ಬಂಗಾಳ SIR | ನೋಟಿಸ್ ನೀಡಲು, ಹೆಸರು ಮರು ಸೇರಿಸಲು ಸಾಧ್ಯವಿಲ್ಲ: EC ಪೋರ್ಟಲ್ ವಿರುದ್ಧ ನ್ಯಾಯಾಧೀಶರ ದೂರು

Date:

ಪಶ್ಚಿಮ ಬಂಗಾಳದಲ್ಲಿ SIR ವೇಳೆ ಮತದಾರರ ಪಟ್ಟಿಯಿಂದ ಹೊರಗಿಡಲಾದವರ ಮೇಲ್ಮನವಿಗಳ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ರಚಿಸಲಾಗಿರುವ ಟ್ರಿಬ್ಯೂನಲ್‌ಗಳ ನ್ಯಾಯಾಧೀಶರು, ಚುನಾವಣಾ ಆಯೋಗ ರೂಪಿಸಿರುವ ಡಿಜಿಟಲ್ ಪೋರ್ಟಲ್‌ನಲ್ಲಿರುವ ಹಲವು ತಾಂತ್ರಿಕ ಕೊರತೆಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

- Advertisement -

ಸುಮಾರು 27 ಲಕ್ಷ ಮತದಾರರನ್ನು ಮತದಾರರ ಪಟ್ಟಿಯಿಂದ ಕೈಬಿಟ್ಟ ಪ್ರಕರಣಗಳ ಮೇಲ್ಮನವಿಗಳ ವಿಚಾರಣೆ ನಡೆಸುತ್ತಿರುವ ಟ್ರಿಬ್ಯೂನಲ್‌ಗಳಿಗೆ, ಪಕ್ಷಗಳಿಗೆ ನೋಟಿಸ್ ನೀಡಲು, ಹೆಚ್ಚುವರಿ ದಾಖಲೆಗಳನ್ನು ಅಪ್‌ಲೋಡ್ ಮಾಡಲು, ವರ್ಚುವಲ್ ವಿಚಾರಣೆ ನಡೆಸಲು ಹಾಗೂ ಈಗಾಗಲೇ ವಿಲೇವಾರಿಯಾದ ಪ್ರಕರಣದಲ್ಲಿ ಮತದಾರರ ಹೆಸರನ್ನು ಮರುಸ್ಥಾಪಿಸಲು ಪೋರ್ಟಲ್‌ನಲ್ಲಿ ಸೂಕ್ತ ವ್ಯವಸ್ಥೆ ಇಲ್ಲ ಎಂದು ನ್ಯಾಯಾಧೀಶರು ದೂರಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಡಾ. ಟಿ.ಎಸ್.‌ ಚನ್ನೇಶ್‌ ಸರಣಿ | ವೈದ್ಯಕೀಯ ನೊಬೆಲ್‌...

ನಮ್ಮ ಮೆದುಳು, ಭಾವನೆಗಳನ್ನು, ವರ್ತನೆಗಳನ್ನು ಮತ್ತು ದೈಹಿಕ ಕಾರ್ಯಗಳನ್ನು ಹೇಗೆ ನಿಯಂತ್ರಿಸುತ್ತದೆ ಎಂಬುದನ್ನು ಸಂಶೋಧನೆಯಿಂದ ಬಿಡಿಸಿಟ್ಟು 2026ರ ವೈದ್ಯಕೀಯ ನೊಬೆಲ್‌ ಪ್ರಶಸ್ತಿಗೆ ಪಾತ್ರರಾದ ಮೂವರು ಸಂಶೋಧಕರು ಮತ್ತು ಸಂಶೋಧನೆಯ ಸುತ್ತಲಿನ ವಿಶ್ಲೇಷಣಾತ್ಮಕ ಬರಹ ಈ...

ಪೊಲೀಸ್ ಸುಧಾರಣೆ | ಹೈಟೆಕ್ ಪೊಲೀಸಿಂಗ್ Vs ವಾಸ್ತವ:...

ಪೊಲೀಸ್‌ ಇಲಾಖೆಯನ್ನು ಆಧುನೀಕರಿಸಲು AI, ಸೈಬರ್‌ ತಂತ್ರಜ್ಞಾನ, ಡಿಜಿಟಲ್‌ ತನಿಖೆ, ಸಿಸಿಟಿವಿ, ಬಾಡಿ ಕ್ಯಾಮೆರಾ ಸೇರಿದಂತೆ ಹಲವು ತಂತ್ರಜ್ಞಾನಗಳು ಪ್ರವೇಶಿಸುತ್ತಿವೆ. ಆದರೆ ಹೈಟೆಕ್‌ ಆಗುತ್ತಿರುವ ಪೊಲೀಸ್‌ ವ್ಯವಸ್ಥೆ ಜನರ ಬದುಕಿಗೆ ಎಷ್ಟು ಹತ್ತಿರವಾಗುತ್ತಿದೆ?...

ಐದು ಭಾಷೆ, ಆರು ದಶಕ, ಅನಂತ ಪ್ರಯೋಗ: ಭಾರತೀಯ...

ಬದುಕಿನ ಕೊನೆಯ ಉಸಿರಿನವರೆಗೂ ಕೇವಲ ಸಿನಿಮಾವನ್ನೇ ಶ್ವಾಸವಾಗಿಸಿಕೊಂಡಿದ್ದ, 95ನೇ ವಯಸ್ಸಿನಲ್ಲೂ ಹೊಸ ಕಥೆಯ ಕನಸು ಕಾಣುತ್ತಿದ್ದ ಭಾರತೀಯ ಚಿತ್ರರಂಗದ ಅಪ್ರತಿಮ ದಾರ್ಶನಿಕ ಸಿಂಗೀತಂ ಶ್ರೀನಿವಾಸರಾವ್ ನಮ್ಮೊಂದಿಗಿಲ್ಲ. ಆರು ದಶಕಗಳ ಕಾಲ ತಮ್ಮ ಅನಂತ...

19 ಟ್ರಿಬ್ಯೂನಲ್‌ಗಳ ಪೈಕಿ 15ಕ್ಕೂ ಹೆಚ್ಚು ನ್ಯಾಯಾಧೀಶರು ಆಗಸ್ಟ್ 11ರಂದು ನಡೆದ ಸಭೆಯಲ್ಲಿ ಈ ಸಮಸ್ಯೆಗಳನ್ನು ದಾಖಲಿಸಿದ್ದಾರೆ. ಸಭೆಯ ನಡಾವಳಿಗಳನ್ನು ಚುನಾವಣಾ ಆಯೋಗ ಹಾಗೂ ಕಲ್ಕತ್ತಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯವರ ಗಮನಕ್ಕೂ ತರಲಾಗಿದೆ.

ಟ್ರಿಬ್ಯೂನಲ್‌ಗಳು ಎದುರಿಸುತ್ತಿರುವ ಪ್ರಮುಖ ಸಮಸ್ಯೆ ಎಂದರೆ ಮೇಲ್ಮನವಿಯಲ್ಲಿರುವ ಪಕ್ಷಗಳಿಗೆ ನೋಟಿಸ್ ನೀಡಲು ಪೋರ್ಟಲ್‌ನಲ್ಲಿ ಯಾವುದೇ ಸೂಕ್ತ ವ್ಯವಸ್ಥೆ ಇಲ್ಲದಿರುವುದು. ಮೇ 2026ರಲ್ಲೇ ನೋಟಿಸ್ ನೀಡಲು ಬಳಸಬೇಕಾದ ನಮೂನೆಯನ್ನು ಕೆಲ ನ್ಯಾಯಾಧೀಶರು ಅನುಮೋದಿಸಿದ್ದರೂ, ಅದನ್ನು ಪೋರ್ಟಲ್‌ನಲ್ಲಿ ಅಳವಡಿಸಿಲ್ಲ ಎಂದು ನಡಾವಳಿಯಲ್ಲಿ ಉಲ್ಲೇಖಿಸಲಾಗಿದೆ.

