ಅಮಾನತುಗೊಂಡ ಎಸಿಪಿ ಮನಸ್ವಿ ವಶಿಷ್ಠ ಹೇಳಿಕೆ ವಿರುದ್ಧ ಸುವೊಮೋಟೋ ಪ್ರಕರಣ ದಾಖಲಿಸಲು ದೆಹಲಿ ಹೈಕೋರ್ಟ್ ನಕಾರ

Date:

ದೆಹಲಿ ಪೊಲೀಸ್‌ನ ಸಹಾಯಕ ಪೊಲೀಸ್ ಕಮಿಷನರ್ (ಎಸಿಪಿ) ಮನಸ್ವಿ ವಶಿಷ್ಠ ಅವರು ವಕೀಲರ ವಿರುದ್ಧ ಬೆದರಿಕೆ ಮತ್ತು ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿ ಸಲ್ಲಿಸಲಾಗಿದ್ದ ವಿನಂತಿಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಸುವೊಮೋಟೋ (Suo Motu) ಪ್ರಕರಣ ದಾಖಲಿಸಿಕೊಳ್ಳಲು ಮಂಗಳವಾರ ನಿರಾಕರಿಸಿದೆ. ಈ ವಿಚಾರವಾಗಿ ಯಾವುದೇ ಸೂಕ್ತ ಕ್ರಮ ಕೈಗೊಳ್ಳಬೇಕಿದ್ದಲ್ಲಿ ವಕೀಲರು ಔಪಚಾರಿಕ ರಿಟ್ ಅರ್ಜಿಯನ್ನು ಸಲ್ಲಿಸುವಂತೆ ಪೀಠ ಸೂಚನೆ ನೀಡಿದೆ.

- Advertisement -

ತಾತ್ಕಾಲಿಕ ಮುಖ್ಯ ನ್ಯಾಯಮೂರ್ತಿ ನಿತಿನ್ ಸಾಂಬ್ರೆ ಮತ್ತು ನ್ಯಾಯಮೂರ್ತಿ ಸಂಜಯ್ ಶರ್ಮಾ ಅವರನ್ನೊಳಗೊಂಡ ವಿಭಾಗೀಯ ಪೀಠವು ಈ ಆದೇಶವನ್ನು ಹೊರಡಿಸಿದೆ. ವಕೀಲರ ನಿಯೋಗವೊಂದು ಹೈಕೋರ್ಟ್ ಮೆಟ್ಟಿಲೇರಿ, ಅಮಾನತುಗೊಂಡಿರುವ ಎಸಿಪಿ ಮನಸ್ವಿ ವಶಿಷ್ಠ ಅವರು ವಕೀಲರ ಸಮುದಾಯವನ್ನು ಗುರಿಯಾಗಿಸಿಕೊಂಡು ನೀಡಿರುವ ಹೇಳಿಕೆಗಳು ಗಂಭೀರ ಸ್ವರೂಪದ್ದಾಗಿದ್ದು, ಕೋರ್ಟ್ ಇದನ್ನು ಸ್ವಯಂಪ್ರೇರಿತವಾಗಿ ವಿಚಾರಣೆಗೆ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗೋಮಾಂಸ ನಿಷೇಧವಿರಲಿ,’ಬೀಫ್ ತಿನ್ನಬೇಡಿ’ ಎಂದೂ ಹೇಳಿಲ್ಲ ಮನುಸ್ಮೃತಿ!

ಗುಜರಾತ್‌ ಕೋರ್ಟ್‌ ಮನುಸ್ಮೃತಿಯನ್ನು ಗೋರಕ್ಷಣೆಯ ಏಕೈಕ ಆಧಾರವೆಂದು ಬಿಂಬಿಸಲು ಹೊರಟಾಗ, ಮನುಸ್ಮೃತಿಯು ತಾನೇ ಸೃಷ್ಟಿಸಿದ ಈ ವೈರುಧ್ಯಗಳನ್ನೂ ನಾವು ಎತ್ತಿ ತೋರಿಸಬೇಕಾಗುತ್ತದೆ. ಮನುಸ್ಮೃತಿ ನೇರವಾಗಿ 'ಬೀಫ್ ತಿನ್ನಬೇಡಿ' ಎಂದೂ ಹೇಳಿಲ್ಲ, 'ತಿನ್ನಿ' ಎಂದೂ...

ಇಸ್ರೇಲ್ ರಾಜಕೀಯದ ಚದುರಂಗದಾಟ: ಅತಂತ್ರ ಬಿಕ್ಕಟ್ಟಿನಿಂದ ಹೊರಬರಲು ಇರುವ...

ಇಸ್ರೇಲ್‌ನ ರಾಜಕೀಯ ಮತ್ತು ಚುನಾವಣಾ ವ್ಯವಸ್ಥೆ ಸಂಪೂರ್ಣವಾಗಿ ಭಿನ್ನವಾಗಿದೆ ಹಾಗೂ ಹೆಚ್ಚು ಸಂಕೀರ್ಣವಾಗಿದೆ. ಇಸ್ರೇಲ್ ಅನುಸರಿಸುತ್ತಿರುವುದು ಬಹುಪಕ್ಷೀಯ ಸಂಸದೀಯ ಪ್ರಜಾಪ್ರಭುತ್ವ (Parliamentary Democracy) ವ್ಯವಸ್ಥೆಯಾಗಿದೆ. ಇಲ್ಲಿ ದೇಶದ ಜನತೆ ನೇರವಾಗಿ ತಮ್ಮ ಪ್ರಧಾನಮಂತ್ರಿಯನ್ನು...

ಕಬ್ಬು ಬೆಳೆಗಾರರ ಬದುಕಿಗೆ ಸಿಹಿಯಾಗದ ಕಬ್ಬಿನ ಬೆಲೆ!

ಕರ್ನಾಟಕದ ಕೃಷಿ ಆರ್ಥಿಕತೆಯಲ್ಲಿ ಕಬ್ಬು ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಸಾವಿರಾರು ರೈತ ಕುಟುಂಬಗಳ ಬದುಕು, ಗ್ರಾಮೀಣ ಉದ್ಯೋಗ, ಸಕ್ಕರೆ ಕಾರ್ಖಾನೆಗಳ ಕಾರ್ಯನಿರ್ವಹಣೆ ಮತ್ತು ಅದಕ್ಕೆ ಸಂಬಂಧಿಸಿದ ಕೈಗಾರಿಕೆಗಳ ಆರ್ಥಿಕ ಚಟುವಟಿಕೆ ಕಬ್ಬಿನ ಉತ್ಪಾದನೆಯೊಂದಿಗೆ...

ಇದನ್ನೂ ಓದಿ: ರಾತ್ರೋರಾತ್ರಿ ತುರ್ತು ವಿಚಾರಣೆ ಕೋರಿ ದೆಹಲಿ ಹೈಕೋರ್ಟ್ ಮೊರೆಹೋದ ಸಿಜೆಪಿ ನಾಯಕರು

“ನಾವು ದಾಖಲೆಗಳ ಆಧಾರದ ಮೇಲೆ ನಡೆಯುವ ನ್ಯಾಯಾಲಯ. ಸುವೊಮೋಟೋ ಪ್ರಕರಣದ ಅಗತ್ಯವಿಲ್ಲ. ನಿಮ್ಮಲ್ಲಿ ಲಭ್ಯವಿರುವ ಎಲ್ಲಾ ಸಾಕ್ಷ್ಯಾಧಾರ ಮತ್ತು ವಸ್ತುಸ್ಥಿತಿಗಳನ್ನು ಒಳಗೊಂಡ ಔಪಚಾರಿಕ ಅರ್ಜಿಯನ್ನು ರಿಜಿಸ್ಟ್ರಿಗೆ ಸಲ್ಲಿಸಿ. ಅರ್ಜಿ ಸಲ್ಲಿಕೆಯಾದ ತಕ್ಷಣ ನಾವು ವಿಚಾರಣೆಗೆ ಪಟ್ಟಿ ಮಾಡಲು ಆದೇಶಿಸುತ್ತೇವೆ ಹಾಗೂ ಸೂಕ್ತವಾಗಿ ಪರಿಶೀಲಿಸುತ್ತೇವೆ” ಎಂದು ವಕೀಲರಿಗೆ ಸ್ಪಷ್ಟಪಡಿಸಿದೆ. ಅಲ್ಲದೆ, ಈ ಅರ್ಜಿಯ ಪ್ರತಿಯನ್ನು ಸರ್ಕಾರಿ ವಕೀಲರಾದ ಸಂಜಯ್ ಲಾವ್ ಅವರಿಗೆ ನೀಡುವಂತೆಯೂ ಕೋರ್ಟ್ ನಿರ್ದೇಶಿಸಿದೆ.

ಅಕ್ಟೋಬರ್ 23ರಂದು ದೆಹಲಿಯ ಶಹದಾರ ವ್ಯಾಪ್ತಿಯಲ್ಲಿ ವಕೀಲರು ಹಾಗೂ ಸ್ಥಳೀಯ ಪೊಲೀಸರ ನಡುವೆ ತೀವ್ರ ಘರ್ಷಣೆ ನಡೆದಿತ್ತು. ಈ ಘಟನೆಯ ಬಳಿಕ ವಕೀಲರ ಒತ್ತಡಕ್ಕೆ ಮಣಿದು ಇಲಾಖೆಯು ಎಸಿಪಿ ಮನಸ್ವಿ ವಶಿಷ್ಠ ಮತ್ತು ಇತರ ಅಧಿಕಾರಿಗಳನ್ನು ಶಿಸ್ತುಕ್ರಮಕ್ಕೆ ಒಳಪಡಿಸಿತ್ತು. ಇಲಾಖೆಯ ಈ ಕ್ರಮವನ್ನು ಖಂಡಿಸಿ ಮತ್ತು ತಮ್ಮ ಅಧಿಕಾರಿಗಳ ಬೆಂಬಲಕ್ಕೆ ನಿಂತು ದೆಹಲಿ ಪೊಲೀಸ್ ಸಿಬ್ಬಂದಿ ಪೊಲೀಸ್ ಪ್ರಧಾನ ಕಚೇರಿಯ (PHQ) ಮುಂದೆ ಭಾರಿ ಪ್ರತಿಭಟನೆ ನಡೆಸಿದ್ದರು.

ಪ್ರತಿಭಟನೆಯ ಮುಂಚೂಣಿಯಲ್ಲಿದ್ದ ಮತ್ತು ವಕೀಲರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ ಹೇಳಿಕೆ ನೀಡಿದ್ದರೆನ್ನಲಾದ ಎಸಿಪಿ ಮನಸ್ವಿ ವಶಿಷ್ಠ ಅವರನ್ನು ಗೃಹ ಸಚಿವಾಲಯದ ಸೂಚನೆ ಮೇರೆಗೆ ಅಮಾನತು ಮಾಡಲಾಯಿತು. ಎಸಿಪಿಯವರ ಹೇಳಿಕೆಯಿಂದ ಆಕ್ರೋಶಗೊಂಡ ವಕೀಲರ ಸಂಘಗಳು ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪಟ್ಟು ಹಿಡಿದು ಹೈಕೋರ್ಟ್ ಮೆಟ್ಟಿಲೇರಿದ್ದವು. ಸದ್ಯ ಹೈಕೋರ್ಟ್ ಸುವೊಮೋಟೋ ಕೇಸ್ ದಾಖಲಿಸಲು ನಿರಾಕರಿಸಿರುವುದರಿಂದ, ವಕೀಲರು ಶೀಘ್ರದಲ್ಲೇ ಔಪಚಾರಿಕವಾಗಿ ಅರ್ಜಿ ಸಲ್ಲಿಸಿ ಕಾನೂನು ಹೋರಾಟ ಮುಂದುವರಿಸಲು ನಿರ್ಧರಿಸಿದ್ದಾರೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭಾರತ – ನ್ಯೂಜಿಲೆಂಡ್ ಏಕದಿನ ಸರಣಿ: ಸಚಿನ್ ತೆಂಡೂಲ್ಕರ್ ದಾಖಲೆ ಮುರಿವ ಉತ್ಸಾಹದಲ್ಲಿ ಕೊಹ್ಲಿ!

ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿಗೆ ಭಾರತದ ತಂಡ...

NCPಯಲ್ಲಿ ಮತ್ತೊಂದು ಬಿರುಕು? ತಾಯಿ-ಮಗನ ವಿರುದ್ಧ ಅಮಿತ್ ಶಾಗೆ ದೂರು ನೀಡಿದ ಹಿರಿಯ ನಾಯಕರು

ಮಹಾರಾಷ್ಟ್ರ ರಾಜಕಾರಣದಲ್ಲಿ ಮತ್ತೊಮ್ಮೆ ಮಹಾ ದಂಗೆಯ ಮುನ್ಸೂಚನೆ ಸಿಕ್ಕಿವೆ. ಮೂಲ ನ್ಯಾಷನಲಿಸ್ಟ್...

ಲಕ್ಷ ಲಕ್ಷ ಸಂಬಳದ ಆಸೆಗೆ ವಿದೇಶಕ್ಕೆ ಹೋದ ಯುವಕರು ಜೈಲಿನಲ್ಲಿ ಬಂಧಿ! ಕಾಂಬೋಡಿಯಾದಲ್ಲಿ ಭಾರತೀಯರ ಪರದಾಟ

ಉತ್ತಮ ಉದ್ಯೋಗ ಹಾಗೂ ಹೆಚ್ಚಿನ ಸಂಬಳದ ನಿರೀಕ್ಷೆಯಲ್ಲಿ ವಿದೇಶಕ್ಕೆ ತೆರಳಿದ ಹಲವು...

ಸ್ಟಿಂಗ್ ಆಪರೇಷನ್‌ | ತಾನೇ ತೋಡಿದ ಹಳ್ಳಕ್ಕೆ ಬಿದ್ದರಾ ಕುಮಾರಸ್ವಾಮಿ?

ಕರ್ನಾಟಕದ ರಾಜಕೀಯ ಅಂಗಳದಲ್ಲಿ ‘ಸ್ಟಿಂಗ್ ಆಪರೇಷನ್’ ಎಂಬ ಶಸ್ತ್ರವನ್ನು ಹಿಡಿದು ಎದುರಾಳಿಗಳನ್ನು...