ಹಾವೇರಿ | ಮುಸ್ಲಿಮರಿಲ್ಲದ ಊರಲ್ಲಿ ಮೊಹರಂ ಆಚರಣೆ: ಸೌಹಾರ್ದತೆ ಮೆರೆದೆ ಸ್ಥಳೀಯ ಹಿಂದೂಗಳು

Date:

ಕೊಣನತಂಬಿಗೆ ಗ್ರಾಮದಲ್ಲಿ ಹಿಂದೂ ಬಾಂಧವರು ಮೊಹರಂ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿರುವುದು ಕೇವಲ ಒಂದು ಹಬ್ಬದ ಆಚರಣೆಯಷ್ಟೇ ಅಲ್ಲ; ಅದು ಭಾರತೀಯ ಸಂಸ್ಕೃತಿಯ ಮೂಲ ಸ್ವರೂಪವಾದ ಏಕತೆಯ ಸಂದೇಶವನ್ನು ಪ್ರತಿಬಿಂಬಿಸುತ್ತದೆ. ಧರ್ಮ, ಜಾತಿ ಅಥವಾ ಸಮುದಾಯದ ಗೋಡೆಗಳನ್ನು ಮೀರಿ ಪರಸ್ಪರರ ದುಃಖ-ಸಂತೋಷಗಳಲ್ಲಿ ಭಾಗಿಯಾಗುವ ಈ ಪರಂಪರೆ ನಮ್ಮ ದೇಶದ ಸಾಮರಸ್ಯದ ಜೀವಂತ ಉದಾಹರಣೆಯಾಗಿದೆ.

ಕರ್ಬಲಾದಲ್ಲಿ ಹುತಾತ್ಮರಾದ ಇಮಾಮ್ ಹುಸೇನ್ ಅವರ ತ್ಯಾಗ ಹಾಗೂ ಬಲಿದಾನ ಸ್ಮರಿಸುವ ಸಲುವಾಗಿ ಮೊಹರಂ ಹಬ್ಬವನ್ನು ಎಲ್ಲೆಡೆ ಆಚರಣೆ ಮಾಡಲಾಗುತ್ತದೆ. ಆದರೆ ಒಂದೇ ಒಂದು ಮುಸ್ಲಿಂ ಸಮುದಾಯದ ಕುಟುಂಬ ಇಲ್ಲದಿದ್ದರೂ, ಎಲ್ಲ ಹಿಂದೂ ಬಾಂಧವರು ಸೇರಿ ಕೊನಣತಂದಿಗೆ ಗ್ರಾಮದಲ್ಲಿ ಮೊಹರಂ ಹಬ್ಬವನ್ನು ಅತ್ಯಂತ ಸಂಭ್ರಮ, ಸಡಗರದಿಂದ ಆಚರಣೆ ಮಾಡುತ್ತಿರುವುದು ಎಲ್ಲರ ಗಮನ ಸೆಳೆದಿದೆ.

- Advertisement -

ಹಾವೇರಿ ತಾಲೂಕಿನ ಕೊಣನತಂಬಿಗೆ  ಗ್ರಾಮವು ವಿಶೇಷವಾಗಿದೆ. ಈ ಊರಲ್ಲಿ  ಒಂದೇ ಒಂದು ಮುಸ್ಲಿಂ ಸಮುದಾಯದ ಕುಟುಂಬ ಇಲ್ಲ. ಮುಸ್ಲಿಂಮರ ಹಬ್ಬವನ್ನು ನಾವ್ಯಾಕೆ ಮಾಡಬೇಕು ಎನ್ನುವ ಮತಭೇದ ಇಲ್ಲದೆ, ಎಲ್ಲ ಸಮುದಾಯದ ಹಿಂದೂಗಳು ಒಗ್ಗೂಡಿ ಮೊಹರಂ ಹಬ್ಬವನ್ನು ಆಚರಣೆ ಮಾಡುತ್ತಾರೆ. ಮುಸ್ಲಿಂ ಪದ್ದತಿಯಂತೆ ಪಂಜಾಗಳ ಪ್ರತಿಷ್ಠಾಪನೆ ಮಾಡುವರು. ಮೆರವಣಿಗೆ, ಮೊಹರಂ ಆಚರಣೆಯ ಎಲ್ಲ ಧಾರ್ಮಿಕ ವಿಧಿ ವಿಧಾನಗಳನ್ನು ಗ್ರಾಮದ ಹಿಂದೂಗಳೇ ಅತ್ಯಂತ ಶ್ರದ್ಧಾ ಭಕ್ತಿಯಿಂದ ನೆರವೇರಿಸಿ, ಹಿಂದೂ-ಮುಸ್ಲಿಂ ಭಾವೈಕ್ಯತೆಯನ್ನು ಸಾರಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ...

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು ಪಡೆದುಕೊಂಡಿದೆ. ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್ ಅವರ ನಿರ್ಧಾರಗಳ ಕುರಿತು ಚುನಾವಣಾ ಆಯುಕ್ತರಾದ ಸುಖಬೀರ್‌ ಸಿಂಗ್‌ ಸಂಧು ಮತ್ತು...

ನೂರು ಡಿ ಕೆ ಶಿವಕುಮಾರ್‌ ಹೆಗ್ಗಡೆಯವರೊಂದಿಗಿದ್ದಾರೆ- ಹಳೆಯ ಹೇಳಿಕೆಗೆ...

ಅಕ್ರಮ ಶವ ಹೂತ ಪ್ರಕರಣದ ಎಸ್‌ಐಟಿ ತನಿಖೆ ನಡೆಯುತ್ತಿದ್ದಾಗ "ಇದು ಧರ್ಮಸ್ಥಳದ ವಿರುದ್ಧದ ಷಡ್ಯಂತ್ರ" ಎಂದು ಸದನದಲ್ಲಿ ವಿಪಕ್ಷಗಳು ಗದ್ದಲ ಮಾಡುತ್ತಿದ್ದಾಗ, ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಅವರು "ಧರ್ಮಸ್ಥಳದ ವಿರುದ್ಧ ಯಾರೆಲ್ಲ...

SIR | ರಾಜ್ಯದಲ್ಲಿ ಮಹಿಳೆಯರಿಗೇ ಹೆಚ್ಚು ನೋಟಿಸ್

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯು ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಕುರಿತು ಗಂಭೀರ ಆತಂಕಗಳನ್ನು ಹುಟ್ಟುಹಾಕಿದೆ. ರಾಜ್ಯದ 34 ಜಿಲ್ಲಾ ಮತ್ತು ನಗರ ಆಡಳಿತ ಘಟಕಗಳ...

ಕೊಣನತಂಬಿಗೆ ಗ್ರಾಮದಲ್ಲಿ ಸುಮಾರು ಮೂರು ಸಾವಿರದಿಂದ ನಾಲ್ಕು ಸಾವಿರ ಜನರಿದ್ದಾರೆ. ಹಿಂದೂ ಸಮುದಾಯದ ಎಲ್ಲ ಜಾತಿಯ ಜನರು ವಾಸ ಮಾಡುತ್ತಾರೆ. ಆದರೆ ಊರಲ್ಲಿ ಒಂದೇ ಒಂದು ಮುಸ್ಲಿಂ ಕುಟುಂಬ ಇಲ್ಲ. ಈ ಊರು ನೂರು ವರ್ಷಗಳಿಂದ, ನಮ್ಮ ಪೂರ್ವಿಕರಿಂದಲೂ ಹಿಂದೂಗಳೇ ಮೊಹರಂ ಹಬ್ಬವನ್ನು ಆಚರಿಸುತ್ತ ಬಂದಿರುವರು. ಊರಲ್ಲಿ ಯಾವುದೇ ಜಾತಿ, ಮತ, ಪಂಥ ಇಲ್ಲದೇ ಮೊಹರಂ ಹಬ್ಬವನ್ನು ಅಚ್ಚುಕಟ್ಟಾಗಿ ಆಚರಿಸುತ್ತ ಬಂದಿದ್ದು, ನಾವೆಲ್ಲರೂ ಸರ್ವ ಜನಾಂಗದ ಶಾಂತಿಯ ತೋಟವನ್ನು ಇಲ್ಲಿ ಕಣ್ಣಾರೆ ಕಾಣಬಹುದು.