Advertisements

ಇದರಿಂದಾಗಿ ಹಲವು ಟ್ರಿಬ್ಯೂನಲ್‌ಗಳು ಜಿಲ್ಲಾಧಿಕಾರಿ ಅಥವಾ ಜಿಲ್ಲಾ ಚುನಾವಣಾಧಿಕಾರಿಗಳ ಮೂಲಕ ಇ-ಮೇಲ್‌ನಲ್ಲಿ ನೋಟಿಸ್ ಕಳುಹಿಸುವ ಪ್ರಯತ್ನ ಮಾಡುತ್ತಿವೆ. ಆದರೆ ಇದಕ್ಕೆ ಪ್ರತಿಕ್ರಿಯೆ ಕಡಿಮೆ ಇರುವುದರಿಂದ ಮೇಲ್ಮನವಿಗಳ ವಿಲೇವಾರಿ ವಿಳಂಬವಾಗುತ್ತಿದೆ ಎಂದು ನ್ಯಾಯಾಧೀಶರು ಹೇಳಿದ್ದಾರೆ.

ಮತದಾರರು ಸಲ್ಲಿಸಿರುವ ದಾಖಲೆಗಳು ಅಪೂರ್ಣವಾಗಿದ್ದರೆ ಅಥವಾ ವಿಚಾರಣೆಯ ಸಂದರ್ಭದಲ್ಲಿ ಹೆಚ್ಚುವರಿ ದಾಖಲೆಗಳ ಅಗತ್ಯವಿದ್ದರೆ, ಅವುಗಳನ್ನು ಪಡೆದುಕೊಳ್ಳಲು ಹಾಗೂ ಪೋರ್ಟಲ್‌ನಲ್ಲಿ ಸಂಗ್ರಹಿಸಲು ಯಾವುದೇ ವ್ಯವಸ್ಥೆ ಇಲ್ಲ ಎಂದು ನ್ಯಾಯಾಧೀಶರು ತಿಳಿಸಿದ್ದಾರೆ. ಅದರ ಪರಿಣಾಮವಾಗಿ ಪ್ರತಿಯೊಂದು ಟ್ರಿಬ್ಯೂನಲ್ ತನ್ನದೇ ರೀತಿಯಲ್ಲಿ ಇ-ಮೇಲ್ ಅಥವಾ ಸಂಬಂಧಪಟ್ಟ ಅಧಿಕಾರಿಗಳ ಮೂಲಕ ದಾಖಲೆಗಳನ್ನು ಪಡೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಗತ್ಯವಿದ್ದ ಸಂದರ್ಭದಲ್ಲಿ ಪಕ್ಷಗಳನ್ನು ವರ್ಚುವಲ್ ಮೂಲಕ ವಿಚಾರಣೆ ನಡೆಸಲು ಪೋರ್ಟಲ್‌ನಲ್ಲಿ ಯಾವುದೇ ವ್ಯವಸ್ಥೆ ಇಲ್ಲ ಎಂಬುದು ಮತ್ತೊಂದು ಪ್ರಮುಖ ಆಕ್ಷೇಪವಾಗಿದೆ. ಅಲ್ಲದೆ, ಮತದಾರರ ಹೆಸರನ್ನು ಸೇರಿಸುವ ಅಥವಾ ತೆಗೆದುಹಾಕುವ ಮೂಲಕ ಪ್ರಕರಣವನ್ನು ವಿಲೇವಾರಿ ಮಾಡಿದ ಬಳಿಕ, ನ್ಯಾಯಾಲಯದ ಆದೇಶದ ಮೇರೆಗೆ ಹೆಸರು ಮರುಸ್ಥಾಪಿಸಬೇಕಾದ ಸಂದರ್ಭದಲ್ಲೂ ಪೋರ್ಟಲ್‌ನಲ್ಲಿ ಅದನ್ನು ಮರುಸ್ಥಾಪಿಸಲು ಸಾಧ್ಯವಾಗುತ್ತಿಲ್ಲ ಎಂದು ನ್ಯಾಯಾಧೀಶರು ಹೇಳಿದ್ದಾರೆ.

ಮೇಲ್ಮನವಿದಾರರು ತಮ್ಮ ಪ್ರಕರಣದ ಅಂತಿಮ ಆದೇಶದ ಪ್ರಮಾಣೀಕೃತ ಪ್ರತಿ ಪಡೆಯಲು ಅಥವಾ ಪೋರ್ಟಲ್‌ನಿಂದ ಆದೇಶವನ್ನು ಡೌನ್‌ಲೋಡ್ ಮಾಡಲು ಯಾವುದೇ ವ್ಯವಸ್ಥೆ ಇಲ್ಲ ಎಂಬುದನ್ನೂ ನ್ಯಾಯಾಧೀಶರು ಗಮನಕ್ಕೆ ತಂದಿದ್ದಾರೆ. ಮತದಾರರ ಹೆಸರು ಏಕೆ ಸೇರ್ಪಡೆಯಾಯಿತು ಅಥವಾ ಏಕೆ ಅಳಿಸಲಾಯಿತು ಎಂಬುದನ್ನು ತಿಳಿದುಕೊಳ್ಳಲು ಆದೇಶದ ಪ್ರತಿ ಅತ್ಯಂತ ಮುಖ್ಯವಾಗಿದೆ. ಮೇಲ್ಮನವಿಗಳ ವಿಚಾರಣೆ ವೇಳೆ ಕಾರಣಗಳನ್ನು ತಿಳಿಸಿ ದಾಖಲೆಗಳನ್ನು ಮರುಪರಿಶೀಲಿಸುವಂತೆ ಸುಪ್ರೀಂ ಕೋರ್ಟ್ ಕೂಡ ಸೂಚಿಸಿತ್ತು. ಜಿಲ್ಲಾಧಿಕಾರಿ, ಜಿಲ್ಲಾ ಚುನಾವಣಾಧಿಕಾರಿ ಅಥವಾ ಇತರ ಅಧಿಕಾರಿಗಳ ಕಚೇರಿಗಳಲ್ಲಿ ಭೌತಿಕವಾಗಿ ಸಲ್ಲಿಸಲಾದ ಮೇಲ್ಮನವಿಗಳ ನಿರ್ವಹಣೆಯಲ್ಲೂ ಸಮಸ್ಯೆ ಇದೆ ಎಂದು ನ್ಯಾಯಾಧೀಶರು ಹೇಳಿದ್ದಾರೆ.

ಇಂತಹ ಮೇಲ್ಮನವಿಗಳನ್ನು ಡಿಜಿಟಲೀಕರಣಗೊಳಿಸಿ ಸರಿಯಾದ ಮಾರ್ಗದ ಮೂಲಕ ಟ್ರಿಬ್ಯೂನಲ್‌ಗೆ ತಲುಪಿಸದಿದ್ದರೆ, ಸಂಬಂಧಪಟ್ಟ ಮತದಾರರಿಗೆ ಅನ್ಯಾಯವಾಗುವ ಸಾಧ್ಯತೆಯಿದೆ ಎಂದು ಅವರು ಎಚ್ಚರಿಸಿದ್ದಾರೆ. ಭೌತಿಕವಾಗಿ ಅಥವಾ ಆನ್‌ಲೈನ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶವಿದ್ದು, ಭೌತಿಕವಾಗಿ ಸಲ್ಲಿಸಲಾದ ಮೇಲ್ಮನವಿಗಳನ್ನು ಶೀಘ್ರವೇ ಡಿಜಿಟಲೀಕರಣಗೊಳಿಸಿ ಪೋರ್ಟಲ್‌ಗೆ ಅಪ್‌ಲೋಡ್ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಏಪ್ರಿಲ್ 6ರ ಆದೇಶದಲ್ಲೇ ಹೇಳಿತ್ತು.

