‘ಬ್ರೋ’ ಗ್ಯಾನೇಶ್ ನಂಬರ್ ಕೊಡಲಾ: ಯುಎಸ್ ಮಧ್ಯಂತರ ಚುನಾವಣೆ ಫಲಿತಾಂಶದ ಬೆನ್ನಲ್ಲೇ ಟ್ರಂಪ್ – ಸಿಇಸಿ ಮೀಮ್ಸ್ ವೈರಲ್

Date:

ಅಮೆರಿಕದ 2026ರ ಮಧ್ಯಂತರ ಚುನಾವಣೆಯ ಫಲಿತಾಂಶದಲ್ಲಿ ಡೆಮಾಕ್ರಟಿಕ್ ಪಕ್ಷವು ಹಿನ್ನಡೆಯಲ್ಲಿದ್ದ ಪ್ರಮುಖ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿ ರಿಪಬ್ಲಿಕನ್ ಪಕ್ಷಕ್ಕೆ ಬಲವಾದ ಆಘಾತ ನೀಡುತ್ತಿದ್ದಂತೆಯೇ, ಸಾಮಾಜಿಕ ಜಾಲತಾಣಗಳಲ್ಲಿ ಭಾರತೀಯ ನೆಟ್ಟಿಗರು ಕೌಂಟರ್ ಮೀಮ್ಸ್‌ಗಳ ಮೂಲಕ ಧೂಳೆಬ್ಬಿಸುತ್ತಿದ್ದಾರೆ. ಈ ಸಂಭ್ರಮ ಮತ್ತು ಚರ್ಚೆಯ ನಡುವೆ ಇದ್ದಕ್ಕಿದ್ದಂತೆ ಭಾರತದ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರ ಹೆಸರು ಟ್ರೆಂಡಿಂಗ್ ವಿಷಯವಾಗಿ ಹೊರಹೊಮ್ಮಿದೆ.

- Advertisement -

ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಂತ ಹೆಚ್ಚು ವೈರಲ್ ಆಗುತ್ತಿರುವ ಮೀಮ್ ಒಂದರಲ್ಲಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪ್ರಧಾನಿ ನರೇಂದ್ರ ಮೋದಿ ಕುಳಿತಿರುವ ಕೊಠಡಿಗೆ ಪ್ರವೇಶಿಸಿ, ಖಿನ್ನತೆಯಿಂದ “ಬ್ರೋ, ನನಗೆ ಗ್ಯಾನೇಶ್ ಕುಮಾರ್ ಅವರನ್ನು ಕೊಡಿ!” (Bro, give me Gyanesh) ಮತ್ತು “ಬ್ರೋ, ಗ್ಯಾನೇಶ್ ಕುಮಾರ್ ಅವರ ನಂಬರ್ ಕೊಡಲಾ” ಎಂದು ಕೇಳುವ ರೀತಿಯ ಫೋಟೋ ಎಡಿಟ್ ಮಾಡಿ ಹಂಚಿಕೊಳ್ಳಲಾಗುತ್ತಿದೆ. ಚುನಾವಣೆಯಲ್ಲಿ ಗೆಲ್ಲಲು ಭಾರತದ ಚುನಾವಣಾ ಆಯೋಗದ ನೆರವು ಬೇಕು ಎಂಬಂತೆ ಈ ಮೀಮ್ ವ್ಯಂಗ್ಯವಾಡುತ್ತದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ʼಸ್ಟಿಂಗ್‌ʼ ಸರ್ಕಸ್‌ | ಬೇಳೆ ಬೇಯಿಸಿಕೊಂಡವರಾರೋ, ಸಂತ್ರಸ್ತರಾರೋ!

ರಾಜ್ಯಾದ್ಯಂತ ಈಗ ಭಾರೀ ಸದ್ದು ಮಾಡುತ್ತಿರುವ ಸ್ಟಿಂಗ್ ಆಪರೇಷನ್ ಪ್ರಕರಣವು ಹೊಸ ಪರ-ವಿರೋಧ ಚರ್ಚೆಗಳಿಗೆ ವೇದಿಕೆ ಸೃಷ್ಟಿಸಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವರ್ಚಸ್ಸನ್ನು ಕುಗ್ಗಿಸಲು ಮತ್ತು ಅವರ ತೇಜೋವಧೆ ಮಾಡಲೆಂದೇ ಈ...

ರಾಹುಲ್ ಗಾಂಧಿಯವರನ್ನು ಕೆಣಕಿದವರೇ, ಅವರು ಸಿಡಿದೇಳಲು ಕಾರಣರಾದರು! ಅದು...

ರಾಹುಲ್ ಗಾಂಧಿಯವರನ್ನು ರಾಜಕೀಯವಾಗಿ ಅಪ್ರಸ್ತುತಗೊಳಿಸಲು ನಿರಂತರವಾಗಿ ಪ್ರಯತ್ನಿಸಿದವರು, ಅವರ ಹೆಸರನ್ನು ದೇಶದ ರಾಜಕೀಯ ಚರ್ಚೆಯಿಂದ ಅಳಿಸಲು ಸಾಧ್ಯವಾಗಲಿಲ್ಲ. ಬದಲಾಗಿ ಅವರ ರಾಜಕೀಯ ಚಟುವಟಿಕೆಗಳು ಮತ್ತು ಅವರು ಎತ್ತುವ ಪ್ರಶ್ನೆಗಳೇ ಸಾರ್ವಜನಿಕ ಚರ್ಚೆಯ ಭಾಗವಾದವು. ರಾಜಕೀಯದಲ್ಲಿ...

ಅಮೆರಿಕದಲ್ಲಿ ಟ್ರಂಪ್ ಬೇಡ – ಭಾರತದಲ್ಲಿ ಮೋದಿ ಬೇಕು;...

ಅಮೆರಿಕದಲ್ಲಿ 2026ರ ನವೆಂಬರ್ ಮಧ್ಯಂತರ ಚುನಾವಣೆ ನಡೆದು, ಫಲಿತಾಂಶ ಪ್ರಕಟಗೊಳ್ಳುತ್ತಿದೆ. ಈ ಚುನಾವಣೆಗೂ ಮುನ್ನ ‘ಕಾರ್ನೆಗಿ ಎಂಡೋಮೆಂಟ್ ಫಾರ್ ಇಂಟರ್‌ನ್ಯಾಷನಲ್ ಪೀಸ್ ಮತ್ತು ಯೂಗವ್’ ಸಂಸ್ಥೆ ರಾಜಕೀಯ ಸಮೀಕ್ಷೆಯೊಂದನ್ನು ನಡೆಸಿದೆ. ಮಹತ್ವದ ರಾಜಕೀಯ...

ಇದನ್ನೂ ಓದಿ: SIR | ಫಾರ್ಮ್-6ನ ಅಕ್ರಮ ನಿಯಮವನ್ನು ಕೊನೆಗೂ ತಿದ್ದಿ ಸರಿಪಡಿಸಿದ ಚುನಾವಣಾ ಅಯೋಗ

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರು ಟ್ವೀಟ್ ಮಾಡುತ್ತಾ, “ಗ್ಯಾನೇಶ್ ಕುಮಾರ್ ಅವರೇನಾದರೂ ಅಮೆರಿಕದಲ್ಲಿದ್ದಿದ್ದರೆ ಡೊನಾಲ್ಡ್ ಟ್ರಂಪ್‌ಗೆ ಇಂತಹ ಪರಿಸ್ಥಿತಿ ಎಂದಿಗೂ ಬರುತ್ತಿರಲಿಲ್ಲ” ಎಂದು ಬರೆದುಕೊಂಡಿದ್ದು, ಇದು ಸಾವಿರಾರು ಬಾರಿ ರಿಟ್ವೀಟ್ ಆಗಿದೆ.

ಸಾಮಾಜಿಕ ಜಾಲತಾಣಗಳ ಹಲವು ಪ್ಯಾರೋಡಿ ಖಾತೆಗಳು ತಮಾಷೆಯ ಶೀರ್ಷಿಕೆಗಳೊಂದಿಗೆ ಸುದ್ದಿಯ ರೂಪದಲ್ಲೇ ಪೋಸ್ಟ್‌ಗಳನ್ನು ಹಾಕಿವೆ. “ಮಧ್ಯಂತರ ಚುನಾವಣೆಯಲ್ಲಿ ರಿಪಬ್ಲಿಕನ್ನರು ಸೋಲುತ್ತಿರುವ ಹಿನ್ನೆಲೆಯಲ್ಲಿ, ಚುನಾವಣಾ ಅಧಿಕಾರಿಗಳಿಗೆ ತರಬೇತಿ ನೀಡಲು ಗ್ಯಾನೇಶ್ ಕುಮಾರ್ ವಿಶೇಷ ವಿಮಾನದಲ್ಲಿ ಅಮೆರಿಕಕ್ಕೆ ಪಯಣಿಸಲಿದ್ದಾರೆ!” ಎಂದು ಬರೆದುಕೊಂಡಿದ್ದಾರೆ. ಇನ್ನು ಕೆಲವು ಖಾತೆಗಳಲ್ಲಿ “ರಿಪಬ್ಲಿಕನ್ ಪಕ್ಷವು ತಮ್ಮ ಸ್ವಂತ ‘ಉತ್ತರ ಪ್ರದೇಶ’ವನ್ನು ಕಳೆದುಕೊಂಡಿದೆ” ಎಂದು ಅಮೆರಿಕದ ರಾಜ್ಯಗಳ ರಾಜಕೀಯ ಪರಿಸ್ಥಿತಿಯನ್ನು ಭಾರತದ ರಾಜ್ಯಗಳಿಗೆ ಹೋಲಿಸಿ ಬರೆಯಲಾಗಿದೆ.

