ಬಿಜೆಪಿ ನಾಯಕಿ ಶಾಜಿಯಾ ಇಲ್ಮಿ ಅವರು ಇಂಡಿಯಾ ಟುಡೇ ವೀಡಿಯೋ ಪತ್ರಕರ್ತೆಯೊಬ್ಬರನ್ನು ನಿಂದಿಸಿದ್ದಾರೆ ಎಂದು ಆರೋಪಿಸಿ ಪತ್ರಕರ್ತ ರಾಜ್‌ದೀಪ್ ಸರ್ದೇಸಾಯಿ ಸಾಮಾಜಿಕ ಮಾಧ್ಯಮದಲ್ಲಿ ಅಪ್‌ಲೋಡ್ ಮಾಡಿರುವ ವಿಡಿಯೋವನ್ನು ತೆಗೆದುಹಾಕುವಂತೆ ಪತ್ರಕರ್ತ ರಾಜದೀಪ್ ಸರ್ದೇಸಾಯಿ ಮತ್ತು ಇಂಡಿಯಾ ಟುಡೇ ಸುದ್ದಿಜಾಲಕ್ಕೆ ದೆಹಲಿ ಹೈಕೋರ್ಟ್ ಮಂಗಳವಾರ ಆದೇಶ ನೀಡಿದೆ.
ಶಾಜಿಯಾ ಇಲ್ಮಿ ಮಾನನಷ್ಟ ಮೊಕದ್ದಮೆಯನ್ನು ಹೂಡಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮನ್ಮೀತ್ ಪ್ರೀತಮ್ ಸಿಂಗ್ ಅರೋರಾ ವಿಡಿಯೋವನ್ನು ತೆಗೆಯುವಂತೆ ಆದೇಶವನ್ನು ನೀಡಿದರು.
ಹಿಂದಿನ ವಿಚಾರಣೆಯಲ್ಲಿ, ಹೈಕೋರ್ಟ್ ಸರ್ದೇಸಾಯಿ ಮತ್ತು ಇಂಡಿಯಾ ಟುಡೇ ವಕೀಲರಿಗೆ ಸಂಪೂರ್ಣವಾದ, ಎಡಿಟ್ ಮಾಡದ ವಿಡಿಯೋವನ್ನು ನೀಡುವಂತೆ ತಿಳಿಸಿತ್ತು. ಇದನ್ನು ವೀಕ್ಷಿಸಿ ಶಾಜಿಯಾ ಇಲ್ಮಿ ಕಾರ್ಯಕ್ರಮದಿಂದ ಹೊರನಡೆದ ಬಳಿಕ ವಿಡಿಯೋ ರೆಕಾರ್ಡ್ ಮಾಡಲಾಗಿದೆ ಎಂದು ಗಮನಿಸಿದೆ.
ಇದನ್ನು ಓದಿದ್ದೀರಾ? ಅಮೇಥಿಯಲ್ಲಿ ಮುರಿದ ಸ್ಮೃತಿ ಇರಾನಿಯ ಅಹಂಕಾರ; ಎರಡೂ ಕಡೆ ಗೆದ್ದ ರಾಹುಲ್
“ವೀಡಿಯೊವನ್ನು ರೆಕಾರ್ಡ್ ಮಾಡಲು ಅಥವಾ ಬಳಸಲು ನಿಮಗೆ ಯಾವುದೇ ಹಕ್ಕಿಲ್ಲ” ಎಂದು ಕೋರ್ಟ್ ಸರ್ದೇಸಾಯಿಗೆ ಹೇಳಿದೆ.
ಕಾರ್ಗಿಲ್ ವಿಜಯ ದಿವಸ ರಾಜಕೀಯದ ಕುರಿತು ಇಂಡಿಯಾ ಟುಡೆಯಲ್ಲಿ ಸರ್ದೇಸಾಯಿ ಅವರು ಜುಲೈ 26ರಂದು ನಡೆಸಿದ ಚರ್ಚೆಯ ವಿಡಿಯೋ ಇದಾಗಿದೆ. ಕಾರ್ಯಕ್ರಮದಲ್ಲಿ ಅಗ್ನಿವೀರ್ ಮತ್ತು ರಕ್ಷಣಾ ಪಡೆಗಳ ರಾಜಕೀಯೀಕರಣದ ವಿಷಯಗಳ ಬಗ್ಗೆ ಚರ್ಚಿಸಲಾಯಿತು.
ಕಾರ್ಗಿಲ್ ವಿಜಯ್ ದಿವಸ್ (ಕಾರ್ಗಿಲ್ ವಿಜಯ ದಿವಸ್) ರಾಜಕೀಯದ ಕುರಿತು ಇಂಡಿಯಾ ಟುಡೆಯಲ್ಲಿ ಸರ್ದೇಸಾಯಿ ಅವರು ಜುಲೈ 26ರಂದು ನಡೆಸಿದ ಚರ್ಚೆಯಿಂದ ವಿವಾದ ಹುಟ್ಟಿಕೊಂಡಿತು. ಕಾರ್ಯಕ್ರಮದಲ್ಲಿ ಅಗ್ನಿವೀರ್ ಮತ್ತು ರಕ್ಷಣಾ ಪಡೆಗಳ ರಾಜಕೀಯೀಕರಣದ ವಿಷಯಗಳ ಬಗ್ಗೆ ಚರ್ಚಿಸಲಾಗಿತ್ತು. ಸಂದರ್ಶಕರು ಮತ್ತು ಶಾಜಿಯಾ ಇಲ್ಮಿ ನಡುವೆ ವಾಗ್ವಾದ ನಡೆದಿತ್ತು.
#BREAKING
— Live Law (@LiveLawIndia) August 13, 2024
Delhi High Court has directed Rajdeep Sardesai to take down a video posted by him on ‘X’, alleging that BJP leader Shazia Ilmi abused a video journalist of India Today during a televised debate.
“You had no right to record or use the video,” the Court told Sardesai.… pic.twitter.com/aDdOf7D1K5
* *100% ಮೀಸಲಾತಿ ಹೊಂದಿದ ಕ್ಷೇತ್ರವೆಂದರೆ ಮಾಧ್ಯಮ ಕ್ಷೇತ್ರ*
* *ಕಳೆದ ದಶಕದಿಂದ ಮಾಧ್ಯಮ ಸ್ವಾತಂತ್ರ್ಯವು ಅಪಾಯಕ್ಕೆ ಸಿಲುಕಿದ್ದು ಒಂದುಕಡೆ ಆದರೆ ಪ್ರಭುತ್ವಕ್ಕೆ ಶರಣಾದ ಮಾಧ್ಯಮಗಳು ಒಂದುಕಡೆ*
https://youtu.be/t8FOFK02DC8