ಬ್ರಿಕ್ಸ್‌ ಶೃಂಗಸಭೆ | ಚೀನಾಗೆ ಹೆಚ್ಚಿನ ಲಾಭ, ಭಾರತಕ್ಕೆ ಸವಾಲುಗಳ ನಿರ್ವಹಣೆ: ಕಪಿಲ್ ಸಿಬಲ್

Date:

ಇತ್ತೀಚೆಗೆ ದೆಹಲಿಯಲ್ಲಿ ಮುಕ್ತಾಯಗೊಂಡ ‘ಬ್ರಿಕ್ಸ್‌’ ಶೃಂಗಸಭೆಯಿಂದ ಚೀನಾ ಅತ್ಯಂತ ಹೆಚ್ಚಿನ ಲಾಭವನ್ನು ಪಡೆದುಕೊಂಡಿದೆ ಹಾಗೂ ವಿವಿಧ ದೇಶಗಳ ನಡುವಿನ ಭಿನ್ನಾಭಿಪ್ರಾಯಗಳನ್ನು ಸರಿದೂಗಿಸಿ ಸಾಗುವುದು ಅಧ್ಯಕ್ಷತೆ ವಹಿಸಿದ್ದ ಭಾರತಕ್ಕೆ ಸವಾಲಿನ ಕೆಲಸವಾಗಿತ್ತು ಎಂದು ರಾಜ್ಯಸಭಾ ಸಂಸದ ಹಾಗೂ ಹಿರಿಯ ವಕೀಲ ಕಪಿಲ್ ಸಿಬಲ್ ಹೇಳಿದ್ದಾರೆ.

- Advertisement -

ಸೋಮವಾರ ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬ್ರಿಕ್ಸ್‌ ಒಕ್ಕೂಟವನ್ನು ವಿವಿಧ ರೀತಿಯ ರಾಜಕೀಯ ಮತ್ತು ಆರ್ಥಿಕ ಸಿದ್ಧಾಂತ ಹೊಂದಿರುವ ದೇಶಗಳ ‘ಮಿಶ್ರಿತ ಸಮೂಹ’ ಎಂದು ಬಣ್ಣಿಸಿದರು. ಇಂತಹ ವೈವಿಧ್ಯಮಯ ದೇಶಗಳಿರುವ ಒಕ್ಕೂಟದಿಂದ ಯಾವುದೇ ಕ್ರಾಂತಿಕಾರಿ ಅಥವಾ ಏಕರೂಪದ ನಿರ್ಣಯಗಳನ್ನು ಕೈಗೊಳ್ಳುವುದು ಸುಲಭದ ಮಾತಲ್ಲ ಎಂದಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

‘Epstein’ ವಿವಾದದ ನಡುವೆಯೂ ಹರದೀಪ್ ಪುರಿಗೆ ಮಣೆ: ಸಿಖ್...

'Epstein files' ವಿವಾದವು ಹರದೀಪ್ ಸಿಂಗ್ ಪುರಿ ಅವರ ರಾಜಕೀಯ ಬದುಕಿನಲ್ಲಿ ಸಣ್ಣದೊಂದು ಬಿರುಗಾಳಿ ಎಬ್ಬಿಸಿದ್ದು ಸುಳ್ಳಲ್ಲ. ವಿರೋಧ ಪಕ್ಷಗಳ ಟೀಕೆಗಳು ಮತ್ತು ನೈತಿಕ ಹೊಣೆಗಾರಿಕೆಯ ಪ್ರಶ್ನೆಗಳು ಅವರನ್ನು ಸಂಪುಟದಿಂದ ಹೊರಗಟ್ಟುವ ಹಂತಕ್ಕೆ...

ಅಮೆರಿಕದಲ್ಲಿ ನೋಂದಾಯಿಸಿಕೊಂಡ RSS Friends; RSS ಜೊತೆ ಮೌಖಿಕ...

RSS Friends ಎಂಬ ಸಂಘಟನೆಯು ಅಮೆರಿಕದಲ್ಲಿ ಆರ್‌ಎಸ್‌ಎಸ್‌ನ ವಿದೇಶಿ ಏಜೆಂಟ್ ಆಗಿ ನೋಂದಾಯಿಸಿಕೊಂಡಿದೆ. ತನ್ನ ಉದ್ದೇಶಿತ ಚಟುವಟಿಕೆಗಳು ಮುಖ್ಯವಾಗಿ ಮಾಹಿತಿ ಪ್ರಸಾರ, ಶೈಕ್ಷಣಿಕ ಕಾರ್ಯಗಳು, ಸಾರ್ವಜನಿಕ ಸಂಪರ್ಕ ಮತ್ತು ಸಮುದಾಯದೊಂದಿಗಿನ ತೊಡಗಿಸಿಕೊಳ್ಳುವಿಕೆಯನ್ನು ಒಳಗೊಂಡಿರುತ್ತವೆ...

ಕುರ್ಚಿಗಾಗಿ ನಿಲುವುಗಳೇ ಬಲಿ; ವಿಶ್ವಾಸಾರ್ಹತೆಯನ್ನೇ ಕಳೆದುಕೊಳ್ಳುತ್ತಿರುವ ಎಚ್‌ಡಿಕೆ

ಕರ್ನಾಟಕ ರಾಜಕಾರಣದಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಷ್ಟು ವೇಗವಾಗಿ ತಮ್ಮ ರಾಜಕೀಯ ನಿಲುವುಗಳನ್ನು ಬದಲಿಸಿಕೊಳ್ಳುವ ಮತ್ತೊಬ್ಬ ನಾಯಕ ಸಿಗುವುದು ಕಷ್ಟ. ನಿನ್ನೆ ವಿರೋಧಿಸಿದವರನ್ನು ಇಂದು ಸಮರ್ಥಿಸಿಕೊಳ್ಳುವುದು, ಹಿಂದೆ ಜೊತೆಗಿದ್ದವರನ್ನೇ ಇಂದು ದೂರುವುದು,...

ಇದನ್ನೂ ಓದಿ: ಬ್ರಿಕ್ಸ್ ಶೃಂಗಸಭೆಯಲ್ಲಿ ಸಸ್ಯಾಹಾರ; ಭಾರತದ ಶೇ. 80ರಷ್ಟು ಜನರು ಮಾಂಸಾಹಾರಿಗಳು: ರಾಹುಲ್ ಗಾಂಧಿ

ಸಭೆಯ ಅಧ್ಯಕ್ಷತೆ ವಹಿಸಿದ್ದ ಭಾರತವು ಜಂಟಿ ಪ್ರಕಟಣೆಯನ್ನುಹೊರತರಲು ಪಟ್ಟ ಶ್ರಮವನ್ನು ಕಪಿಲ್ ಸಿಬಲ್ ಶ್ಲಾಘಿಸಿದರು. “ದೇಶಕ್ಕೆ ಈ ಶೃಂಗಸಭೆಯಲ್ಲಿ ಜಂಟಿ ಘೋಷಣೆ ಅಂಗೀಕರಿಸುವುದು ‘ಹಾರ್ಮುಜ್ ಜಲಸಂಧಿ’ಯಲ್ಲಿ ಹಡಗು ಚಲಾಯಿಸಿದಷ್ಟೇ ಸವಾಲಾಗಿತ್ತು. ಯಾವುದೇ ವಿವಾದಕ್ಕೆ ಆಸ್ಪದ ನೀಡದೆ ಜಂಟಿ ಪ್ರಕಟಣೆ ಹೊರಡಿಸಿರುವುದು ನಮ್ಮ ಸರ್ಕಾರದ ಗಮನಾರ್ಹ ಸಾಧನೆ” ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದೇ ವೇಳೆ, ಬ್ರಿಕ್ಸ್‌ ಒಕ್ಕೂಟದಲ್ಲಿ ಪರ್ಯಾಯ ನಾಣ್ಯ ಅಥವಾ ‘ಡಿ-ಡಾಲರೈಸೇಶನ್’ (ಅಮೆರಿಕನ್ ಡಾಲರ್ ನಿರ್ಬಂಧಿಸುವುದು) ಕುರಿತು ಯಾವುದೇ ನಿರ್ಧಾರ ಕೈಗೊಳ್ಳದಿರುವುದು ಕೂಡ ಭಾರತಕ್ಕೆ ಸಿಕ್ಕ ಪ್ರಮುಖ ಯಶಸ್ಸು ಎಂದು ಸಿಬಲ್ ಉಲ್ಲೇಖಿಸಿದರು.

ಬ್ರಿಕ್ಸ್‌ ಅನ್ನು ಪಾಶ್ಚಿಮಾತ್ಯ ವಿರೋಧಿ ಬ್ಲಾಕ್ ಮಾಡಲು ಚೀನಾ ಮತ್ತು ರಷ್ಯಾ ಪ್ರಯತ್ನಿಸುತ್ತಿವೆ ಎಂದು ಆರೋಪಿಸಿದ ಅವರು, ಭಾರತವು ಇದನ್ನು ಪಾಶ್ಚಿಮಾತ್ಯ ವಿರೋಧಿ ಮೈತ್ರಿಕೂಟವನ್ನಾಗಿ ಮಾಡಲು ಬಯಸುವುದಿಲ್ಲ ಎಂದರು. ಈ ಇಡೀ ಶೃಂಗಸಭೆಯ ರಾಜಕೀಯ ಮತ್ತು ಭೌಗೋಳಿಕ ಸನ್ನಿವೇಶದಿಂದ ಚೀನಾ ಅತ್ಯಂತ ಹೆಚ್ಚಿನ ಲಾಭ ಪಡೆದುಕೊಂಡಿದೆ ಎಂದು ಪ್ರತಿಪಾದಿಸಿದರು.

ಅಲ್ಲದೆ, ಶೃಂಗಸಭೆಯಲ್ಲಿ ಕೈಗೊಂಡ ನಿರ್ಣಯಗಳು ಮತ್ತು ನೀಡಲಾದ ಭರವಸೆಗಳು ಕೇವಲ ಕಾಗದದ ಮೇಲಷ್ಟೇ ಉಳಿಯುತ್ತವೆಯೇ ಅಥವಾ ವಾಸ್ತವದಲ್ಲಿ ಅನುಷ್ಠಾನಗೊಳ್ಳುತ್ತವೆಯೇ ಎಂಬುದನ್ನು ಕಾಲವೇ ಉತ್ತರಿಸಬೇಕಾಗಿದೆ ಎಂದು ತಿಳಿಸಿದರು.

WhatsApp Image 2025 11 17 at 3.21.38 PM
ಈ ದಿನ ಡೆಸ್ಕ್
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

​’ಮೊಬೈಲ್ ಒಡೆದು ಹಾಕಿ’: ‘ಡಿಜಿಟಲ್ ಅರೆಸ್ಟ್’ ಬಲೆಗೆ ಬೀಳುತ್ತಿರುವ ಸುಶಿಕ್ಷಿತರ ಬಗ್ಗೆ ಸುಪ್ರೀಂ ಬೇಸರ

ದೇಶಾದ್ಯಂತ ಹೆಚ್ಚುತ್ತಿರುವ 'ಡಿಜಿಟಲ್ ಅರೆಸ್ಟ್' (Digital Arrest) ಪ್ರಕರಣಗಳ ಕುರಿತು ತೀವ್ರ...

2027ನೇ ಸಾಲಿನ ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆ ವೇಳಾಪಟ್ಟಿ ಪ್ರಕಟ

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು (KSEAB) 2027ನೇ ಸಾಲಿನ...

ಬೀದರ್‌ | ಶಿಕ್ಷಕರು ಬದುಕಿನ ಭವಿಷ್ಯ ರೂಪಿಸಿದ ಶಿಲ್ಪಿಗಳು: ಪತ್ರಕರ್ತ ಗೌರೀಶ ಅಕ್ಕಿ

ಶಿಕ್ಷಕರು ನಮಗೆ ವಿದ್ಯೆಯ ಜೊತೆಗೆ ಸಂಸ್ಕಾರ ನೀಡಿ, ಬದುಕಿನ ಭವಿಷ್ಯವನ್ನು ರೂಪಿಸಿದ...