Budget 2026 : ಮಹಿಳೆ-ದಲಿತ-ಬುಡಕಟ್ಟು ಸಮುದಾಯಗಳಿಗೆ ಸಿಕ್ಕಿದ್ದೆಷ್ಟು?

Date:

ಒಟ್ಟಾರೆ ನೋಡಿದರೆ, 2026–27ನೇ ಸಾಲಿನ ಕೇಂದ್ರ ಬಜೆಟ್ ಆರ್ಥಿಕ ವಿಸ್ತರಣೆಯ ಹೆಸರಿನಲ್ಲಿ ಕಾರ್ಪೊರೇಟ್ ಹಿತಾಸಕ್ತಿಗಳಿಗೆ ಹೆಚ್ಚಿನ ಒತ್ತು ನೀಡಿದ್ದು, ಸಮಾಜದ ದುರ್ಬಲ ವರ್ಗಗಳಾದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ದುಡಿಯುವ ವರ್ಗ, ಮಹಿಳೆಯರು ಹಾಗೂ ಅಂಚಿನ ಸಮುದಾಯಗಳ ಆಶಯಗಳತ್ತ ಗಂಭೀರವಾಗಿ ಮುಖ ಮಾಡಿಲ್ಲ ಎಂಬುದು ಅಂಕಿ–ಅಂಶಗಳಿಂದಲೇ ಸ್ಪಷ್ಟವಾಗುತ್ತದೆ.

- Advertisement -

ಸಾಮಾನ್ಯವಾಗಿ ಕೇಂದ್ರ ಸರ್ಕಾರ ಪ್ರತಿವರ್ಷದ ಬಜೆಟ್ ಅನ್ನು ಫೆ.01ರಂದು ಮಂಡಿಸುತ್ತದೆ. ಒಂದು ತಿಂಗಳ ಕಾಲ ಚರ್ಚೆ ಮಾಡಿ, ಸಾಧಕ ಬಾಧಕಗಳನ್ನು ಗುಣಿಸಿ ಎಣಿಸಿ ಲೆಕ್ಕ ಹಾಕುತ್ತದೆ. ಬಳಿಕ ಏಪ್ರಿಲ್ 1ರಂದು ಹೊಸ ಹಣಕಾಸು ವರ್ಷದಿಂದ ಅಧಿಕೃತವಾಗಿ ಬಜೆಟ್ ಕಾರ್ಯರೂಪಕ್ಕೆ ಬರುತ್ತದೆ. ಬಜೆಟ್‌ ಎನ್ನುವುದು ಒಬ್ಬಿಬ್ಬರಿಗೆ ಅಥವಾ ಒಂದು ವರ್ಗಕ್ಕೆ ಸೀಮಿತವಾಗಿರುವಂಥದ್ದಲ್ಲ. ಅದು ಎಲ್ಲಾ ವರ್ಗದ ಜನರನ್ನು, ಎಲ್ಲಾ ಕ್ಷೇತ್ರವನ್ನು ಒಳಗೊಳ್ಳಬೇಕು. ಮುಖ್ಯವಾಗಿ ದುಡಿಯುವ ವರ್ಗ, ಮಹಿಳೆಯರು, ದಲಿತರು, ಆದಿವಾಸಿಗಳು, ಅಲ್ಪಸಂಖ್ಯಾತರಿಗೆ ಹೆಚ್ಚು ಒತ್ತು ಕೊಡಬೇಕು. ದುಡಿಯುವ ವರ್ಗವೇ ದೇಶದ ಚಾಲಕ ಶಕ್ತಿ. ಆದರೆ ಈ ವರ್ಷದ ಬಜೆಟ್ ಕಾರ್ಪೊರೇಟ್ ಲಾಬಿಗೆ ಒಳಗಾಗಿದೆ ಎನ್ನುವ ಅಭಿಪ್ರಾಯಗಳು ಹೆಚ್ಚೆಚ್ಚು ಚರ್ಚೆಯಾಗುತ್ತಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

History Repeats | ರೋಮ್‌ ಉರಿಯುತ್ತಿದ್ದಾಗ ಪಿಟೀಲು ನುಡಿಸಿದ...

ದೇಶದ ಪ್ರಜಾಪ್ರಭುತ್ವದ ಆಧಾರಸ್ತಂಭಗಳು ಒಂದೊಂದಾಗಿ ಕುಸಿಯುತ್ತಾ, ಚುನಾವಣಾ ವ್ಯವಸ್ಥೆಯೇ ಅಕ್ರಮ ಎಸಗುತ್ತಿರುವಾಗ, ನಿರುದ್ಯೋಗ-ಬೆಲೆ ಏರಿಕೆಯ ಭಾರದಿಂದ ಜನ ಹೈರಾಣಾಗಿರುವಾಗ ಭಾರತದ ಪ್ರಧಾನಿ ಭಜನೆ ಮಾಡುತ್ತಿದ್ದಾರೆ. ರೋಂ ಹೊತ್ತಿ ಉರಿಯುತ್ತಿದ್ದಾಗ ನೀರೋ ಪಿಟೀಲು...

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ...

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು ಇದೇ ಮೊದಲೇನಲ್ಲ. ಕರಾವಳಿಯ ಜನತೆ ಇಂತಹ ಪ್ರಚೋದನಾತ್ಮಕ ನಡೆಗಳನ್ನು ತಿರಸ್ಕರಿಸಿ, ಸತ್ಯ ಮತ್ತು ನ್ಯಾಯದ ಪರವಾಗಿ ನಿಲ್ಲಬೇಕಾಗಿದೆ. ಕರಾವಳಿ ಕರ್ನಾಟಕವಾಗಲಿ...

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ...

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು ಪಡೆದುಕೊಂಡಿದೆ. ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್ ಅವರ ನಿರ್ಧಾರಗಳ ಕುರಿತು ಚುನಾವಣಾ ಆಯುಕ್ತರಾದ ಸುಖಬೀರ್‌ ಸಿಂಗ್‌ ಸಂಧು ಮತ್ತು...

ಫೆ.1 ರಂದು 2026-27ನೇ ಸಾಲಿನ ಬಜೆಟ್ ಅನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ್ದಾರೆ. ಎಂದಿನಂತೆ ಈ ವರ್ಷವು ಸಹ ಕಾರ್ಪೊರೇಟ್ ವರ್ಗದ ಕಡೆ ವಾಲಿದ್ದಾರೆಂಬ ಟೀಕೆಗೆ ಗುರಿಯಾಗಿದ್ದಾರೆ. ಬಡವರಿಗೆ, ದಲಿತರಿಗೆ, ಮಹಿಳೆಯರಿಗೆ ವಿಶೇಷವಾಗಿ ದುಡಿಯುವ ವರ್ಗಕ್ಕೆ ಬಜೆಟ್‌ನಲ್ಲಿ ಉತ್ತಮವಾದ ಯಾವ ಘೋಷಣೆಯೂ ಇಲ್ಲವೆಂಬುದು ಒಪ್ಪಿಕೊಳ್ಳಲೇಬೇಕಾದ ಸತ್ಯ.

ನಿರ್ಮಲಾ ಸೀತಾರಾಮನ್ ಅವರ 9ನೇ ದಾಖಲೆಯ ಬಜೆಟ್ ಇದಾಗಿದ್ದು, ಈ ಬಜೆಟ್ ಉತ್ತಮ ಅಭಿವೃದ್ಧಿ ಕೆಲಸಗಳಿಗೆ ನಾಂದಿಯಾಗುವ ಬದಲು ಕೇವಲ ʼಭಾಷಣʼವಾಗಿದೆ. ಕಾರ್ಪೊರೇಟ್‌ಗಳಿಗೆ ಕಡಿಮೆ ತೆರಿಗೆ ನೀತಿಗಳ ಜೊತೆಗೆ ಇತರ ರಿಯಾಯಿತಿಗಳನ್ನು ಘೋಷಿಸಿರುವ ನಿರ್ಮಲಾ ಅವರ ಇಡೀ ಬಜೆಟ್ ಭಾಷಣದಲ್ಲಿ, ಪರಿಶಿಷ್ಟ ಪಂಗಡಗಳ ಬಗ್ಗೆ ಪರಿಚಯದಲ್ಲಿ ಒಂದು ಸಾಲನ್ನು ಬಿಟ್ಟರೆ ಹೆಚ್ಚಿನದಾಗಿ ಯಾವುದೇ ಉಲ್ಲೇಖವಿಲ್ಲ. ಇದು ಪರಿಶಿಷ್ಟ ಪಂಗಡಗಳಿಗೆ ಆಗಿರುವ ದ್ರೋಹವನ್ನು ತೋರಿಸುತ್ತದೆ.

