ವಿಜಯಪುರ |ಮತಗಳ್ಳತನ ನಿಲ್ಲಿಸಿ, ಪ್ರಜಾಪ್ರಭುತ್ವ ಉಳಿಸಿ: ವಿಜಯಪುರದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ

Date:

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಹೆಸರಿನಲ್ಲಿ ಮತದಾರರ ಹೆಸರುಗಳನ್ನು ಅಕ್ರಮವಾಗಿ ತೆಗೆದುಹಾಕಲಾಗಿದೆ ಎಂದು ಆರೋಪಿಸಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ಕುಮಾರ್ ಅವರನ್ನು ವಜಾಗೊಳಿಸುವಂತೆ ಆಗ್ರಹಿಸಿ ವಿಜಯಪುರ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

- Advertisement -

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಎಸ್. ಲೋಣಿ ಅವರ ನೇತೃತ್ವದಲ್ಲಿ ವಿಜಯಪುರ ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಕೇಂದ್ರ ಸರ್ಕಾರ ಹಾಗೂ ಚುನಾವಣಾ ಆಯೋಗದ ವಿರುದ್ಧ ಕಾಂಗ್ರೆಸ್ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಸಂಘದ ʼಕಾವಿ ದಲ್ಲಾಳಿʼಗಳ ಬಗ್ಗೆ ಲಿಂಗಾಯತರಲ್ಲಿ ಎಚ್ಚರ ಅಗತ್ಯ

ಕರ್ನಾಟಕ ವಿಧಾನಸಭೆಯ 2028ರ ಚನಾವಣೆಯ ಮೇಲೆ ಕಣ್ಣಿಟ್ಟಿರುವ ನಾಗಪುರದ ಸಂಘಿ ಬ್ರಾಹ್ಮಣರು ಈ ಬಾರಿ ಶತಾಯಗತಾಯ ಗೆಲ್ಲಲೇಬೇಕು ಎಂದು ಎಲ್ಲಾ ನಾಮ ಮಾರ್ಗಗಳನ್ನು ತುಳಿಯುತ್ತಿದ್ದಾರೆ. ಯಡಿಯೂರಪ್ಪ ಕುಟುಂಬವನ್ನು ಹಿನ್ನೆಲೆಗೆ ಸರಿಸಿ, ಲಿಂಗಾಯತ ಪ್ರಾಬಲ್ಯವನ್ನು...

ಕ್ಯಾನ್ವಾದಲ್ಲಿ 1,271 ಉದ್ಯೋಗಿಗಳ ವಜಾ: ಸಾಫ್ಟ್‌ವೇರ್ ಉದ್ಯಮಕ್ಕೆ ‘AI’...

2013ರಲ್ಲಿ ಆರಂಭವಾದ ಕ್ಯಾನ್ವಾ, ವೃತ್ತಿಪರ ಗ್ರಾಫಿಕ್ ವಿನ್ಯಾಸದ ಯಾವುದೇ ತಾಂತ್ರಿಕ ಪರಿಣತಿ ಅಥವಾ ಅನುಭವವಿಲ್ಲದ ಸಾಮಾನ್ಯರಿಗೂ ಪೋಸ್ಟರ್‌ಗಳು, ಪ್ರೆಸೆಂಟೇಷನ್‌ಗಳು, ಸಾಮಾಜಿಕ ಮಾಧ್ಯಮದ ಚಿತ್ರಗಳು, ವೀಡಿಯೊಗಳು ಹಾಗೂ ಜಾಹೀರಾತುಗಳನ್ನು ಅತ್ಯಂತ ಸುಲಭವಾಗಿ ಸೃಷ್ಟಿಸುವ ಅವಕಾಶವನ್ನು...

ಅಕ್ಕಿ ಬೆಲೆ ಏರಿಕೆಯ ಬಿಸಿ: ಗ್ರಾಹಕರ ಕೈ ಸುಡುತ್ತಿದೆ,...

ಅಡುಗೆ ಮನೆಯ ದಿನನಿತ್ಯದ ಅಗತ್ಯವಾಗಿರುವ ಅಕ್ಕಿಯ ಬೆಲೆ ದಿನದಿಂದ ದಿನಕ್ಕೆ ಏರುತ್ತಿದ್ದು, ಸಾಮಾನ್ಯ ಕುಟುಂಬಗಳ ಆರ್ಥಿಕ ಪರಿಸ್ಥಿತಿಯನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ. ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆ, ಹಣದುಬ್ಬರ, ಉದ್ಯೋಗ ಮತ್ತು...

‘ಮತ ಉಳಿಸಿ, ದೇಶ ಉಳಿಸಿ’, ‘ಮತಗಳ್ಳತನ ನಿಲ್ಲಿಸಿ, ಪ್ರಜಾಪ್ರಭುತ್ವ ಉಳಿಸಿ’, ‘ವೋಟ್ ಬಚಾವೋ, ದೇಶ ಬಚಾವೋ’, ‘ಮತದಾನದ ಹಕ್ಕು ನಮ್ಮ ಜನ್ಮಸಿದ್ಧ ಹಕ್ಕು’, ‘ಚುನಾವಣಾ ಆಯೋಗ ನಿಷ್ಪಕ್ಷಪಾತವಾಗಿರಲಿ’ ಎಂಬ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ಕುಮಾರ್ ಅವರನ್ನು ವಜಾಗೊಳಿಸಿ ಚುನಾವಣಾ ಆಯೋಗವನ್ನು ಅವರ ಪ್ರಭಾವದಿಂದ ಮುಕ್ತಗೊಳಿಸಬೇಕು ಎಂದು ಆಗ್ರಹಿಸಿದರು.

ಎಸ್‌ಐಆರ್‌ ಮೂಲಕ ಮತದಾರರ ಹೆಸರು ಅಳಿಸುವ ಆರೋಪ

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಎಸ್. ಲೋಣಿ, ದೇಶದಲ್ಲಿ ಎಸ್‌ಐಆರ್‌ ಪ್ರಕ್ರಿಯೆ ಮೂಲಕ ಕಾಂಗ್ರೆಸ್ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಿರುವುದಕ್ಕೆ ಸಾಕ್ಷ್ಯಗಳು ದೊರೆತಿವೆ ಎಂದು ಆರೋಪಿಸಿದರು.ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ದೆಹಲಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗಿದೆ. 2024ರ ಲೋಕಸಭಾ ಚುನಾವಣೆಯ ಬಳಿಕ ದೇಶದ ಶೇ.15ರಷ್ಟು ಮತದಾರರ ಹೆಸರುಗಳನ್ನು ಅಳಿಸಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ. ಇದು ಚುನಾವಣಾ ಪ್ರಕ್ರಿಯೆಯಲ್ಲಿನ ಅಕ್ರಮಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಹೇಳಿದರು.

*ವಿಜಯಪುರದಲ್ಲಿ 29 ಸಾವಿರ ಮತಗಳ್ಳತನ: ಮುಶ್ರೀಫ್ ಆರೋಪ**2024ರ ವಿಜಯಪುರ ವಿಧಾನಸಭಾ ಚುನಾವಣೆಯ ಅಭ್ಯರ್ಥಿ ಹಾಗೂ ಕೆಪಿಸಿಸಿ ಸದಸ್ಯ ಅಬ್ದುಲ್ ಹಮೀದ್ ಮುಶ್ರೀಫ್ ಮಾತನಾಡಿ, ವಿಜಯಪುರದಲ್ಲಿ ಸುಮಾರು 29 ಸಾವಿರ ಮತಗಳ್ಳತನ ನಡೆದಿದೆ ಎಂದು ಆರೋಪಿಸಿದರು.ಮತದಾರರು ಜೀವಂತವಾಗಿದ್ದರೂ ಅವರು ನಿಧನರಾಗಿದ್ದಾರೆಂದು ಸುಳ್ಳು ದಾಖಲೆಗಳನ್ನು ಸಲ್ಲಿಸಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕಲಾಗಿದೆ. ಸುತ್ತಮುತ್ತಲಿನ ಗ್ರಾಮಗಳ ಮತದಾರರ ಹೆಸರುಗಳನ್ನು ವಿಜಯಪುರ ನಗರ ಮತಕ್ಷೇತ್ರದಲ್ಲಿ ನೋಂದಾಯಿಸಲಾಗಿದೆ. ಕಾಂಗ್ರೆಸ್ ಬೆಂಬಲಿಗ ಮತದಾರರ ಹೆಸರುಗಳನ್ನು ಉದ್ದೇಶಪೂರ್ವಕವಾಗಿ ತೆಗೆದುಹಾಕಿರುವ ಉದಾಹರಣೆಗಳೂ ಇವೆ ಎಂದು ದೂರಿದರು.ಇಂತಹ ಅಕ್ರಮಗಳು ದೇಶದಾದ್ಯಂತ ನಡೆದಿದ್ದು, ಮತದಾರರ ಹಕ್ಕುಗಳ ರಕ್ಷಣೆಗೆ ಕಾಂಗ್ರೆಸ್ ಹೋರಾಟ ಮುಂದುವರಿಸಲಿದೆ ಎಂದು ಹೇಳಿದರು.

ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ

ಕಾಂಗ್ರೆಸ್ ಮುಖಂಡ ಮಾರುತಿ ಬಂಡಿ ಮಾತನಾಡಿ, ನರೇಂದ್ರ ಮೋದಿ ಅವರು ನೀಡಿದ ಭರವಸೆಗಳನ್ನು ನಂಬಿ ಜನರು ಮತ ನೀಡಿ ಅಧಿಕಾರಕ್ಕೆ ತಂದಿದ್ದಾರೆ. ಆದರೆ ನೀಡಿದ ಭರವಸೆಗಳನ್ನು ಈಡೇರಿಸದೆ ದೇಶದಲ್ಲಿ ಅನ್ಯಾಯ ಹಾಗೂ ಒಡೆದು ಆಳುವ ನೀತಿಯನ್ನು ಅನುಸರಿಸಲಾಗುತ್ತಿದೆ ಎಂದು ಆರೋಪಿಸಿದರು.ಎಸ್‌ಐಆರ್‌ ಮೂಲಕ ಮತಗಳ್ಳತನ ನಡೆದಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ಕುಮಾರ್ ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಇಂಡಿಯಾ ಒಕ್ಕೂಟದ ಸಿಪಿಐ(ಎಂ) ಮುಖಂಡ ಸುರೇಶ ಜಿ.ಬಿ. ಮಾತನಾಡಿ, ದೇಶದ ಪ್ರಜಾಪ್ರಭುತ್ವವನ್ನು ಉಳಿಸಲು ಎಲ್ಲರೂ ಒಗ್ಗಟ್ಟಾಗಿ ಹೋರಾಡಬೇಕು. ಮುಂಬರುವ ದಿನಗಳಲ್ಲಿ ಜನಶಕ್ತಿಯನ್ನು ಸಂಘಟಿಸಿ ಮೋದಿ-ಅಮಿತ್ ಶಾ ಸರ್ಕಾರದ ವಿರುದ್ಧ ಹೋರಾಟ ನಡೆಸಬೇಕು ಎಂದು ಕರೆ ನೀಡಿದರು.

ಹಲವು ಮುಖಂಡರ ಉಪಸ್ಥಿತಿ

ಪ್ರತಿಭಟನೆಯಲ್ಲಿ ಬಿ.ಎಸ್. ಪಾಟೀಲ ಯಾಳಗಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ವೈಜನಾಥ ಕರ್ಪೂರಮಠ, ಶಕೀಲ ಬಾಗಮಾರೆ, ಶ್ರೀದೇವಿ ಉತ್ಲಾಸಕರ, ಸುರೇಶ ಹಾರಿವಾಳ, ವಿದ್ಯಾವತಿ ಅಂಕಲಗಿ, ಶಬ್ಬೀರ ಜಾಗಿರದಾರ, ಬಳ್ಳೊಳ್ಳಿ ಬ್ಲಾಕ್ ಅಧ್ಯಕ್ಷ ಬಿ.ಸಿ. ಸಾವುಕಾರ, ರಮೇಶ ಗುಬ್ಬೇವಾಡ, ಆರತಿ ಶಾಹಪುರ, ಲಕ್ಷ್ಮಣ ಹಂದ್ರಾಳ, ನಿರ್ಮಲಾ ತಳಕೇರಿ ಸೇರಿದಂತೆ ಹಲವು ಮುಖಂಡರು ಮಾತನಾಡಿದರು.

ಈ ಸಂದರ್ಭದಲ್ಲಿ ಚಾಂದಸಾಬ ಗಡಗಲಾವ, ಸಯ್ಯದ ಆಫ್ತಾಬಕಾದ್ರಿ ಇನಾಮದಾರ, ಈರಗೊಂಡ ಬಿರಾದಾರ, ಶಿವಯೋಗಪ್ಪ ಚನಗೊಂಡ, ಜಮೀರ ಬಕ್ಷಿ, ಎಂ.ಎಂ. ಮುಲ್ಲಾ, ವಸಂತ ಹೊನಮೋಡೆ, ಜಾಕೀರಹುಸೇನ ಮುಲ್ಲಾ, ದೇಸು ಚವ್ಹಾಣ, ವಿಜಯಕುಮಾರ ಘಾಟಗೆ, ಇದ್ರುಸ ಬಕ್ಷಿ, ಜಮೀರ ಬಾಂಗಿ, ಶಫೀಕ ಬಗದಾದಿ, ಅಬ್ದುಲ ಪೀರಾ ಜಮಖಂಡಿ, ಆಶೀಫ ಶಾನವಾಲೆ, ಅಶ್ಪಾಕ ಮನಗೂಳಿ, ಶಫೀಕ ಮನಗೂಳಿ, ರಾಜು ಚವ್ಹಾಣ, ಮೈಬೂಬ ನಾಯಕೋಡಿ, ರಮಜಾನ ಹೆಬ್ಬಾಳ, ಡಾ.ಜಿ.ಎಸ್. ಮಾಲಿಪಾಟೀಲ, ಅನುಸೂಯಾ ಹಜಾರೆ, ರಾಜಬಾನ ನದಾಫ, ಸಾಯಬ್ಬಿ ಶೇಖ, ಹಮೀದಾ ಪಟೇಲ, ಜಹಾಂಗೀರ ಗೋಟ್ಯಾಳ, ಡಾ.ಎಂ.ಆರ್. ಗುರಿಕಾರ, ಕೃಷ್ಣಾ ಲಮಾಣಿ, ತಾಜುದ್ದೀನ ಖಲೀಫಾ, ರಜಾಕ ಕಾಖಂಡಕಿ, ಶರಣಪ್ಪ ಯಕ್ಕುಂಡಿ, ಬೀರಪ್ಪ ಕುಂಬಾರ, ಗಂಗುಬಾಯಿ ಧುಮಾಳೆ, ರಾಜೇಶ್ವರಿ ಚೋಳಕೆ, ಜಯಶ್ರೀ ಭಾರತೆ ಸೇರಿದಂತೆ ಕಾಂಗ್ರೆಸ್ ಹಾಗೂ ಇಂಡಿಯಾ ಒಕ್ಕೂಟದ ವಿವಿಧ ಪಕ್ಷಗಳ ಪದಾಧಿಕಾರಿಗಳು, ಕಾರ್ಯಕರ್ತರು ಮತ್ತು ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದು ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದರು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗದಗ | ಹೊಸಳ್ಳಿ ಗ್ರಾಮದಲ್ಲಿ ವಿಬಿ-ಜಿ ರಾಮ್-ಜಿ ಕಾಮಗಾರಿಗೆ ಕಾರ್ಯನಿರ್ವಾಹಕ ಅಧಿಕಾರಿಗಳ ಭೇಟಿ

ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಕಡಕೋಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಳ್ಳಿ...

ಹಾವೇರಿ | ಯುವಜನತೆ ಸಂಘಟಿತರಾಗಿ ಹೋರಾಡಿದಾಗ ಮಾತ್ರ ಘನತೆಯ ಬದುಕು ಕಟ್ಟಿಕೊಳ್ಳಲು ಸಾಧ್ಯ: ಬಸವರಾಜ ಪೂಜಾರ

"ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ, ಕೋಮುವಾದ ಮತ್ತು ಶಿಕ್ಷಣದ ವ್ಯಾಪಾರೀಕರಣದ ವಿರುದ್ಧ ಯುವಜನತೆ...

ಧಾರವಾಡ | ಶ್ರಮದಿಂದ ವ್ಯಕ್ತಿತ್ವ ವಿಕಾಸ: ಡಾ. ಎಂ. ಬಿ. ದಳಪತಿ

"ನವೆಂಬರ್ - 04 ನಿರಂತರ ಕಠಿಣ ಶ್ರಮ ಮತ್ತು ಪ್ರಯತ್ನಗಳು ವಿದ್ಯಾರ್ಥಿಗಳಲ್ಲಿ...

ರಾಯಚೂರು | ಮೀಸಲಾತಿ ಹೆಚ್ಚಳಕ್ಕೆ ಅನುಮೋದನೆಗೆ ಆಗ್ರಹಿಸಿ ನ.6ರಂದು ಧರಣಿ: ಹನುಮಂತಪ್ಪ ಕಾಕರಗಲ್

ಪರಿಶಿಷ್ಟ ಜಾತಿ ಪಂಗಡ ಮೀಸಲಾತಿ ಹೆಚ್ಚಳ ಅನುಮೋದನೆಗಾಗಿ, ವಿವಿಧ ಬೇಡಿಕೆಗಳ ಈಡೇರಿಕೆಗಾಗಿ...