ಸಿಜೆಪಿ ಪ್ರತಿಭಟನೆ ದಮನಕ್ಕೆ ಈಗಲೇ ಸಿದ್ಧತೆ: 23,000 ಸಿಆರ್‌ಪಿಎಫ್ ಸಿಬ್ಬಂದಿ ನಿಯೋಜನೆ, 10 ಕ್ರೀಡಾಂಗಣಗಳು ಬಂಧನ ಕೇಂದ್ರ!

Date:

ನಾಳೆ (ಶನಿವಾರ) ಜಂತರ್ ಮಂತರ್‌ನಲ್ಲಿ ‘ಸಿಜೆಪಿ – ಐಸಾ’ (CJP-AISA) ಸಂಘಟನೆಗಳು ಆಯೋಜಿಸಿರುವ ಬೃಹತ್ ಪ್ರತಿಭಟನಾ ಸಮಾವೇಶಕ್ಕೂ ಒಂದು ದಿನ ಮುನ್ನವೇ ದೆಹಲಿಯಲ್ಲಿ ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆ ಮಾಡಲಾಗುತ್ತಿದೆ. ದೇಶದ ವಿವಿಧ ಭಾಗಗಳಿಂದ ಲಕ್ಷಾಂತರ ಪ್ರತಿಭಟನಾಕಾರರು ಆಗಮಿಸುವ ನಿರೀಕ್ಷೆಯಿದೆ. ಈ ನಡುವೆ ಎಂದಿನಂತೆ ಪ್ರತಿಭಟನೆಯ ದಮನಕ್ಕಾಗಿ ದೆಹಲಿ ಪೊಲೀಸರು, ಕೇಂದ್ರ ಸಶಸ್ತ್ರ ಪಡೆ ಸಿದ್ಧವಾಗುತ್ತಿದೆ.

- Advertisement -

ಈ ಹಿಂದೆ ದೆಹಲಿಯ ಜಂತರ್ ಮಂತರ್‌ನಲ್ಲಿ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಸೇರಿದಂತೆ ಹಲವು ಅಕ್ರಮಗಳ ಹೊಣೆ ಹೊತ್ತು ಅಂದಿನ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಸಿಜೆಪಿ ಹಲವು ದಿನಗಳ ಕಾಲ ಧರಣಿ ನಡೆಸಿತ್ತು. ಈ ಸಂದರ್ಭದಲ್ಲೇ ದೆಹಲಿ ಪೊಲೀಸರು, ಪೊಲೀಸ್ ಸಮವಸ್ತ್ರವಿಲ್ಲದ ಗೂಂಡಾಗಳು ಪ್ರತಿಭಟನಾಕಾರರ ಮೇಲೆ ಹಲ್ಲೆ ನಡೆಸಿದ್ದರು. ಪೊಲೀಸರು ಪೆಲೆಟ್ ಗನ್ ಬಳಸಿದ್ದರು. ಇದರಿಂದಾಗಿ ಹಲವಾರು ಮಂದಿಗೆ ಗಾಯವಾಗಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗ್ಯಾನೇಶ್ ಕುಮಾರ್ ವಿರುದ್ಧದ 20 ವರ್ಷಗಳ ಪ್ರಕರಣಕ್ಕೆ ಮರುಜೀವ;...

ಭಾರತದ ಮುಖ್ಯ ಚುನಾವಣಾ ಆಯುಕ್ತ (CEC) ಗ್ಯಾನೇಶ್‌ ಕುಮಾರ್ ವಿರುದ್ಧ 2006ರಲ್ಲಿ ದಾಖಲಾಗಿದ್ದ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣಕ್ಕೆ ಕೇರಳ ಸರ್ಕಾರ ಈಗ ಮರುಜೀವ ನೀಡಿದೆ. ಪ್ರಕರಣವನ್ನು ವಿಜಿಲೆನ್ಸ್ ತನಿಖೆಗೆ ಆದೇಶ ಹೊರಡಿಸಿದೆ....

ನೊಬೆಲ್‌ ಪ್ರಶಸ್ತಿ ಸರಣಿ | ಶಾಸ್ತ್ರೀಯ ಪರಂಪರೆಗೆ ಸಮಕಾಲೀನ...

ಈ ಬಾರಿಯ ಸಾಹಿತ್ಯದ ನೊಬೆಲ್‌ ಪುರಸ್ಕಾರ ಕೆನಡಾದ ಆನ್‌ ಕಾರ್ಸನ್‌ ಅವರ ಮುಡಿಗೇರಿದೆ. ಇವರು ಕವಯತ್ರಿ, ಪ್ರಬಂಧಗಾರ್ತಿ ಹಾಗೂ ಅನುವಾದಕಿ. ಕ್ಲಾಸಿಕಲ್‌ ಗ್ರೀಕ್‌ ಸಾಹಿತ್ಯದ ಪ್ರೇಮಿಯಾದ ಕಾರ್‌ಸನ್‌ ಶಾಸ್ತ್ರೀಯ ಮಾದರಿಯನ್ನು ಸಮಕಾಲೀನ ಸಂದರ್ಭಗಳಲ್ಲಿ...

ಭದ್ರಾವತಿ | ಕಲುಷಿತ ಕುಡಿಯುವ ನೀರು ಸರಬರಾಜು; ರೋಗಭೀತಿಯಲ್ಲಿ...

ಭದ್ರಾವತಿ ತಾಲೂಕಿನ ಶಿವರಾಮನಗರ ಗ್ರಾಮದಲ್ಲಿ ನಗರಸಭೆ ಕಲುಷಿತ ಕುಡಿಯುವ ನೀರನ್ನು ಸರಬರಾಜು ಮಾಡುತ್ತಿರುವುದು ಗ್ರಾಮಸ್ಥರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಈ ವಿಷಯದಲ್ಲಿ ನಗರಸಭೆ ಆಡಳಿತ ಮತ್ತು ಆರೋಗ್ಯ ಇಲಾಖೆ ಕಣ್ಮುಚ್ಚಿ ಕುಳಿತಿರುವುದಾಗಿ ಸ್ಥಳೀಯರು...

ಇದನ್ನೂ ಓದಿ: ಪ್ರತಿಭಟನೆ ವೇಳೆ ಪೊಲೀಸ್‌ ದೌರ್ಜನ್ಯ ಒಪ್ಪಲಾಗದು: ಸುಪ್ರೀಂ ಕೋರ್ಟ್‌

ಸಿಜೆಪಿ ಪ್ರತಿಭಟನೆ ಮೇಲೆ ದಾಳಿ ನಡೆಸಿದವರಲ್ಲಿ ಹಲವು ಮಂದಿ ಮೊಳೆಯಿದ್ದ ಲಾಠಿಗಳನ್ನು ಹೊಂದಿದ್ದು ವಿಡಿಯೋಗಳಲ್ಲಿ ಕಂಡುಬಂದಿತ್ತು. ತಾವೇ ದಾಳಿ ನಡೆಸಿ ಯುವತಿಯೊಬ್ಬಳ ತಂದೆಯ ತಲೆಯನ್ನು ಒಡೆದುಹಾಕಿದ್ದಾಗಿ ಬಲಪಂಥೀಯ ಮುಖಂಡ ಸ್ವತಂತ್ರ ಭಾರದ್ವಾಜ್ ಬಹಿರಂಗವಾಗಿ ಹೇಳಿಕೊಂಡು ಹೆಮ್ಮೆ ಪಟ್ಟಿದ್ದ. ತಮಗೆ ದೆಹಲಿ ಪೊಲೀಸರೇ ಎಲ್ಲ ಸೌಲಭ್ಯ ಒದಗಿಸುತ್ತಾರೆ ಎಂದೂ ತಿಳಿಸಿದ್ದ. ಒತ್ತಡದಿಂದ ಆತನ ಬಂಧನ ಮಾಡಲಾಗಿತ್ತು, ಇದೀಗ ಸಿಜೆಪಿ ಏಕಪಕ್ಷೀಯ ನಿರ್ಧಾರ ಕೈಗೊಂಡ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ರಾಜೀನಾಮೆ ಕೋರಿ ಪ್ರತಿಭಟನೆಗೆ ಇಳಿಯುತ್ತಿರುವುದಕ್ಕೂ ಮುನ್ನ ಭಾರದ್ವಾಜ್‌ಗೆ ಜಾಮೀನು ಲಭಿಸಿದೆ. ಇನ್ನೊಂದೆಡೆ ಕೇಂದ್ರ ಸರ್ಕಾರ ಈ ಪ್ರತಿಭಟನೆಯನ್ನು ಹತ್ತಿಕ್ಕಲು ಎಲ್ಲ ಸಿದ್ಧತೆಯನ್ನು ನಡೆಸುತ್ತಿದೆ. ಈಗಲೇ ಹಲವು ನಾಯಕರುಗಳಿಗೆ ಗೃಹ ಬಂಧನ ವಿಧಿಸಲಾಗಿದೆ.

ಕೇಂದ್ರ ಗೃಹ ಸಚಿವಾಲಯವು ದೆಹಲಿ ಪೊಲೀಸರ ನೆರವಿಗೆ 221 ಸಿಎಪಿಎಫ್ (CAPF) ಕಂಪನಿಗಳನ್ನು ಒದಗಿಸಿದೆ. ಸುಮಾರು 23,000 ಭದ್ರತಾ ಸಿಬ್ಬಂದಿ ನಗರದಾದ್ಯಂತ ನಿಯೋಜನೆಗೊಳ್ಳಲಿದ್ದಾರೆ. ಇದರಲ್ಲಿ 5 ಸಂಪೂರ್ಣ ಮಹಿಳಾ ಪ್ಯಾರಾಮಿಲಿಟರಿ ಪಡೆಗಳೂ ಸೇರಿವೆ. ಜಮ್ಮು-ಕಾಶ್ಮೀರ, ಪಶ್ಚಿಮ ಬಂಗಾಳ ಮತ್ತು ಛತ್ತೀಸ್‌ಗಢಗಳಿಂದ ಪ್ರಮುಖವಾಗಿ ಸಿಆರ್‌ಪಿಎಫ್ ತುಕಡಿಗಳನ್ನು ಕರೆಸಲಾಗಿದೆ.

ಇನ್ನೊಂದೆಡೆ ಪ್ರತಿಭಟನಾಕಾರರನ್ನು ಬಂಧಿಸುವ ನಿರ್ಧಾರವನ್ನೂ ಈಗಾಗಲೇ ಕೇಂದ್ರ ಸರ್ಕಾರ ಮಾಡಿಕೊಂಡಿದೆ. ಅದಕ್ಕಾಗಿ ದೆಹಲಿಯ ವಿವಿಧ ಜಿಲ್ಲೆಗಳಲ್ಲಿ ಸುಮಾರು 10 ತಾತ್ಕಾಲಿಕ ಬಂಧನ ಕೇಂದ್ರಗಳನ್ನು ಸಿದ್ಧಪಡಿಸಲಾಗಿದೆ. ರಾಜೀವ್ ಗಾಂಧಿ ಕ್ರೀಡಾಂಗಣ (ಬವಾನಾ) ಮತ್ತು ಛತ್ರಸಾಲ್ ಕ್ರೀಡಾಂಗಣಗಳ ಜೊತೆಗೆ ನರೇಲಾ, ಈಸ್ಟ್ ದೆಹಲಿ ಮತ್ತು ನಾರ್ತ್‌ವೆಸ್ಟ್ ದೆಹಲಿಯ ಕ್ರೀಡಾಂಗಣಗಳನ್ನು ಬಂದೀಖಾನೆಗಳಾಗಿ ಬಳಸಿಕೊಳ್ಳಲಾಗುತ್ತಿದೆ.

ಇದನ್ನೂ ಓದಿ: ಸಿಜೆಪಿ ಪ್ರತಿಭಟನೆ : ಪೊಲೀಸ್ ಮಾರುವೇಷದಲ್ಲಿ ಗೂಂಡಾಗಳನ್ನು ಕಳಿಸಿದವರು ಯಾರು?

ದೆಹಲಿ ಪ್ರವೇಶಿಸುವ ಪ್ರಮುಖ ಗಡಿಗಳಲ್ಲಿ ತೀವ್ರ ತಪಾಸಣೆ ನಡೆಯಲಿದ್ದು, ಜನರನ್ನು ಪ್ರತಿಭಟನೆಗೆ ಕರೆತರುವ ಶಂಕೆ ಇರುವವರನ್ನು ಗಡಿಯಲ್ಲೇ ತಡೆದು ವಶಕ್ಕೆ ಪಡೆಯಲಾಗುತ್ತದೆ. ದೆಹಲಿಗೆ ಬರುವ ತಡರಾತ್ರಿಯ ರೈಲುಗಳ ಸಂಚಾರವನ್ನು ನಿಯಂತ್ರಿಸಲು ರೈಲ್ವೆ ಇಲಾಖೆಯೊಂದಿಗೆ ಪೊಲೀಸರು ಸಮನ್ವಯ ಸಾಧಿಸಿದ್ದಾರೆ. ಲಟಿಯನ್ಸ್ ದೆಹಲಿಗೆ ಪ್ರವೇಶಿಸುವ ಓಲಾ, ಉಬರ್ ಮುಂತಾದ ಕ್ಯಾಬ್‌ಗಳ ಸಂಚಾರದ ಮೇಲೆಯೂ ಕಟ್ಟುನಿಟ್ಟಿನ ನಿರ್ಬಂಧ ಹೇರಲಾಗಿದೆ!

ಸೂಕ್ಷ್ಮ ಪ್ರದೇಶಗಳಲ್ಲಿರುವ ಸುಮಾರು 40 ಮೆಟ್ರೋ ನಿಲ್ದಾಣಗಳನ್ನು ಮುಚ್ಚುವ ಸಾಧ್ಯತೆಯಿದೆ. ಪಹಾಡ್‌ಗಂಜ್, ದಕ್ಷಿಣ ಹಾಗೂ ಉತ್ತರ ದೆಹಲಿಯ ಹೋಟೆಲ್‌ಗಳು ಮತ್ತು ಗೆಸ್ಟ್ ಹೌಸ್‌ಗಳಿಗೆ ಹೊಸ ಬುಕಿಂಗ್ ತೆಗೆದುಕೊಳ್ಳದಂತೆ ಸೂಚಿಸಲಾಗಿದೆ. ಅಗತ್ಯ ಬಿದ್ದರೆ ಪ್ರತಿಭಟನೆ ನಡೆಯುವ ಸ್ಥಳಗಳಲ್ಲಿ ಮತ್ತು ಬಂಧನ ಕೇಂದ್ರಗಳ ಸುತ್ತಮುತ್ತ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ. ಅಕ್ಟೋಬರ್ 9 ಮತ್ತು 10 ರಂದು ದೆಹಲಿಯಾದ್ಯಂತ ಮದ್ಯದಂಗಡಿಗಳನ್ನು ಮುಚ್ಚಲು ಅಬಕಾರಿ ಇಲಾಖೆ ಆದೇಶಿಸಿದೆ.

ಪ್ರತಿಭಟನೆಯನ್ನು ನೇರಪ್ರಸಾರ (Livestreaming) ಮಾಡುವ ಯೂಟ್ಯೂಬರ್‌ಗಳು ಮತ್ತು ಇತರೆ ಪತ್ರಕರ್ತರನ್ನು ವಿರುದ್ಧವೂ ಕ್ರಮಕ್ಕೆ ಪೊಲೀಸರು ಮುಂದಾಗಿದ್ದಾರೆ. ಪೊಲೀಸರ ಕೆಲಸಕ್ಕೆ ಅಡ್ಡಿಪಡಿಸಿದರೆ ಅಥವಾ ನಿಯಮ ಉಲ್ಲಂಘಿಸಿದರೆ ಅವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಸಿದ್ದಾರೆ. ಎಲ್ಲಾ ಮಾಧ್ಯಮ ಪ್ರತಿನಿಧಿಗಳು ಕಡ್ಡಾಯವಾಗಿ ಪ್ರೆಸ್ ಐಡಿ ಕಾರ್ಡ್ ಧರಿಸಿರಬೇಕು ಎಂದು ಸೂಚಿಸಲಾಗಿದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪಶ್ಚಿಮ ಬಂಗಾಳ, ತಮಿಳುನಾಡು, ಪುದುಚೇರಿ, ಅಸ್ಸಾಂನಲ್ಲಿ ಉಪಚುನಾವಣೆ ಮತ ಎಣಿಕೆ ಆರಂಭ

ನವದೆಹಲಿ: ಪಶ್ಚಿಮ ಬಂಗಾಳ, ತಮಿಳುನಾಡು ಮತ್ತು ಪುದುಚೇರಿಯ ಐದು ವಿಧಾನಸಭಾ ಕ್ಷೇತ್ರಗಳು...

ಬೆಳಗಾವಿ | ಕರ್ನಾಟಕ ರಾಜ್ಯೋತ್ಸವ: ಕರಾಳ ದಿನಾಚರಣೆಗೆ ಅವಕಾಶವಿಲ್ಲ

ಕರ್ನಾಟಕ ರಾಜ್ಯೋತ್ಸವದಂದು ಬೆಳಗಾವಿ ಯಲ್ಲಿ ಕರಾಳ ದಿನಾಚರಣೆಗೆ ಯಾವುದೇ ಕಾರಣಕ್ಕೂ ಅನುಮತಿ...