ಇದನ್ನು ಓದಿ : ಬಜೆಟ್ 2026 | ನಿರೀಕ್ಷೆಗಳಿಂದ ನಿರಾಸೆಯವರೆಗೆ – ಅಭಿವೃದ್ಧಿಯ ವ್ಯಾಖ್ಯಾನ ಮತ್ತು ವಾಸ್ತವದ ನಡುವಿನ ಅಂತರ

ʼಬಜೆಟ್ʼ, ನಿರುದ್ಯೋಗ ಹಾಗೂ ಬಡತನ ನಿರ್ಮೂಲನೆಯ ಬಗ್ಗೆ ಮಾತನಾಡಿರುವುದು ಕಡಿಮೆ. ಭಾರತದಲ್ಲಿ ಶೇ.80 ರಷ್ಟು ಜನರು ಮಧ್ಯಮ ವರ್ಗದವರಾಗಿದ್ದಾರೆ. ಕಡಿಮೆ ಆದಾಯ ಪಡೆಯುತ್ತಿರುವವರು ಹೆಚ್ಚಿರುವುದರಿಂದ ಅವರ ಖರೀದಿ ಶಕ್ತಿಯೂ ಇನ್ನಷ್ಟು ಕುಗ್ಗುತ್ತದೆ. ಯೋಜನಾ ಆಯೋಗದ ಮಾರ್ಗಸೂಚಿಗಳ ಪ್ರಕಾರ, ಸರ್ಕಾರದ ಒಟ್ಟು ಬಜೆಟ್‌ನಲ್ಲಿ ಶೇ.8.6 ರಷ್ಟು ಹಣವನ್ನು ಪರಿಶಿಷ್ಟ ಪಂಗಡಗಳ ಅಭಿವೃದ್ದಿಗೆ ಮೀಸಲಿಡಬೇಕು ಎಂದು ಸೂಚಿಸುತ್ತದೆ. ಈ ಹಣವು ಜನಸಂಖ್ಯೆಯ ಅನುಪಾತಕ್ಕೆ ಸಮಾನಾಗಿರುತ್ತದೆ.

ಆದರೆ, ಕೇಂದ್ರ ಸರ್ಕಾರವು ಕಳೆದ ವರ್ಷ 2025-2026 ರ ಬಜೆಟ್‌ನಲ್ಲಿ ಪರಿಶಿಷ್ಟ ಪಂಗಡದ ಅಭಿವೃದ್ಧಿಗೆ ಕೊಟ್ಟಿದ್ದು ಶೇ. 3.5 ಅಂದರೆ 1,29,250 ಕೋಟಿ ರೂ. ಅದರಲ್ಲಿ ಬುಡಕಟ್ಟು ವ್ಯವಹಾರಗಳ ಸಚಿವಾಲಯಕ್ಕೆ 14,861.96 ಕೋಟಿ ರೂಗಳನ್ನು ಮಾತ್ರ ನೀಡಲಾಗಿತ್ತು. ಆದರೆ ಖರ್ಚು ಮಾಡಿದ್ದು ಮಾತ್ರ 10,745.16 ಕೋಟಿ ರೂ. ಅಂದರೆ, ಸಚಿವಾಲಯವು 4116. 80 ಕೋಟಿ ಅಥವಾ ಹಂಚಿಕೆಯಾದ ಹಣದ ಸುಮಾರು ಶೇ.35 ರಷ್ಟನ್ನು ಖರ್ಚೇ ಮಾಡಿಲ್ಲ.

ಇನ್ನು ಈ ವರ್ಷಕ್ಕೆ ಬಂದರೆ, 2026-27ರ ಬಜೆಟ್‌ನಲ್ಲಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಶೇ. 2.58 ರಷ್ಟು ಹಣ ಅಂದರೆ 1,41,089 ಕೋಟಿ ರೂಗಳನ್ನು ನೀಡಿದೆ. ಕಳೆದ ವರ್ಷದ ಅನುದಾನಕ್ಕಿಂತ ಕಡಿಮೆ.

ಪ್ರಧಾನ ಮಂತ್ರಿಗಳು 2023ರಲ್ಲಿ ಜಾರ್ಖಂಡ್ ಚುನಾವಣೆಗೂ ಮುನ್ನ ವಿಶೇಷ ದುರ್ಬಲ ಬುಡಕಟ್ಟು ಗುಂಪು (PVTG)ಗಳಿಗೆ ʼಪಿಎಂ-ಜನ್‌ಮನ್ʼ (PM-JANMAN) ಎಂಬ ಯೋಜನೆಯೊಂದನ್ನು ಘೋಷಿಸಿದ್ದರು. ಅತ್ಯಂತ ಶೋಚನಿಯ ಸ್ಥಿತಿಯಲ್ಲಿರುವ ಬುಡಕಟ್ಟು ಜನರ ಅಭಿವೃದ್ಧಿಯ ಸಲುವಾಗಿ ಈ ಯೋಜನೆಯನ್ನು ರೂಪಿಸಲಾಗಿತ್ತು. ಈ ಯೋಜನೆಗೆ 2025-2026 ರಲ್ಲಿ 6,351,99 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿತ್ತು. ಆದರೆ, ಕೇಂದ್ರ ಖರ್ಚು ಮಾಡಿದ್ದು ಮಾತ್ರ ಕೇವಲ 3,997 ಕೋಟಿ ರೂಪಾಯಿಗಳನ್ನು. 2026-27 ರ ಬಜೆಟ್ ನಲ್ಲಿ ಕಳೆದ ವರ್ಷ ನೀಡಲಾದ ಮೊತ್ತವು ಅದಕ್ಕಿಂತ ಕಡಿಮೆಯಾಗಿದೆ. ಬುಡಕಟ್ಟು ಜನರ ಕಲ್ಯಾಣವು ಆದ್ಯತೆಯಲ್ಲ ಎಂಬುದು ಸ್ಪಷ್ಟವಾಗುತ್ತದೆ.

ಪರಿಶಿಷ್ಟ ಜಾತಿ (ಎಸ್‌ಸಿ) ಜನರ ಕಲ್ಯಾಣಕ್ಕಾಗಿ 2025-26ರ ಬಜೆಟ್‌ನಲ್ಲಿ 1,68,478ಕೋಟಿ ರೂಗಳು ಅಂದರೆ, ಶೇ.10.7 ರಷ್ಟು ಮೀಸಲಿಡಲಾಗಿತ್ತು. ಆದರೆ ಈ ವರ್ಷದ 2026ರ ಬಜೆಟ್‌ನಲ್ಲಿ ಪರಿಶಿಷ್ಟ ಜಾತಿ ಜನರ ಅಭಿವೃದ್ದಿಗಾಗಿ 1,96,000 ಕೋಟಿ ರೂಗಳನ್ನು, ಅಂದರೆ ಶೇ 11.8 ರಷ್ಟು ಮಾತ್ರ ಘೋಷಿಸಲಾಗಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಕೇವಲ 25 ಸಾವಿರ ಕೋಟಿಯಷ್ಟು ಮಾತ್ರ ಹೆಚ್ಚಿಸಲಾಗಿದೆ.

ಇನ್ನು, ಮಹಿಳೆಯರ ಅಭಿವೃದ್ಧಿಗೆ 2025-26ರ ಒಟ್ಟು ಬಜೆಟ್‌ನಲ್ಲಿ 4.49 ಲಕ್ಷ ಕೋಟಿ ರೂಗಳಷ್ಟು ಹಣವನ್ನು ಮೀಸಲಿಡಲಾಗಿತ್ತು. ಆದರೆ ಈ ವರ್ಷದ ಬಜೆಟ್‌ನಲ್ಲಿ 5,000 ಲಕ್ಷ ಕೋಟಿಯಷ್ಟು ನೀಡಲಾಗಿದೆ. ಮಹಿಳಾ ಉದ್ಯಮಶೀಲತೆಯನ್ನು ಉತ್ತೇಜಿಸುವ ಸಲುವಾಗಿ ʼಶಿ-ಮಾರ್ಟ್ʼ ಎಂಬ ಹೊಸ ಯೋಜನೆಯನ್ನು ರೂಪಿಸಲಾಗುವುದು ಎಂದು ಬಜೆಟ್‌ನಲ್ಲಿ ಹೇಳಲಾಗಿದೆ.

ಲಕ್‌ಪತಿ ದೀದಿ ಯೋಜನೆಯನ್ನು ಮುಂದುವರೆಸುವ ಜೊತೆಗೆ, ಮಹಿಳೆಯರಿಗೆ ಔದ್ಯೋಗಿಕ ತರಬೇತಿ ನೀಡುವುದಲ್ಲದೆ, ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ದೇಶಾದ್ಯಂತ ಹೆಚ್ಚಿನ ಮಾರಾಟ ಮಳಿಗೆಗಳನ್ನು ತೆರೆಯಲಾಗುವುದು ಹಾಗೂ ದೇಶದಲ್ಲಿರುವ ಪ್ರತಿ ಜಿಲ್ಲೆಯಲ್ಲಿ, ಬಾಲಕಿಯ ಹಾಸ್ಟೆಲ್ ನಿರ್ಮಾಣ ಮಾಡಲಾಗುವುದು ಎಂದು ಬಜೆಟ್‌ನಲ್ಲಿ ಘೋಷಿಸಿದ್ದಾರೆ.
ಪರಿಶಿಷ್ಟ ಜಾತಿಗಳು (SC), ಪರಿಶಿಷ್ಟ ಪಂಗಡಗಳು (ST), ಇತರ ಹಿಂದುಳಿದ ವರ್ಗಗಳು (OBC) ಹಾಗೂ ಅಧಿಸೂಚಿತ ಬುಡಕಟ್ಟುಗಳ (DNT) ಅಭಿವೃದ್ದಿಗೆ ಹೆಚ್ಚಿನ ಒತ್ತನ್ನು ನೀಡಿಲ್ಲ ಎಂಬುದು ಸ್ಪಷ್ಟವಾಗುತ್ತದೆ.

ಒಟ್ಟಾರೆ ನೋಡಿದರೆ, 2026–27ನೇ ಸಾಲಿನ ಕೇಂದ್ರ ಬಜೆಟ್ ಆರ್ಥಿಕ ವಿಸ್ತರಣೆಯ ಹೆಸರಿನಲ್ಲಿ ಕಾರ್ಪೊರೇಟ್ ಹಿತಾಸಕ್ತಿಗಳಿಗೆ ಹೆಚ್ಚಿನ ಒತ್ತು ನೀಡಿದ್ದು, ಸಮಾಜದ ದುರ್ಬಲ ವರ್ಗಗಳಾದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ದುಡಿಯುವ ವರ್ಗ, ಮಹಿಳೆಯರು ಹಾಗೂ ಅಂಚಿನ ಸಮುದಾಯಗಳ ಆಶಯಗಳತ್ತ ಗಂಭೀರವಾಗಿ ಮುಖ ಮಾಡಿಲ್ಲ ಎಂಬುದು ಅಂಕಿ–ಅಂಶಗಳಿಂದಲೇ ಸ್ಪಷ್ಟವಾಗುತ್ತದೆ. ಜನಸಂಖ್ಯೆ ಅನುಪಾತದ ಆಧಾರದ ಮೇಲೆ ಮೀಸಲಿಡಬೇಕಾದ ಅನುದಾನವನ್ನು ಕಡಿತಗೊಳಿಸುವುದಷ್ಟೇ ಅಲ್ಲ, ಈಗಾಗಲೇ ಘೋಷಿಸಿದ ಹಣವನ್ನು ಕೂಡ ಸಂಪೂರ್ಣವಾಗಿ ಖರ್ಚು ಮಾಡದೆ ಬಿಡುತ್ತಿರುವುದು ಸರ್ಕಾರದ ಸಾಮಾಜಿಕ ನ್ಯಾಯದ ಬದ್ಧತೆಯ ಮೇಲೆಯೇ ಪ್ರಶ್ನೆ ಎಬ್ಬಿಸುತ್ತದೆ.

ಬಜೆಟ್ ಎನ್ನುವುದು ಸರ್ಕಾರದ ಆದ್ಯತೆಗಳು, ಮೌಲ್ಯಗಳು ಮತ್ತು ಸಮಾಜದ ಯಾವ ವರ್ಗದ ಪರ ನಿಂತಿದೆ ಎಂಬುದನ್ನು ತೋರಿಸುವ ರಾಜಕೀಯ-ಸಾಮಾಜಿಕ ಘೋಷಣೆ. ಈ ದೃಷ್ಟಿಯಿಂದ ನೋಡಿದರೆ, 2026–27ರ ಬಜೆಟ್ ದುಡಿಯುವ ಕೈಗಳಿಗೆ ಬಲ ನೀಡುವ ಬದಲು ಬಲಿಷ್ಠ ಬಂಡವಾಳಕ್ಕೆ ಬೆಂಬಲ ನೀಡಿದೆ ಎಂಬ ಅಭಿಪ್ರಾಯಕ್ಕೆ ಸಾಕಷ್ಟು ಆಧಾರಗಳಿವೆ. ಸಮಾವೇಶಿತ ಅಭಿವೃದ್ಧಿಯ ಮಾತುಗಳು ಭಾಷಣದಲ್ಲಿ ಉಳಿದರೆ, ಸಾಮಾಜಿಕ ನ್ಯಾಯದ ಭರವಸೆಗಳು ಎಲ್ಲಿಗೆ ನಿಲ್ಲಬಹುದು? ಮುಂದಿನ ದಿನಗಳಲ್ಲಿ ಸರ್ಕಾರವು ತನ್ನ ಬಜೆಟ್ ನೀತಿಗಳನ್ನು ಮರುಪರಿಶೀಲಿಸಿ, ದುಡಿಯುವ ವರ್ಗ, ದಲಿತರು, ಆದಿವಾಸಿಗಳು, ಮಹಿಳೆಯರು ಮತ್ತು ಅಲ್ಪಸಂಖ್ಯಾತರನ್ನು ಅಭಿವೃದ್ಧಿಯ ಕೇಂದ್ರಬಿಂದುಗೊಳಿಸದಿದ್ದರೆ, ಆರ್ಥಿಕ ಬೆಳವಣಿಗೆಯ ಅಂಕೆಗಳು ಏರಿದರೂ ಸಾಮಾಜಿಕ ಅಸಮಾನತೆಗಳು ಇನ್ನಷ್ಟು ಆಳವಾಗುವ ಆತಂಕವನ್ನು ತಳ್ಳಿಹಾಕಲು ಸಾಧ್ಯವಿಲ್ಲ.

Manoj
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕುಟುಂಬ ನ್ಯಾಯಾಲಯಗಳ ಮೇಲಿನ ಹೊರೆ ತಗ್ಗಿಸಲು ಮಧ್ಯಸ್ಥಿಕೆಗೆ ಆದ್ಯತೆ ನೀಡಿ: ಸುಪ್ರೀಂ ನ್ಯಾಯಮೂರ್ತಿ ನಾಗರತ್ನ

ದೇಶದ ಕೌಟುಂಬಿಕ ನ್ಯಾಯಾಲಯಗಳಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಪ್ರಕರಣಗಳ ಹೊರೆಯನ್ನು ಕಡಿಮೆ...

ಯುದ್ಧದ ಕರಾಳ ನೆರಳು: ರಷ್ಯಾ ಕನಸು ನಚ್ಚುನೂರಾಗಿ ಉಕ್ರೇನ್‌ನಲ್ಲಿ ಬಂಧಿಯಾದ ಭಾರತೀಯ ಯುವಕ!

ಉತ್ತಮ ಜೀವನ ರೂಪಿಸಿಕೊಳ್ಳಬೇಕು, ದೇಶ ವಿದೇಶ ಸುತ್ತಿ ಆರ್ಥಿಕವಾಗಿ ಕುಟುಂಬವನ್ನು ಬೆಂಬಲಿಸಬೇಕು...

SIR | ರಾಜ್ಯದಲ್ಲಿ ಮಹಿಳೆಯರಿಗೇ ಹೆಚ್ಚು ನೋಟಿಸ್

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯು...