‘ದಾಂಪತ್ಯವು ಮೌಲ್ಯ, ಭಾವನೆ, ವೈಫಲ್ಯಗಳ ಸಮ್ಮಿಶ್ರಣ’: ಪತಿಯ ವಿಚ್ಛೇದನ ಅರ್ಜಿ ವಜಾಗೊಳಿಸಿದ ಹೈಕೋರ್ಟ್‌

Date:

ದಾಂಪತ್ಯ ಸಂಬಂಧಗಳು ಮಾನವೀಯ ಮೌಲ್ಯಗಳು, ಭಾವನೆಗಳು ಹಾಗೂ ವ್ಯಕ್ತಿಗತ ವೈಫಲ್ಯಗಳ ಸಂಕೀರ್ಣ ಸಮ್ಮಿಶ್ರಣವಾಗಿವೆ ಎಂದು ತೆಲಂಗಾಣ ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ. ಪತ್ನಿಯ ವಿರುದ್ಧ ವಿವಾಹೇತರ ಸಂಬಂಧದ ಆರೋಪ ಹೊರಿಸಿ ವಿಚ್ಛೇದನ ಕೋರಿದ್ದ ಪತಿಯ ಮೇಲ್ಮನವಿಯನ್ನು ವಜಾಗೊಳಿಸಿದೆ. ‘ವಿವಾಹಗಳು ಸ್ವರ್ಗದಲ್ಲೇ ನಿಶ್ಚಯವಾಗುತ್ತವೆ’ ನಾಣ್ನುಡಿಯನ್ನು ಉಲ್ಲೇಖಿಸಿದ ನ್ಯಾಯಪೀಠವು, “ಪತಿಯು ತಾನು ಹೊರಿಸಿದ ಆರೋಪಗಳನ್ನು ಸೂಕ್ತ ಮತ್ತು ವಿಶ್ವಾಸಾರ್ಹ ಸಾಕ್ಷ್ಯಾಧಾರಗಳ ಮೂಲಕ ಸಾಬೀತುಪಡಿಸುವಲ್ಲಿ ಸಂಪೂರ್ಣವಾಗಿ ವಿಫಲನಾಗಿದ್ದಾರೆ” ಎಂದು ಹೇಳಿದೆ.

- Advertisement -

ಪ್ರಕರಣದ ಹಿನ್ನೆಲೆ: 1992ರಲ್ಲಿ ವಿವಾಹವಾಗಿದ್ದ ಈ ದಂಪತಿಗೆ ಮೂವರು ಗಂಡು ಮಕ್ಕಳಿದ್ದಾರೆ. ವಿದೇಶದಲ್ಲಿ ಉದ್ಯೋಗದಲ್ಲಿದ್ದ ಪತಿಯು ತನ್ನ ಪತ್ನಿಯಿಂದ ವಿಚ್ಛೇದನ ಕೇಳಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ವಿಚ್ಛೇದನದ ಅರ್ಜಿಯಲ್ಲಿ, “ನಾನು ದುಬೈ ಮತ್ತು ಇರಾಕ್‌ನಲ್ಲಿದ್ದಾಗ ಪ್ರತಿ ತಿಂಗಳು ಪತ್ನಿಗೆ ಕಳುಹಿಸುತ್ತಿದ್ದ ಲಕ್ಷಾಂತರ ರೂಪಾಯಿ ಹಣಕ್ಕೆ ಆಕೆ ಸರಿಯಾದ ಲೆಕ್ಕ ನೀಡಿಲ್ಲ. ಅಲ್ಲದೆ, ಮತ್ತೊಬ್ಬ ವ್ಯಕ್ತಿಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದಾರೆ. ಆಕೆ ಮತ್ತೊಬ್ಬ ವ್ಯಕ್ತಿಯೊಂದಿಗೆ ಇದ್ದುದ್ದನ್ನು ತನ್ನ ಹಿರಿಯ ಮಗನೇ ಕಣ್ಣಾರೆ ಕಂಡಿದ್ದು, ಆ ಸಂದರ್ಭದಲ್ಲಿ ಆಕೆ ಆತ್ಮಹತ್ಯೆಗೆ ಯತ್ನಿಸಿದ್ದರು” ಎಂದು ವಾದಿಸಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಯುಪಿ ಚುನಾವಣೆ | ಬಿಜೆಪಿಯ ಹಿಂದುತ್ವದ ಅಸ್ತ್ರಕ್ಕೆ ಎಸ್‌ಪಿ...

ಉತ್ತರ ಪ್ರದೇಶದ 2027ರ ವಿಧಾನಸಭಾ ಚುನಾವಣೆಗೆ ಕೇವಲ ಕೆಲವೇ ತಿಂಗಳುಗಳು ಬಾಕಿ ಇವೆ. ಆ ರಾಜ್ಯದ ರಾಜಕೀಯ ರಂಗದಲ್ಲಿ ಅತ್ಯಂತ ಮಹತ್ವದ ಬೆಳವಣಿಗೆಗಳು ಕಂಡುಬರುತ್ತಿವೆ. ಸಮಾಜವಾದಿ ಪಕ್ಷದ (ಎಸ್‌ಪಿ) ನಾಯಕ, ಮಾಜಿ ಮುಖ್ಯಮಂತ್ರಿ...

ಪಾತಾಳ ಸೀಳಿ ಪೈರಾಗಿ ಎದ್ದವನು: ಕನ್ನಡ ಮನಸ್ಸಿನಲ್ಲಿ ಬಲೀಂದ್ರನ...

ಸತ್ಯನಿಷ್ಠೆ, ಮಹೋದಾರತೆ ಮತ್ತು ಶ್ರಮಸಂಸ್ಕೃತಿಯ ಫಲವಂತಿಕೆಯಾಗಿ ಸಾವನ್ನು ಗೆದ್ದು ಜನಮಾನಸದಲ್ಲಿ ನೆಲೆಗೊಂಡಿರುವ ಬಲಿ ಕೇವಲ ಸೋಲಿನ ಸಂಕೇತವಲ್ಲ; ಆತ ಚಾರಿತ್ರಿಕವಾಗಿ ಪ್ರಭುತ್ವದ ವಂಚನೆಯನ್ನು ಬಯಲು ಮಾಡುವ ಜೀವಂತ ಪ್ರತಿರೋಧ. ಊರಿಗೆಲ್ಲ ದೀಪಾವಳಿಯು ಬೆಳಕಿನ ಸಂಭ್ರಮವಾದರೆ,...

ಗದಗ | ಬದುಕ ಬೆಳಗಿತು ಹಣತೆ: ಕುಂಬಾರಿಕೆಗೆ ಮರು...

ಆಧುನಿಕತೆಯ ಭರಾಟೆಯಲ್ಲಿ ಸಾಂಪ್ರದಾಯಿಕ ಕುಂಬಾರಿಕೆ ವೃತ್ತಿ ನಿಧಾನವಾಗಿ ಮರೆಯಾಗುತ್ತಿರುವ ಈ ಸಂದರ್ಭದಲ್ಲಿ, ರೋಣ ತಾಲೂಕಿನ ಕುರಹಟ್ಟಿ ಗ್ರಾಮದ ಮಹಿಳೆಯೊಬ್ಬರು ತಮ್ಮ ಕುಟುಂಬದ ಕುಲಕಸುಬನ್ನೇ ಆದಾಯದ ಪ್ರಮುಖ ಮೂಲವನ್ನಾಗಿಸಿಕೊಂಡು ಸ್ವಾವಲಂಬಿ ಬದುಕಿನತ್ತ ಹೆಜ್ಜೆಯಿಟ್ಟಿದ್ದಾರೆ. ಸಂಜೀವಿನಿ...

ಆದರೆ, ನ್ಯಾಯಾಲಯದಲ್ಲಿ ವಿಚಾರಣೆ ನಡೆಯುವಾಗ ಪ್ರಕರಣವು ಗಮನಾರ್ಹ ತಿರುವು ಪಡೆದುಕೊಂಡಿದೆ. ಪತಿಯು ತನ್ನ ವಾದವನ್ನು ಬೆಂಬಲಿಸಲು ತನ್ನ ಹಿರಿಯ ಮಗನನ್ನಾಗಲಿ ಅಥವಾ ಇತರ ಯಾವುದೇ ಸ್ವತಂತ್ರ ಸಾಕ್ಷಿಯನ್ನಾಗಲಿ ನ್ಯಾಯಾಲಯಕ್ಕೆ ಹಾಜರುಪಡಿಸಿರಲಿಲ್ಲ. ಬದಲಿಗೆ, ಹಿರಿಯ ಮಗನೇ ಸ್ವತಃ ತಾಯಿಯ ಪರವಾಗಿ ಸಾಕ್ಷಿ ನೀಡಲು ನ್ಯಾಯಾಲಯಕ್ಕೆ ಆಗಮಿಸಿ, ತಂದೆಯ ಎಲ್ಲ ಆರೋಪಗಳನ್ನು ತಳ್ಳಿಹಾಕಿದ್ದರು. ತಾನು ತಾಯಿಯನ್ನು ಯಾವುದೇ ವ್ಯಕ್ತಿಯೊಂದಿಗೆ ಹಿಡಿದಿಲ್ಲ. ತನ್ನ ತಾಯಿ ಆತ್ಮಹತ್ಯೆಗೆ ಯತ್ನಿಸಿಲ್ಲ ಎಂದು ಮಗ ಸ್ಪಷ್ಟಪಡಿಸಿದ್ದರು. ತಂದೆಯು ತಾಯಿಯಿಂದ ಪ್ರತ್ಯೇಕಗೊಳ್ಳುವ ಉದ್ದೇಶದಿಂದಷ್ಟೇ ಇಂತಹ ಕಲ್ಪಿತ ಮತ್ತು ಸುಳ್ಳು ದೂರುಗಳನ್ನು ನೀಡಿದ್ದಾರೆ ಎಂದು ಮಗ ಕೋರ್ಟ್‌ಗೆ ತಿಳಿಸಿದ್ದರು.

ವಾದ, ಪ್ರತಿವಾದ ಹಾಗೂ ಸಾಕ್ಷಿಗಳ ಹೇಳಿಕೆಗಳನ್ನು ಆಲಿಸಿದ ನ್ಯಾಯಮೂರ್ತಿಗಳಾದ ಕೆ. ಲಕ್ಷ್ಮಣ್ ಮತ್ತು ಕೆ. ಸುಜಾತಾ ಅವರನ್ನೊಳಗೊಂಡ ನ್ಯಾಯಪೀಠವು ನಿಜಾಮಾಬಾದ್‌ನ ಹಿರಿಯ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯ ನೀಡಿದ್ದ ಆದೇಶವನ್ನು ಎತ್ತಿಹಿಡಿದಿದೆ. “ಪತಿಯು ಹಿಂದು ವಿವಾಹ ಕಾಯ್ದೆಯಡಿ ಕೇವಲ ‘ವಂಚನೆ’ಯ ಆಧಾರದ ಮೇಲೆ ಮಾತ್ರ ವಿಚ್ಛೇದನ ಕೋರಿದ್ದರೇ ಹೊರತು, ‘ವಿಹಾವೇತರ ಸಂಬಂಧ’ದ ಆಧಾರದ ಮೇಲೆ ಅರ್ಜಿ ಸಲ್ಲಿಸಿರಲಿಲ್ಲ. ಅಷ್ಟೇ ಅಲ್ಲದೆ, ತನ್ನ ಪತ್ನಿಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದಾನೆ ಎನ್ನಲಾದ ವ್ಯಕ್ತಿಯನ್ನು ಈ ಪ್ರಕರಣದಲ್ಲಿ ಆತ ಪ್ರತಿವಾದಿಯನ್ನಾಗಿ ಸೇರಿಸಿರಲಿಲ್ಲ” ಎಂದು ಕೋರ್ಟ್‌ ಹೇಳಿದೆ.

ಈ ಲೇಖನ ಓದಿದ್ದೀರಾ?: ಗಡ್ಕರಿ-ಮೋಶಾ ಆಡಳಿತದಲ್ಲಿ ‘ವೋಟ್‌ ಚೋರಿ’ ಬೆನ್ನಲ್ಲೇ ‘ಪೆಟ್ರೋಲ್ ಚೋರಿ’: ₹62,000 ಕೋಟಿ ದೋಚುವ ಹುನ್ನಾರ!

“ವಿದೇಶದಿಂದ ಕಳುಹಿಸಿದ ಹಣವನ್ನು ಪತ್ನಿ ದುರುಪಯೋಗಪಡಿಸಿಕೊಂಡಿದ್ದಾರೆ. ಮನೆಯಲ್ಲಿದ್ದ ಚಿನ್ನಾಭರಣಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎಂಬ ಆರೋಪಗಳಿಗೂ ಸೂಕ್ತ ದಾಖಲೆಗಳನ್ನು ನೀಡಲು ಪತಿ ವಿಫಲನಾಗಿದ್ದಾರೆ. ಪಾಸುಬುಕ್ ನೀಡಿದ್ದರೂ, ಹಣದ ದುರುಪಯೋಗವನ್ನು ಸಾಬೀತುಪಡಿಸುವ ಸಾಕ್ಷ್ಯಗಳು ಲಭ್ಯವಿಲ್ಲ” ಎಂದು ನ್ಯಾಯಾಲಯ ಗಮನಿಸಿದೆ.

“ದಾಂಪತ್ಯ ವ್ಯಾಜ್ಯಗಳನ್ನು ಇತ್ಯರ್ಥಪಡಿಸುವಾಗ ಇತರ ಸಿವಿಲ್ ಮತ್ತು ಅಪರಾಧ ಪ್ರಕರಣಗಳಿಗಿಂತ ಭಿನ್ನವಾದ ಸವಾಲು ಎದುರಾಗುತ್ತದೆ. ಮಾನವನ ಮನಸ್ಸು ಅತ್ಯಂತ ಸಂಕೀರ್ಣವಾದದ್ದು. ನಡವಳಿಕೆಗಳು ಅಷ್ಟೇ ಜಟಿಲವಾದವು. ದಂಪತಿಗಳ ನಡುವಿನ ಸಾಮಾನ್ಯ ನಡವಳಿಕೆ, ಅವರ ಆರ್ಥಿಕ ಮತ್ತು ಸಾಮಾಜಿಕ ಹಿನ್ನೆಲೆ ಹಾಗೂ ದೀರ್ಘಕಾಲದ ಪ್ರತ್ಯೇಕತೆಗಳನ್ನು ನ್ಯಾಯಾಲಯಗಳು ಪರಿಗಣಿಸಬೇಕಾಗುತ್ತದೆ” ಎಂದು ನ್ಯಾಯಾಲಯ ಹೇಳಿದೆ.

ಆದಾಗ್ಯೂ, “ದಂಪತಿಗಳು ಈಗಾಗಲೇ ತಮ್ಮ ಹಳೆಯ ಕಹಿ ನೆನಪುಗಳನ್ನು ಮರೆತು ಒಂದಾಗುವ ಸಾಧ್ಯತೆಯನ್ನು ಮೀರಿ ‘ಮರಳಿ ಜೊತೆಗೂಡಲಾರದ ಹಂತಕ್ಕೆ’ ತಲುಪಿದ್ದಾರೆ ಎಂಬುದು ನಿಜವಾದರೂ, ಕೇವಲ ಈ ಕಾರಣಕ್ಕಾಗಿಯೇ ಸೂಕ್ತ ಸಾಕ್ಷ್ಯಗಳಿಲ್ಲದೆ ವಿಚ್ಛೇದನ ನೀಡಲು ಸಾಧ್ಯವಿಲ್ಲ. ಕೇವಲ ಆರೋಪಗಳನ್ನು ಮಾಡುವುದರಿಂದ ಯಾವುದೂ ಸಾಬೀತಾಗುವುದಿಲ್ಲ. ಅದನ್ನು ದೃಢವಾದ ಸಾಕ್ಷ್ಯಾಧಾರಗಳ ಮೂಲಕ ನಿರೂಪಿಸಬೇಕು” ಎಂದು ಕೋರ್ಟ್‌ ಹೇಳಿದೆ.

ಕೆಳ ನ್ಯಾಯಾಲಯದ ನಿರ್ಧಾರ ಸರಿಯಾಗಿದೆ ಎಂದು ಹೇಳಿರುವ ಕೋರ್ಟ್‌, ಪತಿಯ ಮೇಲ್ಮನವಿಯನ್ನು ವಜಾಗೊಳಿಸಿದೆ.

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು: ಟಾಟಾ ಕೈಗಾರಿಕಾ ಘಟಕದಲ್ಲಿ ಟ್ಯಾಂಕ್ ಸ್ವಚ್ಛಗೊಳಿಸುತ್ತಿದ್ದ ಮೂವರು ಗುತ್ತಿಗೆ ಕಾರ್ಮಿಕರ ಸಾವು

ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಕೈಗಾರಿಕಾ ಘಟಕವೊಂದರಲ್ಲಿ ನಿರ್ವಹಣಾ ಕಾರ್ಯದಲ್ಲಿ ತೊಡಗಿದ್ದ ಮೂವರು...

ತಮಿಳುನಾಡು: ರಸ್ತೆ ಮಧ್ಯೆ ಪಟಾಕಿ ಸಿಡಿಸಿದ್ದನ್ನು ಪ್ರಶ್ನಿಸಿದ ಪೊಲೀಸ್ ಅಧಿಕಾರಿಯ ಭೀಕರ ಹತ್ಯೆ

ತಮಿಳುನಾಡಿನ ಥೇಣಿಯಲ್ಲಿ ರಸ್ತೆ ಮಧ್ಯೆ ಪಟಾಕಿ ಸಿಡಿಸುತ್ತಿದ್ದ ಯುವಕರ ಗುಂಪನ್ನು ಪ್ರಶ್ನಿಸಿದ...

ಬೀದರ್‌ | ಹಾಲು, ಬಸ್ ಪ್ರಯಾಣ ದರ ಏರಿಕೆ ಹಿಂಪಡೆಯಲು ಕೆಆರ್‌ಎಸ್ ಆಗ್ರಹ

ಹಾಲು ಮತ್ತು ಬಸ್ ಪ್ರಯಾಣ ದರ ಏರಿಕೆಯನ್ನು ರಾಜ್ಯ ಸರ್ಕಾರ ತಕ್ಷಣವೇ...