ಒಡೆದ ಬಲೂನಿನಲ್ಲಿ ಗಾಳಿ ತುಂಬಲ್ಲ, ಅಮಿತ್ ಶಾಗೆ ಸಂಸತ್ತಿಗೆ ಬರುವ ದಮ್ಮಿಲ್ಲ: ರಾಹುಲ್ ಗಾಂಧಿ

Date:

ಒಡೆದು ಹೋದ ಬಲೂಲಿನಲ್ಲಿ ಗಾಳಿ ತುಂಬಲು ಸಾಧ್ಯವಿಲ್ಲ. ಆದರೂ ಈಗ ಗಾಳಿ ತುಂಬುವ ಯತ್ನ ನಡೆಯುತ್ತಿದೆ. ಒಡೆದ ಬಲೂನಿನಲ್ಲಿ ಗಾಳಿ ತುಂಬಲ್ಲ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಸಂಸತ್ತಿಗೆ ಬರುವ ದಮ್ಮಿಲ್ಲ (ಧೈರ್ಯವಿಲ್ಲ) ಎಂದು ಲೋಕಸಭೆ ವಿಪಕ್ಷ ನಾಯಕ, ಸಂಸದ ರಾಹುಲ್ ಗಾಂಧಿ ಖಡಕ್ ಆಗಿ ಹೇಳಿದ್ದಾರೆ.

- Advertisement -

ದೆಹಲಿಯ ಇಂದಿರಾ ಭವನದಲ್ಲಿ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ಈ ವೇಳೆ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. “ಸಂಸತ್ತಿಗೆ ಬಂದು ನಮ್ಮ ಎದುರು ನಿಲ್ಲುವ ಧೈರ್ಯ ಪ್ರಧಾನಿ ಮೋದಿಗೂ ಇಲ್ಲ, ಅಮಿತ್ ಶಾ ಅವರಿಗೂ ಇಲ್ಲ” ಎಂದು ಟೀಕಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ದೆಹಲಿಯಲ್ಲಿ ಮತದಾರರ ಪಟ್ಟಿಯಿಂದ 47 ಲಕ್ಷ ಜನರ ಕೈಬಿಟ್ಟ...

ದೇಶದ ರಾಜಧಾನಿ ದೆಹಲಿಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ (SIR) ನೆಪದಲ್ಲಿ ಲಕ್ಷಾಂತರ ಜನರನ್ನು ಮತದಾನದ ಹಕ್ಕಿನಿಂದ ವಂಚಿತರನ್ನಾಗಿಸುತ್ತಿರುವ ಅತ್ಯಂತ ಆಘಾತಕಾರಿ ಸತ್ಯವೊಂದು ಇದೀಗ ಬಯಲಾಗಿದೆ. ಪ್ರಜಾಪ್ರಭುತ್ವದ ಅಡಿಪಾಯವನ್ನೇ ಅಲುಗಾಡಿಸುತ್ತಿರುವ ಈ ಗಂಭೀರವಾದ ವಿಷಯವನ್ನು...

‘ಹಾಸ್ಟೆಲ್‌’ ಇಲ್ಲದ ಶಿಕ್ಷಣದ ಸ್ವರೂಪ ಹೇಗಿರಲಿದೆ?

ಸಾಮಾನ್ಯವಾಗಿ ʼಶಿಕ್ಷಣʼ ಎಂದರೆ ʼತರಗತಿ, ಪಠ್ಯಪುಸ್ತಕ ಮತ್ತು ಪರೀಕ್ಷೆಗಳʼ ಸುತ್ತ ಹೆಣೆದುಕೊಂಡಿರುವ ಕಲ್ಪನೆ. ಆದರೆ ಒಬ್ಬ ವಿದ್ಯಾರ್ಥಿ ದಿನದ ಬಹುಪಾಲು ಕಳೆಯುವ ಜಾಗ ʼಹಾಸ್ಟೆಲ್‌ʼ. ಹೆಚ್ಚಾಗಿ ಚರ್ಚೆಗೆ ಬಾರದ ಈ ʼಹಾಸ್ಟೆಲ್‌ʼ ಎಂಬ...

