಪರಿಸರಸ್ನೇಹಿ ಕೈಗಾರಿಕಾ ಪ್ರಗತಿ ಎರಡನ್ನೂ ಏಕಕಾಲದಲ್ಲಿ ಸಾಧಿಸಲು ಭಾರತಕ್ಕೆ ಸಹಾಯ ಮಾಡಲಿದೆ” ಎಂದಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ ಬಿಗಿಯಾಗುತ್ತಿರುವ ಬಿಕ್ಕಟ್ಟು!

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು...

ಮೋದಿ ಜನ್ಮದಿನದ ನಾಟಕದಲ್ಲಿ ಅಭಿನಯಿಸಲು ನಕಾರ; ವಿದ್ಯಾರ್ಥಿಗೆ ‘ಅಂಕ ಕಡಿತ’ದ ಬೆದರಿಕೆ

ಪ್ರಧಾನಿ ಮೋದಿ ಜನ್ಮದಿನದ ಅಂಗವಾಗಿ ಆಯೋಜಿಸಲಾಗಿರುವ ನಾಟಕದಲ್ಲಿ ಅಭಿನಯಿಸಲು ನಿರಾಕರಿಸಿದ ವಿದ್ಯಾರ್ಥಿಗಳಿಗೆ...