ಬಂಗಾಳ ಚುನಾವಣೆ | ಸುವೇಂದು ಅಧಿಕಾರಿ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ; ಸ್ಫೋಟಿಸುವುದೇ ಬಂಡಾಯ?

Date:

ಸುವೇಂದು ಅಧಿಕಾರಿಯನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸುವುದು ಬಂಗಾಳದಲ್ಲಿ ಬಿಜೆಪಿಯನ್ನು ಕಟ್ಟಿ-ಬೆಳೆಸಿದ ಹಳಯ ನಾಯಕರಲ್ಲಿ ಅಸಮಾಧಾನ ಉಂಟುಮಾಡುವ ಸಾಧ್ಯತೆಗಳಿವೆ.

ಪಶ್ಚಿಮ ಬಂಗಾಳ ಚುನಾವಣಾ ಕಣ ಗರಿಗೆದರಿದೆ. ಇತ್ತೀಚಿನ ಯಾವುದೇ ರಾಜ್ಯ ಚುನಾವಣೆಗಳಲ್ಲೂ ತಮ್ಮ  ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸದೆ ಚುನಾವಣೆ ಎದುರಿಸುತ್ತಿದ್ದ ಬಿಜೆಪಿ, ಬಂಗಾಳದಲ್ಲಿ ಚುನಾವಣೆಗೂ ಮುನ್ನವೇ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಲು ಸಾಹಕಕ್ಕೆ ಕೈಹಾಕಿದೆ. ತಮ್ಮ ಭದ್ರಕೋಟೆ ನಂದಿಗ್ರಾಮ ಮತ್ತು ಮಮತಾ ಅವರ ಅಖಾಡ ಭವಾನಿಪುರದಲ್ಲೂ ಸ್ಪರ್ಧಿಸಿರುವ ವಿಪಕ್ಷ ನಾಯಕ ಸುವೇಂದು ಅಧಿಕಾರಿಯನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಜೆಪಿ ಘೋಷಿಸಲು ಸಜ್ಜಾಗಿದೆ.

- Advertisement -

ಗುರುವಾರ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ರಾಜ್ಯ ಬಿಜೆಪಿ ಮಾಜಿ ಅಧ್ಯಕ್ಷ ದಿಲೀಪ್ ಘೋಷ್‌ ಸಮ್ಮುಖದಲ್ಲಿ ಸುವೇಂದು ಅಧಿಕಾರಿ ಭವಾನಿಪುರದಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ. ಇದೇ ವೇಳೆ, ಅಮಿತ್ ಶಾ ಅವರ ಒತ್ತಾಯದ ಮೇರೆಗೆ ಚುನಾವಣೆಗೂ ಮುನ್ನವೇ ಸುವೇಂದು ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಜೆಪಿ ಘೋಷಿಸಲಿದೆ. ಆ ಮೂಲಕ, ಚುನಾವಣೆಗೆ ಯಾವುದೇ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಅಧಿಕೃತವಾಗಿ ಘೋಷಿಸದಿರುವ ತನ್ನ ಅಲಿಖಿತ ನೀತಿಯನ್ನು ಬಿಜೆಪಿ ಮುರಿಯಲಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

SIR ವಿರೋಧಿ ಹೋರಾಟ: ಡಿಕೆಶಿ–ಮಮತಾ ತೋರಿದ ದಾರಿ ವಿಪಕ್ಷಗಳಿಗೆ...

ಭಾರತದ ಪ್ರಜಾಪ್ರಭುತ್ವದ ಅಡಿಪಾಯವೇ ನ್ಯಾಯಯುತ, ಸ್ವತಂತ್ರ ಹಾಗೂ ಪಾರದರ್ಶಕ ಚುನಾವಣೆ. ಆದರೆ, ಅಧಿಕಾರದ ಗದ್ದುಗೆ ಏರಿರುವ ಮೋದಿ-ಶಾ ಜೋಡಿ, ಈ ಅಡಿಪಾಯವನ್ನೇ (ಚುನಾವಣಾ ಆಯೋಗವನ್ನೇ) ತಮ್ಮ ಸೂತ್ರದ ಬೊಂಬೆ ಮಾಡಿಕೊಂಡಿದೆ. ಎಸ್‌ಐಆರ್‌ ಹೆಸರಿನಲ್ಲಿ...

ಪೊಲೀಸ್ ಇಲಾಖೆ ಸುಧಾರಣೆಗೆ 3 ಸಮಿತಿ; ಬದಲಾವಣೆ ಅಗತ್ಯವೇ?...

ಪೊಲೀಸ್‌ ಇಲಾಖೆಯ ಕಾರ್ಯವೈಖರಿಯಲ್ಲಿ ಸುಧಾರಣೆ, ಡಿಜಿಟಲ್‌ ಟಚ್‌ ಹಾಗೂ ನೇಮಕಾತಿ ವ್ಯವಸ್ಥೆಯ ಪುನರ್‌ರಚನೆಗೆ ರಾಜ್ಯ ಸರ್ಕಾರ ಉನ್ನತ ಮಟ್ಟದ 3 ತಜ್ಞರ ಸಮಿತಿಗಳನ್ನು ರಚಿಸಿದೆ. ಆದರೆ, ಪೊಲೀಸ್‌ ಠಾಣೆಗಳಲ್ಲಿ ಸಾರ್ವಜನಿಕರು ಎದುರಿಸುವ ಸಮಸ್ಯೆಗಳಿಂದ...

ಪಾಕಿಸ್ತಾನದಲ್ಲಿ ಅಹಿಂಸಾ ಮೂರ್ತಿಯ ‘ರಹಸ್ಯರಕ್ಷಣೆ’: ಕರಾಚಿಯಿಂದ ಇಸ್ಲಾಮಾಬಾದ್‌ಗೆ ಗಾಂಧಿ...

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಪ್ರವೇಶ ದ್ವಾರದಲ್ಲಿ ಮಹಾತ್ಮ ಗಾಂಧೀಜಿಯವರ ಭವ್ಯ ಕಂಚಿನ ಪ್ರತಿಮೆ ಇಂದಿಗೂ ಗಾಂಭೀರ್ಯದಿಂದ ನಿಂತಿದೆ. ಕೈಯಲ್ಲಿ ಊರುಗೋಲು ಹಿಡಿದು ದೂರದ ದಿಗಂತವನ್ನು ದಿಟ್ಟಿಸುವಂತಿರುವ ಈ ಬಾಪೂ ಪ್ರತಿಮೆಯು...

“ಏಪ್ರಿಲ್ 2 ರಂದು ನಾನು ಭವಾನಿಪುರಕ್ಕೆ ನಾಮಪತ್ರ ಸಲ್ಲಿಸುವಾಗ ಅಮಿತ್ ಶಾ ಜಿ ಅವರು ಬಂದು ಆಶೀರ್ವದಿಸಲಿದ್ದಾರೆ ಎಂಬ ಫೋನ್ ಕರೆ ಈಗಷ್ಟೇ ನನಗೆ ಬಂದಿದೆ” ಎಂದು ಸುವೇಂದು ಅಧಿಕಾರಿ ಹೇಳಿಕೊಂಡಿದ್ದಾರೆ.

2020ರ ಡಿಸೆಂಬರ್‌ನಲ್ಲಿ ಬಿಜೆಪಿಯ ಆಪರೇಷನ್‌ಗೆ ಒಳಗಾಗಿ ಟಿಎಂಸಿ ತೊರೆದು ಬಿಜೆಪಿ ಸೇರಿದ್ದ ಸುವೇಂದು ಅಧಿಕಾರಿ, ಈಗ ಬಿಜೆಪಿಯಲ್ಲಿ ಪ್ರಭಾವಿ ಮತ್ತು ಪ್ರಬಲ ನಾಯಕನಾಗಿ ಗುರುತಿಸಿಕೊಂಡಿದ್ದಾರೆ. 2021ರ ವಿಧಾನಸಭಾ ಚುನಾವಣೆಯಲ್ಲಿ ಸುವೇಂದು ಅಧಿಕಾರಿ ವಿರುದ್ಧ ಅವರ ರಾಜಕೀಯ ಗುರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೇ ನಂದಿಗ್ರಾಮದಲ್ಲಿ ಸ್ಪರ್ಧಿಸಿದ್ದರು. ಆದರೆ, ಕೆಲವೇ ಮತಗಳ ಅಂತದಲ್ಲಿ ಮಮತಾರನ್ನು ಸುವೇಂದು ಸೋಲಿಸಿದರು. ಆದರೆ, ಚುನಾವಣಾ ಅಕ್ರಮದ ಮೂಲಕ ತಮ್ಮನ್ನು ಸೋಲಿಸಲಾಗಿದೆ ಎಂದು ಆರೋಪಿಸಿದ್ದ ಮಮತಾ, ಕೋರ್ಟ್‌ಅನ್ನು ದಾವೆ ಹೋಡಿದ್ದಾರೆ. ಆದರೆ, ಸರ್ಕಾರದ ಅವಧಿಯೇ ಮುಗಿದರೂ, ಅವರ ದಾವೆ ಇನ್ನೂ ವಿಚಾರಣೆ ಹಂತದಲ್ಲಿಯೇ ಇದೆ.

ಈಗ, ಸುವೇಂದು ಅಧಿಕಾರಿ ಅವರೇ, ಮಮತಾ ಅವರ ಭದ್ರಕೋಟೆಗೆ ಕಾಲಿಟ್ಟಿದ್ದಾರೆ. ಭವಾನಿಪುರದಲ್ಲಿ ಸ್ಪರ್ಧಿಸಿದ್ದಾರೆ. ನಂದಿಗ್ರಾಮ ಮತ್ತು ಭವಾನಿಪುರ ಎರಡೂ ಕ್ಷೇತ್ರಗಳಲ್ಲಿ ಸುವೇಂದು ಅವರನ್ನು ಕಣಕ್ಕಿಳಿಸುವ ಮೂಲಕ, ಬಂಗಾಳದಲ್ಲಿ ಬಿಜೆಪಿ ಗೆದ್ದರೆ, ಸರ್ಕಾರದ ಚುಕ್ಕಾಣಿ ಹಿಡಿಯಲು ತಾವು ಯಾರನ್ನು ಆರಿಸುತ್ತೇವೆ ಎಂಬ ಸಂದೇಶವನ್ನು ಬಿಜೆಪಿ ವರಿಷ್ಠರು ಸುಳಿವು ನೀಡಿದ್ದರು. ಅದರಂತೆ, ಚುನಾವಣೆಯಲ್ಲಿ ಬಿಜೆಪಿಯನ್ನು ಮುನ್ನಡೆಸುವ ಹೊಣೆಯನ್ನೂ ಸುವೇಂದು ಅವರಿಗೇ ವಹಿಸಿದ್ದಾರೆ. ಸುವೇಂದು ಅಧಿಕಾರಿ ಕೂಡ ತಾವೇ ಮುಖ್ಯಮಂತ್ರಿ ಅಭ್ಯರ್ಥಿ ಎಂದೂ ಗುರುತಿಸಿಕೊಂಡಿದ್ದಾರೆ. ಇದೀಗ, ಅವರಿಗೇ ಮಣೆ ಹಾಕಲು ಅಮಿತ್ ಶಾ ಯೋಜಿಸಿದ್ದಾರೆ.

ಆದರೆ, ಸುವೇಂದು ಅಧಿಕಾರಿಯನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸುವುದು ಬಂಗಾಳದಲ್ಲಿ ಬಿಜೆಪಿಯನ್ನು ಕಟ್ಟಿ-ಬೆಳೆಸಿದ ಹಳಯ ನಾಯಕರಲ್ಲಿ ಅಸಮಾಧಾನ ಉಂಟುಮಾಡುವ ಸಾಧ್ಯತೆಗಳಿವೆ. ಅಂತಹ ಅಸಮಾಧಾನವನ್ನು ಶಮನ ಮಾಡುವ ಸವಾಲು ಕೂಡ ಬಿಜೆಪಿ ಮುಂದಿದೆ. ಬಹುಶಃ, ರಾಜ್ಯ ಬಿಜೆಪಿಯ ಹಾಲಿ ಅಧ್ಯಕ್ಷ ಸಮಿಕ್ ಭಟ್ಟಾಚಾರ್ಯ ಮತ್ತು ಮಾಜಿ ಅಧ್ಯಕ್ಷ ದಿಲೀಪ್ ಘೋಷ್ ಅವರು ತೀವ್ರ ಅಸಮಾಧಾನಗೊಳ್ಳುವ ಸಾಧ್ಯತೆ ಇದೆ. ಅದರಲ್ಲೂ, ಘೋಷ್ ಅವರ ಅಸಮಾಧಾನ ಬಿಜೆಪಿಗೆ ಭಾರೀ ಪೆಟ್ಟು ಕೊಡುವ ಅಪಾಯವಿದೆ.

ಅಂದಹಾಗೆ, ಘೋಷ್‌ ಆರ್‌ಎಸ್‌ಎಸ್‌ ಪಾಳಯದಲ್ಲಿ ಬೆಳೆದು, ಪ್ರವರ್ಧಮಾನಕ್ಕೆ ಬಂದವರು. 1984ರಲ್ಲಿ ಆರ್‌ಎಸ್‌ಎಸ್‌ ಪ್ರಚಾರಕರಾಗಿ ಮುನ್ನೆಲೆಗೆ ಬಂದ ಘೋಷ್, 2007ರವರೆಗೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ ಸಂಘದ ಉಸ್ತುವಾರಿ ಹೊಣೆ ಹೊತ್ತಿದ್ದರು. 2014ರಲ್ಲಿ, ಬಂಗಾಳ ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡರು. ಒಂದೇ ವರ್ಷದಲ್ಲಿ (2015) ಅಧ್ಯಕ್ಷರೂ ಆದರು.

ಅವರ ನೇತೃತ್ವದಲ್ಲಿ 2019ರ ಲೋಕಸಭಾ ಚುನಾವಣೆಯಲ್ಲಿ ಬಂಗಾಳದ ಒಟ್ಟು 42 ಕ್ಷೇತ್ರಗಳಲ್ಲಿ 18 ಸ್ಥಾನಗಳನ್ನು ಗೆದ್ದಿತು. ಮಾತ್ರವಲ್ಲದೆ, ಬಂಗಾಳದ ಒಟ್ಟು 294 ವಿಧಾನಸಭಾ ಸ್ಥಾನಗಳ ಪೈಕಿ 2016ರಲ್ಲಿ ಕೇವಲ 3 ಶಾಸಕರನ್ನು ಮಾತ್ರವೇ ಹೊಂದಿದ್ದ ಬಿಜೆಪಿ, 2021ರ ಚುನಾವಣೆಯಲ್ಲಿ 77 ಕ್ಷೇತ್ರಗಳನ್ನು ಗೆಲ್ಲುವ ಹಂತಕ್ಕೆ ಪಕ್ಷವನ್ನು ಬೆಳೆಸಿದ್ದರು. ಬಿಜೆಪಿಯ ಮತ ಹಂಚಿಕೆಯೂ 10.16%ನಿಂದ 40.25%ಗೆ ಏರಿಕೆ ಕಂಡಿತ್ತು.

ಈ ಲೇಖನ ಓದಿದ್ದೀರಾ?: ಬಂಗಾಳ ಚುನಾವಣೆ | ಮಮತಾ-ಅಭಿಷೇಕ್ ಜಂಟಿ ತಂತ್ರ – ಒಂಟಿ ಪ್ರಚಾರ; ಬಿಜೆಪಿ ಅತಂತ್ರ?

2024ರ ಲೋಕಸಭಾ ಚುನಾವಣೆಯಲ್ಲಿ ಘೋಷ್‌ಗೆ ಮೇದಿನಿಪುರದ ಕ್ಷೇತ್ರದ ಬದಲಿಗೆ ಬುರ್ದ್ವಾನ್-ದುರ್ಗಾಪುರ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್‌ ನೀಡಿತ್ತು. ಈ ಕ್ಷೇತ್ರ ಬದಲಾವಣೆಯ ಹಿಂದೆ ಸುವೇಂದು ಅಧಿಕಾರಿಯ ತಂತ್ರವಿದೆ ಎಂದು ಘೋಷ್ ಅಸಮಾಧಾನಗೊಂಡಿದ್ದರು. ಆ ಕ್ಷೇತ್ರದಲ್ಲಿ ಅವರು ಮಾಜಿ ಕ್ರಿಕೆಟಿಗ, ಟಿಎಂಸಿ ನಾಯಕ ಕೀರ್ತಿ ಆಜಾದ್ ವಿರುದ್ಧ ಸೋತರು.

ತರುವಾಯ ಪಕ್ಷದಲ್ಲಿ ಮತ್ತು ಆಡಳಿತದಲ್ಲಿ ಯಾವ ಸ್ಥಾನವೂ ಇಲ್ಲದೆ, ನಿರುದ್ಯೋಗಿಯಾಗಿದ್ದ ಘೋಷ್‌ ಅವರನ್ನು ನಿಧಾನವಾಗಿ ಬಿಜೆಪಿ ಮೂಲೆಗೆ ದೂಡಿತ್ತು. ಈಗ ಮತ್ತೆ ಮುನ್ನೆಲೆಗೆ ತಂದಿದೆ. ಅವರು ಕೂಡ ಮುಖ್ಯಮಂತ್ರಿ ರೇಸ್‌ನಲ್ಲಿದ್ದರು. ಸುವೇಂದು ವಿರುದ್ಧ ನಿರಂತರ ಕಿಡಿಕಾರುತ್ತಿದ್ದರು. ಮುಖ್ಯಮಂತ್ರಿ ಅಭ್ಯರ್ಥಿ ಘೊಷಣೆಯಿಂದ ಅವರ ಅಸಮಾಧಾನ ಸ್ಫೋಟಗೊಳ್ಳಬಹುದು.

ಸದ್ಯ, ರಾಜ್ಯದ ನಾಯಕರು ತಮ್ಮ ಆಂತರಿಕ ಭಿನ್ನಾಭಿಪ್ರಾಯಗಳನ್ನು ಪಕ್ಕಕ್ಕಿಟ್ಟು ಬಹಿರಂಗವಾಗಿ ಒಗ್ಗಟ್ಟು ಪ್ರದರ್ಶಿಸುವಂತೆ ಬಿಜೆಪಿ ವರಿಷ್ಠರು ಹೇಳುತ್ತಿದ್ದಾರೆ.

ಅಪರೂಪದ ನಡೆ ಎಂಬಂತೆ, ಬಂಗಾಳದ ಬಿಜೆಪಿ ಅಧ್ಯಕ್ಷ ಸಮಿಕ್ ಭಟ್ಟಾಚಾರ್ಯ ಅವರು ಕೋಲ್ಕತ್ತಾದಲ್ಲಿ ಮಾಧ್ಯಮಗಳ ಸಮ್ಮುಖದಲ್ಲಿ ಸುವೇಂದು ಅಧಿಕಾರಿಗೆ ಔಪಚಾರಿಕವಾಗಿ ಪಕ್ಷದ ಚಿಹ್ನೆಯನ್ನು ಭಾನುವಾರ ಹಸ್ತಾಂತರಿಸಿದ್ದಾರೆ. ಪಕ್ಷದ ಮತ್ತೊಬ್ಬ ಪ್ರಭಾವಿ ನಾಯಕ ದಿಲೀಪ್ ಘೋಷ್ ಅವರು ಸೋಮವಾರ ನಂದಿಗ್ರಾಮದಲ್ಲಿ ಸುವೇಂದು ನಾಮಪತ್ರ ಸಲ್ಲಿಸುವ ಮೊದಲು ನಡೆದ ರ್‍ಯಾಲಿಯಲ್ಲಿ ಭಾವಹಿಸಿದ್ದರು. ಬಿಜೆಪಿ ಒಗ್ಗಟ್ಟಿನಿಂದ ಇದೆ ಎಂಬುದನ್ನು ಸೂಚಿಸಿದರು. ಆದರೆ, ಬಿಜೆಪಿ ಆತಂರಿಕ ಬಿಕ್ಕಟ್ಟು ಎದುರಿಸುತ್ತಿದೆ ಎಂಬುದಂತೂ ಮುಚ್ಚುಮರೆಯಲ್ಲಿಲ್ಲ. ಬಹಿರಂಗವಾಗಿ ಎದ್ದು ಕಾಣುತ್ತಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯುವ ಪೀಳಿಗೆ ಸತ್ಯ, ಸರಳತೆಯ ತತ್ವಗಳನ್ನು ಅಳವಡಿಸಿಕೊಳ್ಳಬೇಕು: ಪ್ರೊ. ವಿಜಯಾ ಕೋರಿಶೆಟ್ಟಿ

ಸತ್ಯ, ಅಹಿಂಸೆ, ಸರಳತೆ, ಕರ್ತವ್ಯನಿಷ್ಠೆ ಮತ್ತು ನೈತಿಕ ಮೌಲ್ಯಗಳು ಕೇವಲ ಇತಿಹಾಸದ...

ಗಾಂಧೀಜಿ ಹೆಸರು, ವಿಚಾರಧಾರೆ ಅಳಿಸಲು ಯಾರಿಂದಲೂ ಸಾಧ್ಯವಿಲ್ಲ: ಡಿ.ಕೆ. ಶಿವಕುಮಾರ್

"ಮಹಾತ್ಮ ಗಾಂಧೀಜಿ ಭಾರತದ ಆತ್ಮವಿದ್ದಂತೆ. ಅವರ ಹೆಸರು ಹಾಗೂ ವಿಚಾರಧಾರೆಯನ್ನು ಅಳಿಸಿಹಾಕಲು...

ಸಾಗರ | ಗೂಡ್ಸ್ ಆಟೋ ಢಿಕ್ಕಿ; ಚಿಕಿತ್ಸೆ ಫಲಿಸದೆ ಬಾಲಕ ಸಾವು

ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಗೂಡ್ಸ್ ಆಟೋ ಢಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ...

ಏಷ್ಯನ್ ಗೇಮ್ಸ್: 4 ದಶಕಗಳ ಬಳಿಕ ಮಹಿಳಾ ಹಾಕಿಯಲ್ಲಿ ಭಾರತಕ್ಕೆ ಒಲಿದ ಸುವರ್ಣ ಪದಕ

ಜಪಾನಿನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತೀಯ ಮಹಿಳಾ ಹಾಕಿ...