ಬರದ ಬೇಗೆಯಲ್ಲಿ ರಾಜ್ಯ ಬೆಂದರೂ ಅನುದಾನಕ್ಕ ದನಿ ಎತ್ತದ...

ಸದಾ ಕಾಲ 'ಮೋದಿ ಜಪ' ಮಾಡುತ್ತಾ, ಕೇವಲ ರಾಜಕೀಯಕ್ಕಾಗಿ ಮತ್ತು ಪಕ್ಷದ ಅಜೆಂಡಾಗಳಿಗಾಗಿ ರಾಜ್ಯಾದ್ಯಂತ ಸುತ್ತುವ ಈ ಸಂಸದರಿಗೆ, ನಾಡಿನ ಜನತೆ ಬರಗಾಲದ ತೀವ್ರ ಸಂಕಷ್ಟದಲ್ಲಿ ಬೆಂದು ಹೋಗುತ್ತಿರುವಾಗ ಅದೇ ಪ್ರಧಾನಿ ನರೇಂದ್ರ...

ಇದನ್ನೂ ಓದಿ: ಕಾಂಗ್ರೆಸ್‌ ಪ್ರತಿಭಟನೆ ಪ್ರಾಮಾಣಿಕವಲ್ಲ, ಬಿಜೆಪಿಗೆ ದೇಶಭಕ್ತಿ ಇಲ್ಲ: ಸೋನಂ ವಾಂಗ್‌ಚುಕ್ ಪತ್ನಿ ಗೀತಾಂಜಲಿ

“ಅಧಿವೇಶನ ಆರಂಭವಾದ ಮೊದಲಿನಿಂದಲೂ ನಮ್ಮ ಬೇಡಿಕೆ ಇದ್ದಿದ್ದು ಮೂರು. ಜಂತರ್‌ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲು, ಮೊಳೆಗಳಿದ್ದ ಲಾಠಿಯನ್ನು ಬೀಸಲು ಆದೇಶವನ್ನು ಕೇಂದ್ರ ಗೃಹ ಸಚಿವಾಲಯ ನೀಡಿರುವುದೇ ಅಥವಾ ಆದೇಶ ನೀಡಿರುವವರೇ ಬೇರೆಯೇ ಎಂಬುದನ್ನು ಸಂಸತ್ತಿನಲ್ಲಿ ಬಂದು ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರು ಸ್ಪಷ್ಟವಾಗಿ ಹೇಳಲಿ. ಅವರು ರಾಜೀನಾಮೆ ನೀಡಲು ಎಂಬುದು ನಮ್ಮ ಮೊದಲ ಬೇಡಿಕೆ” ಎಂದು ತಿಳಿಸಿದರು.

“ಎರಡನೆಯದಾಗಿ ದೆಹಲಿಯಲ್ಲಿ ವಿದ್ಯಾರ್ಥಿಗಳ ಮೇಲೆ ನಡೆಸಿದ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಕ್ಷಮೆ ಕೇಳಬೇಕು. ಮೂರನೆಯದಾಗಿ ಪ್ರಧಾನಿ ಮೋದಿ ಅವರು ರಾಮಮಂದಿರ ಟ್ರಸ್ಟ್‌ನಲ್ಲಿ ಕೂರಿಸಿದ್ದ ಅವರ ಜನರು ಕೋಟ್ಯಾಂತರ ರೂಪಾಯಿ ಕಳ್ಳತನ ಮಾಡಿದ್ದಾರೆ. ಅದರ ಬಗ್ಗೆ ಚರ್ಚೆ ನಡೆಯಬೇಕು ಎಂಬುದು ನಮ್ಮ ಮೂರನೇ ಬೇಡಿಕೆಯಾಗಿತ್ತು” ಎಂದು ಮಾಹಿತಿ ನೀಡಿದರು.

“ಸದನಕ್ಕೆ ಬಂದು ಯಾವುದೋ ವಿಚಾರದ ಬಗ್ಗೆ ಭಾಷಣ ನೀಡಿ ಹೋಗುವುದನ್ನು ನಾವು ಒಪ್ಪಲ್ಲ. ಈ ವಿಚಾರದಲ್ಲಿ ದೇಶಕ್ಕಾಗಲಿ, ನಮಗಾಗಲಿ ಯಾವುದೇ ಆಸಕ್ತಿ ಇಲ್ಲ. ನಮಗೆ ಇದ್ದದ್ದು ಮೂರೇ ಬೇಡಿಕೆ. ಈ ಮೂರು ವಿಚಾರಗಳ ಬಗ್ಗೆ ಚರ್ಚೆ ನಡೆಸಬೇಕು ಎಂಬುದು ನಮ್ಮ ಆಗ್ರಹ” ಎಂದು ತಿಳಿಸಿದರು.