ಕೇವಲ ಸಾಮಾನ್ಯ ನೆಟ್ಟಿಗರು ಮಾತ್ರವಲ್ಲದೆ, ಹಿರಿಯ ವಕೀಲ ಪ್ರಶಾಂತ್ ಭೂಷಣ್ ಸೇರಿದಂತೆ ಹಲವು ಪ್ರಮುಖ ಸಾಮಾಜಿಕ ಕಾರ್ಯಕರ್ತರು ಮತ್ತು ರಾಜಕೀಯ ವಿಶ್ಲೇಷಕರು ಕೂಡ ಅಮೆರಿಕದ ಚುನಾವಣಾ ವ್ಯವಸ್ಥೆ ಹಾಗೂ ಮತ ಎಣಿಕೆಯ ಪ್ರಕ್ರಿಯೆಯನ್ನು ಉಲ್ಲೇಖಿಸಿ ಪೋಸ್ಟ್‌ಗಳನ್ನು ಮಾಡಿದ್ದಾರೆ. ಅಮೆರಿಕದಲ್ಲಿ ಬ್ಯಾಲೆಟ್ ಪೇಪರ್ ಬಳಸಿ ಪಾರದರ್ಶಕವಾಗಿ ಮತ ಎಣಿಕೆ ನಡೆಯುವುದನ್ನು ಮತ್ತು ಇವಿಎಂ ವ್ಯವಸ್ಥೆಯನ್ನು ಹೋಲಿಸಿ ಜಾಲತಾಣಗಳಲ್ಲಿ ಸುದೀರ್ಘ ಚರ್ಚೆಗಳು ನಡೆಯುತ್ತಿವೆ.

ಅಮೆರಿಕದ 2026ರ ಮಧ್ಯಂತರ ಚುನಾವಣೆಯ ಫಲಿತಾಂಶದಲ್ಲಿ ಡೆಮಾಕ್ರಟಿಕ್ ಪಕ್ಷವು ಹೌಸ್ ಆಫ್ ರಿಪ್ರೆಸೆಂಟೇಟಿವ್ಸ್‌ನಲ್ಲಿ ಹಲವು ಸ್ಥಾನಗಳನ್ನು ವಶಪಡಿಸಿಕೊಂಡಿದ್ದು, ರಿಪಬ್ಲಿಕನ್ ಪಕ್ಷಕ್ಕೆ ಹಿನ್ನಡೆಯಾಗಿದೆ. ಈ ಫಲಿತಾಂಶ ಹೊರಬಿದ್ದ ತಕ್ಷಣವೇ ದೇಶದ ಜಾಲತಾಣಗಳಲ್ಲಿ ಭಾರತೀಯ ಮೂಲದ ರಾಜಕಾರಣಿಗಳ ಗೆಲುವಿನ ಜೊತೆಗೆ ಈ ಗ್ಯಾನೇಶ್ ಕುಮಾರ್ ಮೀಮ್‌ಗಳ ಸರಣಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತುಷಾರ್ ಕಪೂರ್ ಬೆನ್ನಲ್ಲೇ ಆಯುಷ್ಮಾನ್ ಖುರಾನಾಗೆ ಬೆದರಿಕೆ: ‘ಬಿಷ್ಣೋಯ್ ಗ್ಯಾಂಗ್’ ಹೆಸರಲ್ಲಿ ಹಫ್ತಾಗೆ ಬೇಡಿಕೆ

ಬಾಲಿವುಡ್‌ ತಾರೆಯರಿಗೆ ಬೆದರಿಕೆ ಕರೆಗಳ ಸರಮಾಲೆ ಮುಂದುವರಿದಿದ್ದು, ನಟ ತುಷಾರ್ ಕಪೂರ್...

ಬಾಗಲಕೋಟೆ | ಕ್ರೀಡೆಯಲ್ಲಿ ಸೋಲು ಗೆಲುವಿಗಿಂತ ಭಾಗವಹಿಸುವಿಕೆ ಮುಖ್ಯ: ಗಜಾನನ ಬಾಲೆ

ಕ್ರೀಡಾ ಸ್ಪರ್ಧೆಗಳಲ್ಲಿ ಸೋಲು-ಗೆಲುವಿಗಿಂತ ಭಾಗವಹಿಸುವುದು ಹಾಗೂ ಕ್ರೀಡಾ ಮನೋಭಾವ ಬೆಳೆಸಿಕೊಳ್ಳುವುದು ಅತ್ಯಂತ...

‘ನಮ್ಮ ಶಾಲೆ ನಮ್ಮ ಜವಾಬ್ದಾರಿ’; ಗ್ರಾಮೀಣ ಶಾಲೆ ದತ್ತು ಪಡೆಯಲು ಡಿ.ಕೆ ಶಿವಕುಮಾರ್ ಕರೆ!

ರಾಜ್ಯದ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳ ಮೂಲಸೌಕರ್ಯ ಹಾಗೂ ಶಿಕ್ಷಣದ ಗುಣಮಟ್ಟ...

ಅನಿಲ್ ಅಂಬಾನಿಯ ₹23,100 ಕೋಟಿ ಆಸ್ತಿ ಜಪ್ತಿ ಮಾಡಿದ ಇಡಿ!

ಸಾಲದ ಸುಳಿಗೆ ಸಿಲುಕಿ ವಿವಾದಗಳ ಕೇಂದ್ರಬಿಂದುವಾಗಿರುವ ಅನಿಲ್ ಅಂಬಾನಿ ಒಡೆತನದ ರಿಲಯನ್ಸ್...