ಶಬರಿಮಲೆ ವಿವಾದ | ನೀವು ದೇಶದ ಪ್ರಧಾನ ಅರ್ಚಕರೇ?- ಅರ್ಜಿ ಸಲ್ಲಿಸಿದವರಿಗೆ ಸುಪ್ರೀಂ ತರಾಟೆ

Date:

ಕೇರಳದ ಶಬರಿಮಲೆ ದೇವಸ್ಥಾನಕ್ಕೆ 10ರಿಂದ 50 ವರ್ಷ ವಯಸ್ಸಿನ ಮಹಿಳೆಯರ ಪ್ರವೇಶ ನಿಷೇಧವನ್ನು ಪ್ರಶ್ನಿಸಿ 2006ರಲ್ಲಿ ಪಿಐಎಲ್‌ ಸಲ್ಲಿಸಿದ ಭಾರತೀಯ ಯುವ ವಕೀಲರ ಸಂಘ (ಐವೈಎಲ್ಎ) ಅನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. “ನೀವು ದೇಶದ ಪ್ರಧಾನ ಅರ್ಚಕರೇ” ಎಂದು ಮಂಗಳವಾರ ಪ್ರಶ್ನಿಸಿದೆ.

- Advertisement -

ಈ ಪಿಐಎಲ್ ‘ಕಾನೂನು ಪ್ರಕ್ರಿಯೆಯ ದುರುಪಯೋಗ’ ಎಂದು ಹೇಳಿರುವ ಸುಪ್ರೀಂ, “ಇಂತಹ ಪಿಐಎಲ್‌ಗಳನ್ನು ಸಲ್ಲಿಸುವ ಬದಲು ಸಂಘವು ಬಾರ್ ಮತ್ತು ಅದರ ಕಿರಿಯ ಸದಸ್ಯರ ಕಲ್ಯಾಣಕ್ಕಾಗಿ ಕೆಲಸ ಮಾಡಬೇಕು” ಎಂದು ಹೇಳಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಚುನಾವಣಾ ಆಯೋಗದ ಸಭೆ: ಪರಿಹಾರವಲ್ಲ, ತೇಪೆ ಹಚ್ಚುವ ಕಾರ್ಯಕ್ರಮ

ಅವೈಜ್ಞಾನಿಕ 'SIR' ಪ್ರಕ್ರಿಯೆ ಮತ್ತು ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಸಾರ್ವಜನಿಕವಾಗಿ ಬಯಲಾದ ಬೆನ್ನಲ್ಲೇ ಬಿಡುಗಡೆಯಾದ ಚುನಾವಣಾ ಆಯೋಗದ ಪತ್ರಿಕಾ ಪ್ರಕಟಣೆ, ತಪ್ಪುಗಳನ್ನು ತಿದ್ದುವ ಬದಲು ವ್ಯವಸ್ಥೆಯ ಲೋಪಗಳಿಗೆ ತೇಪೆ ಹಚ್ಚುವ ಯತ್ನದಂತೆ ಕಾಣುತ್ತಿದೆ. ದೇಶದ ಇತಿಹಾಸದಲ್ಲೇ...

ಹೊರಟ್ಟಿ ಅವರ ಹೋರಾಟದ ಬದುಕು ಮತ್ತು ಅವರ ಭಕ್ತ...

ಗ್ಯಾರಂಟಿ ಯೋಜನೆಗಳಿಂದ ಕೂಲಿ ಕಾರ್ಮಿಕರು ಸಿಗುತ್ತಿಲ್ಲವೆಂಬ ಬಸವರಾಜ ಹೊರಟ್ಟಿ ಅವರ ಹೇಳಿಕೆ ಮತ್ತು ಅದಕ್ಕೆ ಸಿಕ್ಕ ಸಾರ್ವಜನಿಕ ಚಪ್ಪಾಳೆಗಳು, ಕೇವಲ ಹಸಿವನ್ನೇ ಶ್ರಮದ ಇಂಧನವನ್ನಾಗಿ ನೋಡುವ ಸಮಾಜದ ಕ್ರೂರ ಮನಸ್ಥಿತಿಯನ್ನು ಅನಾವರಣಗೊಳಿಸುತ್ತವೆ. ಬಸವರಾಜ ಹೊರಟ್ಟಿ...

History Repeats | ರೋಮ್‌ ಉರಿಯುತ್ತಿದ್ದಾಗ ಪಿಟೀಲು ನುಡಿಸಿದ...

ದೇಶದ ಪ್ರಜಾಪ್ರಭುತ್ವದ ಆಧಾರಸ್ತಂಭಗಳು ಒಂದೊಂದಾಗಿ ಕುಸಿಯುತ್ತಾ, ಚುನಾವಣಾ ವ್ಯವಸ್ಥೆಯೇ ಅಕ್ರಮ ಎಸಗುತ್ತಿರುವಾಗ, ನಿರುದ್ಯೋಗ-ಬೆಲೆ ಏರಿಕೆಯ ಭಾರದಿಂದ ಜನ ಹೈರಾಣಾಗಿರುವಾಗ ಭಾರತದ ಪ್ರಧಾನಿ ಭಜನೆ ಮಾಡುತ್ತಿದ್ದಾರೆ. ರೋಂ ಹೊತ್ತಿ ಉರಿಯುತ್ತಿದ್ದಾಗ ನೀರೋ ಪಿಟೀಲು...

ಇದನ್ನು ಓದಿದ್ದೀರಾ? ಮಹಿಳೆಯರಿಗೆ ಮತ್ತೆ ಮುಚ್ಚಲಿವೆಯೇ ಶಬರಿಮಲೆ ಅಯ್ಯಪ್ಪ ಸ್ವಾಮಿಯ ಬಾಗಿಲುಗಳು?

ಪೀಠದಲ್ಲಿರುವ ಏಕೈಕ ಮಹಿಳಾ ನ್ಯಾಯಮೂರ್ತಿಯಾದ ಬಿ ವಿ ನಾಗರತ್ನ, “ಭಾರತೀಯ ಯುವ ವಕೀಲರ ಸಂಘಕ್ಕೆ ಬೇರೆ ಯಾವುದೇ ಕೆಲಸವಿಲ್ಲವೇ? ಬಾರ್‌ನ ಕಲ್ಯಾಣಕ್ಕಾಗಿ ಕೆಲಸ ಮಾಡಲು ಆಗದೇ ಅಥವಾ ಈ ದೇಶದ ಕಾನೂನು ವ್ಯವಸ್ಥೆ ವಿಚಾರದಲ್ಲಿ ಪೀಠಕ್ಕೆ ಸಹಾಯ ಮಾಡಲು ಸಾಧ್ಯವಿಲ್ಲವೇ” ಎಂದು ಪ್ರಶ್ನಿಸಿದ್ದಾರೆ.

ಪಿಐಎಲ್‌ಗಳ ದುರುಪಯೋಗದ ಕುರಿತು ಪ್ರತಿಕ್ರಿಯಿಸಿದ ಸುಪ್ರೀಂ ಕೋರ್ಟ್, “ಪಿಐಎಲ್‌ಗಳು ‘ಖಾಸಗಿ ಹಿತಾಸಕ್ತಿ ಮೊಕದ್ದಮೆ’, ‘ಪ್ರಚಾರ ಹಿತಾಸಕ್ತಿ ಮೊಕದ್ದಮೆ’, ‘ಪೈಸಾ ಹಿತಾಸಕ್ತಿ ಮೊಕದ್ದಮೆ’ ಮತ್ತು ‘ರಾಜಕೀಯ ಹಿತಾಸಕ್ತಿ ಮೊಕದ್ದಮೆ’ಗಳಾಗಿ ಮಾರ್ಪಟ್ಟಿವೆ” ಎಂದು ಹೇಳಿದೆ.

ಇನ್ನು ಐವೈಎಲ್‌ಎ ಪರವಾಗಿ ಹಾಜರಾದ ವಕೀಲ ರವಿಪ್ರಕಾಶ್ ಗುಪ್ತಾ, ಪಿಐಎಲ್ ಜೂನ್ 2006ರಲ್ಲಿ ಪ್ರಕಟವಾದ ನಾಲ್ಕು ಪತ್ರಿಕೆ ಲೇಖನಗಳನ್ನು ಆಧರಿಸಿದೆ ಎಂದು ವಾದಿಸಿದ್ದಾರೆ. ಈ ವಾದ ಆಲಿಸಿದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯ ಕಾಂತ್, ಪಿಐಎಲ್ ಅನ್ನು ಸಂಪೂರ್ಣವಾಗಿ ವಜಾಗೊಳಿಸಬೇಕಾಗಿತ್ತು ಎಂದು ಟೀಕಿಸಿದ್ದಾರೆ. “ಈ ಲೇಖನವು ಪಿಐಎಲ್ ಸಲ್ಲಿಸುವುದಕ್ಕೆ ಹೇಗೆ ಕಾರಣವಾಗುತ್ತದೆ? ಪಿಐಎಲ್‌ಗಳನ್ನು ಸಲ್ಲಿಸುವ ಸಲುವಾಗಿ ಲೇಖನಗಳನ್ನು ಬರೆಯುವುದು ಸುಲಭ” ಎಂದು ಹೇಳಿದ್ದಾರೆ.

ಇದನ್ನು ಓದಿದ್ದೀರಾ? ಶಬರಿಮಲೆಗೆ ಹೋದ ಬೆಂಗಳೂರಿನ ಲಿಂಗತ್ವ ಅಲ್ಪಸಂಖ್ಯಾತರ ಮೇಲೆ ಕೇರಳ ಪೊಲೀಸರ ದೌರ್ಜನ್ಯ: ನಗ್ನಗೊಳಿಸಿ ಕಿರುಕುಳ

ನ್ಯಾಯಮೂರ್ತಿ ಕಾಂತ್ ಅವರ ಅಭಿಪ್ರಾಯವನ್ನು ಬೆಂಬಲಿಸಿದ ನ್ಯಾಯಮೂರ್ತಿ ನಾಗರತ್ನ, “ನಾವು ಹೈಕೋರ್ಟ್‌ಗಳು ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕರಿಗೆ ಅಗತ್ಯವಿರುವ ಪಿಐಎಲ್‌ಗಳನ್ನು ಸಲ್ಲಿಸುತ್ತೇವೆ. ಪತ್ರಿಕೆಗಳಲ್ಲಿ ಬರೆಯುವ ಲೇಖನಗಳಿಗಾಗಿ ಅಲ್ಲ” ಎಂದು ಹೇಳಿದರು.

ಶಬರಿಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶವು ದೇಶದ ಇತಿಹಾಸದಲ್ಲೇ ಒಂದು ವಿವಾದಾದ್ಮಕ ಹೋರಾಟವಾಗಿಯೇ ಉಳಿದಿದೆ. 2018ರಲ್ಲಿ ಶಬರಿಮಲೆಗೆ ಮಹಿಳೆಯರಿಗೂ ಪ್ರವೇಶಕ್ಕೆ ಅವಕಾಶ ನೀಡಿ ಸುಪ್ರೀಂ ಕೋರ್ಟ್ ಆದೇಶಿಸಿದೆ. ಆದರೆ ಇದೀಗ ಮತ್ತೆ ಮಹಿಳೆಯರಿಗೆ ಶಬರಿಮಲೆ ಅಯ್ಯಪ್ಪ ಸ್ವಾಮಿಯ ಬಾಗಿಲುಗಳು ಮುಚ್ಚಲಿವೆಯೇ ಎಂಬ ಪ್ರಶ್ನೆಗಳು ಹುಟ್ಟಿದೆ.

ಈ ಹಿಂದೆ ಬರೀ ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದ್ದ ಈ ಪ್ರಕರಣವು ಇಂದು ಬರೀ ಒಂದು ದೇವಾಲಯದ ಪ್ರಕರಣವಾಗಿ ಉಳಿದಿಲ್ಲ. ಬದಲಾಗಿ ಮುಸ್ಲಿಂ ಮಹಿಳೆಯರ ಮಸೀದಿ ಪ್ರವೇಶ, ಪಾರ್ಸಿ ಮಹಿಳೆಯರ ಅಗ್ನಿ ದೇವಾಲಯ ಪ್ರವೇಶ ಮೊದಲಾದವುಗಳ ವಿಚಾರಣೆ ಆಗಿಯೂ ಮಾರ್ಪಟ್ಟಿದೆ. ಸದ್ಯ 9 ನ್ಯಾಯಮೂರ್ತಿಗಳು ಈ ಅರ್ಜಿಗಳ ವಿಚಾರಣೆ ನಡೆಸುತ್ತಿದ್ದಾರೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

History Repeats | ರೋಮ್‌ ಉರಿಯುತ್ತಿದ್ದಾಗ ಪಿಟೀಲು ನುಡಿಸಿದ ʼನೀರೋʼ; ಭಾರತ ಉರಿಯುತ್ತಿರುವಾಗ ಭಜನೆ ಮಾಡಿದ ʼಮೋದಿʼ!

ದೇಶದ ಪ್ರಜಾಪ್ರಭುತ್ವದ ಆಧಾರಸ್ತಂಭಗಳು ಒಂದೊಂದಾಗಿ ಕುಸಿಯುತ್ತಾ, ಚುನಾವಣಾ ವ್ಯವಸ್ಥೆಯೇ ಅಕ್ರಮ ಎಸಗುತ್ತಿರುವಾಗ,...

ಪಾಕಿಸ್ತಾನದಲ್ಲಿ ಆತ್ಮಾಹುತಿ ದಾಳಿ: 11 ಮಂದಿ ಬಲಿ, 30 ಜನರಿಗೆ ಗಾಯ

ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಶನಿವಾರ ನಡೆದ ಭೀಕರ ಆತ್ಮಾಹುತಿ ದಾಳಿಯಲ್ಲಿ...

KPSC ಹಗರಣ | ಅಮಾನತಿನಲ್ಲಿರುವ ಐಎಎಸ್‌ ಗಂಗ್ವಾರ್‌ಗೆ ಜಾಮೀನು ನಿರಾಕರಣೆ

KPSC (ಕರ್ನಾಟಕ ಲೋಕಸೇವಾ ಆಯೋಗ) ನಡೆಸಿದ ಪಶು ವೈದ್ಯಾಧಿಕಾರಿ ನೇಮಕಾತಿ ಹಗರಣಕ್ಕೆ...

ಏಕಪಕ್ಷೀಯ ನಿರ್ಧಾರ ವಿವಾದದ ಬೆನ್ನಲ್ಲೇ ಸಭೆ: ಸರ್ವಮತದಿಂದ ತೀಮಾರ್ನಗಳ ತಗೆದುಕೊಂಡಿದ್ದು ಎಂದ ಇಸಿಐ

ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಹಾಗೂ ಚುನಾವಣಾ ಆಯುಕ್ತರಾದ...