ವಿದ್ಯಾರ್ಥಿಗಳ ಹೋರಾಟಕ್ಕಿಂತ ಕಾಂಗ್ರೆಸ್‌ಗೇ ಹೆಚ್ಚು ಹೆದರುತ್ತಿದೆಯೇ ಬಿಜೆಪಿ?

Date:

ದೆಹಲಿಯ ಜಂತರ್ ಮಂತರ್‌ನಲ್ಲಿ ಆರಂಭವಾದ ವಿದ್ಯಾರ್ಥಿ-ಯುವಜನರ ಪ್ರತಿಭಟನೆ ಈಗ ಕೇವಲ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಅಥವಾ ಪರೀಕ್ಷಾ ಅಕ್ರಮಗಳ ವಿರುದ್ಧದ ಹೋರಾಟವಾಗಿ ಉಳಿದಿಲ್ಲ. ರಾಷ್ಟ್ರೀಯ ರಾಜಕೀಯದ ಕೇಂದ್ರಬಿಂದುವಾಗಿ ರೂಪಾಂತರಗೊಳ್ಳುತ್ತಿದೆ. ಶಿಕ್ಷಣ ವ್ಯವಸ್ಥೆಯ ಮೇಲಿನ ವಿಶ್ವಾಸದ ಪ್ರಶ್ನೆ, ಯುವಜನರ ನಿರುದ್ಯೋಗ, ಪರೀಕ್ಷಾ ಅಕ್ರಮಗಳು, ಸರ್ಕಾರದ ಉತ್ತರದಾಯಿತ್ವ ಹಾಗೂ ಪ್ರಜಾಪ್ರಭುತ್ವದ ಪ್ರತಿಭಟನೆಯ ಹಕ್ಕು – ಈ ಎಲ್ಲವೂ ಹೋರಾಟದ ವೇದಿಕೆಯಲ್ಲಿ ಒಗ್ಗೂಡುವ ಹೊಸ ಆಯಾಮವಾಗಿವೆ.

- Advertisement -

ಈ ಹೋರಾಟವನ್ನು ಆರಂಭದಲ್ಲಿ ಕೇವಲ ವಿದ್ಯಾರ್ಥಿಗಳ ಅಸಮಾಧಾನವೆಂದು ನೋಡಲಾಗಿತ್ತು. ಆದರೆ, ದಿನಗಳು ಕಳೆದಂತೆ, ರಾಜಕೀಯ ಪಕ್ಷಗಳು, ಸಾಮಾಜಿಕ ಸಂಘಟನೆಗಳು, ನಿವೃತ್ತ ನ್ಯಾಯಮೂರ್ತಿಗಳು, ಶಿಕ್ಷಣ ತಜ್ಞರು, ಲೇಖಕರು ಹಾಗೂ ಸಾರ್ವಜನಿಕರು ದನಿಗೂಡಿಸಿದರು. ಇದರಿಂದಾಗಿ, ಹೋರಾಟದ ರಾಜಕೀಯ ಪರಿಣಾಮಗಳು ಬಿಜೆಪಿ ಆತಂಕ ಹುಟ್ಟಿವೆ. ಬಿಜೆಪಿ ಈಗ ‘ಎಕ್ಸ್‌’ನಿಂದ ಇನ್‌ಸ್ಟಾಗ್ರಾಮ್‌’ಗೆ ಬದಲಾಗಬೇಕು. ಜೆನ್‌-ಝೀ ವಿದ್ಯಾರ್ಥಿ-ಯುವಜನರನ್ನು ಸೇಳೆಯಬೇಕೆಂದು ಯತ್ನಿಸುತ್ತಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

‘Epstein’ ವಿವಾದದ ನಡುವೆಯೂ ಹರದೀಪ್ ಪುರಿಗೆ ಮಣೆ: ಸಿಖ್...

'Epstein files' ವಿವಾದವು ಹರದೀಪ್ ಸಿಂಗ್ ಪುರಿ ಅವರ ರಾಜಕೀಯ ಬದುಕಿನಲ್ಲಿ ಸಣ್ಣದೊಂದು ಬಿರುಗಾಳಿ ಎಬ್ಬಿಸಿದ್ದು ಸುಳ್ಳಲ್ಲ. ವಿರೋಧ ಪಕ್ಷಗಳ ಟೀಕೆಗಳು ಮತ್ತು ನೈತಿಕ ಹೊಣೆಗಾರಿಕೆಯ ಪ್ರಶ್ನೆಗಳು ಅವರನ್ನು ಸಂಪುಟದಿಂದ ಹೊರಗಟ್ಟುವ ಹಂತಕ್ಕೆ...

ಅಮೆರಿಕದಲ್ಲಿ ನೋಂದಾಯಿಸಿಕೊಂಡ RSS Friends; RSS ಜೊತೆ ಮೌಖಿಕ...

RSS Friends ಎಂಬ ಸಂಘಟನೆಯು ಅಮೆರಿಕದಲ್ಲಿ ಆರ್‌ಎಸ್‌ಎಸ್‌ನ ವಿದೇಶಿ ಏಜೆಂಟ್ ಆಗಿ ನೋಂದಾಯಿಸಿಕೊಂಡಿದೆ. ತನ್ನ ಉದ್ದೇಶಿತ ಚಟುವಟಿಕೆಗಳು ಮುಖ್ಯವಾಗಿ ಮಾಹಿತಿ ಪ್ರಸಾರ, ಶೈಕ್ಷಣಿಕ ಕಾರ್ಯಗಳು, ಸಾರ್ವಜನಿಕ ಸಂಪರ್ಕ ಮತ್ತು ಸಮುದಾಯದೊಂದಿಗಿನ ತೊಡಗಿಸಿಕೊಳ್ಳುವಿಕೆಯನ್ನು ಒಳಗೊಂಡಿರುತ್ತವೆ...

ಕುರ್ಚಿಗಾಗಿ ನಿಲುವುಗಳೇ ಬಲಿ; ವಿಶ್ವಾಸಾರ್ಹತೆಯನ್ನೇ ಕಳೆದುಕೊಳ್ಳುತ್ತಿರುವ ಎಚ್‌ಡಿಕೆ

ಕರ್ನಾಟಕ ರಾಜಕಾರಣದಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಷ್ಟು ವೇಗವಾಗಿ ತಮ್ಮ ರಾಜಕೀಯ ನಿಲುವುಗಳನ್ನು ಬದಲಿಸಿಕೊಳ್ಳುವ ಮತ್ತೊಬ್ಬ ನಾಯಕ ಸಿಗುವುದು ಕಷ್ಟ. ನಿನ್ನೆ ವಿರೋಧಿಸಿದವರನ್ನು ಇಂದು ಸಮರ್ಥಿಸಿಕೊಳ್ಳುವುದು, ಹಿಂದೆ ಜೊತೆಗಿದ್ದವರನ್ನೇ ಇಂದು ದೂರುವುದು,...

ಇದೇ ಸಮಯದಲ್ಲಿ, ಕೇಂದ್ರ ಸರ್ಕಾರ ಮತ್ತು ಬಿಜೆಪಿ ನಾಯಕರು ತಮ್ಮ ಪ್ರತಿಕ್ರಿಯೆಗಳಲ್ಲಿ ವಿದ್ಯಾರ್ಥಿಗಳ ಬೇಡಿಕೆಗಳ ಕುರಿತು ಮಾತನಾಡುವುದಕ್ಕಿಂತ ಹೆಚ್ಚಾಗಿ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಪ್ರತಿಭಟನೆಯ ಹಿಂದಿರುವುದು ಕಾಂಗ್ರೆಸ್ ರಾಜಕೀಯ, ಪ್ರತಿಭಟನೆಯನ್ನು ಕಾಂಗ್ರೆಸ್ ಪ್ರೇರೇಪಿಸುತ್ತಿದೆ ಅಥವಾ ವಿರೋಧ ಪಕ್ಷಗಳು ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಳ್ಳುತ್ತಿವೆ ಎಂಬ ಆರೋಪಗಳು ನಿರಂತರವಾಗಿ ಕೇಳಿಬರುತ್ತಿವೆ. ಇದೆಲ್ಲವೂ, ಕಾಂಗ್ರೆಸ್‌ಗೆ ಬಿಜೆಪಿ ಹೆದರಿದೆ ಎಂಬುದನ್ನು ಸ್ಪಷ್ಟವಾಗಿ ಸೂಚಿಸುತ್ತಿವೆ.

ವಿದ್ಯಾರ್ಥಿ ಹೋರಾಟಕ್ಕೆ ಕಾಂಗ್ರೆಸ್‌ಅನ್ನು ತಳುಕು ಹಾಕುತ್ತಿರುವ ಬಿಜೆಪಿ ಹುನ್ನಾರ ಸ್ಪಷ್ಟವಾಗಿದೆ. ವಿದ್ಯಾರ್ಥಿಗಳ ಹೋರಾಟವನ್ನು ಕೇವಲ ಶಿಕ್ಷಣದ ಪ್ರಶ್ನೆಯಾಗಿ ಬಿಟ್ಟರೆ ಅದು ಪಕ್ಷಾತೀತ ಸಾರ್ವಜನಿಕ ಆಕ್ರೋಶವಾಗಿ ಬೆಳೆಯುವ ಅಪಾಯವಿದೆ. ಆದರೆ, ಅದನ್ನು ಕಾಂಗ್ರೆಸ್ ವಿರುದ್ಧದ ರಾಜಕೀಯ ಸಂಘರ್ಷವಾಗಿ ಚಿತ್ರಿಸಿದರೆ, ಚರ್ಚೆಯ ಕೇಂದ್ರಬಿಂದು ಬದಲಾಗುತ್ತದೆ. ಆಗ ಪ್ರಶ್ನೆ ‘ಪರೀಕ್ಷಾ ಅಕ್ರಮ ಯಾಕಾಯಿತು?’ ಎಂಬುದರಿಂದ ‘ಈ ಪ್ರತಿಭಟನೆಯ ಹಿಂದೆ ಯಾರಿದ್ದಾರೆ?’ ಎಂಬ ದಿಕ್ಕಿಗೆ ತಿರುಗುತ್ತದೆ. ಆಗ, ಪ್ರತಿಭಟನೆಯನ್ನೂ ರಾಜಕೀಯವಾಗಿ ಹತ್ತಿಕ್ಕಬಹುದು ಎಂಬುದು ಬಿಜೆಪಿಯ ಕುತಂತ್ರ.

ಅಷ್ಟು ಮಾತ್ರವಲ್ಲದೆ, ಪ್ರಸ್ತುತದಲ್ಲಿ ವಿದ್ಯಾರ್ಥಿಗಳ ಅಸಮಾಧಾನವು ಸಹಜವಾಗಿದ್ದರೂ, ಅದನ್ನು ರಾಜಕೀಯವಾಗಿ ಸಂಘಟಿಸಿ ಚುನಾವಣಾ ವಿಷಯವನ್ನಾಗಿ ಮಾಡುವ ಸಾಮರ್ಥ್ಯ ಕಾಂಗ್ರೆಸ್‌ಗೆ ಇದೆ ಎಂಬುದನ್ನು ಬಿಜೆಪಿ ಚೆನ್ನಾಗಿ ಅರಿತಿದೆ. ಹೀಗಾಗಿ, ವಿದ್ಯಾರ್ಥಿಗಳ ಹೋರಾಟವನ್ನು ವಿದ್ಯಾರ್ಥಿ vs ಸರ್ಕಾರ ಎಂಬುದಕ್ಕಿಂತ, ‘ಬಿಜೆಪಿ vs ಕಾಂಗ್ರೆಸ್’ ಎಂಬ ಸಾಂಪ್ರದಾಯಿಕ ರಾಜಕೀಯ ಸಮರಕ್ಕೆ ತಿರುಗಿಸುವುದರಿಂದ, ತನ್ನ ಬೆಂಬಲಿತ ಮತಬ್ಯಾಂಕ್ ಚದುರಿ ಹೋಗದಂತೆ ತಡೆಯಬಹುದು ಎಂಬುದು ಕೇಸರಿ ಪಡೆಯ ರಾಜಕೀಯ ಲೆಕ್ಕಾಚಾರ. ಆದ್ದರಿಂದಲೂ, ಇಂದಿಗೂ, ಪ್ರತಿಭಟನೆಯ ಸುತ್ತ ಕಾಂಗ್ರೆಸ್‌ಅನ್ನು ದೂಷಿಸುವ ಛಾಳಿಯನ್ನು ಬಿಜೆಪಿ ಮುಂದುವರೆಸಿದೆ.

ಈ ಲೇಖನ ಓದಿದ್ದೀರಾ?: ನೀಟ್ ವೈಫಲ್ಯ- ಇಡೀ ವ್ಯವಸ್ಥೆಯ ಕುಸಿತಕ್ಕೆ ಸಾಕ್ಷಿ

ಮುಖ್ಯವಾಗಿ, 2027ರಲ್ಲಿ ಉತ್ತರ ಪ್ರದೇಶ ಸೇರಿದಂತೆ ಕೆಲವು ಪ್ರಮುಖ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿವೆ. ಆ ಚುನಾವಣೆಗಳನ್ನು ಕಾಕ್ರೋಚ್‌ಗಳ ಈ ಬೃಹತ್ ಪ್ರತಿಭಟನೆ ಪ್ರಭಾವಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಯುವ ಮತದಾರರು, ಮೊದಲ ಬಾರಿಗೆ ಮತ ಚಲಾಯಿಸುವ ವಿದ್ಯಾರ್ಥಿಗಳು ಹಾಗೂ ನಗರ ಮಧ್ಯಮ ವರ್ಗದ ಅಭಿಪ್ರಾಯಗಳು ಮತದಾನದಲ್ಲಿ ಮುಖ್ಯ ಪಾತ್ರ ವಹಿಸುತ್ತವೆ. ಆದ್ದರಿಂದ, ಶಿಕ್ಷಣ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಪ್ರಶ್ನೆಗಳು ರಾಜಕೀಯವಾಗಿ ಹೆಚ್ಚು ಸೂಕ್ಷ್ಮವಾಗುತ್ತವೆ. ಇದನ್ನು ಸ್ಪಷ್ಟವಾಗಿ ತಿಳಿದಿರುವ ಕಾಂಗ್ರೆಸ್‌, ಈ ಎರಡೂ ವಿಚಾರಗಳ ಮೇಲೆ ಹೆಚ್ಚು ಮಾತನಾಡುತ್ತಿದೆ. ತನ್ನ ಗಮನ, ಕೆಲಸಗಳನ್ನು ಕೇಂದ್ರೀಕರಿಸಿದೆ.

ಕಾಂಗ್ರೆಸ್‌ನ ವಿದ್ಯಾರ್ಥಿ-ಯುವಜನ ಕೇಂದ್ರೀಕೃತ ಕೆಲಸಗಳು ಬಿಜೆಪಿಯ ನಿದ್ರೆಗೆಡಿಸಿವೆ. ಹೀಗಾಗಿ, ಕಾಕ್ರೋಚ್‌ಗಳ ಪ್ರತಿಭಟನೆಯ ಹೊರತಾಗಿಯೂ, ಮೋದಿ ಬ್ರಾಂಡ್‌ಅನ್ನು ಉಳಿಸಿಕೊಳ್ಳಲು ಬಿಜೆಪಿ ಹವಣಿಸುತ್ತಿದೆ. ಅದಕ್ಕಾಗಿ, ಸಾಮಾಜಿಕ ಜಾಲತಾಣಗಳಲ್ಲಿ ‘ನನಗೆ ಮೋದಿ ಬೇಕು’, ‘ನಾನು ಮೋದಿ ಜೊತೆ’ ಹಾಗೂ ‘ಮೋದಿಯೇ ದೇಶದ ಭವಿಷ್ಯ’ ಎಂಬ ಸಂದೇಶಗಳು ಹರಿದಾಡುತ್ತಿವೆ. ವಾಟ್ಸ್‌ಆ್ಯಪ್ ಯೂನಿವರ್ಸಿಟಿಯ ಹಿರಿಯರು ಇಂತಹ ಸಂದೇಶಗಳನ್ನು ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ.  

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸೌಜನ್ಯ ಪ್ರಕರಣ: ಹರ್ಷೇಂದ್ರ ಕುಮಾರ್‌ಗೆ ಎಸ್‌ಐಟಿ ನೋಟಿಸ್ ಸಾಧ್ಯತೆ

ಧರ್ಮಸ್ಥಳದ 17 ವರ್ಷದ ವಿದ್ಯಾರ್ಥಿನಿ ಸೌಜನ್ಯ ಕೊಲೆ ಪ್ರಕರಣದ ಮರುತನಿಖೆ ನಡೆಸುತ್ತಿರುವ...

ಪಂಜಾಬ್‌ | ನ.4ರಂದು ಸಂಗ್‌ರೂರ್‌ನಲ್ಲಿ ʼಇನ್ಸಾಫ್ ರ‍್ಯಾಲಿʼ; ರಾಹುಲ್ ಗಾಂಧಿ ಭಾಗಿ

ಪಂಜಾಬ್‌ನ ಹಕ್ಕುಗಳು, ನ್ಯಾಯ ಮತ್ತು ಭವಿಷ್ಯದ ಕುರಿತು ಧ್ವನಿ ಎತ್ತುವ ಉದ್ದೇಶದಿಂದ...

ಬೀದರ್‌ | ವಸತಿ ಶಾಲೆಗಳ ಪ್ರಾಂಶುಪಾಲರು, ಮೇಲ್ವಿಚಾರಕರ ವರ್ಗಾವಣೆಗೆ ಡಿವಿಪಿ ಆಗ್ರಹ

ಬೀದರ್ ಜಿಲ್ಲೆಯ ವಿವಿಧ ವಸತಿ ಶಾಲೆಗಳಲ್ಲಿ ಹಲವು ವರ್ಷಗಳಿಂದ ಒಂದೇ ಸ್ಥಳದಲ್ಲಿ...

​’ಮೊಬೈಲ್ ಒಡೆದು ಹಾಕಿ’: ‘ಡಿಜಿಟಲ್ ಅರೆಸ್ಟ್’ ಬಲೆಗೆ ಬೀಳುತ್ತಿರುವ ಸುಶಿಕ್ಷಿತರ ಬಗ್ಗೆ ಸುಪ್ರೀಂ ಬೇಸರ

ದೇಶಾದ್ಯಂತ ಹೆಚ್ಚುತ್ತಿರುವ 'ಡಿಜಿಟಲ್ ಅರೆಸ್ಟ್' (Digital Arrest) ಪ್ರಕರಣಗಳ ಕುರಿತು ತೀವ್ರ...