ಬಿಡದಿ ಟೌನ್‌ಶಿಪ್ ವಿವಾದ: ಬೆಂಗಳೂರು ಮಾತ್ರವೇ ಕರ್ನಾಟದ ಅಭಿವೃದ್ಧಿಯೇ?

Date:

ಬೆಂಗಳೂರು ಅಭಿವೃದ್ಧಿಯಾಗಬಾರದು ಎಂಬುದು ಯಾರ ಅಭಿಪ್ರಾಯವೂ ಅಲ್ಲ. ಆದರೆ ರಾಜ್ಯದ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಹೊಸ ಹೂಡಿಕೆಗಳು ಮತ್ತು ಮಹತ್ವಾಕಾಂಕ್ಷಿ ಯೋಜನೆಗಳನ್ನು ವಿವಿಧ ಪ್ರಾದೇಶಿಕ ಕೇಂದ್ರಗಳಿಗೆ ಹಂಚುವುದು ಕಾಲದ ಅಗತ್ಯವಾಗಿದೆ. ಕರ್ನಾಟಕದ ಭವಿಷ್ಯವು ಒಂದೇ ನಗರದ ಬೆಳವಣಿಗೆಯಲ್ಲಿ ಇರುವದಿಲ್ಲ, ಬದಲಿಗೆ ರಾಜ್ಯದ ಎಲ್ಲ ಭಾಗಗಳ ಸಮಾನ ಪ್ರಗತಿಯಲ್ಲಿ ಅಡಗಿದೆ.

ರಾಜ್ಯದ ಅಭಿವೃದ್ಧಿ ಎಂದಾಗ ಸರ್ಕಾರದ ಕಣ್ಣಿಗೆ ಕಾಣುವ ನಗರ ಬೆಂಗಳೂರು ಮಾತ್ರವೇ ಆಗಿದೆ. ಮಾಹಿತಿ ತಂತ್ರಜ್ಞಾನ, ಹೂಡಿಕೆ, ಉದ್ಯೋಗ, ಶಿಕ್ಷಣ, ಆರೋಗ್ಯ, ಮೂಲಸೌಕರ್ಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಬೆಂಗಳೂರು ದೇಶದ ಪ್ರಮುಖ ನಗರವಾಗಿ ಬೆಳೆದಿದೆ. ಆದರೆ ಈ ಬೆಳವಣಿಗೆಯ ಮತ್ತೊಂದು ಮುಖವೂ ಇದೆ. ರಾಜ್ಯದ ಬಹುತೇಕ ಸರ್ಕಾರಿ ಯೋಜನೆಗಳು, ಬೃಹತ್ ಹೂಡಿಕೆಗಳು ಮತ್ತು ಹೊಸ ಮಹತ್ವಾಕಾಂಕ್ಷಿ ಯೋಜನೆಗಳು ಮತ್ತೆ ಬೆಂಗಳೂರಿನ ಸುತ್ತಮುತ್ತಲೇ ಕೇಂದ್ರೀಕೃತವಾಗುತ್ತಿರುವುದು ಪ್ರಾದೇಶಿಕ ಅಸಮಾನತೆಗೆ ಕಾರಣವಾಗಿದೆ.

- Advertisement -

ಸುಮಾರು ₹20,000 ಕೋಟಿ ವೆಚ್ಚದಲ್ಲಿ ಬಿಡದಿ ಟೌನ್‌ಶಿಪ್ ಅಥವಾ ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್‌ ಟೌನ್‌ಶಿಪ್ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ. 7,500ರಿಂದ 9,000 ಎಕರೆ ಪ್ರದೇಶದಲ್ಲಿ ಸ್ವಾವಲಂಬಿ ಉಪಗ್ರಹ ನಗರ ನಿರ್ಮಿಸಿ ಬೆಂಗಳೂರಿನ ಸಂಚಾರ ದಟ್ಟಣೆ ಮತ್ತು ಜನಸಂಖ್ಯೆಯ ಒತ್ತಡ ಕಡಿಮೆ ಮಾಡುವುದು ಯೋಜನೆಯ ಉದ್ದೇಶವಾಗಿದೆ. ಆದರೆ ಈ ಯೋಜನೆಗಾಗಿ ಸಾವಿರಾರು ಎಕರೆ ಕೃಷಿಭೂಮಿ ಸ್ವಾಧೀನಪಡಿಸಿಕೊಳ್ಳುವ ವಿಚಾರ ರೈತರಲ್ಲಿ ಆತಂಕ ಮೂಡಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಪೊಲೀಸ್ ಸುಧಾರಣೆ | ಹೈಟೆಕ್ ಪೊಲೀಸಿಂಗ್ Vs ವಾಸ್ತವ:...

