ಬಂಗಾಳ ಚುನಾವಣೆ | ‘ಜನತಾ ಪ್ರಣಾಳಿಕೆ’ ಅಭಿಯಾನ ನಡೆಸುತ್ತಿದೆ ಬಿಜೆಪಿ

Date:

ಕೆಲವೇ ವಾರಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಅಧಿಕಾರ ಉಳಿಸಿಕೊಳ್ಳಲು ಆಡಳಿತಾರೂಢ ಟಿಎಂಸಿ, ಅಧಿಕಾರ ಕಸಿದುಕೊಳ್ಳಲು ಬಿಜೆಪಿ ಹಾಗೂ ತಮ್ಮ ನೆಲೆಯನ್ನು ಹುಡುಕಿಕೊಳ್ಳಲು ಕಾಂಗ್ರೆಸ್‌ ಮತ್ತು ಎಡಪಕ್ಷಗಳು ಕಸರತ್ತು ನಡೆಸುತ್ತಿವೆ. ಚುನಾವಣಾ ಸಿದ್ದತೆಯಲ್ಲಿ ತೊಡಗಿವೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಅಳಿಯ, ಟಿಎಂಸಿ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ನೇತೃತ್ವದಲ್ಲಿ ಪಕ್ಷವು ‘ಬಂಗಾಳ ಮತ್ತೆ ಗೆಲ್ಲುತ್ತದೆ’ (ಆಬಾರ್ ಜಿತ್ಬೇ ಬಂಗ್ಲಾ) ಅಭಿಯಾನ ನಡೆಸುತ್ತಿದೆ. ಇದೀಗ, ಬಿಜೆಪಿ ಕೂಡ ‘ಜನತಾ ಪ್ರಣಾಳಿಕೆ’ ಅಭಿಯಾನ ಆರಂಭಿಸಿದೆ.

- Advertisement -

ಬಿಜೆಪಿ ಮೂಲಗಳ ಪ್ರಕಾರ, ಬಂಗಾಳದ ಎಲ್ಲ ಜಿಲ್ಲೆಗಳಲ್ಲಿಯೂ ಪಕ್ಷದ ಮುಖಂಡರು ಮತದಾರರಿಂದಿಗೆ ಚರ್ಚಿಸಲಿದ್ದಾರೆ. ಬಿಜೆಪಿ ಮುಖಂಡರು ಪ್ರತಿ ಗ್ರಾಮ, ಪಟ್ಟಣ ಹಾಗೂ ನಗರಗಳಲ್ಲಿ ಜನರಿಂದ ಸಲಹೆಗಳನ್ನು ಪಡೆಯಲಿದ್ದಾರೆ. ಮತದಾರರಿಂದ ನೇರವಾಗಿ  ಪಡೆದ ಪ್ರತಿಕ್ರಿಯೆಗಳ ಆಧಾರದ ಮೇಲೆ ಪ್ರಣಾಳಿಕೆಯನ್ನು ಸಿದ್ಧಪಡಿಸಲಾಗುತ್ತಿದೆ. ಪ್ರಣಾಳಿಕೆಯು ಮಾರ್ಚ್ ಮೊದಲ ವಾರದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗಡುಸಾದ ದನಿಯೊಳಗಿನ ಮೃದು ಮನಸ್ಸು: ʼನಾನಾ ಪಾಟೇಕರ್ʼ ಎಂಬ...

ಅವರ ಗಡುಸಾದ ದನಿಯಲ್ಲಿ ಸಾಮಾನ್ಯ ಮನುಷ್ಯನ ಆಕ್ರೋಶವಿತ್ತು; ಅವರ ತೀಕ್ಷ್ಣ ನೋಟದಲ್ಲಿ ಬದುಕಿನ ಕಹಿ ಸತ್ಯಗಳಿದ್ದವು. ‘ಕ್ರಾಂತಿವೀರ್’ನಲ್ಲಿ ಅನ್ಯಾಯದ ವಿರುದ್ಧ ಸಿಡಿದವರು, ‘ಖಾಮೋಶಿ’ಯಲ್ಲಿ ಮಾತಿಲ್ಲದೆ ಮನಸ್ಸು ತಟ್ಟಿದವರು, ‘ವೆಲ್‌ಕಮ್’ನಲ್ಲಿ ನಗುವಿನ ಹೊಳೆ ಹರಿಸಿದವರು...

ಕೂಲಿಕಾರ್ಮಿಕರ ಮೊಮ್ಮಗಳ ವಿಶ್ವ ವಿಜಯ: ಭಾರತೀಯ ಮೂಲದ ನವಿ...

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ಮಾಜಿ ಮುಖ್ಯಸ್ಥೆ ಹಾಗೂ ಪ್ರಸ್ತುತ ಅಂತಾರಾಷ್ಟ್ರೀಯ ನ್ಯಾಯಾಲಯದ (ICJ) ನ್ಯಾಯಾಧೀಶರಾಗಿರುವ ದಕ್ಷಿಣ ಆಫ್ರಿಕಾ ಮತ್ತು ಭಾರತೀಯ ಮೂಲದ ನವನೀತಮ್ 'ನವಿ' ಪಿಳ್ಳೈ (85) ಅವರಿಗೆ 2026ನೇ ಸಾಲಿನ...

ಉತ್ತರ ಕನ್ನಡ | ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ‘ಅಕ್ಕ...

ಉತ್ತರ ಕನ್ನಡ ಜಿಲ್ಲೆಯಲ್ಲಿ 'ಅಕ್ಕ ಕೆಫೆ' ಯೋಜನೆ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಗ್ರಾಮೀಣ ಮಹಿಳೆಯರು ಸ್ವಂತ ಉದ್ಯಮ ನಡೆಸಿ ಆರ್ಥಿಕ ಸ್ವಾವಲಂಬನೆ ಸಾಧಿಸಲು ಮತ್ತು ಉದ್ಯಮಿಗಳಾಗಿ ಹೊರಹೊಮ್ಮಲು ಇದು ದಾರಿಮಾಡಿಕೊಟ್ಟಿದೆ. ಸಂಜೀವಿನಿ ಎನ್‌ಆರ್‌ಎಲ್‌ಎಂ ಯೋಜನೆಯಡಿ...

“ಈಗಾಗಲೇ ಕೆಲವು ಭಾಗಗಳಿಂದ ಪ್ರತಿಕ್ರಿಯೆಗಳು ಬಂದಿವೆ. ಅವುಗಳು ಪ್ರಮಾಣಿಕವಾಗಿವೆ. ಜನರು ರಾಜಕೀಯ ಘೋಷಣೆಗಳನ್ನು ನೀಡುತ್ತಿಲ್ಲ. ಬದಲಾಗಿ ತಮ್ಮ ದೈನಂದಿನ ಹೋರಾಟಗಳು ಮತ್ತು ಜೀವನದ ಅನುಭವಗಳ ಬಗ್ಗೆ ಹೇಳುತ್ತಿದ್ದಾರೆ” ಎಂದು ಬಿಜೆಪಿ ಹೇಳಿಕೊಂಡಿದೆ.

ಜನರೇ ನೆರವಾಗಿ ಸಲಹೆಗಳನ್ನು ನೀಡಲು ಬಿಜೆಪಿ ಜಿಲ್ಲಾ ಕಚೇರಿಗಳಲ್ಲಿ ಸಲಹಾ ಪಟ್ಟಿಗೆಗಳನ್ನು ತೆರೆಯಲಾಗಿದೆ. ಇಮೇಲ್‌ ಮೂಲಕವೂ ಸಲಹೆಗಳನ್ನು ಕಳಿಸಲು ಅವಕಾಶವಿದೆ. ವಿದ್ಯಾರ್ಥಿಗಳು, ಗೃಹಿಣಿಯರು ಹಾಗೂ ದಿನಗೂಲಿ ಕಾರ್ಮಿಕರು ಈ ಅಭಿಯಾನದಲ್ಲಿ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ ಎಂದು ಬಿಜೆಪಿ ಹೇಳಿದೆ.

ಈ ಲೇಖನ ಓದಿದ್ದೀರಾ?: ಬಹುತ್ವದ ಬುಡಕ್ಕೇ ಕೊಡಲಿಪೆಟ್ಟು: ಸಮಾಜವನ್ನು ಆವರಿಸುತ್ತಿರುವ ಅಸಹಿಷ್ಣುತೆಯ ಕಾರ್ಮೋಡ

ಈವರೆಗೆ ಬಂದಿರುವ ಸಲಹೆಗಳಲ್ಲಿ ಪ್ರಮುಖ ಅಂಶಗಳನ್ನು ಪಟ್ಟಿ ಮಾಡಲಾಗಿದೆ ಎಂದಿರುವ ಬಿಜೆಪಿ, ಕೆಲವು ಅಂಶಗಳನ್ನು ಬಿಡುಗಡೆ ಮಾಡಿದೆ.

* ಭ್ರಷ್ಟಾಚಾರದ ಆರೋಪಗಳು.
* ಭಯಮುಕ್ತ ಸಮಾಜ ಮತ್ತು ಕಟ್ಟುನಿಟ್ಟಾದ ಕಾನೂನು ಸುವ್ಯವಸ್ಥೆಗಾಗಿ ಬೇಡಿಕೆ.
* ಬಂಗಾಳದೊಳಗೆ ಉದ್ಯೋಗ ಸೃಷ್ಟಿ ಮತ್ತು ಕೈಗಾರಿಕಾ ಅಭಿವೃದ್ಧಿ.
* ಸಿಂಡಿಕೇಟ್ ನಿಯಂತ್ರಣ ಮತ್ತು ಸ್ಥಳೀಯ ಬೆದರಿಕೆಗಳ ಆರೋಪ.
* ರಾಜಕೀಯ ಮಧ್ಯವರ್ತಿಗಳಿಲ್ಲದೆ ಕಲ್ಯಾಣ ಯೋಜನೆಗಳ ನೇರ ಜಾರಿ.
* ಯುವಜನರು ಬೇರೆ ರಾಜ್ಯಗಳಿಗೆ ವಲಸೆ ಹೋಗುವುದನ್ನು ತಡೆಯಲು ಅವಕಾಶಗಳ ಸೃಷ್ಟಿ.
* ಸಮಾಜದ ಎಲ್ಲ ವರ್ಗಗಳಿಗೆ ಘನತೆ, ಭದ್ರತೆ ಮತ್ತು ಗೌರವ.

“ಅನೇಕ ಕಡೆಗಳಲ್ಲಿ ಈ ಅಭಿಯಾನವು ರಾಜಕೀಯ ಚಟುವಟಿಕೆಗಿಂತ ಸಾರ್ವಜನಿಕ ಅಹವಾಲು ಆಲಿಕೆಯಂತೆ ಭಾಸವಾಯಿತು. ಜನರು ಮಾತನಾಡಿದರು, ನಾವು ಆಲಿಸಿದೆವು. ಅವುಗಳಲ್ಲಿ, ಮಹಿಳಾ ಸುರಕ್ಷತೆ ಮತ್ತು ಸ್ಥಳೀಯ ಉದ್ಯೋಗಾವಕಾಶ ಕುರಿತು ಹೆಚ್ಚು ಬೇಡಿಕೆಗಳಿವೆ” ಎಂದು ಬಿಜೆಪಿ ನಾಯಕರು ಹೇಳಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅ. 10ರ ಜಂತರ್ ಮಂತರ್ ಪ್ರತಿಭಟನೆಗೆ ಅನುಮತಿ ನಿರಾಕರಿಸಿದ ದೆಹಲಿ ಪೊಲೀಸ್; ಕಠಿಣ ಕ್ರಮದ ಎಚ್ಚರಿಕೆ

ಮುಖ್ಯ ಚುನಾವಣಾ ಆಯುಕ್ತರ (CEC) ಹೊಣೆಗಾರಿಕೆ ಪ್ರಶ್ನಿಸಿ 'ಕಾಕ್ರೋಚ್ ಜನತಾ ಪಾರ್ಟಿ'...

ಪಂಜಾಬ್ ಸಿಎಂ ಕಚೇರಿ ಭ್ರಷ್ಟಾಚಾರದ ಸಿಬಿಐ ತನಿಖೆ ವಿಚಾರಣೆಯಿಂದ ಹಿಂದೆ ಸರಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಕಚೇರಿಗೆ ಸಂಬಂಧಿಸಿದ ಭ್ರಷ್ಟಾಚಾರದ ಆರೋಪಗಳ...

ಪಶ್ಚಿಮ ಬಂಗಾಳ ಉಪಚುನಾವಣೆ ವೇಳೆ ಅಕ್ರಮದ ಆರೋಪ; ಮರುಮತದಾನಕ್ಕೆ ವಿಪಕ್ಷಗಳ ಆಗ್ರಹ

ಪಶ್ಚಿಮ ಬಂಗಾಳದ ನಂದಿಗ್ರಾಮ ಮತ್ತು ರೇಜಿನಗರ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಮತ...