ತಾಜ್ ಮಹಲ್‌ ದೇವಾಲಯ ಎಂಬ ವಾದ: ಕೇಂದ್ರ, ಎಎಸ್ಐಗೆ ಅಲಹಾಬಾದ್ ಹೈಕೋರ್ಟ್ ನೋಟಿಸ್

Date:

ತಾಜ್ ಮಹಲ್ ಮೂಲತಃ ಶಿವನ ದೇವಾಲಯವಾಗಿದ್ದು, ಅಲ್ಲಿ ‘ತೇಜೋ ಮಹಾಲಯ’ ಇತ್ತು ಎಂಬ ಹಕ್ಕಿಗೆ ಸಂಬಂಧಿಸಿದಂತೆ ಸರ್ವೇ ನಡೆಸಲು ಕೇಂದ್ರ ಸರ್ಕಾರ ಹಾಗೂ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ (ASI) ಅಲಹಾಬಾದ್ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.

- Advertisement -

ಭಗವಾನ್ ಶ್ರೀ ಅಗ್ರೇಶ್ವರ ಮಹಾದೇವ ನಾಗನಾಥೇಶ್ವರ ವಿರಾಜಮಾನ್ ತೇಜೋ ಮಹಾಲಯ ದೇವಸ್ಥಾನದ ಪರವಾಗಿ ಹರಿಶಂಕರ್ ಜೈನ್ ಮತ್ತು ಇತರ ಭಕ್ತರು ಈ ಅರ್ಜಿಯನ್ನು ಸಲ್ಲಿಸಿದ್ದಾರೆ. ಆಗ್ರಾದ ಕೆಳ ನ್ಯಾಯಾಲಯ ಹಾಗೂ ಜಿಲ್ಲಾ ನ್ಯಾಯಾಲಯಗಳು ತಾಜ್ ಮಹಲ್ ಆವರಣದಲ್ಲಿ ಅಡ್ವೊಕೇಟ್ ಕಮಿಷನರ್ ಮೂಲಕ ಸಮೀಕ್ಷೆ, ವಿಡಿಯೋಗ್ರಫಿ ಮತ್ತು ಫೋಟೋಗ್ರಫಿ ನಡೆಸಲು ಕೋರಿದ್ದ ಅರ್ಜಿಯನ್ನು ತಿರಸ್ಕರಿಸಿದ್ದವು. ಈ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಪೊಲೀಸ್ ಸುಧಾರಣೆ | ಹೈಟೆಕ್ ಪೊಲೀಸಿಂಗ್ Vs ವಾಸ್ತವ:...

ಪೊಲೀಸ್‌ ಇಲಾಖೆಯನ್ನು ಆಧುನೀಕರಿಸಲು AI, ಸೈಬರ್‌ ತಂತ್ರಜ್ಞಾನ, ಡಿಜಿಟಲ್‌ ತನಿಖೆ, ಸಿಸಿಟಿವಿ, ಬಾಡಿ ಕ್ಯಾಮೆರಾ ಸೇರಿದಂತೆ ಹಲವು ತಂತ್ರಜ್ಞಾನಗಳು ಪ್ರವೇಶಿಸುತ್ತಿವೆ. ಆದರೆ ಹೈಟೆಕ್‌ ಆಗುತ್ತಿರುವ ಪೊಲೀಸ್‌ ವ್ಯವಸ್ಥೆ ಜನರ ಬದುಕಿಗೆ ಎಷ್ಟು ಹತ್ತಿರವಾಗುತ್ತಿದೆ?...

ಐದು ಭಾಷೆ, ಆರು ದಶಕ, ಅನಂತ ಪ್ರಯೋಗ: ಭಾರತೀಯ...

ಬದುಕಿನ ಕೊನೆಯ ಉಸಿರಿನವರೆಗೂ ಕೇವಲ ಸಿನಿಮಾವನ್ನೇ ಶ್ವಾಸವಾಗಿಸಿಕೊಂಡಿದ್ದ, 95ನೇ ವಯಸ್ಸಿನಲ್ಲೂ ಹೊಸ ಕಥೆಯ ಕನಸು ಕಾಣುತ್ತಿದ್ದ ಭಾರತೀಯ ಚಿತ್ರರಂಗದ ಅಪ್ರತಿಮ ದಾರ್ಶನಿಕ ಸಿಂಗೀತಂ ಶ್ರೀನಿವಾಸರಾವ್ ನಮ್ಮೊಂದಿಗಿಲ್ಲ. ಆರು ದಶಕಗಳ ಕಾಲ ತಮ್ಮ ಅನಂತ...

ಸಂಪತ್ತು ಮತ್ತು ಮನುಷ್ಯನ ನೈತಿಕತೆ: ಅರ್ಥಶಾಸ್ತ್ರದ ಇಗ್ ನೊಬೆಲ್...

ಪ್ರತಿವರ್ಷ ನೊಬೆಲ್ ಪ್ರಶಸ್ತಿ ಘೋಷಣೆಯಾಗುವ ಕೆಲವೇ ದಿನಗಳ ಮೊದಲು ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ನೊಬೆಲ್ ಪುರಸ್ಕೃತರ ಸಮ್ಮುಖದಲ್ಲೇ ಇಗ್ ನೊಬೆಲ್ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ. "ಮೊದಲು ಜನರನ್ನು ನಗಿಸಬೇಕು, ನಂತರ ಅವರನ್ನು ಆಳವಾಗಿ ಯೋಚಿಸುವಂತೆ...

ಇದನ್ನೂ ಓದಿ: ತಾಜ್ ಮಹಲ್ ಆವರಣದಲ್ಲಿ ಪ್ರವಾಸಿಗರಿಂದ ಮೂತ್ರ ವಿಸರ್ಜನೆ: ತನಿಖೆಗೆ ಆದೇಶ

ಈ ಅರ್ಜಿ ವಿಚಾರಣೆ ನಡೆಸಿದ ಅಲಹಾಬಾದ್ ಹೈಕೋರ್ಟ್‌ನ ನ್ಯಾಯಮೂರ್ತಿ ರೋಹಿತ್ ರಂಜನ್ ಅಗರ್ವಾಲ್ ಅವರ ಏಕಸದಸ್ಯ ಪೀಠವು ಕೇಂದ್ರ, ಎಎಸ್‌ಐಗೆ ನೋಟಿಸ್ ನೀಡಿದೆ. ಹಾಗೆಯೇ ಪ್ರತಿ ಅಫಿಡವಿಟ್ ಸಲ್ಲಿಸುವಂತೆ ಸೂಚಿಸಿದೆ. ಹಾಗೆಯೇ ರಿಟ್ ಅರ್ಜಿಯಲ್ಲಿ 4ನೇ ಪ್ರತಿವಾದಿಯಾಗಿರುವ ಪಂಕಜ್ ಕುಮಾರ್ ವರ್ಮಾ ಅವರಿಗೆ ನೋಟಿಸ್ ಸಹ ನೀಡಿದರು.

ಬಿಜೆಪಿ ರಾಜಕೀಯಕ್ಕೆ ಸಿಲುಕಿದ ತಾಜ್ ಮಹಲ್

ದೇಶದಲ್ಲಿರುವ ಹಲವು ಮಸೀದಿ, ಧಾರ್ಮಿಕ ಸ್ಥಳಗಳು ಮೂಲತಃ ಹಿಂದೂ ದೇವಾಲಯ ಎಂದು ರಾಜಕೀಯವನ್ನು ಮಾಡಿಕೊಂಡು ಬರುತ್ತಿರುವ ಬಿಜೆಪಿ, ಆರ್‌ಎಸ್‌ಎಸ್, ಸಂಘಪರಿವಾರ ಹಲವು ವರ್ಷಗಳಿಂದ ತಾಜ್ ಮಹಲ್ ಮೂಲತಃ ಹಿಂದೂ ದೇವಾಲಯ ಎಂದು ಪ್ರತಿಪಾದಿಸುತ್ತಾ ಬಂದಿದೆ.

ಪಿ. ಎನ್. ಓಕ್ ಎಂಬ ಬರಹಗಾರನ ಸಿದ್ಧಾಂತವನ್ನು ಆಧರಿಸಿ, ಬಲಪಂಥೀಯ ಸಂಘಟನೆಗಳು ತಾಜ್‌ಮಹಲ್ ಮೂಲತಃ ಮೊಘಲರು ಕಟ್ಟಿದ್ದಲ್ಲ, ಅದು ‘ತೇಜೋ ಮಹಾಲಯ’ ಎಂಬ ಶಿವನ ದೇವಸ್ಥಾನವಾಗಿತ್ತು ಎಂದು ವಾದಿಸುತ್ತವೆ. ಶಹಾಜಹಾನ್ ರಾಜ ಜಯಸಿಂಹನಿಂದ ಈ ಜಾಗವನ್ನು ವಶಪಡಿಸಿಕೊಂಡು ಗೋರಿಯಾಗಿ ಪರಿವರ್ತಿಸಿದ ಎನ್ನುವುದು ಇವರ ಆರೋಪ.

