ಬೆಲೆ ಏರಿಕೆಯ ಬಿಸಿ: ಆಗಸ್ಟ್‌ನಲ್ಲಿ ಶೇ 4.82ಕ್ಕೆ ಜಿಗಿದ ಚಿಲ್ಲರೆ ಹಣದುಬ್ಬರ

Date:

​ದಿನಬಳಕೆಯ ಆಹಾರ ಪದಾರ್ಥಗಳು ಹಾಗೂ ಇಂಧನ ಬೆಲೆ ಏರಿಕೆಯ ಪರಿಣಾಮವಾಗಿ ದೇಶದ ಚಿಲ್ಲರೆ ಹಣದುಬ್ಬರವು ಆಗಸ್ಟ್ ತಿಂಗಳಲ್ಲಿ ಶೇ 4.82ಕ್ಕೆ ಏರಿಕೆಯಾಗಿದೆ. ಜುಲೈ ತಿಂಗಳಲ್ಲಿ ಶೇ 4.45 ರಷ್ಟಿದ್ದ ಹಣದುಬ್ಬರವು ಒಂದೇ ತಿಂಗಳಲ್ಲಿ ದಿಢೀರ್ ಏರಿಕೆ ಕಂಡಿದ್ದು, ಜನಸಾಮಾನ್ಯರ ಜೇಬಿಗೆ ಮತ್ತಷ್ಟು ಕತ್ತರಿ ಬಿದ್ದಿದೆ.

- Advertisement -

ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯವು (MoSPI) ಸೋಮವಾರ ಈ ಕುರಿತ ತಾತ್ಕಾಲಿಕ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿದೆ. ಗ್ರಾಹಕ ದರ ಸೂಚ್ಯಂಕ (CPI) ಆಧಾರಿತ ಚಿಲ್ಲರೆ ಹಣದುಬ್ಬರವು ಸತತ ಮೂರನೇ ತಿಂಗಳೂ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (RBI) ಮಧ್ಯಮಾವಧಿ ಗುರಿಯಾದ ಶೇ 4ರ ಗಡಿ ದಾಟಿದೆ. ಗ್ರಾಹಕ ಆಹಾರ ಬೆಲೆ ಸೂಚ್ಯಂಕ (CFPI) ಆಧಾರಿತ ‘ಆಹಾರ ಹಣದುಬ್ಬರ’ವು ಜುಲೈನಲ್ಲಿದ್ದ ಶೇ 5.52 ರಿಂದ ಆಗಸ್ಟ್‌ನಲ್ಲಿ ಶೇ 5.95ಕ್ಕೆ ಜಿಗಿದಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

‘Epstein’ ವಿವಾದದ ನಡುವೆಯೂ ಹರದೀಪ್ ಪುರಿಗೆ ಮಣೆ: ಸಿಖ್...

'Epstein files' ವಿವಾದವು ಹರದೀಪ್ ಸಿಂಗ್ ಪುರಿ ಅವರ ರಾಜಕೀಯ ಬದುಕಿನಲ್ಲಿ ಸಣ್ಣದೊಂದು ಬಿರುಗಾಳಿ ಎಬ್ಬಿಸಿದ್ದು ಸುಳ್ಳಲ್ಲ. ವಿರೋಧ ಪಕ್ಷಗಳ ಟೀಕೆಗಳು ಮತ್ತು ನೈತಿಕ ಹೊಣೆಗಾರಿಕೆಯ ಪ್ರಶ್ನೆಗಳು ಅವರನ್ನು ಸಂಪುಟದಿಂದ ಹೊರಗಟ್ಟುವ ಹಂತಕ್ಕೆ...

ಅಮೆರಿಕದಲ್ಲಿ ನೋಂದಾಯಿಸಿಕೊಂಡ RSS Friends; RSS ಜೊತೆ ಮೌಖಿಕ...

RSS Friends ಎಂಬ ಸಂಘಟನೆಯು ಅಮೆರಿಕದಲ್ಲಿ ಆರ್‌ಎಸ್‌ಎಸ್‌ನ ವಿದೇಶಿ ಏಜೆಂಟ್ ಆಗಿ ನೋಂದಾಯಿಸಿಕೊಂಡಿದೆ. ತನ್ನ ಉದ್ದೇಶಿತ ಚಟುವಟಿಕೆಗಳು ಮುಖ್ಯವಾಗಿ ಮಾಹಿತಿ ಪ್ರಸಾರ, ಶೈಕ್ಷಣಿಕ ಕಾರ್ಯಗಳು, ಸಾರ್ವಜನಿಕ ಸಂಪರ್ಕ ಮತ್ತು ಸಮುದಾಯದೊಂದಿಗಿನ ತೊಡಗಿಸಿಕೊಳ್ಳುವಿಕೆಯನ್ನು ಒಳಗೊಂಡಿರುತ್ತವೆ...

ಕುರ್ಚಿಗಾಗಿ ನಿಲುವುಗಳೇ ಬಲಿ; ವಿಶ್ವಾಸಾರ್ಹತೆಯನ್ನೇ ಕಳೆದುಕೊಳ್ಳುತ್ತಿರುವ ಎಚ್‌ಡಿಕೆ

ಕರ್ನಾಟಕ ರಾಜಕಾರಣದಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಷ್ಟು ವೇಗವಾಗಿ ತಮ್ಮ ರಾಜಕೀಯ ನಿಲುವುಗಳನ್ನು ಬದಲಿಸಿಕೊಳ್ಳುವ ಮತ್ತೊಬ್ಬ ನಾಯಕ ಸಿಗುವುದು ಕಷ್ಟ. ನಿನ್ನೆ ವಿರೋಧಿಸಿದವರನ್ನು ಇಂದು ಸಮರ್ಥಿಸಿಕೊಳ್ಳುವುದು, ಹಿಂದೆ ಜೊತೆಗಿದ್ದವರನ್ನೇ ಇಂದು ದೂರುವುದು,...

​ಗ್ರಾಮೀಣ ಮತ್ತು ನಗರ ಪ್ರದೇಶಗಳೆರಡರಲ್ಲೂ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಗ್ರಾಮೀಣ ಹಣದುಬ್ಬರ ಶೇ 4.84 ರಿಂದ ಶೇ 5.23ಕ್ಕೆ ಏರಿಕೆಯಾಗಿದ್ದರೆ, ನಗರ ಪ್ರದೇಶದ ಹಣದುಬ್ಬರ ಶೇ 3.96 ರಿಂದ ಶೇ 4.31ಕ್ಕೆ ಹೆಚ್ಚಳವಾಗಿದೆ. ತರಕಾರಿ ಮತ್ತು ಸಾಂಬಾರ ಪದಾರ್ಥಗಳ ದರ ಏರಿಕೆಯು ಆಹಾರ ಹಣದುಬ್ಬರ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ. ಈರುಳ್ಳಿ ಬೆಲೆಯು ಶೇ 48.27ರಷ್ಟು, ಬೆಳ್ಳುಳ್ಳಿ ಶೇ 43.60ರಷ್ಟು ಹಾಗೂ ಶುಂಠಿ ಬೆಲೆಯು ಶೇ 73.82ರಷ್ಟು ಭಾರೀ ಏರಿಕೆ ದಾಖಲಿಸಿವೆ. ಮತ್ತೊಂದೆಡೆ, ಗ್ರಾಹಕರಿಗೆ ತುಸು ರಿಲೀಫ್ ಎನ್ನುವಂತೆ ಟೊಮೆಟೊ ಬೆಲೆಯು ಶೇ 31.09ರಷ್ಟು ಹಾಗೂ ಆಲೂಗಡ್ಡೆ ಬೆಲೆಯು ಶೇ 13.14ರಷ್ಟು ಇಳಿಕೆಯಾಗಿದೆ.

​ಆಹಾರದ ಜೊತೆಗೆ ಸಾರಿಗೆ, ಹೋಟೆಲ್ ಹಾಗೂ ವಸತಿ ಸೇವೆಗಳ ವೆಚ್ಚವೂ ದುಬಾರಿಯಾಗಿದೆ. ಗಮನಾರ್ಹವಾಗಿ, ಬೆಳ್ಳಿ ಆಭರಣಗಳ ಹಣದುಬ್ಬರ ಶೇ 107.11ರಷ್ಟಿದ್ದು, ಗ್ರಾಹಕ ವಸ್ತುಗಳ ಪಟ್ಟಿಯಲ್ಲಿ ಗರಿಷ್ಠ ಮಟ್ಟದಲ್ಲಿದೆ. ರಾಜ್ಯಗಳ ವಿಭಾಗದಲ್ಲಿ ಗಮನಿಸಿದರೆ, ಶೇ 6.27ರಷ್ಟು ಗರಿಷ್ಠ ಹಣದುಬ್ಬರದೊಂದಿಗೆ ತೆಲಂಗಾಣ ಮೊದಲ ಸ್ಥಾನದಲ್ಲಿದ್ದರೆ, ತಮಿಳುನಾಡು (ಶೇ 5.92) ಎರಡನೇ ಸ್ಥಾನದಲ್ಲಿದೆ. ದೆಹಲಿಯಲ್ಲಿ ಹಣದುಬ್ಬರ ಪ್ರಮಾಣ ಶೇ 2.61 ರಷ್ಟಿದ್ದು, ತುಲನಾತ್ಮಕವಾಗಿ ಕಡಿಮೆ ಇದೆ.

​ಹಣದುಬ್ಬರವು ನಿರಂತರವಾಗಿ ಏರಿಕೆಯಾಗುತ್ತಿರುವ ಹಾಗೂ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಮುಂಬರುವ ಅಕ್ಟೋಬರ್‌ನಲ್ಲಿ ನಡೆಯಲಿರುವ ಆರ್‌ಬಿಐ ಹಣಕಾಸು ನೀತಿ ಸಮಿತಿ (MPC) ಸಭೆಯಲ್ಲಿ ಬಡ್ಡಿದರ ಹೆಚ್ಚಳ ಮಾಡುವ ಸಾಧ್ಯತೆಗಳು ದಟ್ಟವಾಗಿವೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪಂಜಾಬ್‌ | ನ.4ರಂದು ಸಂಗ್‌ರೂರ್‌ನಲ್ಲಿ ʼಇನ್ಸಾಫ್ ರ‍್ಯಾಲಿʼ; ರಾಹುಲ್ ಗಾಂಧಿ ಭಾಗಿ

ಪಂಜಾಬ್‌ನ ಹಕ್ಕುಗಳು, ನ್ಯಾಯ ಮತ್ತು ಭವಿಷ್ಯದ ಕುರಿತು ಧ್ವನಿ ಎತ್ತುವ ಉದ್ದೇಶದಿಂದ...

ಬೀದರ್‌ | ವಸತಿ ಶಾಲೆಗಳ ಪ್ರಾಂಶುಪಾಲರು, ಮೇಲ್ವಿಚಾರಕರ ವರ್ಗಾವಣೆಗೆ ಡಿವಿಪಿ ಆಗ್ರಹ

ಬೀದರ್ ಜಿಲ್ಲೆಯ ವಿವಿಧ ವಸತಿ ಶಾಲೆಗಳಲ್ಲಿ ಹಲವು ವರ್ಷಗಳಿಂದ ಒಂದೇ ಸ್ಥಳದಲ್ಲಿ...

​’ಮೊಬೈಲ್ ಒಡೆದು ಹಾಕಿ’: ‘ಡಿಜಿಟಲ್ ಅರೆಸ್ಟ್’ ಬಲೆಗೆ ಬೀಳುತ್ತಿರುವ ಸುಶಿಕ್ಷಿತರ ಬಗ್ಗೆ ಸುಪ್ರೀಂ ಬೇಸರ

ದೇಶಾದ್ಯಂತ ಹೆಚ್ಚುತ್ತಿರುವ 'ಡಿಜಿಟಲ್ ಅರೆಸ್ಟ್' (Digital Arrest) ಪ್ರಕರಣಗಳ ಕುರಿತು ತೀವ್ರ...

2027ನೇ ಸಾಲಿನ ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆ ವೇಳಾಪಟ್ಟಿ ಪ್ರಕಟ

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು (KSEAB) 2027ನೇ ಸಾಲಿನ...