ಪೊಲೀಸ್‌ ಇಲಾಖೆಯನ್ನು ಆಧುನೀಕರಿಸಲು AI, ಸೈಬರ್‌ ತಂತ್ರಜ್ಞಾನ, ಡಿಜಿಟಲ್‌ ತನಿಖೆ, ಸಿಸಿಟಿವಿ, ಬಾಡಿ ಕ್ಯಾಮೆರಾ ಸೇರಿದಂತೆ ಹಲವು ತಂತ್ರಜ್ಞಾನಗಳು ಪ್ರವೇಶಿಸುತ್ತಿವೆ. ಆದರೆ ಹೈಟೆಕ್‌ ಆಗುತ್ತಿರುವ ಪೊಲೀಸ್‌ ವ್ಯವಸ್ಥೆ ಜನರ ಬದುಕಿಗೆ ಎಷ್ಟು ಹತ್ತಿರವಾಗುತ್ತಿದೆ?...

ಐದು ಭಾಷೆ, ಆರು ದಶಕ, ಅನಂತ ಪ್ರಯೋಗ: ಭಾರತೀಯ...

ಬದುಕಿನ ಕೊನೆಯ ಉಸಿರಿನವರೆಗೂ ಕೇವಲ ಸಿನಿಮಾವನ್ನೇ ಶ್ವಾಸವಾಗಿಸಿಕೊಂಡಿದ್ದ, 95ನೇ ವಯಸ್ಸಿನಲ್ಲೂ ಹೊಸ ಕಥೆಯ ಕನಸು ಕಾಣುತ್ತಿದ್ದ ಭಾರತೀಯ ಚಿತ್ರರಂಗದ ಅಪ್ರತಿಮ ದಾರ್ಶನಿಕ ಸಿಂಗೀತಂ ಶ್ರೀನಿವಾಸರಾವ್ ನಮ್ಮೊಂದಿಗಿಲ್ಲ. ಆರು ದಶಕಗಳ ಕಾಲ ತಮ್ಮ ಅನಂತ...

ಸಂಪತ್ತು ಮತ್ತು ಮನುಷ್ಯನ ನೈತಿಕತೆ: ಅರ್ಥಶಾಸ್ತ್ರದ ಇಗ್ ನೊಬೆಲ್...

ಪ್ರತಿವರ್ಷ ನೊಬೆಲ್ ಪ್ರಶಸ್ತಿ ಘೋಷಣೆಯಾಗುವ ಕೆಲವೇ ದಿನಗಳ ಮೊದಲು ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ನೊಬೆಲ್ ಪುರಸ್ಕೃತರ ಸಮ್ಮುಖದಲ್ಲೇ ಇಗ್ ನೊಬೆಲ್ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ. "ಮೊದಲು ಜನರನ್ನು ನಗಿಸಬೇಕು, ನಂತರ ಅವರನ್ನು ಆಳವಾಗಿ ಯೋಚಿಸುವಂತೆ...

ಇದರ ಜತೆಗೆ ದೇಶದ ಮೊದಲ ಕೃತಕ ಬುದ್ಧಿಮತ್ತೆ(AI) ನಗರಕ್ಕೂ ಬೆಂಗಳೂರನ್ನೇ ಆಯ್ಕೆ ಮಾಡಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಕರ್ನಾಟಕದಲ್ಲಿ ಬೆಂಗಳೂರು ಮಾತ್ರ ಅಭಿವೃದ್ಧಿಗೆ ಅರ್ಹವೇ? ಉಳಿದ ಜಿಲ್ಲೆಗಳು ಕೇವಲ ಸಂಪನ್ಮೂಲಗಳನ್ನು ಒದಗಿಸುವ ಪ್ರದೇಶಗಳಾಗಿಯೇ ಉಳಿಯಬೇಕೇ?

ಬೇರೆ ರಾಜ್ಯಗಳಲ್ಲಿಯ ಅಭಿವೃದ್ಧಿಯನ್ನು ನೋಡಿದಾಗ ಮಹಾರಾಷ್ಟ್ರದಲ್ಲಿ ಮುಂಬೈ ಜತೆಗೆ ಪುಣೆ, ನಾಗ್ಪುರ, ನಾಸಿಕ್ ನಗರಗಳು ಅಭಿವೃದ್ಧಿಯಾಗಿವೆ. ಗುಜರಾತ್‌ನಲ್ಲಿ ಅಹಮದಾಬಾದ್ ಜತೆಗೆ ಸೂರತ್, ವಡೋದರಾ ನಗರಗಳು ಬೆಳವಣಿಗೆ ಕಂಡಿವೆ. ತಮಿಳುನಾಡಿನಲ್ಲಿ ಚೆನ್ನೈ ಜತೆಗೆ ಕೊಯಮತ್ತೂರು, ಮದುರೈ, ತಿರುಚಿರಾಪಳ್ಳಿ ಕೈಗಾರಿಕೆ ಮತ್ತು ಶಿಕ್ಷಣ ಕೇಂದ್ರಗಳಾಗಿವೆ. ಆದರೆ ಕರ್ನಾಟಕದಲ್ಲಿ ಬಹುತೇಕ ಎಲ್ಲ ಪ್ರಮುಖ ಹೂಡಿಕೆಗಳು ಬೆಂಗಳೂರಿನ ಸುತ್ತಲೇ ಕೇಂದ್ರೀಕೃತವಾಗುತ್ತಿವೆ.

ಬೆಳಗಾವಿ, ಧಾರವಾಡ, ಕಲಬುರಗಿ, ವಿಜಯಪುರ, ಬಳ್ಳಾರಿ ಸೇರಿದಂತೆ ಅನೇಕ ನಗರಗಳು ಕೈಗಾರಿಕೆ, ಶಿಕ್ಷಣ, ಆರೋಗ್ಯ, ಐಟಿ ಮತ್ತು ಸೇವಾ ವಲಯಗಳಲ್ಲಿ ಬೆಳೆಯುವ ಎಲ್ಲ ಸಾಮರ್ಥ್ಯ ಹೊಂದಿವೆ. ಅಗತ್ಯ ಮೂಲಸೌಕರ್ಯ ಮತ್ತು ಸರ್ಕಾರಿ ಪ್ರೋತ್ಸಾಹ ದೊರೆತರೆ ಇವುಗಳು ಲಕ್ಷಾಂತರ ಉದ್ಯೋಗಗಳನ್ನು ಸೃಷ್ಟಿಸಬಲ್ಲವು. ಇದರಿಂದ ಬೆಂಗಳೂರಿನ ಮೇಲಿನ ಒತ್ತಡವೂ ಸ್ವಾಭಾವಿಕವಾಗಿ ಕಡಿಮೆಯಾಗುತ್ತದೆ.

ಲಭ್ಯವಿರುವ ಅಂಕಿ ಅಂಶಗಳ ಪ್ರಕಾರ, ಬೆಂಗಳೂರಿನಲ್ಲಿ ಒಂದು ಲಕ್ಷಕ್ಕೂ ಅಧಿಕ ಸಣ್ಣ, ಮಧ್ಯಮ ಮತ್ತು ಬೃಹತ್‌ ಕೈಗಾರಿಕೆಗಳು ಕಾರ್ಯನಿರ್ವಹಿಸುತ್ತಿದ್ದು, 67 ಸಾವಿರಕ್ಕೂ ಅಧಿಕ ಐಟಿ-ಬಿಟಿ ಕಂಪನಿಗಳು ನೆಲೆಸಿವೆ. ಆದರೆ ಉತ್ತರ ಕರ್ನಾಟಕದ ಭಾಗದಲ್ಲಿ ಸುಮಾರು 30 ಸಾವಿರ ನೋಂದಾಯಿತ ಕಾರ್ಖಾನೆಗಳಷ್ಟೇ ಇವೆ. ಈ ಅಂಕಿ-ಅಂಶಗಳೇ ಬೆಂಗಳೂರು ಮತ್ತು ಉತ್ತರ ಕರ್ನಾಟಕದ ನಡುವಿನ ಅಭಿವೃದ್ಧಿಯ ಅಂತರ ಎಷ್ಟರಮಟ್ಟಿಗೆ ಹೆಚ್ಚಿದೆ ಎಂಬುದನ್ನು ತೋರಿಸುತ್ತವೆ.

ಈ ಅಸಮಾನತೆಯ ಪರಿಣಾಮವಾಗಿ ಉತ್ತರ ಕರ್ನಾಟಕದ ಸಾವಿರಾರು ಯುವಜನರು ಪ್ರತಿವರ್ಷ ಉದ್ಯೋಗಕ್ಕಾಗಿ ಬೆಂಗಳೂರಿಗೆ ವಲಸೆ ಹೋಗುತ್ತಿದ್ದಾರೆ. ಇದರಿಂದ ರಾಜಧಾನಿಯ ಮೇಲೆ ಜನಸಂಖ್ಯೆ, ಸಂಚಾರ, ವಸತಿ, ನೀರು ಹಾಗೂ ಮೂಲಸೌಕರ್ಯಗಳ ಒತ್ತಡ ಹೆಚ್ಚುತ್ತಿದ್ದು, ಮತ್ತೊಂದೆಡೆ ಉತ್ತರ ಕರ್ನಾಟಕದಲ್ಲಿ ಉದ್ಯೋಗಾವಕಾಶಗಳ ಕೊರತೆ ಮುಂದುವರಿಯುತ್ತಿದೆ.

ಈ ಹಿನ್ನೆಲೆಯಲ್ಲಿ ಸರ್ಕಾರವು ಗ್ರೇಟರ್ ಬೆಂಗಳೂರು ಟೌನ್‌ಶಿಪ್‌ನಂತಹ ಮಹತ್ವಾಕಾಂಕ್ಷಿ ಯೋಜನೆಗಳನ್ನು ಕೇವಲ ಬೆಂಗಳೂರಿನ ಸುತ್ತಮುತ್ತ ಮಾತ್ರ ಸೀಮಿತಗೊಳಿಸದೆ, ಬೆಳಗಾವಿ, ಧಾರವಾಡ, ಕಲಬುರಗಿ, ವಿಜಯಪುರ, ಬಳ್ಳಾರಿ, ಮಂಗಳೂರು ಸೇರಿದಂತೆ ರಾಜ್ಯದ ಇತರೆ ನಗರಗಳಲ್ಲಿಯೂ ಜಾರಿಗೊಳಿಸಬೇಕು ಎಂಬುದು ಉತ್ತರ ಕರ್ನಾಟಕ ಜನರ ಪ್ರಮುಖ ಆಗ್ರಹವಾಗಿದೆ.

ಈ ಕುರಿತು ಯುವಕ ಕಲ್ಲಪ್ಪ ಮಾತನಾಡಿ, “ಬೆಂಗಳೂರು ಬೆಳೆದರೆ ರಾಜ್ಯ ಬೆಳೆದಂತಾಗುವುದಿಲ್ಲ. ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ, ಕರಾವಳಿ ಭಾಗವೂ ಬೆಳೆದಾಗ ಮಾತ್ರ ಕರ್ನಾಟಕ ನಿಜ ಅರ್ಥದಲ್ಲಿ ಅಭಿವೃದ್ಧಿ ಆದಂತಾಗುತ್ತದೆ. ಸರ್ಕಾರ ಒಂದೇ ಕಡೆ ಹೂಡಿಕೆ ಮಾಡುವುದನ್ನು ಬಿಟ್ಟು ಎಲ್ಲ ಭಾಗಗಳಿಗೂ ಸಮಾನ ಅವಕಾಶ ಕೊಡಬೇಕು. ಆಗ ಮಾತ್ರ ಯುವಜನರು ಊರು ಬಿಟ್ಟು ಬೆಂಗಳೂರಿಗೆ ವಲಸೆ ಹೋಗುವ ಪರಿಸ್ಥಿತಿ ತಪ್ಪುತ್ತದೆ” ಎಂದು ಹೇಳಿದರು.

