ಸಿಜೆಪಿ ಬೆನ್ನತ್ತಿದ ಕಾಂಗ್ರೆಸ್‌; ‘ಎಎಪಿ ಆಡಳಿತದ ಪಂಜಾಬ್‌ನಲ್ಲೂ ಅದೇ ಧೈರ್ಯ ತೋರಿಸಿ’: ಸಚಿನ್ ಪೈಲಟ್ ಸವಾಲು

Date:

ವಿವಿಧ ರಾಜ್ಯಗಳ ಸರ್ಕಾರಿ ಶಾಲೆಗಳ ಸ್ಥಿತಿಗತಿ ಪರಿಶೀಲಿಸಿ ‘ಆಡಿಟ್’ ನಡೆಸುತ್ತಿರುವ ‘ಕಾಕ್ರೋಚ್ ಜನತಾ ಪಾರ್ಟಿ’ (CJP)ಗೆ ಕಾಂಗ್ರೆಸ್ ನಾಯಕ, ಪಂಜಾಬ್ ಕಾಂಗ್ರೆಸ್ ಉಸ್ತುವಾರಿ ಸಚಿನ್ ಪೈಲಟ್ ಸವಾಲು ಹಾಕಿದ್ದಾರೆ. ಬಿಜೆಪಿ ಅಥವಾ ಇತರ ಪಕ್ಷಗಳ ಆಡಳಿತವಿರುವ ರಾಜ್ಯಗಳಲ್ಲಿ ತೋರಿಸುವ ‘ಅದೇ ದೃಷ್ಟಿಕೋನ, ಅದೇ ಪ್ರಶ್ನೆಗಳು ಹಾಗೂ ಅದೇ ಧೈರ್ಯ’ವನ್ನು ಎಎಪಿ ಆಡಳಿತದ ಪಂಜಾಬ್‌ನಲ್ಲೂ ತೋರಿಸಬೇಕು ಎಂದು ಅವರು ಹೇಳಿದ್ದಾರೆ.

- Advertisement -

ಪಂಜಾಬ್‌ನ ಲುಧಿಯಾನಾದ ಮೂರು ಸರ್ಕಾರಿ ಶಾಲೆಗಳಿಗೆ ಸಿಜೆಪಿ ತಂಡ ಭೇಟಿ ನೀಡಿದ ಬೆನ್ನಲ್ಲೇ ಪೈಲಟ್ ಈ ಪ್ರತಿಕ್ರಿಯೆ ನೀಡಿದ್ದಾರೆ. CJP ಸಹ-ಸಂಯೋಜಕ ಸೌರವ್ ದಾಸ್ ನೇತೃತ್ವದ ತಂಡವು ಒಂದು ‘School of Eminence’, ಒಂದು ಸರ್ಕಾರಿ ಹಿರಿಯ ಪ್ರೌಢಶಾಲೆ ಹಾಗೂ ಒಂದು ಸರ್ಕಾರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಅಲ್ಲಿನ ಸೌಲಭ್ಯಗಳನ್ನು ಪರಿಶೀಲಿಸಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬ್ರೆಜಿಲ್‌ನಲ್ಲಿ ಒಂದೇ ಹುದ್ದೆಗೆ ಎರಡು ಬಾರಿ ಚುನಾವಣೆ: ಏನಿದು...

ಭಾರತಕ್ಕೂ ಎರಡನೇ ಸುತ್ತಿನ ಪದ್ಧತಿ ಅಗತ್ಯವಿದೆಯೇ ಎಂಬ ಚರ್ಚೆ ಆಗಿಂದಾಗ್ಗೆ ಮುನ್ನೆಲೆಗೆ ಬರುತ್ತಲೇ ಇರುತ್ತದೆ. ಹಲವು ಅಭ್ಯರ್ಥಿಗಳು ಕಣದಲ್ಲಿರುವಾಗ ಮತಗಳು ಹಂಚಿಹೋಗಿ, ಕೇವಲ ಶೇ 30 ಅಥವಾ 40ರಷ್ಟು ಮತ ಪಡೆದವರೂ ನಮ್ಮಲ್ಲಿ...

ಬೆಂಗಳೂರು ಪೌರಕಾರ್ಮಿಕರ ಶ್ವಾಸಕೋಶ ಹಿಂಡುತ್ತಿದೆ ಮಾಲಿನ್ಯ; BMTC ಸಿಬ್ಬಂದಿ,...

