ಮಂಡ್ಯ | ಆತಂಕವಾದ ಸೋಲಿಸಿ, ಶಾಂತಿ, ಸೌಹಾರ್ದತೆ ಬೆಳೆಸಬೇಕಿದೆ: ಅಪರ ಜಿಲ್ಲಾಧಿಕಾರಿ ಹೆಚ್ ಎಲ್ ನಾಗರಾಜು

Date:

ದೇಶದಲ್ಲಿಂದು ನಮ್ಮನ್ನೆಲ್ಲ ಆತಂಕವಾದ ಬೆಂಬಿಡದೆ ಕಾಡುತ್ತಿದೆ. ಈ ಆತಂಕವಾದವನ್ನು ಸೋಲಿಸಿ, ಶಾಂತಿ, ಸೌಹಾರ್ದತೆಯನ್ನು ಬೆಳೆಸಬೇಕಿದೆ. ಆಗ ಮಾತ್ರ ದೇಶದಲ್ಲಿ ಐಕ್ಯತೆ ಸಾಧ್ಯ ಎಂದು ಮಂಡ್ಯ ಅಪರ ಜಿಲ್ಲಾಧಿಕಾರಿ ಡಾ.ಹೆಚ್ ಎಲ್ ನಾಗರಾಜು ನುಡಿದರು.

ಅವರು ಕಲಾವಿದೆ ಮಂಜುಳ ಆಲದಹಳ್ಳಿ ಮುಂದಾಳತ್ವದ ಅರುಣೋದಯ ಕಲಾತಂಡ, ಹುಲುಗಪ್ಪ ಕಟ್ಟಿಮನಿಯವರ ಸಂಕಲ್ಪ ಮೈಸೂರು ತಂಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ‘ಜತೆಗಿರುವನು ಚಂದಿರ’ ಸಾಮಾಜಿಕ ನಾಟಕ ಪ್ರದರ್ಶನವು ಮಂಡ್ಯದ ಪಿಇಎಸ್ ಕಾಲೇಜಿನ ಸ್ವಾಮಿ ವಿವೇಕಾನಂದ ರಂಗಮಂದಿರದಲ್ಲಿ ಜರುಗಿತು. ನಾಟಕ ಪ್ರದರ್ಶನಕ್ಕೆ ತಬಲ ಬಾರಿಸುವ ಮೂಲಕ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, “ಸರ್ವರೂ ಸಮನ್ವಯತೆಯಿಂದ ಬದುಕಲು ಸಾಧ್ಯ. ಸರ್ವ ಜನಾಂಗದ ಮನಸ್ಸುಗಳನ್ನು ಗಟ್ಟಿಗೊಳಿಸಿದರೆ ಮಾತ್ರ ದೇಶ ಏನಾದರೂ ಸಾಧಿಸಲು ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಮತ್ತೊಮ್ಮೆ ಪ್ರಚೋದನಾಕಾರಿಗಳೇ ಪ್ರಜ್ವಲಿಸುತ್ತವೆ ದೇಶದಲ್ಲಿ ಅಶಾಂತಿ ಮೂಡುತ್ತದೆ ಎಂದು ಅಭಿಪ್ರಾಯಿಸಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ಅಶಾಂತಿ ಮೂಡಿದಾಗ ವ್ಯಕ್ತಿಗಳಾಗಲಿ ಕುಟುಂಬಗಳಾಗಲಿ, ಸಮಾಜವಾಗಲಿ ನೆಮ್ಮದಿಯಿಂದ ಬದುಕಲಿಕ್ಕೆ ಸಾಧ್ಯವಿಲ್ಲ. ಆತಂಕಗಳು ಹೆಚ್ಚಾಗುತ್ತಾ ಹೋಗುತ್ತವೆ. ಆತಂಕವಾದಿಗಳ ಕೈಗೆ ನಮ್ಮ ಅತಂಕ ಸಿಗುತ್ತದೆ. ಆಗ ಅವರು ಮತ್ತಷ್ಟು ಪ್ರಬಲರಾಗುತ್ತಾರೆ. ಸಮಾಜವನ್ನು ಸರ್ವನಾಶ ಮಾಡುತ್ತಾರೆ. ಮನುಕುಲದ ನಾಶವಾಗುವ ಆತಂಕಗಳು ಹೆಚ್ಚಾಗುತ್ತಾ ಹೋಗುತ್ತವೆ. ಇಂತಹ ಸನ್ನಿವೇಶಗಳ ನಡುವೆ ಸರ್ವಜನಾಂಗದ ಪ್ರೀತಿ, ಸಹಬಾಳ್ವೆ, ನೆಮ್ಮದಿಯ ಸಂದೇಶವನ್ನು ಸಾರುವ ಜತೆಗಿರುವನು ಚಂದಿರ ನಾಟಕದಂತ ಪ್ರದರ್ಶನಗಳು ಹೆಚ್ಚೆಚ್ಚು ನಡೆಯಲಿ, ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಲಿ” ಎಂದರು.

ರೈತನಾಯಕಿ ಸುನಂದ ಜಯರಾಂ ಮಾತನಾಡಿ, “ದೇಶದಲ್ಲಿ ಐಕ್ಯತೆಯನ್ನು ಸಾಧಿಸಲು ಧರ್ಮ, ಜಾತಿ, ಮತ ಬಿಟ್ಟು ಒಗ್ಗಟ್ಟಿನಿಂದ ಹೋರಾಡುವ ಮನೋಭಾವ ಬೆಳೆಸಿಕೊಳ್ಳಬೇಕು” ಎಂದು ಕರೆ ನೀಡಿದರು.

ರಂಗನಿರ್ದೇಶಕಿ ಕೆ.ಆರ್ .ಸುಮತಿ ಮಾತನಾಡಿ, ತಾಯಿಗೆ ಅತ್ಯುತ್ತಮ ಸ್ಥಾನಮಾನವನ್ನು ನೀಡುತ್ತೇವೆ. ಆದರೆ ಈ ವ್ಯವಸ್ಥೆ ಭ್ರೂಣದಲ್ಲೇ ಹೆಣ್ಣು ಮಗುವಿನ ವಿರುದ್ದ ನಿಲ್ಲುವಷ್ಟು ಕ್ರೂರವಾಗಿದೆ. ಮಹಿಳೆಯರ ಸಮಾನತೆಯ ಬಗ್ಗೆ ಮಾತನಾಡುತ್ತೇವೆ. ಆದರೆ ನಮ್ಮ ನುಡಿಯನ್ನು ನಡೆಯ ಜೊತೆ ಸಮನ್ವಯ ಮಾಡುವುದನ್ನು ಮರೆತು ಬಿಡುತ್ತೇವೆ. ನಮ್ಮ ನಡೆ-ನುಡಿಯ ಜೊತೆ ಸಮನ್ವಯತೆ ಇರಬೇಕು” ಎಂದರು.

ಹುಲುಗಪ್ಪ ಕಟ್ಟಿಮನಿ ಅವರ ರಂಗವಿನ್ಯಾಸ, ನಿರ್ದೇಶನದಲ್ಲಿ ಮೂಡಿಬಂದ `ಜತೆಗಿರುವನು ಚಂದಿರ’ ನಾಟಕ ಪ್ರೇಕ್ಷಕರ ಮನಗೆದ್ದಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅರುಣೋದಯ ಕಲಾತಂಡದ ಗೌರವಾಧ್ಯಕ್ಷ ಜೆ ಡಿ ಕುಮಾರ್ ವಹಿಸಿದ್ದರು. ವೇದಿಕೆಯಲ್ಲಿ ಅರುಣೋದಯ ಕಲಾತಂಡದ ಅಧ್ಯಕ್ಷೆ ಆಲದಹಳ್ಳಿ ಮಂಜುಳಾ, ಪ್ರಗತಿಪರ ಚಿಂತಕ ಬಿ ಟಿ ವಿಶ್ವನಾಥ್, ಸಿಐಟಿಯುನ ಸಿ.ಕುಮಾರಿ, ರೈತಸಂಘದ ಲತಾಶಂಕರ್, ನಿವೃತ್ತ ಶಿಕ್ಷಕಿ ರತ್ನಜೈನ್ ಉಪಸ್ಥಿತರಿದ್ದರು. ಕ್ರಾಂತಿಗೀತೆಗಾಯಕ, ಜನಕಲಾರಂಗದ ಅಧ್ಯಕ್ಷ ಹುರುಗಲವಾಡಿ ರಾಮಯ್ಯ ನಿರೂಪಿಸಿದರು.

ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಧಾರವಾಡ | ಸೆ. 15ಕ್ಕೆ ಪ್ರಜಾಪ್ರಭುತ್ವ ದಿನ; ಅಧಿಕಾರಿಗಳು ಪಾಲ್ಗೊಳ್ಳುವುದು ಕಡ್ಡಾಯ: ಸಂತೋಷ್ ಲಾಡ್

ರಾಜ್ಯ ಸರಕಾರವು ಸೆಪ್ಟೆಂಬರ್ 15 ರಂದು 'ಪ್ರಜಾಪ್ರಭುತ್ವ ದಿನ'ವನ್ನು ವಿಶೇಷವಾಗಿ ಆಚರಿಸಲು...

ರಾಯಚೂರು | ಒಳ ಮೀಸಲಾತಿ ಅನುಷ್ಠಾನಕ್ಕೆ ನಿರ್ಲಕ್ಷ್ಯ: ಸೆ.12ರಂದು ರಾಜ್ಯಾದ್ಯಂತ ತಮಟೆ ಚಳವಳಿ

ಪರಿಶಿಷ್ಟ ಜಾತಿಯಲ್ಲಿನ ಉಪಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸಲು ಸುಪ್ರೀಂ ಕೋರ್ಟ್ ತೀರ್ಪು...

ಮಂಡ್ಯ | ಸೆ.8ರಂದು ಪೂರ್ಣಚಂದ್ರ ತೇಜಸ್ವಿ-86 ರ ‘ಕಾಡು ಹಕ್ಕಿಯ ನೆನಪಲ್ಲಿ ಒಂದು ದಿನ’ ಕಾರ್ಯಕ್ರಮ

ಚಿತ್ರಕೂಟ ಬಳಗ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ 'ಪೂರ್ಣಚಂದ್ರ...