ಪರಿಸರಕ್ಕೆ ಹಾನಿಯಾಗುವ ಪ್ರದೇಶದಲ್ಲೇ ಯೋಜನೆ ಯಾಕೆ?

ಬಿಡದಿ ಸಮೀಪದ ಪ್ರಸ್ತಾವಿತ Al ಸಿಟಿ ಹಾಗೂ ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಟೌನ್‌ಶಿಪ್ ಯೋಜನೆ ಅಭಿವೃದ್ಧಿಗಿಂತ ಹೆಚ್ಚಾಗಿ ಪರಿಸರ ಮತ್ತು ಕೃಷಿ ಭೂಮಿಯ ಸಂರಕ್ಷಣೆಯ ಪ್ರಶ್ನೆಯನ್ನು ಎತ್ತಿದೆ. ಅಭಿವೃದ್ಧಿ ಅಗತ್ಯವೇ ಸರಿ. ಆದರೆ ಅದು ಪರಿಸರ ನಾಶ ಮತ್ತು ರೈತರ ಬದುಕಿನ ಬೆಲೆಯ ಮೇಲೆ ಆಗಬೇಕೇ ಎಂಬ ಪ್ರಶ್ನೆ ಇಂದು ಗಂಭೀರವಾಗಿ ಕೇಳಿಬರುತ್ತಿದೆ.

ಯೋಜನೆಗೆ ಸಂಬಂಧಿಸಿದ ಆನ್‌ಲೈನ್ ಅರ್ಜಿಯ ಪ್ರಕಾರ, ಯೋಜನೆ ಜಾರಿಯಾದರೆ ಒಂಬತ್ತು ಕಂದಾಯ ಗ್ರಾಮಗಳ ಸುಮಾರು 5,000 ರೈತರು ತಮ್ಮ ಫಲವತ್ತಾದ ಕೃಷಿ ಭೂಮಿಯನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ. ಹಲವು ತಲೆಮಾರುಗಳಿಂದ ಕೃಷಿಯನ್ನೇ ಜೀವನಾಧಾರವಾಗಿಸಿಕೊಂಡಿರುವ ಕುಟುಂಬಗಳು ತಮ್ಮ ನೆಲೆ ಕಳೆದುಕೊಳ್ಳುವ ಆತಂಕದಲ್ಲಿವೆ.

ಇನ್ನೂ ಆತಂಕಕಾರಿ ಸಂಗತಿಯೆಂದರೆ, ಯೋಜನೆಗಾಗಿ ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಮರಗಳನ್ನು ತೆರವುಗೊಳಿಸಬೇಕಾಗುತ್ತದೆ ಎನ್ನಲಾಗಿದೆ. ಇದರಲ್ಲಿ 87,903 ತೆಂಗಿನ ಮರಗಳು, 83,536 ಅಡಿಕೆ ಮರಗಳು, 12,550 ಮಾವಿನ ಮರಗಳು ಹಾಗೂ 2,344 ಚಿಕ್ಕೂ ಮರಗಳು ಸೇರಿವೆ. ಇದಲ್ಲದೆ, ಮೂರು ಲಕ್ಷಕ್ಕೂ ಹೆಚ್ಚು ಬಾಳೆ ಗಿಡಗಳನ್ನು ಕಿತ್ತುಹಾಕುವ ಸಾಧ್ಯತೆಯನ್ನೂ ಉಲ್ಲೇಖಿಸಲಾಗಿದೆ. ಇಷ್ಟು ದೊಡ್ಡ ಪ್ರಮಾಣದ ಮರಗಳ ನಾಶವು ಪರಿಸರ ಸಮತೋಲನ, ಜೀವವೈವಿಧ್ಯ ಮತ್ತು ಸ್ಥಳೀಯ ಹವಾಮಾನದ ಮೇಲೆ ದೀರ್ಘಕಾಲೀನ ದುಷ್ಪರಿಣಾಮ ಉಂಟುಮಾಡುವ ಅಪಾಯವಿದೆ.

ಈ ಪ್ರದೇಶದಲ್ಲಿ ಹೈನುಗಾರಿಕೆ, ತೋಟಗಾರಿಕೆ, ರೇಷ್ಮೆ ಕೃಷಿ ಸೇರಿದಂತೆ ವಿವಿಧ ಗ್ರಾಮೀಣ ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿರುವ ಸುಮಾರು 3,500 ಕುಟುಂಬಗಳ ಜೀವನೋಪಾಯಕ್ಕೂ ಧಕ್ಕೆ ಉಂಟಾಗಲಿದೆ ಎಂಬ ಆತಂಕ ವ್ಯಕ್ತವಾಗಿದೆ. ಜತೆಗೆ ಅಂತರ್ಜಲ ಮರುಪೂರಣ ವ್ಯವಸ್ಥೆ, ನೀರಿನ ಸುರಕ್ಷತೆ ಹಾಗೂ ಆಹಾರ ಉತ್ಪಾದನೆಯ ಮೇಲೂ ಪ್ರತಿಕೂಲ ಪರಿಣಾಮ ಉಂಟಾಗುವ ಸಾಧ್ಯತೆ ಇದೆ. ಕೃಷಿ ಭೂಮಿಯನ್ನು ನಗರೀಕರಣಕ್ಕೆ ಪರಿವರ್ತಿಸುವುದರಿಂದ ಭವಿಷ್ಯದಲ್ಲಿ ಆಹಾರ ಭದ್ರತೆಯ ಮೇಲೆಯೂ ಪರಿಣಾಮ ಬೀರುವ ಸಾಧ್ಯತೆಯನ್ನು ಪರಿಸರ ತಜ್ಞರು ಸೂಚಿಸುತ್ತಿದ್ದಾರೆ.

ಅಭಿವೃದ್ಧಿ ಯೋಜನೆಗಳು ಅಗತ್ಯ. ಆದರೆ ಅವು ಪರಿಸರ ಸಂರಕ್ಷಣೆ, ರೈತರ ಹಿತಾಸಕ್ತಿ ಮತ್ತು ಸುಸ್ಥಿರ ಅಭಿವೃದ್ಧಿಯ ತತ್ವಗಳಿಗೆ ಅನುಗುಣವಾಗಿರಬೇಕು. ಲಕ್ಷಾಂತರ ಮರಗಳನ್ನು ಕಡಿದು, ಸಾವಿರಾರು ರೈತರ ಬದುಕನ್ನು ಅತಂತ್ರಗೊಳಿಸಿ ನಿರ್ಮಿಸುವ ಅಭಿವೃದ್ಧಿಯ ಮಾದರಿ ಎಷ್ಟು ಸಮರ್ಥನೀಯ ಎಂಬ ಪ್ರಶ್ನೆಗೆ ಸರ್ಕಾರ ಸ್ಪಷ್ಟ ಉತ್ತರ ನೀಡಬೇಕಾಗಿದೆ.

ಇದನ್ನೂ ಓದಿದ್ದೀರಾ? ತುಮಕೂರು ಪೆರಿಫೆರಲ್ ರಿಂಗ್ ರಸ್ತೆ: ರೈತರ ಬದುಕು ಮತ್ತು ಅಭಿವೃದ್ಧಿಯ ನಡುವಿನ ಸಂಘರ್ಷ

ಬೆಂಗಳೂರು ಅಭಿವೃದ್ಧಿಯಾಗಬಾರದು ಎಂಬುದು ಯಾರ ಅಭಿಪ್ರಾಯವೂ ಅಲ್ಲ. ಆದರೆ ರಾಜ್ಯದ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಹೊಸ ಹೂಡಿಕೆಗಳು ಮತ್ತು ಮಹತ್ವಾಕಾಂಕ್ಷಿ ಯೋಜನೆಗಳನ್ನು ವಿವಿಧ ಪ್ರಾದೇಶಿಕ ಕೇಂದ್ರಗಳಿಗೆ ಹಂಚುವುದು ಕಾಲದ ಅಗತ್ಯವಾಗಿದೆ. ಕರ್ನಾಟಕದ ಭವಿಷ್ಯವು ಒಂದೇ ನಗರದ ಬೆಳವಣಿಗೆಯಲ್ಲಿ ಇರುವದಿಲ್ಲ, ಬದಲಿಗೆ ರಾಜ್ಯದ ಎಲ್ಲ ಭಾಗಗಳ ಸಮಾನ ಪ್ರಗತಿಯಲ್ಲಿ ಅಡಗಿದೆ. ಇದೇ ಇಂದು ಸರ್ಕಾರದ ಮುಂದೆ ನಿಂತಿರುವ ದೊಡ್ಡ ಸವಾಲು ಮತ್ತು ಜನರ ನಿರೀಕ್ಷೆಯೂ ಆಗಿದೆ. ರಾಜ್ಯದ ಅಭಿವೃದ್ಧಿ ಎಂದರೆ ಕೇವಲ ಬೆಂಗಳೂರು ಅಲ್ಲ ಎನ್ನುವದನ್ನು ಸರ್ಕಾರವು ಅರಿಯಬೇಕಾಗಿದೆ. ರಾಜ್ಯದ ಅಭಿವೃದ್ಧಿಯ ಯೋಜನೆಗಳನ್ನು ರೂಪಿಸಬೇಕಿದೆ.

WhatsApp Image 2025 11 17 at 5.27.06 PM
ಸುನಿಲ್ ಹಂಪನ್ನವರ
+ posts

ಬೆಳಗಾವಿ ಜಿಲ್ಲಾ ಸಂಯೋಜಕರು

ಪೋಸ್ಟ್ ಹಂಚಿಕೊಳ್ಳಿ:

ಸುನಿಲ್ ಹಂಪನ್ನವರ
ಸುನಿಲ್ ಹಂಪನ್ನವರ
ಬೆಳಗಾವಿ ಜಿಲ್ಲಾ ಸಂಯೋಜಕರು

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಲಬುರಗಿ | ಹಳೆಯ ದ್ವೇಷಕ್ಕೆ ಪಂಪ್ ಆಪರೇಟರ್ ಬಲಿ; ಚಾಕು ಇರಿದು ಬರ್ಬರ ಹತ್ಯೆ

ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ಪಂಪ್ ಆಪರೇಟರ್‌ ಒಬ್ಬರ ಮೇಲೆ ಮಾರಕಾಸ್ತ್ರದಿಂದ ದಾಳಿ...

ಕಲಬುರಗಿ | ನಾಪತ್ತೆಯಾಗಿದ್ದ ಹೋಟೆಲ್‌ ವ್ಯಾಪಾರಿ ಶವವಾಗಿ ಪತ್ತೆ; ಕೊಲೆ ಶಂಕೆ

ಕಳೆದ ಶುಕ್ರವಾರದಿಂದ ನಾಪತ್ತೆಯಾಗಿದ್ದ ನಗರದ ಹೋಟೆಲ್‌ ವ್ಯಾಪಾರಿಯೊಬ್ಬರು ನಗರದ ಹೊರವಲಯದಲ್ಲಿ ಶವವಾಗಿ...

ಹಾಸನ | ರೈತರಿಗೆ ಹೆಚ್ಚಿನ ಪರಿಹಾರ ನೀಡುವಂತೆ ಸರ್ಕಾರಕ್ಕೆ ಒತ್ತಡ

ಹಾಸನ ಜಿಲ್ಲೆ ಆಲೂರು ತಾಲ್ಲೂಕನ್ನು ತೀವ್ರ ಬರಪೀಡಿತ ಪ್ರದೇಶವೆಂದು ಘೋಷಿಸಲಾಗಿದ್ದು, ರೈತರಿಗೆ...

ಯಾದಗಿರಿ | ಕಾಂಗ್ರೆಸ್‌ ತೆಕ್ಕೆಗೆ ಯುವ ನಾಯಕ ವೀರಾರಡ್ಡಿ ಮುನ್ನಾಳ

ಗುರುಮಿಠಕಲ್, ಯಾದಗಿರಿ ಮತಕ್ಷೇತ್ರದ ಯುವ ನಾಯಕ ಬಿ.ಎಸ್. ವೀರಾರಡ್ಡಿ ಮುನ್ನಾಳ ಅವರು...