ಬೆಂಗಳೂರಿನಲ್ಲಿ ಮಾಲಿನ್ಯವು ಹೊಸ ತಂಬಾಕಾಗಿ ಪರಿಣಮಿಸಿದೆ. ಜನರ ಶ್ವಾಸಕೋಶವನ್ನು ಹಿಂಡುತ್ತಿದೆ. ಮಾಸ್ಕ್, ಕೈಗವಸು, ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಸೌಲಭ್ಯಗಳ ಕೊರತೆಗಳಿಂದಾಗಿ ಪೌರಕಾರ್ಮಿಕರು, ಬಿಎಂಟಿಸಿ ನೌಕರರು, ಸಂಚಾರ ಪೊಲೀಸರು ಹಾಗೂ ಕಟ್ಟಡ ಕಾರ್ಮಿಕರು...

ಗ್ರಾಮೀಣ ಮೀಸಲಾತಿಯಲ್ಲಿ ಸಾಮಾಜಿಕ ಅನ್ಯಾಯ; ಬರಿದಾಗುತ್ತಿರುವ ಬಡ ಮಕ್ಕಳ...

ಸರಕಾರಿ ಶಾಲೆ ಸೇರುವವರು ಕೇವಲ ಬಡತನ-ಕೆಳಮಟ್ಟದ ಕುಟುಂಬದವರು ಎಂಬಂತಾಗಿದೆ. ಈ ಋಣಾತ್ಮಕ ಭಾವನೆ ಹೋಗಲಾಡಿಸಲು ಕನ್ನಡದಲ್ಲಿ ಕಲಿತರೆ ಉನ್ನತ ಶಿಕ್ಷಣ, ಉದ್ಯೋಗ ಸ್ಪರ್ಧೆಯಲ್ಲಿ ಜಯಿಸಬಹುದೆಂಬ ವಿಶ್ವಾಸ ಮೂಡಿಸಬೇಕಾಗಿದೆ. ಈಗಿನ ಎಡಬಿಡಂಗಿ ಗ್ರಾಮೀಣ ಮೀಸಲಾತಿ...

ಆನಂತರ, ಸಿಜೆಪಿ ಬಿಡುಗಡೆ ಮಾಡಿದ ವಿಡಿಯೊ ಪ್ರಕಾರ, ‘School of Eminence’ನಲ್ಲಿ ಉತ್ತಮ ಮೂಲಸೌಕರ್ಯ, ಈಜುಕೊಳ, ಬ್ಯಾಡ್ಮಿಂಟನ್ ಕೋರ್ಟ್, ವಿಶೇಷಚೇತನರಿಗೆ ರ್ಯಾಂಪ್, AI ಲ್ಯಾಬ್ ಸೇರಿದಂತೆ ಹಲವು ಸೌಲಭ್ಯಗಳು ಕಂಡುಬಂದಿದ್ದವು. ಆದರೆ, ಉಳಿದ ಎರಡು ಶಾಲೆಗಳಲ್ಲಿ ಹಲವು ಸಮಸ್ಯೆಗಳಿದ್ದು, ಮೂರೂ ಶಾಲೆಗಳಲ್ಲೂ ಶೌಚಾಲಯ ಸೌಲಭ್ಯ ಇನ್ನಷ್ಟು ಸುಧಾರಿಸಬೇಕಿದೆ ಎಂದು ದಾಸ್ ಹೇಳಿದ್ದರು.

ಬಳಿಕ, ಸಿಜೆಪಿ ಪ್ರತಿನಿಧಿಗಳು ಪಂಜಾಬ್ ಶಿಕ್ಷಣ ಸಚಿವ ಹರ್ಜೋತ್ ಸಿಂಗ್ ಬೈನ್ಸ್ ಅವರನ್ನು ಭೇಟಿಯಾಗಿದ್ದು, ದೂರುಗಳ ಕುರಿತು ಕ್ರಮ ಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿದ್ದಾರೆ ಎಂದು ದಾಸ್ ಹೇಳಿದ್ದಾರೆ. ಎಎಪಿ ಸಂಸ್ಥಾಪಕ, ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಕೂಡ ಸಿಜೆಪಿ ಸೂಚಿಸಿದ ಕೊರತೆಗಳನ್ನು ಸರಿಪಡಿಸಲಾಗುವುದು ಎಂದು ಪ್ರತಿಕ್ರಿಯಿಸಿದ್ದಾರೆ.

ಆದರೆ, ಈ ಬೆಳವಣಿಗೆಗಳ ಬಳಿಕ ಸಾಮಾಜಿಕ ಮಾಧ್ಯಮಗಳಲ್ಲಿ CJP ವಿರುದ್ಧ ಟೀಕೆಗಳು ಕೇಳಿಬಂದಿವೆ. ಎಎಪಿ ಆಡಳಿತದ ಪಂಜಾಬ್ ವಿಚಾರದಲ್ಲಿ ಸಿಜೆಪಿ ಮೃದು ಧೋರಣೆ ಅನುಸರಿಸುತ್ತಿದೆ; ಇತರ ರಾಜ್ಯಗಳ ಶಾಲೆಗಳ ವಿಚಾರದಲ್ಲಿ ಕಾಣಿಸುವ ತೀಕ್ಷ್ಣತೆ ಇಲ್ಲಿ ಕಾಣಿಸುತ್ತಿಲ್ಲ ಎಂದು ಹಲವರು ಆರೋಪಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಸಚಿನ್ ಪೈಲಟ್ ಕೂಡ ಸಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. “ಪಂಜಾಬ್‌ನಲ್ಲಾಗಲಿ, ಬೇರೆಡೆ ಆಗಲಿ ಶಾಲೆಗಳ ಆಡಿಟ್ ಮಾಡುವುದನ್ನು ಯಾರೂ ವಿರೋಧಿಸುವುದಿಲ್ಲ. ಆದರೆ, ಒಂದು ಮನವಿ ಇದೆ—ಇತರ ಸರ್ಕಾರಗಳನ್ನು ಯಾವ ಕಣ್ಣಿನಿಂದ ನೋಡುತ್ತೀರಿ, ಯಾವ ಪ್ರಶ್ನೆಗಳನ್ನು ಕೇಳುತ್ತೀರಿ, ಯಾವ ಧೈರ್ಯದಿಂದ ಪರಿಶೀಲಿಸುತ್ತೀರಿ, ಅದೇ ರೀತಿಯಲ್ಲಿ ಪಂಜಾಬ್‌ನನ್ನೂ ಪರಿಶೀಲಿಸಿ. ಪಂಜಾಬ್‌ಗೆ ವಿಶೇಷ ವಿನಾಯಿತಿ ಇರಬಾರದು; ಎಎಪಿಗೂ ಸ್ನೇಹಪರ ವಿನಾಯಿತಿ ಇರಬಾರದು” ಎಂದು ಹೇಳಿದ್ದಾರೆ.

ಸಚಿನ್ ಪೈಲಟ್ ಹೇಳಿಕೆಗೆ ಎಎಪಿ ನಾಯಕರು ತಿರುಗೇಟು ನೀಡಿದ್ದಾರೆ. ಪಂಜಾಬ್‌ನ ಸರ್ಕಾರಿ ಶಾಲೆಗಳ ಜೊತೆಗೆ ಕಾಂಗ್ರೆಸ್ ಆಡಳಿತದ ಹಿಮಾಚಲ ಪ್ರದೇಶದ ಸರ್ಕಾರಿ ಶಾಲೆಗಳನ್ನೂ ಒಟ್ಟಿಗೆ ಆಡಿಟ್ ಮಾಡೋಣ ಎಂದು ಸವಾಲು ಹಾಕಿದ್ದಾರೆ.

ದೆಹಲಿ ಮಾಜಿ ಶಿಕ್ಷಣ ಸಚಿವ ಮನೀಷ್ ಸಿಸೋಡಿಯಾ, “ಪಂಜಾಬ್‌ನಲ್ಲಿ ನಾವು ಇಂತಹ 1,000 ಉತ್ತಮ ಶಾಲೆಗಳನ್ನು ತೋರಿಸಬಹುದು. ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ಇಂತಹ 1,000 ಶಾಲೆಗಳನ್ನು ತೋರಿಸಬಹುದೇ? ಪಂಜಾಬ್ ಮತ್ತು ಹಿಮಾಚಲದ ಸರ್ಕಾರಿ ಶಾಲೆಗಳನ್ನು ಒಟ್ಟಿಗೆ ಆಡಿಟ್ ಮಾಡೋಣ. ಈ ಸವಾಲು ಸ್ವೀಕರಿಸುತ್ತೀರಾ” ಎಂದು ಪ್ರಶ್ನಿಸಿದ್ದಾರೆ.