ಈ ಸಮಸ್ಯೆ ಹೊಸದಲ್ಲ. ಮೇ 22ರಂದೇ ಒಬ್ಬ ಟ್ರಿಬ್ಯೂನಲ್ ನ್ಯಾಯಾಧೀಶರು ಕಲ್ಕತ್ತಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಪತ್ರ ಬರೆದು, ಮೇಲ್ಮನವಿಯಲ್ಲಿರುವ ಪಕ್ಷಗಳಿಗೆ ನೋಟಿಸ್ ನೀಡಲು ವ್ಯವಸ್ಥೆ ರೂಪಿಸುವಂತೆ ಮನವಿ ಮಾಡಿದ್ದರು. ನೋಟಿಸ್ ನೀಡುವ ವ್ಯವಸ್ಥೆಯ ಕೊರತೆಯಿಂದ ಮೇಲ್ಮನವಿಗಳ ವಿಲೇವಾರಿ ವೇಗದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದರು. ಅಲ್ಲದೆ, ಟ್ರಿಬ್ಯೂನಲ್‌ಗಳು ವಿಲೇವಾರಿ ಮಾಡಿರುವ ಮೇಲ್ಮನವಿಗಳ ಸಂಖ್ಯೆಯ ಕುರಿತು ಚುನಾವಣಾ ಆಯೋಗದಿಂದ ನಿಖರ ಮಾಹಿತಿ ಸಿಗುತ್ತಿಲ್ಲ ಎಂಬ ಆರೋಪವನ್ನೂ ನ್ಯಾಯಾಧೀಶರು ಮಾಡಿದ್ದರು.

ಪಶ್ಚಿಮ ಬಂಗಾಳದ SIR ಪ್ರಕ್ರಿಯೆಯಲ್ಲಿ ಚುನಾವಣಾ ಆಯೋಗವು ‘logical discrepancies’ ಮತ್ತು ‘unmapped’ ಎಂದು ಗುರುತಿಸಲಾದ ದಾಖಲೆಗಳ ಆಧಾರದ ಮೇಲೆ 60.06 ಲಕ್ಷ ಮತದಾರರನ್ನು ಪರಿಶೀಲನೆಯ ವ್ಯಾಪ್ತಿಗೆ ತಂದಿತ್ತು. ಸುಪ್ರೀಂ ಕೋರ್ಟ್ ಫೆಬ್ರವರಿ 20ರಂದು ಸಂವಿಧಾನದ ಆರ್ಟಿಕಲ್ 142 ಅಡಿಯಲ್ಲಿ ತನ್ನ ವಿಶೇಷ ಅಧಿಕಾರ ಬಳಸಿ, ಮತದಾರರ ಅರ್ಹತೆಯನ್ನು ನಿರ್ಧರಿಸಲು ನ್ಯಾಯಾಂಗ ಅಧಿಕಾರಿಗಳನ್ನು ನೇಮಿಸುವಂತೆ ಸೂಚಿಸಿತ್ತು. ಬಳಿಕ ಪಶ್ಚಿಮ ಬಂಗಾಳ, ಒಡಿಶಾ ಮತ್ತು ಜಾರ್ಖಂಡ್‌ನ ನೂರಾರು ನ್ಯಾಯಾಂಗ ಅಧಿಕಾರಿಗಳು ಈ ಪ್ರಕರಣಗಳನ್ನು ಪರಿಶೀಲಿಸಿದರು. ಅಂತಿಮವಾಗಿ ಸುಮಾರು 27.16 ಲಕ್ಷ ಮತದಾರರ ಹೆಸರುಗಳನ್ನು ಅಳಿಸಲಾಗಿತ್ತು. ಇವರಿಗೆ ಮೇಲ್ಮನವಿ ಸಲ್ಲಿಸಲು ಅವಕಾಶ ಕಲ್ಪಿಸುವ ಉದ್ದೇಶದಿಂದ ಸುಪ್ರೀಂ ಕೋರ್ಟ್ ಮಾರ್ಚ್ 10ರಂದು ನಿವೃತ್ತ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದ ಮೇಲ್ಮನವಿ ಟ್ರಿಬ್ಯೂನಲ್‌ಗಳನ್ನು ರಚಿಸಲು ಸೂಚಿಸಿತು. ಮಾರ್ಚ್ 20ರಂದು ಚುನಾವಣಾ ಆಯೋಗ 19 ಏಕಸದಸ್ಯ ಟ್ರಿಬ್ಯೂನಲ್‌ಗಳನ್ನು ಅಧಿಸೂಚನೆ ಮೂಲಕ ರಚಿಸಿತು. ಈ ಪೈಕಿ ಇಬ್ಬರು ನ್ಯಾಯಾಧೀಶರು ವೈಯಕ್ತಿಕ ಕಾರಣಗಳಿಂದ ರಾಜೀನಾಮೆ ನೀಡಿದ್ದು, ಅವರ ಸ್ಥಾನಕ್ಕೆ ಇತರ ನಿವೃತ್ತ ನ್ಯಾಯಾಧೀಶರನ್ನು ನೇಮಿಸಲಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಈ ದಿನ ಸಂಪಾದಕೀಯ | ಗ್ಯಾನೇಶ್ ರಕ್ಷಣೆಗಾಗಿ ಯುವತಿಯರನ್ನು ಪೀಡಿಸುವ ಕೀಚಕರಾಗುತ್ತಿದ್ದಾರೆಯೇ ದೆಹಲಿ ಪೊಲೀಸರು?

ಸೆಪ್ಟೆಂಬರ್ 18ರಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಮಾಹಿತಿಯಲ್ಲಿ ಚುನಾವಣಾ ಆಯೋಗವು, ಸೆಪ್ಟೆಂಬರ್ 10ರವರೆಗೆ ಒಟ್ಟು 38.31 ಲಕ್ಷ ಮೇಲ್ಮನವಿಗಳು ಸಲ್ಲಿಕೆಯಾಗಿವೆ ಎಂದು ತಿಳಿಸಿತ್ತು. ಇವುಗಳಲ್ಲಿ ಕೇವಲ 1.26 ಲಕ್ಷ ಮೇಲ್ಮನವಿಗಳನ್ನು ವಿಲೇವಾರಿ ಮಾಡಲಾಗಿದೆ. ಒಟ್ಟು ಮೇಲ್ಮನವಿಗಳ ಪೈಕಿ 22.21 ಲಕ್ಷವು ಮತದಾರರ ಪಟ್ಟಿಯಿಂದ ಅಳಿಸಲಾದವರು ಸಲ್ಲಿಸಿದವು, ಉಳಿದ 16.10 ಲಕ್ಷವು ಪಟ್ಟಿಗೆ ಸೇರ್ಪಡೆಯಾದವರ ವಿರುದ್ಧ ಸಲ್ಲಿಸಲಾದ ಮೇಲ್ಮನವಿಗಳು ಎಂದು ಆಯೋಗ ತಿಳಿಸಿತ್ತು.

ಈ ಹಿನ್ನೆಲೆದಲ್ಲಿ ಟ್ರಿಬ್ಯೂನಲ್‌ಗಳಿಗೆ ಅಗತ್ಯ ಡಿಜಿಟಲ್ ವ್ಯವಸ್ಥೆಯ ಕೊರತೆ ಮೇಲ್ಮನವಿ ಪ್ರಕ್ರಿಯೆಯ ವೇಗ ಹಾಗೂ ಮತದಾರರಿಗೆ ದೊರೆಯಬೇಕಾದ ನ್ಯಾಯಯುತ ಅವಕಾಶದ ಮೇಲೆಯೇ ಪ್ರಶ್ನೆ ಮೂಡಿಸಿದೆ. ಮಾರ್ಚ್ 10ರ ತನ್ನ ಆದೇಶದಲ್ಲಿಯೂ ಸುಪ್ರೀಂ ಕೋರ್ಟ್, ನ್ಯಾಯಾಂಗ ಅಧಿಕಾರಿಗಳು ಚುನಾವಣಾ ಆಯೋಗದ ವ್ಯವಸ್ಥೆಯಲ್ಲಿನ ಸಮಸ್ಯೆಗಳ ಬಗ್ಗೆ ಆತಂಕ ವ್ಯಕ್ತಪಡಿಸಿರುವುದನ್ನು ದಾಖಲಿಸಿತ್ತು. ಅಧಿಕಾರಿಗಳಿಗೆ ಅಗತ್ಯವಾದ ಸಂಪೂರ್ಣ ತಾಂತ್ರಿಕ ಹಾಗೂ ಆಡಳಿತಾತ್ಮಕ ನೆರವು ನೀಡುವಂತೆ ಆಯೋಗಕ್ಕೆ ಸೂಚಿಸಿತ್ತು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಕಾವ್ಯ ಸಮಾಜದ ನೋವು, ನಲಿವಿಗೆ ಸ್ಪಂದಿಸಲಿ : ಶಶಿಕಾಂತ ಶೆಂಬೆಳ್ಳಿ

ಸಾಹಿತ್ಯವು ಆತ್ಮಸಂತೋಷ ನೀಡುವುದರ ಜೊತೆಗೆ ಸಮಾಜದ ನೋವು-ನಲಿವುಗಳಿಗೆ ಸ್ಪಂದಿಸುವಂತಿರಬೇಕು. ಕಾಲದಿಂದ ಕಾಲಕ್ಕೆ...

ಈ ದಿನ ಸಂಪಾದಕೀಯ | ಗ್ಯಾನೇಶ್ ರಕ್ಷಣೆಗಾಗಿ ಯುವತಿಯರನ್ನು ಪೀಡಿಸುವ ಕೀಚಕರಾಗುತ್ತಿದ್ದಾರೆಯೇ ದೆಹಲಿ ಪೊಲೀಸರು?

ರಕ್ಷಕರೇ ಭಕ್ಷಕರಾಗುವ ಅದೇ ಹಳೆಯ ನಿರಾಶಾಜನಕ ಕತೆಯಿದು. ದೆಹಲಿ ಪ್ರತಿಭಟನೆಯಲ್ಲಿ ಪೊಲೀಸರ...

ಭದ್ರಾವತಿಯ VISL ಎಜಿಎಂ ಗೋವಿಂದರಾಜು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ!

ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಬೆಚ್ಚಿಬೀಳಿಸುವ ಘಟನೆ ನಡೆದಿದ್ದು, VISL ಸಂಸ್ಥೆಯಲ್ಲಿ ಎಜಿಎಂ...

ಸುಪ್ರೀಂ ಕೋರ್ಟ್’ನ ನಕಲಿ ಆದೇಶ ಸೃಷ್ಟಿಸಿ ಜೀವಾವಧಿ ಕೈದಿ ಬಿಡುಗಡೆ: ಕಾರಾಗೃಹ ಡಿಐಜಿ ಸೋಮಶೇಖರ್ ಬಂಧನ

ನಕಲಿ ಸುಪ್ರೀಂ ಕೋರ್ಟ್ ಆದೇಶವನ್ನು ಬಳಸಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಕೈದಿಯೊಬ್ಬನನ್ನು...