ಈ ಸಂದರ್ಭದಲ್ಲೇ ಜಾರ್ಖಂಡ್‌ನಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ಲಾಠಿ ಚಾರ್ಜ್, ಜಲಫಿರಂಗಿ ಪ್ರಯೋಗವನ್ನೂ ಖಂಡಿಸಿದರು. “ದೇಶದ ಯಾವುದೇ ರಾಜ್ಯದಲ್ಲಿ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ನಡೆದರೂ ನಾವು ಅದನ್ನು ಖಂಡಿಸುತ್ತೇವೆ. ಜಾರ್ಖಂಡ್‌ನಲ್ಲಿ ನಡೆದ ಲಾಠಿ ಚಾರ್ಜ್‌ ಅನ್ನು ಕೂಡಾ ನಾವು ಖಂಡಿಸುತ್ತೇವೆ. ಶಾಂತಿಯುತವಾಗಿ ನಡೆಯುವ ಪ್ರತಿಭಟನೆಗೆ ಸರ್ಕಾರ ಹಿಂಸೆಯ ಉತ್ತರ ನೀಡುವುದನ್ನು ನಾವು ಬೆಂಬಲಿಸಲ್ಲ” ಎಂದು ಸ್ಪಷ್ಟಪಡಿಸಿದರು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರ ರೈತರ ಸಾಲ ಮನ್ನಾ ಮಾಡಿದರೆ, ರಾಜ್ಯದ ಪಾಲು ನೀಡಲು ಸಿದ್ಧ: ಡಿ.ಕೆ. ಶಿವಕುಮಾರ್

"ಕೇಂದ್ರ ಸರ್ಕಾರವು ಉದ್ಯಮಿಗಳ ಲಕ್ಷಾಂತರ ಕೋಟಿ ರೂಪಾಯಿ ಸಾಲ ಮನ್ನಾ ಮಾಡಿದಂತೆ,...

ಬೀದರ್‌ | ಸೆ.27ರಂದು ಹೂಗಾರ ಮಾದಯ್ಯನವರ ಜಯಂತಿ ಅದ್ದೂರಿ ಆಚರಣೆ

ಅಖಂಡ ಕರ್ನಾಟಕ ಹೂಗಾರ ಮಹಾಸಭಾ ಬೀದರ್ ಜಿಲ್ಲಾ ಘಟಕದ ವತಿಯಿಂದ ಸೆ.27ರಂದು...

ಸೌಜನ್ಯ ಪ್ರಕರಣದ ಮರುತನಿಖೆಗೆ ಐಜಿಪಿ ಶಶಿಕುಮಾರ್ ನೇತೃತ್ವದಲ್ಲಿ SIT ರಚನೆ

'ಸೌಜನ್ಯ ಪ್ರಕರಣ'ದ ಮರುತನಿಖೆ ನಡೆಸುವಂತೆ ಸುಪ್ರೀಂಕೋರ್ಟ್ ನೀಡಿದ ನಿರ್ದೇಶನದ ಬೆನ್ನಲ್ಲೇ, ರಾಜ್ಯ...

ಕೊಪ್ಪಳ | ಡ್ಯಾನ್ಸ್‌ ಮಾಡಬೇಡವೆಂದು ಬುದ್ಧಿವಾದ ಹೇಳಿದಕ್ಕೆ ವಿದ್ಯಾರ್ಥಿನಿ ಆತ್ಮಹತ್ಯೆ

ಮನೆಯಲ್ಲಿ ಡ್ಯಾನ್ಸ್ ಮಾಡಬೇಡ ಎಂದು ತಂದೆ-ತಾಯಿ ಬುದ್ದಿವಾದ ಹೇಳಿದಕ್ಕೆ ಮನನೊಂದು 10ನೇ...