Advertisements
ಮೊಹರಂ 1

ಗ್ರಾಮದ ಹಿಂದೂಗಳೇ ಸೇರಿ ಹಣ ಸಂಗ್ರಹಿಸಿ ಮೊಹರಂ ಹಬ್ಬವನ್ನು ಆಚರಣೆ ಮಾಡುತ್ತಾರೆ. ಇಪ್ಪತ್ತರಿಂದ ಮೂವತ್ತು ಸಾವಿರ ರೂಪಾಯಿಯ ಸಾಗವಾಣಿ ಕಟ್ಟಿಗೆಯಲ್ಲಿ ಹೊಸದಾಗಿ ಡೋಲಾವನ್ನು ಮಾಡಿಸಿದ್ದಾರೆ. ಪಂಜಾ ಪ್ರತಿಷ್ಠಾಪನೆಯಿಂದ ಹಿಡಿದು ಹೊಳೆಗೆ ಹೋಗುವವರೆಗೂ ಎಲ್ಲ ಕೆಲಸವನ್ನು ಹಿಂದೂಗಳೇ ಮಾಡುವರು.

ಗ್ರಾಮದಲ್ಲಿ ವಿಶೇಷತೆ ಎಂದರೆ ಹಿಂದೂ ಮುಸ್ಲಿಂ ಸಾಮರಸ್ಯದ ಸಾಕ್ಷಿ ಎಂಬಂತೆ ಯಮನೂರು ಒಡೆಯ ದೇವಸ್ಥಾನವಿದೆ. ದೇವಸ್ಥಾನದಲ್ಲಿ ಲಾಲ್‌ಸಾಬ್‌, ಚಾಂದ್‌ಲಾಲ್‌ ಹಾಗೂ ಹುಸೇನ್‌ ಪೀರಲು ದೇವರನ್ನು ಮೊಹರಂ ಹಬ್ಬದಲ್ಲಿ ಹಿಂದೂಗಳೇ ಸೇರಿ ಅಲಂಕಾರ ಮಾಡುತ್ತಾರೆ. ಕಳೆದ ನಾಲ್ಕು ದಿನಗಳಿಂದ ವಿಶೇಷ ಪೂಜೆ, ಪುನಸ್ಕಾರ, ಪ್ರಸಾದ ವಿತರಣೆಯನ್ನು ಹಿಂದೂಗಳೇ ಮಾಡುತ್ತಿದ್ದಾರೆ. ಪಕ್ಕದ ಯಲಗಚ್ಚ ಗ್ರಾಮದ ಮುಸ್ಲಿಂ ಸಮುದಾಯದ ವ್ಯಕ್ತಿಯನ್ನು ಸಕ್ಕರೆ, ಬೆಲ್ಲ ಊದಿಕೆ ಮಾಡಲು ಇಲ್ಲಿಗೆ ಕರೆಸುತ್ತಾರೆ.

ಮೊಹರಂ 1 1

ಹಿಂದೂಗಳು ಹರಕೆ ಹೊತ್ತುಕೊಂಡು ಪಂಜಾಗಳನ್ನು ಪೂಜಿಸುತ್ತಿದ್ದಾರೆ. ಪ್ರತಿಯೊಂದು ಪಂಜಾವನ್ನು ಹಿಂದೂಗಳೇ ಹೊತ್ತುಕೊಂಡು ಆರಾಧಿಸುತ್ತಿದ್ದಾರೆ. ಹಬ್ಬದ ಕೊನೆಯ ದಿನದಂದು ಹಿಂದೂ ವ್ಯಕ್ತಿಗಳೇ, ಪಂಜಾಗಳನ್ನು ಹಿಡಿದು ಕಿಚ್ಚು ಆಯುತ್ತಾರೆ. ಜನರು, ಅವರ ಕಾಲಿಗೆ ನಮಸ್ಕರಿಸಿ ಇಷ್ಟಾರ್ಥ ಸಿದ್ಧಿಗಾಗಿ ಬೇಡಿಕೊಳ್ಳುವರು. ಈ ಮೊಹರಂ ಹಬ್ಬವನ್ನು ಆಚರಣೆ ಮಾಡುವುದರಿಂದ ಊರಿನಲ್ಲಿರುವ ಪ್ರತಿಯೊಬ್ಬ ಹಿಂದೂಗಳಿಗೆ ಒಳ್ಳೆಯದಾಗಿದೆ. ಬೇಡಿಕೊಂಡ ಹರಕೆಗಳು ಈಡೇರಿವೆ ಎಂಬ ನಂಬಿಕೆ ಗ್ರಾಮದ ಜನರಲ್ಲಿದೆ.

ಕತ್ತಲ ರಾತ್ರಿಯ ದಿನ ಅಲಾಯಿ ಪದಗಳನ್ನು ಹಾಡುತ್ತಾರೆ. ಆಲೀ ಹೆಜ್ಜೆಗಳನ್ನು ಹಾಕುತ್ತಾರೆ. ದೇವರುಗಳು ಹೊಳೆಗೆ ಹೋಗುವ ದಿನ ದೇವರುಗಳನ್ನು ಹಿಂದೂಗಳೇ ಹೊತ್ತುಕೊಂಡು ಊರಲ್ಲಿ ಹೆಜ್ಜೆ ಮೇಳದೊಂದಿಗೆ ಮೆರವಣಿಗೆ ಹೊರಡುತ್ತಾರೆ. ಸಂಜೆ ವೇಳೆ ದೇವರು ಅಲೆಕುಣಿಯಲ್ಲಿ ಕೆಂಡ ತುಳಿಯುವ ಕಾರ್ಯ ವಿಶೇಷವಾಗಿಯೇ ನಡೆಯುತ್ತದೆ. ನಂತರದಲ್ಲಿ ದೇವರುಗಳನ್ನು ಹೊಳೆಗೆ ಕಳುಹಿಸಿ, ಮನೆಗೆ ಬಂದು ಜನರೆಲ್ಲ ದೇವರಿಗೆ ಭಕ್ತಿಯಿಂದ ಜಂಗೇವು ಎಡೆ ಇಟ್ಟು ಸೇವಿಸುತ್ತಾರೆ.

ಇದನ್ನೂ ಓದಿದ್ದೀರಾ? ರಾಜ್ಯದಲ್ಲಿ ಎರಡನೇ ಹಂತದ ಸಂಪುಟ ವಿಸ್ತರಣೆ ಕಸರತ್ತು ಯಾರಿಗೆ ಒಲಿಯಲಿದೆ ಮಣೆ?

ಮೊಹರಂ ಹಬ್ಬದ ದೇವರುಗಳ ಹಿಂದೂ ಪೂಜಾರಿ ಪುಂಡಲೀಕಪ್ಪ ಮಂಗಲೇಕಾರ ಮಾತನಾಡಿ , “ನಮ್ಮೂರಲ್ಲಿ ನಮ್ಮ ಮುತ್ತಜ್ಜರು ಯಮನೂರಜ್ಜನ ಚಾಕರಿ ಮಾಡಿಕೊಂಡು ಬಂದಾರ, ನಾನು ಅದನ್ನ ಮುಂದುವರೆಸಿಕೊಂಡು ಹೊಂಟಿನಿ. ನಮ್ಮೂರಾಗ ಯಾವತ್ತಿನಿಂದಲೂ ಮುಸ್ಲಿಮರಿಲ್ಲ. ಅವರ ಹಬ್ಬ ನಾವ್ಯಾಕ ಮಾಡ್ಬೇಕು ಅನ್ನಂಗಿಲ್ಲ. ಯಾವುದೇ ಜಾತಿ, ಭೇದ, ಮತ ಇಲ್ಲದೇ ಎಲ್ಲರೂ ಒಂದಾಗಿ ಮೊಹರಂ ಹಬ್ಬವನ್ನು ಆಚರಣೆ ಮಾಡ್ತೀವಿ” ಎಂದು ಹೇಳಿದರು.

ಕೊಣನತಂದಿ ಗ್ರಾಮದಲ್ಲಿ ಹಿಂದೂ ಬಾಂಧವರು ಮೊಹರಂ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿರುವುದು ಕೇವಲ ಒಂದು ಹಬ್ಬದ ಆಚರಣೆಯಷ್ಟೇ ಅಲ್ಲ; ಅದು ಭಾರತೀಯ ಸಂಸ್ಕೃತಿಯ ಮೂಲ ಸ್ವರೂಪವಾದ ಏಕತೆಯ ಸಂದೇಶವನ್ನು ಪ್ರತಿಬಿಂಬಿಸುತ್ತದೆ. ಧರ್ಮ, ಜಾತಿ ಅಥವಾ ಸಮುದಾಯದ ಗೋಡೆಗಳನ್ನು ಮೀರಿ ಪರಸ್ಪರರ ದುಃಖ-ಸಂತೋಷಗಳಲ್ಲಿ ಭಾಗಿಯಾಗುವ ಈ ಪರಂಪರೆ ನಮ್ಮ ದೇಶದ ಸಾಮರಸ್ಯದ ಜೀವಂತ ಉದಾಹರಣೆಯಾಗಿದೆ.

ಇಮಾಮ್ ಹುಸೇನ್ ಅವರ ತ್ಯಾಗ ಹಾಗೂ ಬಲಿದಾನದ ಸ್ಮರಣೆಯು ಎಲ್ಲ ಧರ್ಮಗಳ ಜನರನ್ನು ಪ್ರೇಮ, ನ್ಯಾಯ ಮತ್ತು ಸಹನೆಯ ಬಗ್ಗೆ ಚಿಂತಿಸುವಂತೆ ಪ್ರೇರೇಪಿಸುತ್ತದೆ. ಕೊಣನತಂದಿಯಂತಹ ಗ್ರಾಮಗಳಲ್ಲಿ ಕಾಣಸಿಗುವ ಈ ಸಹಜ ಸೌಹಾರ್ದತೆಯು ನಮಗೆಲ್ಲರಿಗೂ ಪ್ರೇರಣೆಯಾಗಬೇಕು. ಧರ್ಮಗಳ ನಡುವಿನ ಗೆಳೆತನವೇ ನಿಜವಾದ ಭಾರತೀಯತೆಯ ಸಾರ.

SHARANAPPA H SANGANALA
ಶರಣಪ್ಪ ಎಚ್ ಸಂಗನಾಳ
+ posts

ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಶರಣಪ್ಪ ಎಚ್ ಸಂಗನಾಳ
ಶರಣಪ್ಪ ಎಚ್ ಸಂಗನಾಳ
ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಏಷ್ಯನ್ ಗೇಮ್ಸ್ ಕಬಡ್ಡಿ: ಇರಾನ್‌ ಮಣಿಸಿ ಪುರುಷ, ಮಹಿಳಾ ವಿಭಾಗಗಳಲ್ಲಿ ಭಾರತಕ್ಕೆ ಜೋಡಿ ಚಿನ್ನದ ಸಂಭ್ರಮ

ಜಪಾನ್‌ನ ಐಚಿ–ನಗೋಯಾದಲ್ಲಿ ನಡೆಯುತ್ತಿರುವ 2026ನೇ ಸಾಲಿನ ಏಷ್ಯನ್ ಕ್ರೀಡಾಕೂಟದ ಕಬಡ್ಡಿ ಅಂಕಣದಲ್ಲಿ...

ಹಾಸನ | ಹೇಮಾವತಿ ನಾಲೆ: ಯುವಕನ ಮೃತ ದೇಹ ಪತ್ತೆ 

ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಹೇಮಾವತಿ ನಾಲೆಯಲ್ಲಿ ಯುವಕನ ಮೃತ ದೇಹ...

ಕುಟುಂಬ ನ್ಯಾಯಾಲಯಗಳ ಮೇಲಿನ ಹೊರೆ ತಗ್ಗಿಸಲು ಮಧ್ಯಸ್ಥಿಕೆಗೆ ಆದ್ಯತೆ ನೀಡಿ: ಸುಪ್ರೀಂ ನ್ಯಾಯಮೂರ್ತಿ ನಾಗರತ್ನ

ದೇಶದ ಕೌಟುಂಬಿಕ ನ್ಯಾಯಾಲಯಗಳಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಪ್ರಕರಣಗಳ ಹೊರೆಯನ್ನು ಕಡಿಮೆ...

ಹುಲಸೂರ | ಮುಚಳಂಬ ಗ್ರಾಮದಲ್ಲಿ ಬಸ್ ತಂಗುದಾಣ ನಿರ್ಮಾಣಕ್ಕೆ ಆಗ್ರಹ

ಹುಲಸೂರ ತಾಲೂಕಿನ ಮುಚಳಂಬ ಗ್ರಾಮದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಸುಸಜ್ಜಿತ ಬಸ್ ತಂಗುದಾಣ...