ಕಾಲಕಾಲಕ್ಕೆ ಕೆಲವು ಬಿಜೆಪಿ ನಾಯಕರು (ಉದಾಹರಣೆಗೆ ವಿನಯ್ ಕಟಿಯಾರ್, ಸಂಗೀತ್ ಸೋಮ್) ತಾಜ್‌ಮಹಲ್ ಅನ್ನು “ಭಾರತೀಯ ಸಂಸ್ಕೃತಿಗೆ ಕಳಂಕ” ಅಥವಾ “ಅದು ಶೀಘ್ರದಲ್ಲೇ ಹಿಂದೂ ದೇವಸ್ಥಾನವಾಗಲಿದೆ” ಎಂಬ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಾ ಬಂದಿದ್ದಾರೆ. ಮುಸ್ಲಿಂ ಆಡಳಿತಗಾರರ ಇತಿಹಾಸವನ್ನು ತಿರುಚುವ ಪ್ರಯತ್ನ ಮಾಡುತ್ತಲೇ ಬರಲಾಗುತ್ತಿದೆ.

ಇದನ್ನೂ ಓದಿ: ಭಾರೀ ಮಳೆ | ತಾಜ್‌ಮಹಲ್‌ನ ಗುಮ್ಮಟದಲ್ಲಿ ನೀರು ಸೋರಿಕೆ

ತಾಜ್‌ಮಹಲ್ ಅನ್ನು ನಿರ್ವಹಿಸುವ ಎಎಸ್‌ಐ, ನ್ಯಾಯಾಲಯಗಳಿಗೆ ನೀಡಿರುವ ಅಧಿಕೃತ ಅಫಿಡವಿಟ್‌ಗಳಲ್ಲಿ “ತಾಜ್‌ಮಹಲ್ ಒಂದು ಮುಸ್ಲಿಂ ಗೋರಿಯಾಗಿದ್ದು, ಅದರ ಕೆಳಗೆ ಯಾವುದೇ ದೇವಸ್ಥಾನ ಇರಲಿಲ್ಲ ಮತ್ತು ಇಲ್ಲ” ಎಂದು ಸ್ಪಷ್ಟಪಡಿಸಿದೆ. ಮೊಘಲ್ ಕಾಲದ ಪರ್ಷಿಯನ್ ದಾಖಲೆಗಳು ಮತ್ತು ಜೈಪುರ ರಾಜಮನೆತನದ ದಸ್ತಾವೇಜುಗಳು ಕೂಡ ಇದನ್ನು ಶಹಾಜಹಾನ್ ನಿರ್ಮಿಸಿದ ಗೋರಿ ಎಂದೇ ದೃಢಪಡಿಸುತ್ತವೆ.

ಬಿಜೆಪಿ ಮತ್ತು ಸಂಘಪರಿವಾರದ ಈ ರಾಜಕೀಯವನ್ನು ಇತಿಹಾಸಕಾರರು ಹಾಗೂ ವಿಶ್ಲೇಷಕರು “ಇತಿಹಾಸ ತಿರುಚುವ ಪ್ರಯತ್ನ” ಮತ್ತು ಧ್ರುವೀಕರಣದ ರಾಜಕೀಯ ಎಂದು ದೂರಿದ್ದಾರೆ. ಆದರೆ, ಅಧಿಕೃತವಾಗಿ ಇಂದಿಗೂ ಪುರಾತತ್ವ ಇಲಾಖೆ ತಾಜ್‌ಮಹಲ್ ಅನ್ನು ಜಾಗತಿಕ ಪರಂಪರೆಯ ಮೊಘಲ್ ಸ್ಮಾರಕ ಎಂದೇ ಮಾನ್ಯ ಮಾಡಿದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭದ್ರಾವತಿಯ VISL ಎಜಿಎಂ ಗೋವಿಂದರಾಜು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ!

ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಬೆಚ್ಚಿಬೀಳಿಸುವ ಘಟನೆ ನಡೆದಿದ್ದು, VISL ಸಂಸ್ಥೆಯಲ್ಲಿ ಎಜಿಎಂ...

ಸುಪ್ರೀಂ ಕೋರ್ಟ್’ನ ನಕಲಿ ಆದೇಶ ಸೃಷ್ಟಿಸಿ ಜೀವಾವಧಿ ಕೈದಿ ಬಿಡುಗಡೆ: ಕಾರಾಗೃಹ ಡಿಐಜಿ ಸೋಮಶೇಖರ್ ಬಂಧನ

ನಕಲಿ ಸುಪ್ರೀಂ ಕೋರ್ಟ್ ಆದೇಶವನ್ನು ಬಳಸಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಕೈದಿಯೊಬ್ಬನನ್ನು...

ಬೀದರ್‌ | ಅ.7ರಂದು ಆಣದೂರ ಆರೋಗ್ಯ ಕೇಂದ್ರದಲ್ಲಿ ಸಾಮೂಹಿಕ ರಕ್ತದಾನ ಶಿಬಿರ

ಬೀದರ್‌ ತಾಲೂಕಿನ ಆಣದೂರ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಅ.7ರಂದು ಬೆಳಿಗ್ಗೆ...

ಧಾರವಾಡ | ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್ ಶಕ್ತಿ ಪ್ರದರ್ಶನ

ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ...