ಬಿಹಾರ | ಬಿಜೆಪಿಯ 89 ಶಾಸಕರಲ್ಲಿ 45 ಮಂದಿ ಕ್ರಿಮಿನಲ್ ಆರೋಪಿಗಳು

Date:

ಬಿಹಾರ ವಿಧಾನಸಭಾ ಚುನಾವಣೆಯ ಮುಗಿದಿದೆ. ಫಲಿತಾಂಶ ಹೊರಬಿದ್ದು, ಬಿಜೆಪಿ-ಜೆಡಿಯು ನೇತೃತ್ವದ ಎನ್‌ಡಿಎ ಅಭೂತಪೂರ್ವ ಗೆಲುವು ಸಾಧಿಸಿದೆ. 243 ಕ್ಷೇತ್ರಗಳ ಪೈಕಿ 202 ಸ್ಥಾನಗಳನ್ನು ಎನ್‌ಡಿಎ ಗೆದ್ದಿದೆ. ಇದರಲ್ಲಿ, 89 ಸ್ಥಾನಗಳನ್ನು ಗೆದ್ದ ಬಿಜೆಪಿ, ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಬಿಜೆಪಿಯ ಶಾಸಕರಲ್ಲಿ ಬರೋಬ್ಬರಿ 43 ಮಂದಿ ಕ್ರಿಮಿನಲ್ ಪ್ರಕರಣಗಲ್ಲಿ ಆರೋಪಿಗಳೂ ಆಗಿದ್ದಾರೆ.

- Advertisement -

ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ಶಾಸಕರ ಅಫಿಡವಿಟ್‌ಗಳನ್ನು ವಿಶ್ಲೇಷಿಸಿದೆ. ಶಾಸಕರ ವಿರುದ್ಧದ ಪ್ರಕರಣಗಳ ವಿಶ್ಲೇಷಣೆಯನ್ನು ನಡೆಸಿದೆ. ಬಿಹಾರದ ಒಟ್ಟು ಶಾಸಕರಲ್ಲಿ ಅರ್ಧಕ್ಕಿಂತ ಹೆಚ್ಚು ಶಾಸಕರು ಅಂದರೆ, ಒಟ್ಟು 243 ಶಾಸಕರಲ್ಲಿ 130 ಮಂದಿ ಕ್ರಿಮಿನಲ್ ಆರೋಪಿಗಳಾಗಿದ್ದಾರೆ. 6 ಶಾಸಕರು ಕೊಲೆ ಪ್ರಕರಣ ಮತ್ತು 19 ಶಾಸಕರು ಕೊಲೆ ಯತ್ನ ಪ್ರಕರಣಗಳಲ್ಲಿ ಆರೋಪಿಗಳಿದ್ದಾರೆ. ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ 9 ಮಂದಿ ಆರೋಪಿಗಳಾಗಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅಧಿಕೃತ ಕೆಲಸಕ್ಕೆ WHATSAPP ವೆಬ್ ಅಪಾಯಕಾರಿ ಏಕೆ? ಗೃಹ...

ಕಚೇರಿ, ಸಾರ್ವಜನಿಕ ಅಥವಾ ಹಲವರು ಹಂಚಿಕೊಂಡು ಬಳಸುವ ಕಂಪ್ಯೂಟರ್‌ಗಳಲ್ಲಿ WHATSAPP ವೆಬ್ ಬಳಸುವವರಿಗೆ ಕೇಂದ್ರ ಗೃಹ ಸಚಿವಾಲಯ ಮಹತ್ವದ ಭದ್ರತಾ ಎಚ್ಚರಿಕೆ ನೀಡಿದೆ. ಸಚಿವಾಲಯದ ಅಧೀನದ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರದ...

ಆನೆ ಓಡಿಸಲು ಜೇನುನೊಣ ಸಾಕು! ಏನಿದು ತಂತ್ರ?

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಕೃಷಿಕರು ಆನೆ ಹಾವಳಿ ತಡೆಗೆ ಸರಳ ಮತ್ತು ವಿನೂತನ ಪ್ರಯೋಗಕ್ಕೆ ಮುಂದಾಗಿದ್ದಾರೆ. ಆನೆ ಬರುವ ದಾರಿಯಲ್ಲಿ ಜೇನು ಪೆಟ್ಟಿಗೆಗಳನ್ನಿಟ್ಟು ಗಜಪಡೆಯನ್ನು ಹಿಮ್ಮೆಟ್ಟಿಸುವ ಮಾರ್ಗವಿದು. ಆನೆಗಳ ಸೊಂಡಿಲಿನ ಒಳಭಾಗ...

ವೈದ್ಯರಿಲ್ಲ, ಔಷಧವೂ ಇಲ್ಲ! ದಶಕ ಕಳೆದರೂ ಚೇತರಿಸದ ಗಜೇಂದ್ರಗಡ...

ಗಜೇಂದ್ರಗಡ ತಾಲೂಕು ಘೋಷಣೆಯಾಗಿ ದಶಕ ಕಳೆದರೂ ಇಂದಿಗೂ ಸಮುದಾಯ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸಿಲ್ಲ. ವೈದ್ಯರ ಕೊರತೆ, ಅಗತ್ಯ ಔಷಧಿಗಳ ಕೊರತೆ, ಸಿಬ್ಬಂದಿಗಳ ಕೊರತೆ ಇರುವುದರಿಂದ, ಇಲ್ಲಿಗೆ ಬರುವ ರೋಗಿಗಳಿಗೆ ಸರಿಯಾದ ಚಿಕತ್ಸೆ,...

ಇದರಲ್ಲಿ ಬಿಜೆಪಿಯದ್ದೇ ಸಿಂಹಪಾಲು. ಬಿಜೆಪಿಯ 43, ಜೆಡಿಯುನ 85 ಶಾಸಕರಲ್ಲಿ 23, ಆರ್‌ಜೆಡಿಯ 25 ಎಂಎಲ್‌ಎಗಳಲ್ಲಿ 14, ಎಲ್‌ಜೆಪಿಯ 19 ಶಾಸಕರಲ್ಲಿ 10, ಕಾಂಗ್ರೆಸ್‌ನ 6 ಮಂದಿಯಲ್ಲಿ 3, ಎಐಎಂಐಎಂನ 5 ಶಾಸಕರಲ್ಲಿ ನಾಲ್ವರು, ಆರ್‌ಎಲ್‌ಎಂನ 4 ಮಂದಿಯಲ್ಲಿ 1, ಸಿಪಿಐ(ಎಂಎಲ್‌)ಲಿಬರೇಶನ್‌ನ 2ರಲ್ಲಿ 1, ಸಿಪಿಎಂ, ಐಐಪಿ ಹಾಗೂ ಬಿಎಸ್‌ಪಿಯ ತಲಾ ಒಬ್ಬರು ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಗಳಾಗಿದ್ದಾರೆ.

2020ರಲ್ಲಿ 123 ಮಂದಿ, ಅಂದರೆ, 51% ಮಂದಿ ಕ್ರಿಮಿನಲ್ ಆರೋಪಿಗಳಿದ್ದರು. ಈ ಬಾರಿ 130 ಮಂದಿ ಆರೋಪಿಗಳಿಗೆ ಏರಿಕೆಯಾಗಿದೆ.

ಈ ಲೇಖನ ಓದಿದ್ದೀರಾ?: ʼವಂದೇ ಮಾತರಂ’ವಿವಾದ; ಪರಿವಾರ- ಪ್ರಧಾನಿ ಪೋಣಿಸಿದ ಸುಳ್ಳುಗಳ ಬೊಂತೆ

ಇನ್ನು, ಒಟ್ಟು ಶಾಸಕರಲ್ಲಿ ಬರೋಬ್ಬರಿ 90% ಮಂದಿ ಕೋಟ್ಯಾಧಿಪತಿಗಳಾಗಿದ್ದಾರೆ. ಈ 90% ಕೋಟ್ಯಾಧಿಪತಿಗಳು ಸರಾಸರಿ 9.02 ಕೋಟಿ ರೂ. ಆಸ್ತಿ ಹೊಂದಿದ್ದಾರೆ.

ಶಿಕ್ಷಣದ ವಿಚಾರವಾಗಿ ನೋಡಿದರೆ, ಒಟ್ಟು ಶಾಸಕರಲ್ಲಿ 35% ಶಾಸಕರು ಐದನೇ ಮತ್ತು ಹನ್ನೆರಡನೇ ತರಗತಿಯ ನಡುವೆ ತಮ್ಮ ಶಿಕ್ಷಣವನ್ನು ಮೊಟಕುಗೊಳಿಸಿದ್ದಾಗಿ ಘೋಷಿಸಿಕೊಂಡಿದ್ದಾರೆ. 60% ಶಾಸಕರು ಪದವೀಧರರು ಅಥವಾ ಅದಕ್ಕಿಂತ ಉನ್ನತ ಶಿಕ್ಷಣ ಪಡೆದಿದ್ದಾರೆ. ಐದು ಮಂದಿ ಡಿಪ್ಲೊಮಾ ಪಡೆದಿದ್ದರೆ, ಏಳು ಮಂದಿ ತಾವು ಸಾಕ್ಷರರು ಎಂದು ಹೇಳಿಕೊಂಡಿದ್ದಾರೆ.

ಅಲ್ಲದೆ, ಕೇವಲ 12% ಮಾತ್ರವೇ ಮಹಿಳಾ ಶಾಸಕರಿದ್ದಾರೆ.

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಂದೆ ಹತ್ಯೆಯಾಗಲೆಂದೇ ಭದ್ರತೆ ಹಿಂಪಡೆಯಲಾಗಿತ್ತು: ರಾಹುಲ್ ಗಾಂಧಿ ಗಂಭೀರ ಆರೋಪ

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಭದ್ರತೆಯನ್ನು ಹಿಂಪಡೆದಿದ್ದು ಆಕಸ್ಮಿಕವಲ್ಲ, ಬದಲಾಗಿ ಅವರ...

ಅಮೆರಿಕದಲ್ಲಿ ಮೈಸೂರು ಮೂಲದ ಪಿಟೀಲು ವಾದಕ ಭಾಸ್ಕರ್ ಅರೆಸ್ಟ್; ಅಪ್ರಾಪ್ತರ ಮೇಲೆ ದೌರ್ಜನ್ಯ ಆರೋಪ

ಕರ್ನಾಟಕ ಶಾಸ್ತ್ರೀಯ ಸಂಗೀತ ಕ್ಷೇತ್ರದ ಪ್ರಮುಖ ಪಿಟೀಲು ವಾದಕ, ಮೈಸೂರು ಮೂಲದ...

₹13 ಲಕ್ಷದ ಬ್ರೆಜಾ ಕಾರು ನೀಡದ್ದಕ್ಕೆ ಮದುವೆ ರದ್ದು: ದೆಹಲಿ ಪೊಲೀಸ್ ಅಮಾನತು

ತಾನು ಬೇಡಿಕೆಯಿಟ್ಟ ₹13 ಲಕ್ಷ ಮೌಲ್ಯದ ಮಾರುತಿ ಬ್ರೆಜಾ ಕಾರಿನ ಬದಲು...

ಬಾಂಗ್ಲಾದೇಶಕ್ಕೆ ಮರಳಲು ಶೇಖ್ ಹಸೀನಾ ನಿರ್ಧಾರ: ಬಾಂಗ್ಲಾ ಸರ್ಕಾರದೊಂದಿಗೆ ಸಂಘರ್ಷದ ಮುನ್ಸೂಚನೆ!

ಕಳೆದ ಎರಡು ವರ್ಷಗಳಿಂದ ಭಾರತದಲ್ಲಿ ಆಶ್ರಯ ಪಡೆದಿರುವ ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ...