‘ಇದು ಆರಂಭವಷ್ಟೇ, ಸಾಗಬೇಕಾದ ಹಾದಿ ಬಹುದೂರವಿದೆ’: ದೀಪ್ಕೆ ವಿಡಿಯೋ ಸಂದೇಶ

Date:

ಪರೀಕ್ಷಾ ಅಕ್ರಮಗಳ‌ವಿರುದ್ಧದ ಕಾಕ್ರೋಚ್‌ಗಳ ಪ್ರತಿಭಟನೆ ಗೆಲುವು ಕಂಡಿದೆ. ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ. ಸಿಜೆಪಿಯ ಎಲ್ಲ‌ ಬೇಡಿಕೆಗಳ ಈಡೇರಿಕೆಗೆ ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ. ಇದೆಲ್ಲರದ ಬೆನ್ನಲ್ಲೇ, ಭಾನುವಾರ ಮುಂಜಾನೆ ಕಾಕ್ರೋಚ್ ಜನತಾ ಪಾರ್ಟಿ (CJP) ಸಂಸ್ಥಾಪಕ ಅಭಿಜೀತ್ ದೀಪ್ಕೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಂದೇಶ ಹಂಚಿಕೊಂಡಿದ್ದಾರೆ. ‘ಇದು ಆರಂಭವಷ್ಟೇ, ಸಾಗಬೇಕಾದ ಹಾದಿ ಬಹುದೂರವಿದೆ’ ಎಂದು ಹೇಳಿದ್ದಾರೆ.

- Advertisement -

“ಕಳೆದ 37 ದಿನಗಳ ಪ್ರತಿಭಟನೆಯು ಅತ್ಯಂತ ಕಠಿಣವಾಗಿತ್ತು. ಈಗ ನಿರಾಳತೆ ಇದೆ. ಮುಂದೇನು ಮಾಡಬೇಕು ಅಥವಾ ಸಂಜೆಯೊಳಗೆ ಏನಾಗಬಹುದು ಎಂಬ ಆತಂಕವಿಲ್ಲದೆ ನೆಮ್ಮದಿಯಿಂದ ನಿದ್ರೆ ಮಾಡುವಂತಾಗಿದೆ. ಯಾವುದೇ ಗೊಂದಲವಿಲ್ಲ” ಎಂದು ನಿರಾಳತೆ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಂಗಳೂರು ಶಿಕ್ಷಕರ ಕ್ಷೇತ್ರದ ಸೋಲು: ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆಯ...

ಉಳಿದ ಮೂರು ವಿಧಾನ ಪರಿಷತ್‌ ಕ್ಷೇತ್ರಗಳಿಗಿಂತ ಬೆಂಗಳೂರು ಶಿಕ್ಷಕರ ಕ್ಷೇತ್ರದ ಫಲಿತಾಂಶ ರಾಜಕೀಯವಾಗಿ ಪರಿಣಾಮ ಬೀರಬಲ್ಲದು. ಡಿ.ಕೆ. ಶಿವಕುಮಾರ್‌ ಅವರ ನಾಯಕತ್ವವನ್ನು ಓರೆಗೆ ಹಚ್ಚಬಲ್ಲದು. ಒಕ್ಕಲಿಗ ಪ್ರಾಬಲ್ಯದ ಪ್ರದೇಶಗಳ ಒಲವು-ನಿಲುವುಗಳನ್ನು ತಿಳಿಸಬಲ್ಲದು. ಆದರೆ,...

ಬ್ರೆಜಿಲ್‌ನಲ್ಲಿ ಒಂದೇ ಹುದ್ದೆಗೆ ಎರಡು ಬಾರಿ ಚುನಾವಣೆ: ಏನಿದು...

ಭಾರತಕ್ಕೂ ಎರಡನೇ ಸುತ್ತಿನ ಪದ್ಧತಿ ಅಗತ್ಯವಿದೆಯೇ ಎಂಬ ಚರ್ಚೆ ಆಗಿಂದಾಗ್ಗೆ ಮುನ್ನೆಲೆಗೆ ಬರುತ್ತಲೇ ಇರುತ್ತದೆ. ಹಲವು ಅಭ್ಯರ್ಥಿಗಳು ಕಣದಲ್ಲಿರುವಾಗ ಮತಗಳು ಹಂಚಿಹೋಗಿ, ಕೇವಲ ಶೇ 30 ಅಥವಾ 40ರಷ್ಟು ಮತ ಪಡೆದವರೂ ನಮ್ಮಲ್ಲಿ...

ಬೆಂಗಳೂರು ಪೌರಕಾರ್ಮಿಕರ ಶ್ವಾಸಕೋಶ ಹಿಂಡುತ್ತಿದೆ ಮಾಲಿನ್ಯ; BMTC ಸಿಬ್ಬಂದಿ,...

ಬೆಂಗಳೂರಿನಲ್ಲಿ ಮಾಲಿನ್ಯವು ಹೊಸ ತಂಬಾಕಾಗಿ ಪರಿಣಮಿಸಿದೆ. ಜನರ ಶ್ವಾಸಕೋಶವನ್ನು ಹಿಂಡುತ್ತಿದೆ. ಮಾಸ್ಕ್, ಕೈಗವಸು, ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಸೌಲಭ್ಯಗಳ ಕೊರತೆಗಳಿಂದಾಗಿ ಪೌರಕಾರ್ಮಿಕರು, ಬಿಎಂಟಿಸಿ ನೌಕರರು, ಸಂಚಾರ ಪೊಲೀಸರು ಹಾಗೂ ಕಟ್ಟಡ ಕಾರ್ಮಿಕರು...

CJP ಚಳವಳಿಯ ಈ ಜಯವನ್ನು ಪ್ರಸ್ತಾಪಿಸಿದ ಅವರು, “ಇದು ಕೇವಲ ಆರಂಭವಷ್ಟೇ, ಕಾಕ್ರೋಚ್ ಜನತಾ ಪಾರ್ಟಿ ಸಾಗಬೇಕಾದ ಹಾದಿ ಇನ್ನೂ ಬಹುದೂರವಿದೆ” ಎಂದು ಹೇಳಿದ್ದಾರೆ.

“ಟೈಫಾಯಿಡ್ ಜ್ವರದಿಂದ ಬಳಲುತ್ತಿದ್ದ ಕಾರಣ ನಿನ್ನೆ ಜಂತರ್ ಮಂತರ್‌ನಲ್ಲಿ ಎಲ್ಲರಿಗೂ ವೈಯಕ್ತಿಕವಾಗಿ ಧನ್ಯವಾದ ಹೇಳಲು ಸಾಧ್ಯವಾಗಲಿಲ್ಲ. ಅದಕ್ಕಾಗಿ ಕ್ಷಮೆ ಯಾಚಿಸುತ್ತೇನೆ.ಕಳೆದ 37 ದಿನಗಳಿಂದ ದೇಶಕ್ಕಾಗಿ ಹೋರಾಡಿದ ಪ್ರತಿಯೊಬ್ಬರಿಗೂ ಕೃತಜ್ಞತೆಗಳು” ಎಂದಿದ್ದಾರೆ.

ಕಾಕ್ರೋಚ್ ಪ್ರತಿಭಟನೆಯನ್ನು ವಿಮರ್ಶಿಸಿದವರಿಗೂ ಧನ್ಯವಾದ ತಿಳಿಸಿದ ಅವರು, “ಅವರ ಪ್ರಶ್ನೆಗಳು ಮತ್ತು ವಿಮರ್ಶೆಗಳು ನಮ್ಮ ತಪ್ಪನ್ನು ತಿದ್ದುಕೊಂಡು ಸರಿ ಹಾದಿಯಲ್ಲಿ ಸಾಗಲು ಹಾಗೂ ಸೂಕ್ತ ಫಲಿತಾಂಶ ನೀಡಲು ಸಹಾಯ ಮಾಡಿದವು,” ಎಂದಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಜಯಭೇರಿ

ಕರ್ನಾಟಕ ವಿಧಾನ ಪರಿಷತ್ತಿನ ಪಶ್ಚಿಮ ಪದವೀಧರರ ಕ್ಷೇತ್ರದ ದ್ವೈವಾರ್ಷಿಕ ಚುನಾವಣೆ-2026ರ ಪಶ್ಚಿಮ...

ಯುಪಿ ಚುನಾವಣೆ | ಮತದಾರರ ಮನಗೆಲ್ಲಲು ಯೋಗಿ ಸಂಪುಟದ ಮೆಗಾ ಪ್ಲ್ಯಾನ್; ಹಸು ಖರೀದಿಗೆ ಸಬ್ಸಿಡಿ, ಉಚಿತ ಕೋಳಿ ಮರಿ

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ (2027ರ ಫೆಬ್ರವರಿ–ಮಾರ್ಚ್‌ನಲ್ಲಿ ನಡೆಯುವ ನಿರೀಕ್ಷೆಯಿದೆ)...

ಬ್ರೆಜಿಲ್‌ ಚುನಾವಣೆ | ಸೋಲುಂಡ ಬೆನ್ನಲ್ಲೇ‌ ಪ್ಲೇವಿಯೋ ಬೊಲ್ಸೊನಾರೊ ಅಮೆರಿಕಗೆ ಪಲಾಯನ!

ಬ್ರೆಜಿಲ್‌ನ ಮಾಜಿ ಅಧ್ಯಕ್ಷ ಜೈರ್ ಬೊಲ್ಸೊನಾರೊ ಅವರ ಪುತ್ರ, ಹಾಲಿ ಸೆನೆಟರ್...

ಕಲಬುರಗಿ | ಎಸ್ಐಆರ್ ಅಂತಿಮ ಪಟ್ಟಿ ಪ್ರಕಟ: ಜಿಲ್ಲೆಯಲ್ಲಿ 18,94,144 ಮತದಾರರು:

ರಾಜ್ಯದಲ್ಲಿ ಮತದಾರರ ಪಟ್ಟಿಯ ಸಮಗ್ರ ತೀವ್ರ ಪರಿಷ್ಕರಣೆ (ಎಸ್ಐಆರ್) ಚುನಾವಣಾ ಆಯೋಗದ...