ಬೀದರ್ ಜಿಲ್ಲೆಯ ಹುಮನಾಬಾದ್ ತಾಲೂಕು ಎಸ್‌ಟಿ ಟೋಕರೆ ಕೋಳಿ ಸಮಾಜ ಸಂಘದ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಹುಮನಾಬಾದ್ ತಾಲೂಕು ಅಧ್ಯಕ್ಷರಾಗಿ ಸಂತೋಷ ಸಂಗಮ ಅವರು ಆಯ್ಕೆಯಾಗಿದ್ದಾರೆ.
ಬೀದರ್ ನಗರದ ನೌಬಾದ್‌ನಲ್ಲಿರುವ ಜಿಲ್ಲಾ ಟೋಕರೆ ಕೋಳಿ ಸಮಾಜ ಸಂಘದ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಜಗನ್ನಾಥ ಜಮಾದಾರ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.
ಹುಮನಾಬಾದ್ ತಾಲೂಕು ಸಂಘದ ಉಪಾಧ್ಯಕ್ಷರಾಗಿ ವೆಂಕಟ ಪಾಟೀಲ್ ಮತ್ತು ಚನ್ನಬಸಪ್ಪ ಶ್ರೀನಿವಾಸ ಪಾಟೀಲ್, ಪ್ರಧಾನ ಕಾರ್ಯದರ್ಶಿಯಾಗಿ ನರಸಪ್ಪ ಅರ್ಕಿ, ಸಹ ಕಾರ್ಯದರ್ಶಿಯಾಗಿ ಪರಮೇಶ್ವರ ನೈಕೋಡೆ, ಕೋಶಾಧ್ಯಕ್ಷರಾಗಿ ಜಗದೀಶ ಎಲಡಗಿ, ಸಂಘಟನಾ ಕಾರ್ಯದರ್ಶಿಯಾಗಿ ಶಿವರಾಜ ಪಾಟೀಲ್, ಮಾಧ್ಯಮ ಸಂಘಟನಾಕಾರರಾಗಿ ರಾಮ ಬಾಬುರಾವ ನಲ್ಲೆ ಹಾಗೂ ವಕ್ತಾರರಾಗಿ ನಾಗೇಂದ್ರ ಔಂಟಿ ಅವರನ್ನು ನೇಮಕ ಮಾಡಲಾಗಿದೆ.

ಜಿಲ್ಲಾ ಉಪಾಧ್ಯಕ್ಷ ಸುನೀಲ ಖಾಶೆಂಪೂರ, ಪ್ರಧಾನ ಕಾರ್ಯದರ್ಶಿ ಮಾರುತಿ ಮಾಸ್ಟರ್ ಹಾಗೂ ಸಮಾಜದ ಮುಖಂಡರಾದ ನಂದಕುಮಾರ ಜಂಬಗೀಕರ್, ನಾಗಭೂಷಣ ಸಂಗಮ, ಅರುಣಕುಮಾರ ಬಾವಗೆ, ರಾಜಪ್ಪ ಶೇರಿಕಾರ ಮತ್ತು ವೀರಶೆಟ್ಟಿ ಪದ್ಮಾ ನೇತೃತ್ವ ವಹಿಸಿದ್ದರು.
ಇದನ್ನೂ ಓದಿ : ಬೀದರ್ | ಮತಗಳ್ಳತನ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ, ಸಿಇಸಿ ಜ್ಞಾನೇಶಕುಮಾರ ರಾಜೀನಾಮೆಗೆ ಆಗ್ರಹ
ಸಂಘದ ಸದಸ್ಯರಾಗಿ ಮಲ್ಲಿಕಾರ್ಜುನ ಕನಕಟ್ಟೆ, ಬಿ.ವಿನೋದ ಬಲವಂತ, ಸೈಬಣ್ಣ ನಂದಿ, ಚಂದ್ರಕಾಂತ ಜಮಾದಾರ, ಪ್ರಕಾಶ ಅಂಕಲಗಿ, ರಾಕೇಶ ಧನ್ನೂರ, ಕೆ.ಶರಣು ಉಡಬಾಳ, ಅಂಕುಶ ಜಮಾದಾರ, ವೆಂಕಟ ಜಮಾದಾರ, ಶಾಂತಕುಮಾರ ಪೋತರಾಜ್, ಕಿಶೋರ ನಟ್ಟಿ, ಬಂಡೆಪ್ಪ ಕೌಡಿಯಾಳ ಹಾಗೂ ಪ್ರಕಾಶ ಜಮಾದಾರ ಅವರನ್ನು ನೇಮಕ ಮಾಡಲಾಗಿದೆ.