ಎಎಪಿ ರಾಷ್ಟ್ರೀಯ ಮಾಧ್ಯಮ ಉಸ್ತುವಾರಿ ಅನುರಾಗ್ ಧಾಂಡಾ ಕೂಡ ಇದೇ ರೀತಿಯ ಸವಾಲು ಹಾಕಿದ್ದು, ಹಿಮಾಚಲ ಪ್ರದೇಶದ 1,000 ಉತ್ತಮ ಸರ್ಕಾರಿ ಶಾಲೆಗಳ ಪಟ್ಟಿಯನ್ನು ನೀಡಿದರೆ, ಪಂಜಾಬ್‌ನ 1,000 ಶಾಲೆಗಳ ಪಟ್ಟಿಯನ್ನು ನೀಡುವುದಾಗಿ ಹೇಳಿದ್ದಾರೆ.

ಇದಕ್ಕೂ ಮುನ್ನ ರಾಜಸ್ಥಾನದಲ್ಲಿ ಸಿಜೆಪಿ ಶಾಲಾ ಆಡಿಟ್ ವೇಳೆ ವಿವಾದಕ್ಕೆ ಸಿಲುಕಿತ್ತು. ಆಗಸ್ಟ್ 21ರಂದು ಗೋಶಾಲೆಯೊಂದರಲ್ಲಿ ನಡೆಯುತ್ತಿದ್ದ ಶಾಲೆಯಿಂದ ಪರಿಶೀಲನೆ ಆರಂಭಿಸಲು ಸಿಜೆಪಿ ಯೋಜಿಸಿತ್ತು. ಆದರೆ, ಸಿಜೆಪಿ ತಂಡದ ಮೇಲೆ ಸ್ಥಳೀಯರು ಹಲ್ಲೆ ನಡೆಸಿದ್ದಾರೆ ಎಂದು ಸಂಘಟನೆ ಆರೋಪಿಸಿತ್ತು. ಈ ಘಟನೆಯಲ್ಲಿ ಎರಡೂ ಕಡೆಯಿಂದ ಪರಸ್ಪರ ಎಫ್‌ಐಆರ್‌ಗಳು ದಾಖಲಾಗಿದ್ದವು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಂಗಳೂರು ಪೌರಕಾರ್ಮಿಕರ ಶ್ವಾಸಕೋಶ ಹಿಂಡುತ್ತಿದೆ ಮಾಲಿನ್ಯ; BMTC ಸಿಬ್ಬಂದಿ, ಪೊಲೀಸರು, ಕಟ್ಟಡ ಕಾರ್ಮಿಕರಿಗೂ ಆಘಾತ!

ಬೆಂಗಳೂರಿನಲ್ಲಿ ಮಾಲಿನ್ಯವು ಹೊಸ ತಂಬಾಕಾಗಿ ಪರಿಣಮಿಸಿದೆ. ಜನರ ಶ್ವಾಸಕೋಶವನ್ನು ಹಿಂಡುತ್ತಿದೆ. ಮಾಸ್ಕ್,...

ವಿಜಯಪುರ | ಅಂತಿಮ ಮತದಾರರ ಪಟ್ಟಿ ಪ್ರಕಟ: ನಾಗಠಾಣದಲ್ಲಿ ಅತಿ ಹೆಚ್ಚು ಮತದಾರರು

ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿಯನ್ನು ಅಕ್ಟೋಬರ್ 27ರಂದು...

ಆಸ್ಕರ್‌ 2027 | ಇವೇ, ರೇಸ್‌ನಲ್ಲಿರುವ 9 ಬಹುನಿರೀಕ್ಷಿತ ಸಿನಿಮಾಗಳು!

2027ರ ಪ್ರತಿಷ್ಠಿತ ಅಕಾಡೆಮಿ ಪ್ರಶಸ್ತಿ (ಆಸ್ಕರ್) ರೇಸ್‌ಗೆ ಈಗಿನಿಂದಲೇ ಕೌಂಟ್‌ಡೌನ್ ಆರಂಭವಾಗಿದೆ....